ಪ್ರಚಲಿತ

ಸಂವಿಧಾನ ಶಿಲ್ಪಿ ಅಂಬೇಡ್ಕರರನ್ನು ನೆಹರೂ ಮತ್ತು ಕಾಂಗ್ರೆಸ್ ಕೀಳಾಗಿ ನಡೆಸಿಕೊಂಡಷ್ಟು ಬೇರಾರೂ ನಡೆಸಿಲ್ಲ ಎನ್ನುವ ಸತ್ಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ!!

ಮಾತೆತ್ತಿದರೆ ಅಂಬೇಡ್ಕರ್, ಸಂವಿಧಾನ ಮತ್ತು ದಲಿತರೆನ್ನುವ ಕಾಂಗ್ರೆಸ್ ಮತ್ತು ಅದರ ಪೂಜನೀಯ “ವಿಕಾಸ ಪುರುಷ” ನೆಹರೂರವರು ಅಂಬೇಡ್ಕರರಿಗೆ ಮಾಡಿದಷ್ಟು ದ್ರೋಹ-ಅವಮಾನ ಬೇರಾರೂ ಮಾಡಿರಲಿಕ್ಕಿಲ್ಲ. ನೆಹರೂ ವರ್ತನೆಯಿಂದಾಗಿ ಅಂಬೇಡ್ಕರರು ಎಷ್ಟು ಬೇಸತ್ತಿದ್ದರೆಂದರೆ ತನ್ನ ಕ್ಯಾಬಿನೆಟ್ ನಿಂದಲೇ ರಾಜಿನಾಮೆ ನೀಡಿದ್ದರು ಮತ್ತು ತನ್ನ ರಾಜೀನಾಮೆಗೆ ಕಾರಣಗಳನ್ನು ಹೇಳುತ್ತಾ ಕಣ್ಣೀರಾಗಿದ್ದರು. ಲಜ್ಜೆ ಗೆಟ್ಟ ಕಾಂಗ್ರೆಸ್ ಈ ಎಲ್ಲಾ ವಿಚಾರಗಳನ್ನು ಜನರಿಗೆ ತಿಳಿಸುವುದೇ ಇಲ್ಲ. ಸ್ವತಃ ನೆಹರೂರವರೇ ಅಂಬೇಡ್ಕರ್ ಅವರನ್ನು ಅಸ್ಪೃಶ್ಯರಂತೆ ಕಂಡಿದ್ದರು.

ಅಂಬೇಡ್ಕರರ ಕಾಲುವಾಸಿಯೂ ಬುದ್ದಿಮತ್ತೆ ಇಲ್ಲದ ನೆಹರೂ ಸ್ವತಃ ಪ್ರಧಾನಮಂತ್ರಿ ಗಾದಿಯಲ್ಲಿ ಕುಳಿತರೂ ಅಂಬೇಡ್ಕರ್ ಅವರಿಗೆ ಕ್ಯಾಬಿನೆಟ್ ನಲ್ಲಿ ಯಾವುದೇ ಆಡಳಿತಾತ್ಮಕ ವಿಭಾಗವನ್ನು ಕೊಡಲಿಲ್ಲ. ಅಂಬೇಡ್ಕರ್ ಅವರು ಬಾರಿ ಬಾರಿ ಜನರಿಗೆ ಮತ್ತು ದೇಶದ ಬೆಳವಣಿಗೆಗೆ ಉಪಯೋಗವಾಗುವಂತಹ, ತನ್ನ ಬುದ್ದಿ ಮತ್ತೆಗೆ ತಕ್ಕುದಾದಂತಹ ಯಾವುದಾದರೂ ಆಡಳಿತಾತ್ಮಕ ಮಂತ್ರಾಲಯ ಕೊಡಿ ಎಂದು ಕೇಳಿಕೊಂಡರೂ ಯಾವ ಪ್ರಯೋಜನಕ್ಕೂ ಬರದ ಕಾನೂನು ಮಂತ್ರಾಲಯವನ್ನು ಅಂಬೇಡ್ಕರರಿಗೆ ನೀಡಿ ಕೈ ತೊಳೆದು ಕೊಂಡರು ಕುಟಿಲ ನೆಹರು.

27 ಸೆಪ್ಟಂಬರ್ 1951 ರಲ್ಲಿ ಕ್ಯಾಬಿನೆಟ್ ಗೆ ರಾಜಿನಾಮೆ ನೀಡುತ್ತಾ ಅಂಬೇಡ್ಕರ್ ಅವರು ಸರಕಾರದಲ್ಲಿ ತನಗಾದ ಅವಮಾನ ಮತ್ತು ಅದರಿಂದಾದ ನೋವುಗಳನ್ನು ಸದನದ ಮುಂದಿಡುತ್ತಾ ಕಣ್ಣೀರಾಗುತ್ತಾರೆ. ತನ್ನ ರಾಜೀನಾಮೆ ಭಾಷಣದಲ್ಲಿ ಅವರು ನೆಹರೂರವರು ತಮಗೆ ಮಾಡಿದ ಮೋಸದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ “ನೆಹರೂರವರು ನನಗೆ ಈ ಪ್ರಸ್ತಾಪವನ್ನು ನೀಡಿದಾಗ ನಾನು ನನ್ನ ಶಿಕ್ಷಣ ಮತ್ತು ಅನುಭವದ ಮೂಲಕ ವಕೀಲನಾಗಿರುವ ಜೊತೆಗೆ, ಯಾವುದೇ ಆಡಳಿತಾತ್ಮಕ ಇಲಾಖೆಯನ್ನು ನಡೆಸಲು ಸಮರ್ಥನಾಗಿದ್ದೆ ಮತ್ತು ಹಳೆಯ ವೈಸರಾಯ್ನ ಕಾರ್ಯನಿರ್ವಾಹಕ ಮಂಡಳಿಯಲ್ಲಿ ನಾನು ಎರಡು ಆಡಳಿತಾತ್ಮಕ ವಿಭಾಗಗಳಾದ ಲೇಬರ್ ಮತ್ತು ಸಿಪಿಡಬ್ಲ್ಯುಡಿ ಯಲ್ಲಿ ಯೋಜನೆಗಳನ್ನು ನಿರ್ವಹಿಸಿದ್ದೆ ಮತ್ತು ಸರಕಾರದಲ್ಲಿ ಆಡಳಿತಾತ್ಮಕ ಬಂಡವಾಳವನ್ನು ಹೊಂದಲು ಬಯಸುತ್ತೇನೆ ಎಂದು ಹೇಳಿದ್ದೆ.”

“ನೆಹರೂರವರು ಈ ಮಾತಿಗೆ ಒಪ್ಪಿಕೊಂಡರು ಮಾತ್ರವಲ್ಲ ಹೊಸದಾಗಿ ಪ್ರಾರಂಭಿಸುವ ಯೋಜನಾ ಇಲಾಖೆಯನ್ನು ಕೊಡುವುದಾಗಿ ಭರವಸೆ ಇತ್ತರು. ದೌರ್ಭಾಗ್ಯವೆಂದರೆ ಯೋಜನಾ ಇಲಾಖೆಯು ಪ್ರಾರಂಭವಾಗುವಾಗ ಬಹಳ ತಡವಾಗಿತ್ತು ಮತ್ತು ನಾನು ಅದರಿಂದ ಹೊರಗುಳಿದಿದ್ದೆ. ನನ್ನ ಸಮಯದಲ್ಲಿ, ಒಬ್ಬರಿಂದ ಮತ್ತೊಬ್ಬರಿಗೆ ಸಚಿವಾಲಯಗಳ ಅನೇಕ ವರ್ಗಾವಣೆಗಳು ನಡೆದಿವೆ. ನನ್ನನ್ನೂ ಯಾವುದಾದರೂ ಸಚಿವಾಲಕ್ಕೆ ಪರಿಗಣಿಸಬಹುದೆಂದು ಕೊಂಡಿದ್ದೆ. ಆದರೆ ನಾನು ಯಾವಾಗಲೂ ಪರಿಗಣನೆಯಿಂದ ಹೊರಗುಳಿದಿದ್ದೇನೆ. ಅನೇಕ ಮಂತ್ರಿಗಳಿಗೆ ಎರಡು ಅಥವಾ ಮೂರು ಸಚಿವಾಲಯಗಳನ್ನು ನೀಡಿ ಅವರ ಮೇಲೆ ಅಧಿಕ ಹೊರೆಯನ್ನು ಹೊರಿಸಲಾಗಿದೆ. ನನ್ನಂತಹ ಇತರರು ಹೆಚ್ಚು ಕೆಲಸವನ್ನು ಮಾಡಲು ಕಾಯುತ್ತಿದ್ದೇವೆ. ಸಚಿವರು ವಿದೇಶ ಪ್ರವಾಸದಲ್ಲಿದ್ದಾಗ ಕಡೆ ಪಕ್ಷ ತಾತ್ಕಾಲಿಕವಾಗಿ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ನನಗೆ ನೀಡಲಿಲ್ಲ” [Ambedkar’s Writings, Vol. 14, Part Two, pages.1317-1327] ಸಚಿವಾಲಯ ಹಾಳಾಗಲಿ ಕಡೆ ಪಕ್ಷ ವಿದೇಶಾಂಗ ವ್ಯವಹಾರಗಳ ಸಮಿತಿ ಅಥವಾ ರಕ್ಷಣಾ ಸಮಿತಿಯಂತಹ ಕ್ಯಾಬಿನೆಟ್ ಮುಖ್ಯ ಸಮಿತಿಗಳ ಸದಸ್ಯರಾಗಿಯೂ ಅವರನ್ನು ನೇಮಕಮಾಡಲಿಲ್ಲ ನೆಹರು.

ಇದು ನೆಹರೂರವರು ಸಂವಿಧಾನ ಶಿಲ್ಪಿಗೆ ಕೊಟ್ಟ ಬಹುಮಾನ! ದಲಿತರು ತಮ್ಮ ನಾಯಕನಿಗೆ ಅಪಮಾನ ಮಾಡಿದ ಕಾಂಗ್ರೆಸಿಗೆ ಈಗಲೂ ಡೊಗ್ಗು ಸಲಾಮು ಹಾಕುತ್ತಾರೆ. ಇದು ಬಿಡಿ ಅಂಬೇಡ್ಕರ್ ರವರು ಬೌದ್ದ ಧರ್ಮ ಸ್ವೀಕಾರ ಮಾಡಿದ ನಂತರ “ದ ಬುದ್ಧಾ ಎಂಡ್ ಹಿಸ್ ಧಮ್ಮಾ” ಎಂಬ ಪುಸ್ತಕ ಬರೆದು ನೆಹರೂರವರಲ್ಲಿ ಸರಕಾರದ ವತಿಯಿಂದ ಕನಿಷ್ಠ ನೂರು ಪ್ರತಿಗಳನ್ನಾದರೂ ಖರೀದಿಸಿ ಎಂದಾಗ ನೀಚ ನೆಹರು ಅಂಬೇಡ್ಕರ್ ಅವರನ್ನು ತುಚ್ಛವಾಗಿ ಕಾಣುತ್ತಾ ನೀವೇ ಸ್ವಂತ ಸ್ಟಾಲ್ ಹಾಕಿ ಮಾರಿಕೊಳ್ಳಿ ಎಂದು ಅವಮಾನಿಸುತ್ತಾರೆ. ಅಂಬೇಡ್ಕರರು ಲೋಕಸಭೆಗೆ ಸ್ಪರ್ಧಿಸಬೇಕೆಂದಿದ್ದ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಂಬೇಡ್ಕರ್ ರವರು ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದರು ಜಾತೀವಾದಿ ನೆಹರು. ಆಜೀವನ ಪರ್ಯಂತ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದರು ನೆಹರು.

ಇವತ್ತು ಅಂಬೇಡ್ಕರ್ ತಮ್ಮವರೆಂದು ಹೇಳಿಕೊಳ್ಳುವ ಕಾಂಗ್ರೆಸ್ ಅವರಿಗೆ ಭಾರತ್ನ ರತ್ನ ಪ್ರಶಸಿಯನ್ನೇ ಕೊಡಲಿಲ್ಲ. ನೆಹರೂಗೆ 1955 ಮತ್ತು ಇಂದಿರಾಗಾಂಧಿಗೆ 1971 ರಲ್ಲೇ ಸಿಕ್ಕಿದ ಭಾರತ ರತ್ನ ಅಂಬೇಡ್ಕರ್ ಅವರಿಗೆ ಸಿಕ್ಕಿದ್ದು 1990 ರಲ್ಲಿ ಅದೂ ಕೂಡಾ ಜನತಾ ಪಾರ್ಟಿಯ ಅವಧಿಯಲ್ಲಿ! ಪ್ರಶಸ್ತಿ ಹೋಗಲಿ 1990ರವರೆಗೆ ಸದನದಲ್ಲಿ ಅಂಬೇಡ್ಕರ್ ಅವರ ಒಂದು ಭಾವಚಿತ್ರವನ್ನೂ ಇಟ್ಟಿರಲಿಲ್ಲ ಕಾಂಗ್ರೆಸಿನ ದಲಿತ ಪ್ರೇಮಿಗಳು. ಸದನದಲ್ಲಿ ಭಾವಚಿತ್ರವಿಡಲೂ ಜನತಾ ಸರಕಾರವೇ ಬರಬೇಕಾಯಿತು. ಅಂಬೇಡ್ಕರ್ ಅವರನ್ನು ಕಣ್ಣೀರಿಡಿಸಿದ ಕಾಂಗ್ರೆಸ್ ಇವತ್ತು ಅವರ ಬಗ್ಗೆ, ಸಂವಿಧಾನದ ಬಗ್ಗೆ ಮತ್ತು ದಲಿತರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತದೆ. ನಾಚಿಗೆಗೆಟ್ಟ ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ದೇಶದ ಜನರನ್ನು ಒಬ್ಬರ ವಿರುದ್ದ ಇನ್ನುಬ್ಬರನ್ನು ಎತ್ತಿ ಕಟ್ಟಿ ಭಾರತವನ್ನು ದಂಗೆಯೆ ಉರಿಯಲ್ಲಿ ಬೇಯಿಸುತ್ತಿದೆ.

ದಲಿತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಕಾಂಗ್ರೆಸಿನ ನಿಜ ಬಣ್ಣವನ್ನು. ಅಂತಹ ಮಹಾನ್ ನಾಯಕನನ್ನು ಅವಮಾನಿಸಿದ ಕಾಂಗ್ರೆಸ್ ಇವತ್ತಾದರೂ ದಲಿತ ನಾಯಕರಿಗೆ ಯಾವುದಾದರೂ ದೊಡ್ಡ ಹುದ್ದೆ ಕೊಟ್ಟಿದೆಯೇ? ಇಲ್ಲ. ಮುಂದೆ ಕೊಡುವುದೂ ಇಲ್ಲ. ಏಕೆಂದರೆ ಕಾಂಗ್ರೆಸಿನ ರಾಜಪರಿವಾರಕ್ಕೆ ದಲಿತರೆಂದರೆ ಆಗುವುದೇ ಇಲ್ಲ. ಆ ಪರಿವಾರ ದಲಿತರನ್ನು ಈಗಲೂ ಅಸ್ಪೃಶ್ಯರಂತೆಯೇ ನೋಡುತ್ತಿದೆ. ಒಂದು ವೇಳೆ ಇದು ಸುಳ್ಳಾದರೆ ಕರ್ನಾಟಕ್ಕೆ ಮತ್ತು ದೇಶಕ್ಕೆ ಒಬ್ಬ ದಲಿತ ನಾಯಕನ್ನು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಯಾಕೆ ಕಣಕ್ಕಿಳಿಸುತ್ತಿಲ್ಲ? ಉತ್ತರ ಸ್ಪಷ್ಟ, ಕಾಂಗ್ರೆಸಿಗೆ ದಲಿತರು ಕೇವಲ ರಾಜಕೀಯದಾಟದ ದಾಳ ಮಾತ್ರ. ದಲಿತರ ಬಗ್ಗೆ ಹಿಂದೆಯೂ “ಪರಿವಾರಕ್ಕೆ” ಕಾಳಜಿ ಇರಲಿಲ್ಲ, ಇನ್ನು ಮುಂದೆಯೂ ಇರುವುದಿಲ್ಲ. ಎಚ್ಚೆತ್ತುಕೊಳ್ಳಿ ದಲಿತ ಬಂಧುಗಳೇ ಎಚ್ಚೆತ್ತುಕೊಳ್ಳಿ.

source: https://ambedkarism.wordpress.com/2011/03/10/dr-ambedkars-resignation-speech/

Tags

Related Articles

Close