ಪ್ರಚಲಿತ

ಜಾಗತಿಕವಾಗಿ ಉಪಗ್ರಹ ಉಡಾವಣೆ ಮಾಡುವ ಬೃಹತ್ ಉದ್ಯಮವಾಗಿ ಬೆಳೆಯಲು ಮಹತ್ವದ ನಿರ್ಧಾರ ತೆಗೆದು ಕೊಂಡ ಅಂತರಿಕ್ಷದ ಬಾಹುಬಲಿ ಇಸ್ರೊ!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಶ ಪ್ರಗತಿಯನ್ನು ಸಾಧಿಸುತ್ತಲೇ ಬರುತ್ತಿದೆ!! ಅವರು ದೇಶದ ಅಭಿವೃದ್ಧಿಗಾಗಿ ತರುತ್ತಿರುವ ಒಂದಲ್ಲ ಒಂದು ಯೋಜನೆಗಳಿಗೂ ಕೆಲ ವಿರೋಧಿಗಳು ಟೀಕೆಯ ಸುರಿಮಳೆಯೇ ಸುರಿಸುತ್ತಾರೆ.. ಇದೀಗ ಟೀಕಾಕಾರರಿಗೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಇಸ್ರೋ ಶತಕದ ಸಂಭ್ರಮ ಆಚರಿಸುವ ಬೆನ್ನಲ್ಲೇ ಇಸ್ರೋ ಮತ್ತೊಂದು ಯಶಸ್ಸಿಗೆ ಮುಂದಾಗಿದೆ!!

ಉಪಗ್ರಹ ಉಡಾವಣೆಗಾಗಿ ಮುಂದುವರಿದ ದೇಶ, ಖಾಸಗಿ ಸಂಸ್ಥೆಗಳು ಭಾರತೀಯ ಬಾಹ್ಯಾಕಾಶ ಸಂಸ್ಥೆಯತ್ತ ಮುಖಮಾಡಿವೆ. ಇದರ ಬೆನ್ನಲ್ಲೇ, ಸಂಸ್ಥೆಯನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಲು ಇಸ್ರೋ ನಿರ್ಧರಿಸಿದೆ. ಸಣ್ಣ ಉಪಗ್ರಹಗಳ ಉತ್ಪಾದನೆ, ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಬೃಹತ್ ಒಕ್ಕೂಟ ರಚನೆಗೆ ಇಸ್ರೋ ಮುಂದಾಗಿದೆ. ಇಸ್ರೋದ ವಾಣಿಜ್ಯ ಅಂಗವಾಗಿರುವ ಆಂಟ್ರಿಕ್ಸ್ ಕಾರ್ಪೆರೇಷನ್ ನೇತೃತ್ವದಲ್ಲಿ ಈ ಒಕ್ಕೂಟ ರಚನೆಗೆ ನಿರ್ಧರಿಸಿದೆ. ಜಾಗತಿಕ ಬೇಡಿಕೆಗೆ ತಕ್ಕಂತೆ 700 ಕೆ.ಜಿಗಿಂತ ಕಡಿಮೆ ತೂಕದ ಉಪಗ್ರಹಗಳ ಉತ್ಪಾದನೆ ಹೆಚ್ಚಿಸುವುದು ಹಾಗೂ ಮಾರುಕಟ್ಟೆ ವಿಸ್ತರಿಸುವುದು ಈ ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ.

ಈ ಒಕ್ಕೂಟ ರಚನೆಯಿಂದ ಉಪಗ್ರಹ ನಿರ್ಮಾಣ ವೆಚ್ಚ ಹಾಗೂ ಅವಧಿಯಲ್ಲಿ ಕಡಿತವಾಗಲಿದೆ. ಉಪಗ್ರಹ ಉಡಾವಣೆ ವೆಚ್ಚವು 10ನೇ ಒಂದಂಶ ಕಡಿಮೆಯಾಗಲಿದ್ದು, 2019ರಲ್ಲಿ ಮೊದಲ ಉಡಾವಣೆ ನಡೆಯಲಿದೆ. ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಆಂಟ್ರಿಕ್ಸ್ ಕಾರ್ಪೆರೇಷನ್ ನೇತೃತ್ವದ ಒಕ್ಕೂಟದಲ್ಲಿ ಎಲ್ ಆಂಡ್ ಟಿ, ಗೋದ್ರೇಜ್ ಏರೋಸ್ಪೇಸ್ ಹಾಗೂ ಎಚ್‍ಎಎಲ್ ಭಾಗಿಯಾಗಲಿದೆ.

Related image

ಇಸ್ರೋ ಸಾಧನೆ

ಉಡಾಯಿಸಿದ ವಿದೇಶಿ ಉಪಗ್ರಹ- 209
ಉಡಾಯಿಸಿದ ಸ್ವದೇಶಿ ಉಪಗ್ರಹ- 43
ಒಂದು ಸಣ್ಣ ಉಪಗ್ರಹ ನಿರ್ವಣಕ್ಕೆ ಸಮಯ- 45 ದಿನ
ಉಪಗ್ರಹ ಉಡಾವಣೆಗೆ ವೆಚ್ಚ- 150 ಕೋಟಿ ರೂ.

ಇನ್ನು ಕೆಲವೇ ತಿಂಗಳಲ್ಲಿ ಇಸ್ರೋ ವಿಜ್ಞಾನಿಗಳು ಮಾದರಿ ಉಪಗ್ರಹ ಹಾಗೂ ರಾಕೆಟ್ ತಯಾರಿಸಲಿದ್ದಾರೆ. ಈ ಮಾದರಿ ಇರಿಸಿಕೊಂಡು ಉಳಿದ ಖಾಸಗಿ ಸಂಸ್ಥೆಯೊಂದಿಗೆ ರ್ಚಚಿಸಿ 2019ರ ಮಧ್ಯದಲ್ಲಿ ಉಪಗ್ರಹ ಉಡಾವಣೆ ನಡೆಯಲಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಜಾಗತಿಕ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ತೆರೆದುಕೊಳ್ಳುತ್ತಿದೆ ಎಂದು ಶಿವನ್ ಅಭಿಪ್ರಾಯಪಟ್ಟಿದ್ದಾರೆ.

ಇಸ್ರೋ ಮಾಹಿತಿ ಪ್ರಕಾರ ಒಂದು ಪಿಎಸ್‍ಎಲ್‍ವಿ ಉಡಾವಣೆಗೆ ಸದ್ಯಕ್ಕೆ 150 ಕೋಟಿ ರೂ. ವೆಚ್ಚವಾಗಲಿದೆ. ಒಂದು ಸಣ್ಣ ಉಪಗ್ರಹ ನಿರ್ವಣಕ್ಕೆ 40-45 ದಿನ ಬೇಕಾಗುತ್ತದೆ. ಒಕ್ಕೂಟ ರಚನೆ ಬಳಿಕ ಕೇವಲ 3-4 ದಿನದಲ್ಲಿ ಉಪಗ್ರಹ ನಿರ್ವಿಸಬಹುದು. ಜತೆಗೆ ಕೇವಲ 15 ಕೋಟಿ ರೂಪಾಯಿಯಲ್ಲಿ ಪಿಎಸ್‍ಎಲ್‍ವಿ ಉಡಾವಣೆ ಮಾಡಬಹುದಾಗಿದೆ. ಇದರಿಂದ ಇಸ್ರೋ ಸಂಸ್ಥೆಯು ಜಾಗತಿಕವಾಗಿ ಉಪಗ್ರಹ ಉಡಾವಣೆ ಮಾಡುವ ಬೃಹತ್ ಉದ್ಯಮವಾಗಿ ಬೆಳೆಯಲು ಸಾಧ್ಯವಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗುವ ಮೂಲಕ ಬಾಹ್ಯಾಕಾಶ ಯೋಜನೆಗಳಿಗೆ ಕೇಂದ್ರ ಸರ್ಕಾರದತ್ತ ಆರ್ಥಿಕ ನೆರವಿಗೆ ನೋಡುವುದು ತಪ್ಪುತ್ತದೆ. ನಾಸಾ ಹಾಗೂ ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ಇದು ಇಸ್ರೋ ಸಹಕಾರಿಯಾಗಲಿದೆ.

ಕೃಪೆ ವಿಜಯವಾಣಿ

Tags

Related Articles

Close