ಪ್ರಚಲಿತ

ಇತಿಹಾಸವೆ ಕಂಡು ಕೇಳರಿಯದ ರೀತಿಯಲ್ಲಿ ಅಮರನಾಥ ಯಾತ್ರಿಗಳಿಗೆ ಹೈಟೆಕ್ ಭದ್ರತೆ ಒದಗಿಸುತ್ತಿರುವ ಮೋದಿ ಸರಕಾರ!! ಶಿವಭಕ್ತರ ಮೇಲೆ ಆಕ್ರಮಣ ಮಾಡಲು ಬರುವವರಿಗೆ ಮಹಾಕಾಲನಾದ ಗೃಹ ಸಚಿವಾಲಯ!!

ಇತಿಹಾಸವೆ ಕಂಡು ಕೇಳಿಲ್ಲ ಆ ರೀತಿಯ ಹಲವು ಪದರಗಳ ಹೈಟೆಕ್ ಭದ್ರತೆ ಈ ಬಾರಿ ಅಮರನಾಥ ಯಾತ್ರಿಗಳಿಗೆ ದೊರೆಯಲಿದೆ. ಶಿವಭಕ್ತರ ಮೇಲೆ ಆಕ್ರಮಣ ಮಾಡಲು ಬರುವ ಉಗ್ರರೇ ಸ್ವತಃ ಕೈಲಾಸ ಸೇರಲಿದ್ದಾರೆ ಹಾಗಿದೆ ಗೃಹ ಸಚಿವಾಲಯದ ಭದ್ರತೆ. ಭಕ್ತರ ರಕ್ಷಣೆಗಾಗಿ ಹಲವು ಪದರಗಳ ಭದ್ರಕೋಟೆ ರಚಿಸಲಿದೆ ಗೃಹ ಇಲಾಖೆ. ಈ ಕೋಟೆಯನ್ನು ಭೇಧಿಸುವುದು ಕಷ್ಟ ಮಾತ್ರವಲ್ಲ ಅಸಾಧ್ಯ ಕೂಡ.

‘ಬಾಬಾ ಬರ್ಫಾನಿಯ’ ದರ್ಶನ ಪಡೆಯಲು ಅಮರನಾಥಕ್ಕೆ ತೆರಳುವ ಯಾತ್ರಿಗಳಿಗೆ ಭಾರತೀಯ ಸೇನೆ ಭದ್ರತೆ ಒದಗಿಸಲಿದೆ. ಇದರಲ್ಲಿ ಪೋಲೀಸ್, ಸಿ.ಆರ್.ಪಿ.ಎಫ್ ಮತ್ತು ಬಿ.ಎಸ್.ಎಫ್ ಜವಾನರು ಸೇರಿ ಒಟ್ಟು 40,000 ಟ್ರೂಪ್ ಗಳಿರಲಿವೆ! ಅರುವತ್ತು ದಿನಗಳು ನಡೆಯುವ ಈ ಯಾತ್ರೆಯ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಇದುವರೆಗೂ ಎರಡೆರಡು ಬಾರಿ ಸಮಾಲೋಚನೆ ನಡೆಸಿದ್ದಾರೆ.

ಗೃಹ ವ್ಯವಹಾರ ಸಚಿವಾಲಯವು ಮೊಬೈಲ್ ಜಾಮರ್ ಗಳು, ಸಿಸಿಟಿವಿ ಕ್ಯಾಮೆರಾಗಳು, ಬುಲೆಟ್ ಪ್ರೂಫ್ ಬಂಕರ್ ಗಳು, ಶ್ವಾನ ತಂಡಗಳು ಮತ್ತು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಯಾತ್ರೆ ಮಾರ್ಗದಲ್ಲಿ ನಿಯೋಜಿಸಲಿದೆ. ಈ ವರ್ಷ ಮೊತ್ತ ಮೊದಲ ಬಾರಿಗೆ ತೀರ್ಥಯಾತ್ರೆಗಳಲ್ಲಿ ಭಾಗವಹಿಸುವ ಲಕ್ಷಾಂತರ ಯಾತ್ರಿಕರ ಚಲನೆಯನ್ನು ಪತ್ತೆಹಚ್ಚಲು ಉಪಗ್ರಹಗಳನ್ನು ಬಳಸಲಾಗುವುದು ಎಂದು ಹೇಳಲಾಗಿದೆ. ಇದೆ ಜೂನ್ 28 ರಿಂದ ಅಮರನಾಥ ಯಾತ್ರೆ ಶುರುವಾಗಲಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಅಧಿಕಾರಿಗಳೊಂದಿಗೆ ಕನಿಷ್ಟ ನಲವತ್ತು ನಿಮಿಷಗಳವರೆಗೆ ಭದ್ರತೆಯ ಬಗ್ಗೆ ಚರ್ಚಿಸಿದ ಒಂದು ಘಂಟೆಗಳಳೊಗಾಗಿ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಕೂಡಾ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಇಂಟೆಲಿಜೆನ್ಸ್ ಬ್ಯೂರೋ, ಸೈನ್ಯ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅಮರನಾಥ ಯಾತ್ರೆ ಸಂಧರ್ಭದಲ್ಲಿ ಫಿದಾಯೀನ್ ಎಂಬ ಉಗ್ರ ಸಂಘಟನೆ ದಾಳಿ ನಡೆಸುವ ಸಂಭಾವ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಉಗ್ರರು ಬರುವುದು ತಮ್ಮ ಕಾಲಿನಲ್ಲಿ ಆದರೆ ಅದೆ ಕಾಲಿನಲ್ಲಿ ವಾಪಾಸು ತಿರುಗಿ ಹೋಗುವುದಿಲ್ಲ ಇದು ಸತ್ಯ. ಅಮರನಾಥ ಯಾತ್ರೆಗೆ ಬರುವ ಭಕ್ತರ ರಕ್ಷಣೆಗೆ ಏಳು ಸುತ್ತಿನ ರಕ್ಷಣಾ ಕೋಟೆ ರಚಿಸಿ ಅವರ ಪ್ರಾಣ ಕಾಪಾಡಲಿದೆ ಗೃಹ ಸಚಿವಾಲಯ. ಶಿವಭಕ್ತರ ಪಾಲಿಗೆ ಯಮನಾಗಿ ಬರುವ ಉಗ್ರರಿಗೆ ಮೋದಿ ಸರಕಾರ ಮಹಾಕಾಲನಾಗಿ ಕಾಡಿ, ಈ ಬಾರಿ ಸಾಕ್ಷಾತ್ ಕೈಲಾಸ ಯಾತ್ರೆ ಮಾಡಿಸಲಿದೆ ಇದು ಶತಸಿದ್ದ. ತನ್ನ ಪ್ರಜೆಗಳ ಪ್ರಾಣ ರಕ್ಷಣೆಯ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ಮೋದಿ ಸರಕಾರದ ಮೇಲೆ ಮಹೇಶ್ವರನ ಕೃಪೆ ಸದಾ ಇರಲಿ…. ಶಿವನ ದಯೆಯಿಂದ ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿ.

-ಶಾರ್ವರಿ

Tags

Related Articles

Close