ಪ್ರಚಲಿತ

ದಕ್ಷಿಣಕ್ಕೆ ಅಪ್ಪಳಿಸಲಿದೆ ಉತ್ತರದ ಮಾರುತ!! ಮತ್ತೆ ಅಬ್ಬರಿಸಲಿದ್ದಾರೆ ಹಿಂದೂ ಫೈರ್ ಬ್ರಾಂಡ್…

3 ರಾಜ್ಯಗಳ ವಿಧಾನಸಭಾ ಚುನಾವಣೆಯ ಗೆಲುವಿನಿಂದ ಹೊಸ ಹುಮ್ಮಸ್ಸಿನಲ್ಲಿರುವ ಭಾರತೀಯ ಜನತಾ ಪಕ್ಷ ಈಗ ಕರ್ನಾಟಕದಲ್ಲಿ ಅಬ್ಬರಿಸಲು ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿರುವ ಧರ್ಮ ವಿರೋಧಿ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳ ವಿರುದ್ಧ ಕರಾವಳಿ ಕರ್ನಾಟಕದಲ್ಲಿ ಅಬ್ಬರಿಸಿ ಅಲ್ಲಿ ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್ ಶಾಸಕ ಹಾಗೂ ಸಚಿವರ ವಿರುದ್ಧ ಕಮಲ ಪಡೆ ಬೀದಿಗಿಳಿಯಲಿದೆ. ಈ ಮೂಲಕ ಈ ಬಾರಿ ಶತಾಯ ಗತಾಯ ರಾಜ್ಯದಲ್ಲಿ ಕೇಸರಿ ಪತಾಕೆಯನ್ನು ಹಾರಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿದೆ ರಾಜ್ಯ ಭಾರತೀಯ ಜನತಾ ಪಕ್ಷ.

ಭಾರತೀಯ ಜನತಾ ಪಕ್ಷದ ಅಬ್ಬರ ಈಗ ರಾಷ್ಟ್ರದೆಲ್ಲೆಡೆ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಇರುವ 29 ರಾಜ್ಯಗಳಲ್ಲಿ ಈಗಾಗಲೇ 21 ರಾಜ್ಯಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಭಾರತೀಯ ಜನತಾ ಪಕ್ಷ ಭಾರತದ ಇತಿಹಾಸದಲ್ಲೇ ಹೊಸ ಕ್ರಾಂತಿಗೆ ನಾಂದಿಯಾಗಿದೆ. 60 ವರ್ಷಗಳ ಕಾಲ ದೇಶವನ್ನಾಳಿ ಭಾರತವನ್ನು ಹೀನಾಯ ಸ್ಥಿತಿಗೆ ತಲುಪಿಸಿದ ಕಾಂಗ್ರೆಸ್ ಪಕ್ಷ ಇಂದು ಹೇಳ ಹೆಸರಿಲ್ಲದೆ ಮಾಯವಾಗಿದೆ. 2014ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾವಾಗ ಕೇವಲ 7 ಸ್ಥಾನಗಳನ್ನು ಹೊಂದಿದ್ದ ಭಾರತೀಯ ಜನತಾ ಪಕ್ಷ ಈಗ ಬರೋಬ್ಬರಿ 21 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕೊನೇ ಹಂತದ ಬೇಟೆಗೆ ಹೊರಟಿದೆ. ಅದುವೇ ಕರ್ನಾಟಕ. ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಲೇ ಬೇಕು ಎನ್ನುವ ಹಠದಿಂದ ವಿವಿಧ ರೀತಿಯ ತಂತ್ರಗಾರಿಕೆಯನ್ನೇ ಮಾಡುತ್ತಿದೆ.

ಚಮತ್ಕಾರ ಮಡಿತ್ತು ಕಮಲ ಪಡೆ…

ತ್ರಿಪುರ, ಮೇಘಲಯಾ, ಹಾಗೂ ನಾಗಾಲ್ಯಾಂಡ್‍ಗೆ ನಡೆದ 3 ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಮತದಾರನ ಮನದಾಳವು ಹೊರಬಿದ್ದಿದೆ. “ನಾವು 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ನೋಡುತ್ತಿದ್ದೇವೆ. ನಮಗೆ ಮೋದಿಯವರ ಆಡಳಿತ ಬೇಕೇ ವಿನಹ ರಾಷ್ಟ್ರವನ್ನು ಪಾತಾಳಕ್ಕೆ ತಳ್ಳಿದ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಆಡಳಿತ ಬೇಡ” ಎಂಬ ಸ್ಪಷ್ಟ ಸಂದೇಶವನ್ನು ಈ ಮೂರೂ ರಾಜ್ಯಗಳ ಮತದಾರರು ಸಾರಿದ್ದಾರೆ. ಇತಿಹಾಸದಲ್ಲಿ ಒಂದೇ ಒಂದು ಸ್ಥಾನವನ್ನೂ ಪಡೆಯದ ಭಾರತೀಯ ಜನತಾ ಪಕ್ಷ ಈ ಬಾರಿ ಇಡೀ ರಾಜ್ಯಗಳನ್ನೇ ಗೆದ್ದಿದೆ ಎಂದರೆ ಇದು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಾಕ್ಷ ನೀತಿಯಲ್ಲದೆ ಮತ್ತೇನೂ ಅಲ್ಲ.

ವರ್ಕೌಟ್ ಆಗಿತ್ತು ಯೋಗಿ ಸಮಾವೇಶ..!

3 ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯಭೇರಿ ಭಾರಿಸುತ್ತಿದ್ದಂತೆಯೇ ಗೆಲುವಿನ ಕಾರಣಗಳ ಬಗ್ಗೆಯೂ ಭಾರೀ ಚರ್ಚೆಗಳಾಗುತ್ತಿವೆ. ಇದರಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವು ಉತ್ತರ ಪ್ರದೇಶದ ಮುಖ್ಯಮಂತ್ರಿ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ಬಗ್ಗೆ. ಹಿಂದೂ ಸಮಾಜದ ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ದೇಶದೆಲ್ಲೆಡೆ ಭಾರೀ ಹೆಸರುವಾಸಿಯಾಗಿರುವ ರಾಜಕಾರಣಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಹೊರತುಪಡಿಸಿದರೆ ಕಮಲ ಪಾಳಯದಲ್ಲಿ ಇರುವ ಸ್ಟಾರ್ ಪ್ರಚಾರಕರು ಯೋಗಿ ಆದಿತ್ಯನಾಥ್.

Image result for yogi adityanath

ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆಂದರೆ ಲಕ್ಷಾಂತರವಾಗಿ ಸೇರುವ ಜನ ನಂತರ ಸೇರೋದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ. ತಾನು ಓರ್ವ ಸನ್ಯಾಸಿಯಾಗಿ, ಹಿಂದೂ ಧರ್ಮದ ಕೆಲಸವನ್ನು ಮಾಡಲು ರಾಜಕೀಯವನ್ನು ಆಯ್ಕೆ ಮಾಡಿಕೊಂಡಿರುವ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ 5 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಈಗ ಮುಖ್ಯಮಂತ್ರಿಯಾಗಿದ್ದಾರೆ. ತನ್ನ ಹಿಂದುತ್ವದ ಪ್ರಖರ ಮಾತಿನಿಂದಲೇ ಭಾರೀ ಹೆಸರುವಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ರಾಜಕಾರಣಿ. ಯೋಗಿ ಆದಿತ್ಯನಾಥ್ ಬರುತ್ತಾರೆಂದರೆ ಇಡಿಯ ಹಿಂದೂ ಸಮಾಜವೇ ಒಮ್ಮೆ ಪುಟಿದೇಳುತ್ತೆ. ಅಪ್ಪಟ ಸಂತನಾಗಿರುವ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಕಂಡರೆ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಅದೇನೋ ನವೋತ್ಸಾಹ.

ದಕ್ಷಿಣಕ್ಕೆ ಕಾಲಿಡಲಿದ್ದಾರೆ ಉತ್ತರದ ಸಿಎಂ…

ಹಿಂದೂ ಫೈರ್ ಬ್ರಾಂಡ್ ಉತ್ತರ ಫ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರಾವಳಿಗೆ ಭರ್ಜರಿ ಎಂಟ್ರಿ ನೀಡಲಿದ್ದಾರೆ. ಕರ್ನಾಟಕದಲ್ಲೇ ಅತೀ ಹೆಚ್ಚು ಹಿಂದೂ ಕಾರ್ಯಕರ್ತರು ಮತಾಂಧರ ಅಟ್ಟಹಾಸಕ್ಕೆ ಪ್ರಾಣವನ್ನೇ ತೆತ್ತ ಪ್ರದೇಶ ಅಂದರೆ ಅದು ಕರಾವಳಿ. ಒಂದೆಡೆ ಕಾಸರಗೋಡಿನ ಮೂಲಕ ಕೇರಳದಿಂದ ಬರುವ ಮತಾಂಧರು ಮತ್ತೊಂದೆಡೆ ಭಟ್ಕಳದಿಂದ ಆಗಮಿಸುವ ಉಗ್ರರು. ಹೀಗೆ ಒಂದಲ್ಲಾ ಒಂದು ಕಾರಣದಿಂದ ಕರಾವಳಿಗೆ ಎಂಟ್ರಿ ಕೊಡುವ ಉಗ್ರರು ಅಲ್ಲಿನ ಪರಿಸ್ಥಿತಿಯನ್ನೇ ಅದಲು ಬದಲುಗೊಳಿಸಿದ್ದಾರೆ. ಅದೆಷ್ಟೋ ಹಿಂದೂ ಕಾರ್ಯಕರ್ತರ ಮಾರಣಹೋಮವನ್ನೇ ನಡೆಸಿದ್ದಾರೆ. ಇದಕ್ಕಾಗಿ ಈ ಬಾರಿ ಕರಾವಳಿಯಲ್ಲಿ ಕಮಲವನ್ನು ಅರಳಿಸಲೇಬೇಕೆಂಬ ಹಠಕ್ಕೆ ಕಾರ್ಯಕರ್ತರು ಬಿದ್ದಿದ್ದಾರೆ. ಈ ಕಾರಣಕ್ಕೆ ಹಿಂದೂ ಫೈರ್ ಬ್ರಾಂಡ್ ಆಗಿರುವ ಯೋಗಿ ಆದಿತ್ಯನಾಥ್ ರನ್ನು ಕರೆತಂದು ಹಿಂದೂ ಯುವಕರಲ್ಲಿ ಕಿಚ್ಚು ಹಚ್ಚಿಸಲು ಕಮಲ ಪಾಳಯ ತಂತ್ರ ರೂಪಿಸಿದೆ.

ಯೋಗಿಯೇ ಯಾಕೆ ಫೇಮಸ್..?

ಇಂದು ದೇಶದ 19 ರಾಜ್ಯಗಳಲ್ಲಿ 21 ರಾಜ್ಯ ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದೆ. 21 ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ರಾಜ್ಯವನ್ನು ಆಳುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಫುಲ್ ಫೇಮಸ್ ಆಗಿದ್ದಾರೆ. ಅದಕ್ಕೆ ಕಾರಣಗಳೂ ಹಲವಾರು ಇವೆ. ಅವರು ಅಪ್ಪಟ ಹಿಂದೂ ರಾಜಕಾರಣಿ. ಯಾವುದೇ ಕಾರಣಕ್ಕೂ ತನ್ನ ಹಿಂದೂ ಪದ್ದತಿಯಲ್ಲಿ ಅವರು ರಾಜಿ ಮಾಡಿಕೊಳ್ಳುವುದೇ ಇಲ್ಲ. ಕೇವಲ ಒಂದು ಕಾವಿಯನ್ನು ಉಟ್ಟು ದೇಶದ ಅತಿದೊಡ್ಡ ರಾಜ್ಯವನ್ನು ಆಳುತ್ತಿರುವ ಯೋಗಿ ಆದಿತ್ಯನಾಥರು ಅಧಿಕಾರಕ್ಕೆ ಬಂದ ನಂತರ ತಮ್ಮ ರಾಜ್ಯದಲ್ಲಿ ಭಾರೀ ಬದಲಾವಣೆಯನ್ನೇ ತಂದಿದ್ದಾರೆ.

ಉಗ್ರರ ಹಾಗೂ ಗೂಂಡಾಗಳ ತಾಣವಾಗಿದ್ದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ನಂತರ ಭಾರೀ ಬದಲಾವಣೆಗಳೇ ಆಗಿ ಹೋಗಿದೆ. ಬರೋಬ್ಬರಿ ಸಾವಿರಕ್ಕೂ ಅಧಿಕ ಗೂಂಡಾಗಳು ಇಂದು ಎನ್ ಕೌಂಟರ್ ಮೂಲಕ ಯಮನ ಪಾದವನ್ನು ಸೇರಿಕೊಂಡಿದ್ದಾರೆ. 3 ಸಾವಿರಕ್ಕೂ ಅಧಿಕ ಗೂಂಡಾಗಳು ಎನ್ ಕೌಂಟರ್‍ಗೆ ಬೆದರಿ ನಮಗೆ ಜಾಮೀನೇ ಬೇಡವೆಂದು ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ಮತ್ತೆ ಕೆಲವು ಗೂಂಡಾಗಳು ನಾವು ಹೊಸ ಜೀವನವನ್ನು ಆರಂಭಿಸುತ್ತೇವೆ ಎಂದು ಯೋಗಿ ಆದಿತ್ಯನಾಥ್ ಬಳಿ ಭಿಕ್ಷೆ ಬೇಡಿ ಹೊಟೇಲ್ ಹಾಗೂ ಗೂಡಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈ ಮೂಲಕ ಉತ್ತರ ಪ್ರದೇಶ ಇಂದು ಸಂಪೂರ್ಣ ಗೂಂಡಾಗಳಿಂದ ಮುಕ್ತಿ ಹೊಂದಿದೆ.

ಇವಿಷ್ಟು ಮಾತ್ರವಲ್ಲದೆ ತಾವು ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹಿಂದೂ ಹಾಗೂ ಇತರೆ ಧರ್ಮಗಳ ನಡುವೆ ಯಾವುದೇ ಬೇಧವನ್ನೇ ಮಾಡದೆ ದಕ್ಷ ಆಡಳಿತವನ್ನೇ ನಡೆಸುತ್ತಿದ್ದಾರೆ. ಗೋವುಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಿರುವ ಯೋಗಿಯವರು ತಮ್ಮ ಬಜೆಟ್‍ನಲ್ಲಿಯೂ ಗೋಶಾಲೆ ಹಾಗೂ ಇತರೆ ಯೋಜನೆಗಳನ್ನು ಗೋವಿಗೋಸ್ಕರ ಜಾರಿಗೆ ತಂದಿದ್ದಾರೆ. ಈ ಮೂಲಕ ತಾನೊಬ್ಬ ಹಿಂದೂ ಭಕ್ತ ಎಂಬುವುದು ತಾನು ಮುಖ್ಯಮಂತ್ರಿಯಾದ ನಂತರವೂ ಮರೆಯದೆ ಅಧಿಕಾರವನ್ನು ನಡೆಸುತ್ತಿದ್ದಾರೆ.

ಒಟ್ಟಾರೆ ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದು, ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಗೆಲ್ಲೋ ಛಾನ್ಸೇ ಇಲ್ಲ ಎನ್ನಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ನಡೆದ 3 ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಕಮಲ ಪಡೆ ಭಾರೀ ಕಮಾಲ್ ಮಾಡಿದ್ದು ಕನ್ನಡದ ಕಮಲದ ಕಲಿಗಳಿಗೆ ಮತ್ತಷ್ಟು ಹುರುಪು ತಂದಿದೆ.

-ಸುನಿಲ್ ಪಣಪಿಲ

Tags

Related Articles

Close