ಪ್ರಚಲಿತ

ಮೋದಿ ವಿಷಯದ ನಂತರ ಮತ್ತೆ ಪೇಚಿಗೆ ಸಿಲುಕಿದ ಅನುಪಮಾ ಶೆಣೈ!! ಈ ಬಾರಿ ಮಾಜಿ ಪೊಲೀಸ್ ಅಧಿಕಾರಿ ಮಾಡಿದ ಎಡವಟ್ಟೇನು ಗೊತ್ತಾ?

ಈ ಕಾಂಗ್ರೆಸ್ ಗೆ ಅದೇನೋ ಟೈಮೇ ಸರಿ ಇಲ್ಲ ಅಂತ ಕಾಣುತ್ತೆ. ಯಾವಾಗ ನೋಡಿದರೂ ಗೊಂದಲಗಳ ಮೇಲೆ ಗೊಂದಲ, ಹಗರಣಗಳ ಮೇಲೆ ಹಗರಣ. ಪದೇ ಪದೇ ಮುಜುಗರವನ್ನು ಅನುಭವಿಸುತ್ತಲೇ ಇದೆ. ತಮ್ಮ ಸರ್ಕಾರದ ನಿರುಪಯೋಗ ಯೋಜನೆಗಳ ಮೂಲಕ ಮುಜುಗರವನ್ನು ಅನುಭವಿಸಿದ್ದರೆ, ಮತ್ತೊಂದೆಡೆ ಸಚಿವರು ಶಾಸಕರುಗಳ ಹಗರಣಗಳು. ಒಂದೆಡೆ ಹಿರಿಯ ಕಾಂಗ್ರೆಸ್ ನಾಯಕರಿಗೆ ಐಟಿ, ಬಿಸಿ ಮುಟ್ಟಿಸಿದ್ದರೆ, ಮತ್ತೊಂದೆಡೆ ಸಚಿವ, ಶಾಸಕರ ಕಾಮಕೇಳಿ ಹಗರಣಗಳು ರಾಜ್ಯದ ಜನರನ್ನು ಥೂ ಎಂದು ಉಗಿಯುವಂತೆ ಮಾಡಿದೆ.

ಕೆಲ ಸಮಯದ ಹಿಂದೆ ಕರ್ನಾಟಕ ಸರ್ಕಾರದ ನಡೆತೆಗೆಟ್ಟ ಸಚಿವ ಹೆಚ್.ವೈ.ಮೇಟಿ ಸಣ್ಣ ಪ್ರಾಯದ ಹುಡುಗಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದ ವೀಡಿಯೋವೊಂದು ಬಹಿರಂಗವಾಗಿತ್ತು. ಇದು ರಾಜ್ಯದ ಜನತೆಯ ಕೆಂಗಣ್ಣಿಗೆ ಕಾರಣವಾಗಿತ್ತು. ವಿರೋಧ ಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ರಾಜೀನಾಮೆಯನ್ನು ಕೇಳಿದ್ದವು. ಆದರೆ ಈ ಪುಣ್ಯಾತ್ಮ ಮಾತ್ರ ಹೇಳಿದ್ದೇ ಬೇರೆ. “ವೀಡಿಯೋದಲ್ಲಿ ಕಂಡಿದ್ದಾಕೆಗೂ ನನಗೂ ಇನ್ನಿತರ ಯಾವುದೇ ಸಂಭಂಧವಿಲ್ಲ. ಆಕೆ ಮತ್ತು ನನ್ನ ಮಧ್ಯೆ ಇರುವುದು ತಂದೆ-ಮಗಳ ಸಂಬಂಧ ಮಾತ್ರ” ಎಂದು ತನ್ನ ನಾಲಗೆಯನ್ನು ಕೆಟ್ಟ ವಿಚಾರಕ್ಕೆ ಶ್ರೇಷ್ಠ ಸಂಬಂಧವನ್ನೇ ಹಾಲುಗೆಡವಿಬಿಟ್ಟಿದ್ದ. ರತಿ ಕ್ರೀಡೆಗೆ ಬಳಸಿಕೊಂಡಿದ್ದ ಓರ್ವ ಹೆಣ್ಣನ್ನು ಮಗಳ ಸಮಾನ ಎಂದು ಹೇಳಿ, ತಂದೆ-ಮಗಳ ಶ್ರೆಷ್ಠ ಸಂಬಂಧಕ್ಕೆ ಕಳಂಕ ತಂದು ಬಿಟ್ಟಿದ್ದ.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕನೊಬ್ಬ, ಕಾರ್ಯಕ್ರಮ ನಡೆದ ವೇದಿಕೆಯಲ್ಲೇ ವಿಧಾನ ಪರಿಷತ್ ಮಹಿಳಾ ಸದಸ್ಯೆಯ ಕೈಸವರಿ ಮಾನ ಮರ್ಯಾದೆ ಕಳೆದಿದ್ದರು. ತಾನು ವೇದಿಕೆಯಲ್ಲಿ ಇದ್ದೇನೆ ಎನ್ನುವ ಕನಿಷ್ಠ ಜ್ಞಾನವೂ ಇಲ್ಲದ ಈ ನಾಯಕ, ಮಹಿಳೆಯ ಕೈಸವರಿ ಕಾಂಗ್ರೆಸ್ ಪಕ್ಷದ ಅಸಲಿ ಮುಖವನ್ನು ವೇದಿಕೆಯಲ್ಲೇ ಅನಾವರಣಗೊಳಿಸಿದ್ದರು. ಆತನ ರಾಸಲೀಲೆಯನ್ನು ರಾಜ್ಯ ಕಣ್ಣಾರೆ ಕಂಡ ನಂತರ ಆತನ ನುಡಿ ನಮನಗಳನ್ನು ಗಮನಿಸಬೇಕಿತ್ತು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಆ  ಕಾಂಗ್ರೆಸ್ ಮುಖಂಡ, “ಆಕೆ ನನ್ನ ಸಹೋದರಿಯ ಸಮಾನ. ನಮ್ಮ ಮಧ್ಯೆ ಇರುವುದು ಅಣ್ಣ-ತಂಂಗಿಯ ಸಂಬಂಧ” ಎಂದು ಹೇಳಿಯೇ ಬಿಟ್ಟ. ಥೂ… ನೆಟ್ಟಗೆ ಇದ್ದ ಅದೊಂದು ಸಂಬಂಧವನ್ನೂ ಮೂರು ಕಾಸಿಗೆ ಹರಾಜು ಹಾಕಿ ಬಿಟ್ಟ ಆ ಕಾಂಗ್ರೆಸ್ ಮುಖಂಡ.!!  ಈ ವಿಚಾರವನ್ನು ಸಮರ್ಥಿಸಲು ಹೋಗಿ ಪೇಚಿಗೆ ಸಿಲುಕಿದ್ದು ಮಾಜಿ ಡಿಎಸ್‍ಪಿ!!

ಪೇಚಿಗೆ ಸಿಲುಕಿದ ಮಾಜಿ ಡಿಎಸ್‍ಪಿ!!

ಈ ಕಾಂಗ್ರೆಸ್‍ನವರಿಗೆ ಇದೊಂದು ಶಾಪದಂತೆ ಪರಿಣಮಿಸುತ್ತದೆ… ಯಾಕೆಂದರೆ ಎಲ್ಲಿ ಹೋದರೂ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತನೇ ಬರುತ್ತಾರೆ… ಈ ಬಾರಿ ಪೇಚೆಗೆ ಸಿಲುಕಿದ್ದು ಯಾರು ಗೊತ್ತೇ? ಮಾಜಿ ಡಿಎಸ್‍ಪಿ ಅನುಪಮಾ ಶೆಣೈ!!

ಮೀಡಿಯಾದವರೆಲ್ಲ ಶಾಸಕ ಎಚ್.ವೈ.ಮೇಟಿ ಪರ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಡಿಎಸ್‍ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಪೇಚಿಗೀಡಾದ ಘಟನೆ ನಡೆದಿದೆ!! ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಣೈ, ‘ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣದಲ್ಲಿ ಪೆÇಲೀಸ್ ಪೇದೆ ಸುಭಾಷ್ ವಿರುದ್ಧ ವಿನಾಕಾರಣ ದೂರು ದಾಖಲಿಸಲಾಗಿದೆ.!! ಈವರೆಗೂ ಅಮಾನತು ಆದೇಶ ತೆರವಾಗಿಲ್ಲ.!! ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮೀ ಅಮಾಯಕ ಮಹಿಳೆ’ ಎಂದು ಮೇಟಿಯನ್ನು ಹೊಗಳೋಕೆ ಹೋಗಿ ಪೇಚಿಗೀಡಾದರು…

ಸಂತ್ರಸ್ತ ಮಹಿಳೆ ವಿಜಯಲಕ್ಷ್ಮೀ ಹಲವು ಬಾರಿ ಹೇಳಿಕೆ ಬದಲಾಯಿಸಿದ್ದಾರೆ ಎಂದು ಪತ್ರಕರ್ತರು ಗಮನಕ್ಕೆ ತಂದರು. ಈ ವೇಳೆ ಕೋಪಗೊಂಡ ಶೆಣೈ ‘ಇಲ್ಲಿ ನಾನೊಬ್ಬಳೆ ಮಹಿಳೆ ಇರುವುದು. ನೀವೆಲ್ಲ ಗಂಡಸರು. ನೀವು ಶಾಸಕ ಮೇಟಿ ಪರವಾಗಿದ್ದೀರಿ’ ಎಂದು ವಾದಿಸಿದರು. ಪ್ರಕರಣದ ಬಗ್ಗೆ ವಿವರಿಸಿದ ಪತ್ರಕರ್ತರು ಹೇಳಿಕೆ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಮುಗಿಸಿದ ಅನುಪಮಾ ಶೆಣೈ, ಯಾವುದೇ ಉತ್ತರ ನೀಡದೆ ಸ್ಥಳದಿಂದ ಕಾಲ್ಕಿತ್ತರು. ಮಾಡಿದುಣ್ಣೋ ಮಹಾರಾಯ ಎಂಬ ಮಾತಿನಂತೆ ತಮ್ಮ ಪಕ್ಷ ಮಾಡಿದ ಖತರ್ನಾಕ್ ಕೆಲಸವನ್ನು ತನ್ನ ಪಕ್ಷವೇ ಎಳೆ ಎಲೆಯಾಗಿ ಬಿಚ್ಚಿಡುತ್ತಾ ಬಂದರೆ ಯಾವ ತೊಂದರೆಯೂ ಇರುವುದಿಲ್ಲ.. ಬಿಡಿ!!

ಇದಕ್ಕಿಂತ ಮೊದಲು ಈ ಮಹಾನ್ ತಾಯಿ ಅನುಪಮಾ ಶೆಣೈ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಸುಖಾ ಸುಮ್ಮನೆ ತಿರುಗಿ ಬಿದ್ದಿದ್ದರು… ಅದಕ್ಕೆ ತಕ್ಕ ಪ್ರತಿಫಲ ಈಗ ಸಿಕ್ಕಿದೆ ಬಿಡಿ!!

ಒಂದಂತೂ ಸತ್ಯ. ಯಾವುದೇ ಆಪಾದನೆಗಳು ಬಂದರೂ, ಅದು ತನ್ನ ಮಾನವನ್ನೇ ಹರಾಜು ಹಾಕಿದರೂ, ಕಿಂಚಿತ್ತೂ ಜಗ್ಗದೆ ತನ್ನ ಅಧಿಕಾರವನ್ನು ಚಲಾಯಿಸುತ್ತಿರುವುದು ದಿಟ್ಟತನವೇ. ಸ್ವಲ್ಪ ತಪ್ಪು ನಡೆದ್ರೂ ರಾಜೀನಾಮೆ ಪಡೆಯುತ್ತಿದ್ದ ಬಿಜೆಪಿ ನಾಯಕರಿಗಿಂತ, ಏನೇ ತಪ್ಪಗಳು ನಡೆದರೂ ಜಗ್ಗದೆ ಪೆÇ್ರೀತ್ಸಾಹಿಸುವ ಕಾಂಗ್ರೆಸ್ ನಾಯಕರ ಧೈರ್ಯಕ್ಕೆ ಮೆಚ್ಚಲೇ ಬೇಕು. ದೆಹಲಿಗೆ ಹೋಗಿ ಮೇಡಂ ಕಾಲು ಹಿಡಿದರೆ ಎಲ್ಲವೂ ಪಾಸ್.

ಈ ಕಾಂಗ್ರೆಸ್ ಸರಕಾರ ದೇಶ ಉದ್ಧಾರ ಮಾಡುವ ಕಾರ್ಯ ಅಂತೂ ಮಾಡಲ್ಲ!! ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ರಾಜ್ಯಕ್ಕೆ ಪಾಠ ಹೇಳುವ ಶಿಕ್ಷಣ ಸಚಿವ ತನ್ವೀರ್ ಸೇಠ್ ತನ್ನ ಮೊಬೈಲ್‍ನಲ್ಲಿ “ನೀಲಿ ಚಿತ್ರ”ವನ್ನು ನೋಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿಷಯವನ್ನೂ ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತದೆ. ಆದರೆ ಸೇಟ್ ಮಾತ್ರ ಜಗ್ಗಲೇ ಇಲ್ಲ. ಪ್ರಶ್ನಿಸಿದರೆ, “ಅದು ನನ್ನ ಗೆಳೆಯರು ಕಳಿಸಿದ್ದು. ಅದ್ರಲ್ಲಿ ನನ್ನದೇನೂ ತಪ್ಪಿಲ್ಲ” ಎಂದು ಬಡಬಡಾಯಿಸಿ ಸಚಿವ ಸ್ಥಾನದ ಕುರ್ಚಿಯಲ್ಲಿ ಬೆಚ್ಚಗೆ ಕುಳಿತು ಕೊಂಡಿದ್ದಾರೆ…ಇಲ್ಲಿ ಕಾಂಗ್ರೆಸ್ಸಿಗರು ಯಾವ ಲೀಲೆ ಮಾಡಿದರೂ ನಡೆಯುತ್ತೆ!!

ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿ ಯಾರು ಬೇಕಾದ್ರು ಲೂಟಿ ಮಾಡಬಹುದು. ಆ ರೀತಿಯಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆಯಲ್ಲಿ ಮುಖ್ಯಮಂತ್ರಿಗಳು ಲಕ್ಷ ಕೋಟಿಗಳಷ್ಟು ಸಾಲ ಮಾಡಿದ್ರೆ ಮತ್ತೊಂದು ಕಡೆ ಅದನ್ನು ನುಂಗಿ ನೀರು ಕುಡಿಯುವ ಸಚಿವರುಗಳು. ಕಮಿಷನ್ ದಂಧೆ ಅನ್ನೋದು ಇದ್ದದ್ದೇ ಬಿಡಿ. ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಿತ್ತು. ಆರಂಭದಲ್ಲಿ ಹಲವಾರು ಜನಪರ ಯೋಜನೆಗಳ ಮೂಲಕ ಸಮೃದ್ಧ ಕರ್ನಾಟಕವನ್ನು ಕಟ್ಟುವಲ್ಲಿ ಪಣ ತೊಟ್ಟಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂಬ ಮಾತುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕೇಳತೊಡಗಿತು. ಇದನ್ನರಿತ ಕಾಂಗ್ರೆಸ್ಸಿಗರು ತಮ್ಮ ತಪ್ಪುಗಳನ್ನೆಲ್ಲಾ ಮುಚ್ಚಿ ಹಾಕಲು ಹೋಗಿ ಎಡವಟ್ಟುಗಳನ್ನು ಸಾಲು ಸಾಲಾಗಿ ಮಾಡುತ್ತಾ ಬರುತ್ತಿದ್ದಾರೆ..

-ಪವಿತ್ರ

Tags

Related Articles

Close