ಪ್ರಚಲಿತ

ಕೆ.ಜೆ ಜಾರ್ಜ್‍ಗೆ ಮತ್ತೆ ಶಾಕ್!! ನಿನ್ನೆ ರಾತ್ರಿ ಸಿಬಿಐ ಮಾಡಿದ ರಿಸರ್ಚ್‍ನಿಂದ ಬೆಚ್ಚಿ ಬಿದ್ದ ಕಾಂಗ್ರೆಸ್!! ಕೆ.ಜೆ ಜಾರ್ಜ್ ಬಂಧನ ಶೀಘ್ರ!!

ಮೊನ್ನೆ ತಾನೇ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್ ಗೆ ಐಟಿ ಸರಿಯಾಗಿಯೇ ಶಾಕ್ ನೀಡಿತ್ತು… ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್‍ನ ಸಚಿವರು ಹಾಗೂ ಶಾಸಕರ ನಿಜ ಮುಖ ಅನಾವರಣವಾಗುತ್ತಿದ್ದು, ಒಂದೊಂದೇ ಪ್ರಕರಣಗಳು ಬಯಲಾಗುತ್ತಿದೆ. ಈಗ ರಾಜ್ಯದಲ್ಲಿ ಮುಖ್ಯ ಮಂತ್ರಿಗಳಿಗಿಂತಲೂ ಪ್ರಭಾವವನ್ನು ಬೆಳೆಸಿಕೊಂಡಿರುವ ಕೆ.ಜೆ.ಜಾರ್ಜ್‍ಗೆ ಐಟಿ ಶಾಕ್ ನೀಡಿದ ಬೆನ್ನಲ್ಲೇ ಡಿವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣ ಮತ್ತೆ ಮರುಕಳಿಸಿರುವುದು ಮತ್ತೊಂದು ಶಾಕ್!! ಈ ಸುದ್ದಿ ಕೇಳುತ್ತಿದ್ದಂತೆಯೇ ಸಿ.ಎಂ ಸಿದ್ದರಾಮಯ್ಯನವರು ಚಿಂತಾಕ್ರಾಂತರಾಗಿದ್ದಾರೆ.. ಅಸೆಂಬ್ಲಿ ಎಲೆಕ್ಷನ್ ಅಧಿವೇಶನ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯನರಿಗೆ ಬರ ಸಿಡಿಲು ಬಡಿದಂತಾಗಿದೆ….

ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎನ್ನುವ ಮಾತಿನಂತೆ ಈ ಬಾರಿ ಮಾತ್ರ ಗ್ರಹಣ ಕಳೆದ ನಂತರ ಕೆ.ಜೆ ಜಾರ್ಜ್‍ಗೆ ಗ್ರಹಣ ಹಿಡಿದಂತಾಗಿದೆ… ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒಂದು ಕಡೆಯಲ್ಲಿ ಕೆ.ಜೆ ಜಾರ್ಜ್‍ಗೆ ಐಟಿ ಶಾಕ್!! ಇನ್ನೊಂದು ಕಡೆಯಲ್ಲಿ ಡಿವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣ..!! ಈ ಎರಡೂ ವಿಷಗಳಿಂದ ತತ್ತರಿಸಿ ಹೋಗಿದ್ದಾರೆ ಸಚಿವ ಕೆ.ಜೆ ಜಾರ್ಜ್!! ಸಿಎಂ ಸಿದ್ದರಾಮಯ್ಯನವರಿಗೆ ಮಾತ್ರ ಒಂದರ ಮೇಲೆ ಒಂದರಂತೆ ತನ್ನ ಆಪ್ತರಿಗೆ ಈ ರೀತಿಯಾಗಿರುವುದು ನಿಜವಾಗಿಯೂ ತಲೆ ಮೇಲೆ ಬಂಡೆ ಬಿದ್ದಂತಾಗಿದೆ….

ಮೊನ್ನೆ ತಾನೇ ರಾಜ್ಯ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್ ಆಪ್ತರನ್ನು ಪರಿಶೀಲನೆ ಮಾಡುವ ಮೂಲಕ ಐಟಿ ಇಲಾಖೆ ಬಿಗ್ ಶಾಕ್ ನೀಡಿತ್ತು!! ಗಣಪತಿ ಹತ್ಯೆ ಪ್ರಕರಣ ಬೆನ್ನಲ್ಲೇ ಕೆ.ಜೆ ಜಾರ್ಜ್ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾಗಲೇ ಅರ್ಧ ಕುಗ್ಗಿ ಹೋಗಿದ್ದರು ಜಾರ್ಜ್!!. ತನ್ನ ಆಪ್ತ ಆಂದ್ರ ಮೂಲದ ಚಿತ್ತೂರಿನವನಾದ ವಂದಿತ್ ರೆಡ್ಡಿಯನ್ನು ಈಗಾಗಲೇ ಐಟಿ ವಿಚಾರಣೆಗೆ ಒಳಪಡಿಸಿದ್ದರು… ಈತ ಜಾರ್ಜ್ ಮಗ ರಾಣಾನ ಆಪ್ತ ಮಿತ್ರ ನಾಗಿದ್ದಾನೆ.. ಮತ್ತೊಬ್ಬ ಯುಗೇಂಧರ್ ಜಾರ್ಜ್.. ಜಾರ್ಜ್‍ನ ಅತ್ಯಾಪ್ತ ಅಂತಾನೇ ಹೇಳಬಹುದು.. ಈತ ಸಚಿವ ಕೆ.ಜೆ ಜಾರ್ಜ್‍ನ ವ್ಯವಹಾರದ ಲೆಕ್ಕಾಚಾರವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವವನು… ಇನ್ನೊಬ್ಬ ಸಚಿವ ಜಾರ್ಜ್‍ನ ಮಗ ರಾಣಾನ ಆಪ್ತ ಇಸ್ಮಾಯಿಲ್ ಎನ್ನುವಾತ.. ಈತ ಗನ್ ಅಂಗಡಿಗಳನ್ನು ಹೊಂದಿರುತ್ತಾನೆ.. ಈತ ಜಾರ್ಜ್‍ನ ಬಲಗೈ ಬಂಟ ಅಂತಾನೇ ಹೇಳಬಹುದು.. ಈ ಮೂವರು ಸಚಿವ ಕೆ.ಜೆ ಜಾರ್ಜ್ ಆಪ್ತರ ಮನೆಗೆ ಐಟಿ ದಾಳಿಯಾಗಿರುವುದು ನಿಜವಾಗಿಯೂ ಜಾರ್ಜ್‍ಗೆ ದೊಡ್ಡ ಶಾಕ್ ಅಂತಾನೇ ಹೇಳಬಹುದು.. ತನ್ನ ಆಪ್ತ ಮನೆ ಮೇಲೆ ಐಟಿ ಇಲಾಖೆಯಿಂದ ದಾಳಿ ಆದ ಬಳಿಕ ಆ ಮೂರೂ ಆಪ್ತರು ಯಾರೂ ಅಂತಾನೇ ಗೊತ್ತಿಲ್ಲ ಅಂತಾ ಡ್ರಾಮಾ ಬೇರೆ ಆಡಿದ್ದರು.. ತದ ನಂತರ ಮಾಧ್ಯಮ ಈ ಮೂರು ಜನರು ಮತ್ತು ಕೆ.ಜೆ ಜಾರ್ಜ್ ಆಪ್ತತೆಯ ಬಗ್ಗೆ ಸುದಿ ಬಿಡುಗಡೆ ಮಾಡಿದ ಬಳಿಕ ಹೌದು ಎಂದು ಒಪ್ಪಿದ್ದರು…

ಕೆ.ಜೆ.ಜಾರ್ಜ್‍ನ ಬೆವರಿಳಿಸಿದ ಸಿಬಿಐ ತನಿಖೆ!!

ಡಿವೈಎಸ್‍ಪಿ ಗಣಪತಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್‍ನ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್ ಕೈವಾಡ ಬಲವಾಗಿ ಕಾಣುತ್ತಿದ್ದು, ಯಾವುದೇ ಕ್ಷಣದಲ್ಲೂ ಬಂಧನವಾಗುವ ಸಾಧ್ಯತೆ ಇದೆ. ಈಗಾಗಲೇ ಅನೇಕ ವಿಚಾರಣೆಯನ್ನು ಎದುರಿಸಿರುವ  ಸಚಿವ ಕೆ.ಜೆ.ಜಾರ್ಜ್‍ರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು… ಅದೇ ರೀತಿ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್ ಯಥಾ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಮತ್ತೆ ಡಿ ವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡು ಸಿಬಿಐ ತನಿಖೆಯಿಂದ ಕೆ.ಜೆ ಜಾರ್ಜ್ ಬೆವರಿಳಿಸಿದ್ದು ಹೇಗೆ ಗೊತ್ತಾ?! ಸಂಜೆ 4 ಗಂಟೆಯಿಂದ 8 ಗಂಟೆಯವರಿಗೆ ಡಿವೈಎಸ್‍ಪಿ ಗಣಪತಿ ಹತ್ಯೆಯ ವಿಚಾರವಾಗಿ ಕೆ.ಜೆ ಜಾಜ್‍ಗೆ ಪ್ರಶ್ನೆಗಳ ಸುರಿ ಮಳೆಯೇ ಸುರಿದಿದ್ದಾರೆ…

ಜಾರ್ಜ್ ಆಪ್ತನಿಗೂ ಸಿಬಿಐ ಗ್ರಿಲ್!!

ಡಿವೈಎಸ್‍ಪಿ ಹತ್ಯೆ ಪ್ರಕರಣದಲ್ಲಿ ಕೇವಲ ಕೆ.ಜೆ ಜಾರ್ಜ್‍ರನ್ನು ಮಾತ್ರ ವಿಚಾರಣೆ ಮಾಡೆ ತನ್ನ ಆಪ್ತನಿಗೂ ಈ ಹತ್ಯೆ ಪ್ರಕರಣದಲ್ಲಿ ಕಗ್ಗಂಟಾಗಿದೆ…ತನ್ನ ಆಪ್ತ ಕಾರ್ಯದರ್ಶಿ ಶಿವಶಂಕರ್‍ರನ್ನು ಕೂರಿಸಿ ಸಿಬಿಐ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ..

 

ಹಾಗಾದರೆ ಸಚಿವ ಜಾರ್ಜ್ ಆಪ್ತನಿಗೆ ಕೇಳಿದ ಪ್ರಶ್ನೆ ಏನು?

ಡಿವೈಎಸ್‍ಪಿ ಗಣಪತಿ ಸಸ್ಪೆಂಡ್ ಆಗಿದ್ದಾಗ ಜಾರ್ಜ್ ಮನೆಗೆ ಹೋಗಿದ್ರಾ?

ಆ ಸಂದರ್ಭದಲ್ಲಿ ಗಣಪತಿ ಜೊತೆ ಕೆ.ಜೆ ಜಾರ್ಜ್ ಮಾತಾಡಿದ್ರಾ?

ಸಸ್ಪೆಂಡ್ ವಾಪಸ್ ತಗೋತಿನಿ ಅಂತಾ ಗಣಪತಿ ಜೊತೆ ಕೆ .ಜೆ ಜಾರ್ಜ್ ಮತಾಡಿದ್ರಾ? ಅಂತಾ ಕೆ.ಜೆ ಜಾರ್ಜ್‍ನ ಕಾರ್ಯದರ್ಶಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ…


ಕಳೆದ ವರ್ಷದ ಜುಲೈ 7ರಂದು ಡಿವೈಎಸ್ಪಿ ಗಣಪತಿಯವರು ಮಾಧ್ಯಮವೊಂದರ ಮುಂದೆ ತಮಗೆ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಉನ್ನತ ಪೆÇಲೀಸ್ ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಎಂದು ಆಲವತ್ತುಕೊಂಡು ಅನುಮಾನಾಸ್ಪದವಾಗಿ ಮಡಿಕೇರಿಯ ಲಾಡ್ಜೊಂದರಲ್ಲಿ ಹೆಣವಾಗಿ ಕಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇಷ್ಟಾಗಿಯೂ ಜಾರ್ಜ್ ಕ್ಯಾರೆ ಅನ್ನಲಿಲ್ಲ! ಗಣಪತಿಯವರ ಕುಟುಂಬದ ಮೇಲೆ ಒತ್ತಡ ಹೇರಿ ಅವರ ಪತ್ನಿಯಿಂದಲೇ, ಗಣಪತಿ ಮಾನಸಿಕ ಕಾರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬರೆಸಿಕೊಂಡು ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದ್ದನ್ನೂ ನಮಗೆ ತಿಳಿದ ವಿಷಯ.. ಆದರೆ ಗಣಪತಿ ವೈದ್ಯರನ್ನು ಭೇಟಿ ಮಾಡಿದ್ದು ತುಂಬ ಹಿಂದೆ ಎಂಬುದು ಆಮೇಲೆ ಸ್ಪಷ್ಟವಾಗಿತ್ತು.. ಒಬ್ಬರು ಮಾನಸಿಕ ಖಿನ್ನತೆ ಅಂದರು. ಇನ್ನೊಬ್ಬರು ಕುಟುಂಬದೊಳಗೆ ಸರಿ ಇರಲಿಲ್ಲ ಎಂದರು.

ಆದರೆ ಪೆÇಲೀಸ್ ಅಧಿಕಾರಿಯೊಬ್ಬ ಮಾನಸಿಕ ಖಿನ್ನತೆಗೆ ಒಳಗಾಗುವ ಸ್ಥಿತಿ ಯಾಕೆ ಬಂತು? ಅದಕ್ಕೆ ಹೊಣೆ ಯಾರು? ಕಿರುಕುಳದ ಕಾರಣಕ್ಕೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಾ? ಎಂಬುದನ್ನೆಲ್ಲ ಯಾರೂ ತನಿಖೆ ಮಾಡಲಿಲ್ಲ. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಂಡವರು ಪತ್ರ ಬರೆದು, ದಲ್ಲಿ ಯಾರದ್ದಾದರೂ ಮೇಲೆ ಆರೋಪ ಮಾಡಿದ್ದರೆ, ವೀಡಿಯೊ ದಾಖಲಿಸಿದ್ದರೆ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗುತ್ತದೆ.

ಜಿಲ್ಲಾ ನ್ಯಾಯಾಲಯದಲ್ಲಿ ಕುಟುಂಬದವರು ಪ್ರಕರಣ ದಾಖಲಿಸಿದ ನಂತರ, ನ್ಯಾಯಾಲಯದ ನಿರ್ದೇಶನದಂತೆ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಾಯಿತು. ಆಗ ಅನಿವಾರ್ಯವಾಗಿ ಜುಲೈ 16ರಂದು ಜಾರ್ಜ್ ರಾಜೀನಾಮೆ ನೀಡಿದರು. ಆದರೆ ಜಾರ್ಜ್ ಬೇಗ ನಿರಪರಾಧಿಯಾಗಿ ಸಂಪುಟಕ್ಕೆ ಮರಳುತ್ತಾರೆಂದು ಎಲ್ಲರಿಗೂ ಗೊತ್ತಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಸಚಿವ ಸ್ಥಾನವನ್ನು ಖಾಲಿ ಇಟ್ಟುಕೊಂಡು ಕಾಯುತ್ತಿದ್ದರು. … ಗಣಪತಿಯವರ ತಂದೆ ಕುಶಾಲಪ್ಪನವರು ಸಿಬಿಐ ತನಿಖೆಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿಯೂ ನಿರಾಸೆಯೇ ಕಾದಿತ್ತು. ಆದರೂ ಛಲಬಿಡದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಆಗಸ್ಟ್ ಮೂರನೇ ವಾರ ಕುಶಾಲಪ್ಪನವರ ಮನವಿಯನ್ನು ಪುರಸ್ಕರಿಸಿ ಕೇಸನ್ನು ಸ್ವೀಕರಿಸಿ ಕೆ.ಜೆ. ಜಾರ್ಜ್‍ಗೆ ನೋಟೀಸು ಜಾರಿ ಮಾಡಿದಾಗ ಪ್ರಕರಣದಲ್ಲಿ ಏನೋ ಹುರುಳಿದೆ ಎಂಬುದರ ಪ್ರಾರಂಭಿಕ ಸೂಚನೆ ದೊರೆತಿತ್ತು.

ಅದರ ಬೆನ್ನಲ್ಲೇ, ಅಂದರೆ ಆಗಸ್ಟ್ 23ರಂದು ರಾತ್ರಿ 7 ಗಂಟೆಯಿಂದ 9 ಗಂಟೆವರೆಗೂ ಟೈಮ್ಸನೌ ಚಾನೆಲ್, ಸತತವಾಗಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳು, ಪಂಚನಾಮೆಯ ಬಗ್ಗೆ ಸಿದ್ಧವಾಗಿದ್ದ ಫಾರನ್ಸಿಕ್ ವರದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಎಂಥವರಿಗೂ ದಿಗ್ಭ್ರಮೆಯಾಗುವಂತಿದ್ದವು. ಇನ್ನು ಸರಕಾರವಾಗಲಿ, ಸಿಐಡಿಯಾಗಲಿ, ಗೃಹ ಇಲಾಖೆಯಾಗಲಿ ಟೈಮ್ಸ್‍ನೌನಲ್ಲಿ ಪ್ರಕಟವಾದ ಎಫ್‍ಎಸ್‍ಎಲ್ ವರದಿಯನ್ನು ನಿರಾಕರಿಸದೇ ಹೋದಾಗ ಸಿದ್ದರಾಮಯ್ಯನವರ ಸರಕಾರದ ಮೋಸಗಾರಿಕೆ ಖಚಿತವಾಯಿತು. ಸುಪ್ರೀಂ ಕೋರ್ಟ್ ಗಣಪತಿ ಪ್ರಕರಣವನ್ನು ಸಿಬಿಐಗೆ ಸಲ್ಲಿಸಬಹುದು ಎಂಬ ಭರವಸೆಯೂ ಹೆಚ್ಚಾಯಿತು!! ನಿನ್ನೆ ತಾನೇ ಸಿಬಿಐ ತನಿಖೆ ಆರಂಭಿಸಿದ್ದು ಸಂಜೆ 4 ರಿಂದ 8 ಘಂಟೆಗಳ ಕಾಲ ವಿಚಾರಣೆ ಮಾಡಿ ಕೆ.ಜೆ ಜಾರ್ಜ್ ಮತ್ತು ಆತನ ಕಾರ್ಯದರ್ಶಿಗೆ ಸಿಬಿಐ ಸರಿಯಾಗಯೇ ಬೆವರಿಳಿಸಿದ್ದಾರೆ.

ಪವಿತ್ರ

Tags

Related Articles

Close