ಪ್ರಚಲಿತ

ರಾಹುಲ್ ಗಾಂಧಿಯ ಬಸ್ಸಿಗಾಗಿ ಆಂಬುಲೆನ್ಸ್ ನಿಲ್ಲಿಸಿದ ಪೊಲೀಸರು!! ಕಾಂಗ್ರೆಸ್ಸಿಗರಿಂದಲೇ ಮುಜುಗರ ಅನುಭವಿಸಿದ ರಾಹುಲ್ ಗಾಂಧಿ!!

ಈ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಇನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬಗ್ಗಬಹುದು ಬಗ್ಗಬಹುದು ನೆಲಮುಟ್ಟುವವರೆಗೆ ಬಗ್ಗಬಹುದು. ಆದರೆ ನಂತರ ಎದ್ದೇಳಲೇಬೇಕು. ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಹಗರಣಗಳಿಂದ ಮಾತ್ರವಲ್ಲ ಅನಾಚಾರಗಳಿಂದಲೂ ಸುದ್ಧಿಯಾಗಿದ್ದ ಈ ರಾಜ್ಯ ಸರ್ಕಾರದಿಂದ ಮತ್ತೊಂದು ದುರಂತ ಬಯಲಲಿಗೆ ಬಂದಿದೆ.

ಕರ್ನಾಟಕ ಪ್ರವಾಸದಲ್ಲಿ ಕಾಂಗ್ರೆಸ್‍ನ ಯುವ ನಾಯಕ ಈಗ ಮತ್ತೊಂದು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ… ಗುಲ್ಬರ್ಗ ಪ್ರವಾಸದಲ್ಲಿದ್ದ ರಾಹುಲ್‍ಗಾಂಧಿ ಪ್ರಚಾರ ಸಮದಲ್ಲಿ ಅವರ ಪ್ರಚಾರದ ಬಸ್ ತೆರೆಳಲು ಆಂಬುಲೆನ್ಸ್ ಅನ್ನು ಬದಿಗಿಟ್ಟು ಕಾಂಗ್ರೆಸ್ ಸರಕಾರದ ಪ್ರಚಾರದ ಬಸ್ ಅನ್ನು ತೆರಳಲು ಅನುವು ಮಾಡಿಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ?! ಹಾಗಾದರೆ ಆಂಬ್ಯುಲೆನ್ಸ್‍ನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರೋಗಿಗಳಿಗಿಂತಲೂ ಶೋಕಿಲಾಲನಂತೆ ಜೀವನ ನಡೆಸುವ ಕಾಂಗ್ರೆಸ್ಸಿಗರಿಗೆ ಪ್ರಮುಖ್ಯತೆ ಜಾಸ್ತಿನಾ? ಅನ್ನುವುದೇ ಈಗ ಎಲ್ಲರ ಪ್ರಶ್ನೆಯಾಗಿದೆ.. ಇವರನ್ನು ಗೆಲ್ಲಿಸಲು ಮಾತ್ರ ಇವರಿಗೆ ಜನಸಾಮಾನ್ಯನ ಓಟು ಬೇಕಾಗಿದೆ.. ಆದರೆ ಇಂತಹ ಸಮಯದಲ್ಲಿ ಆಂಬ್ಯಲೆನ್ಸ್ ಅನ್ನು ಬದಿಗಿಟ್ಟು ಈ ರೀತಿಯಾಗಿ ವರ್ತಿಸಿರುವುದು ನಿಜವಾಗಿಯೂ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..

ಇಂತಹ ಕೃತ್ಯಗಳು ಕಾಂಗ್ರೆಸ್ ಸರಕಾರದಿಂದ ಇದೇ ಮೊದಲಲ್ಲ ಈ ಮೊದಲು ಕೂಡಾ ಇಂತಹದ್ದೇ ಘಟನೆ ನಡೆದಿತ್ತು… ಸಿಎಂ ವಾಹನಗಳ ಸುಗಮ ಸಂಚಾರಕ್ಕಾಗಿ ಆಂಬುಲೆನ್ಸ್‍ನಲ್ಲಿದ್ದ ಮಹಿಳೆಯನ್ನು ಕೆಳಗಿಳಿಸಿ ನಡೆದುಕೊಂಡು ಹೋಗುವಂತೆ ಮಾಡಿದ್ದ ಅಮಾನವೀಯ ಘಟನೆ ಮಂಡ್ಯದ ಕೂಡಾ ನಡೆದಿತ್ತು.. ಸಿಎಂ ಕಾರ್ಯಕ್ರಮದ ಸೆಕ್ಯೂರಿಟಿ ಹೆಸರಲ್ಲಿ ಆಂಬುಲೆನ್ಸ್‍ನಿಂದ ಕೆಳಗಿಳಿಸಿ ನಡೆಸಿಕೊಂಡು ಹೋಗುವಂತೆ ಮಾಡಿದ್ದಾರೆ ಈ ಪಾಪಿ ರಾಜ್ಯ ಸರ್ಕಾರದ ಅಧಿಕಾರಿಗಳು. ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದಲ್ಲಿ ಸ್ಟೇಡಿಯಂನಲ್ಲಿ ಹೆಲಿಕಾಫ್ಟರ್ನಿಂದ ಇಳಿದು ಎದುರಿನ ಸ್ಟೇಜ್‍ಗೆ ಹೋಗುವಾಗ, ದಾರಿ ಮಧ್ಯದಲ್ಲಿ ಆಂಬುಲೆನ್ಸ್‍ನಲ್ಲಿ ಮಹಿಳಾ ರೋಗಿಯೋರ್ವರನ್ನು ಕರೆತರಲಾಗಿತ್ತು.

ಆದರೆ ಸಿಎಂ ಭದ್ರತೆ ಹೆಸರಲ್ಲಿ ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆತರುತ್ತಿದ್ದ ಆಂಬುಲೆನ್ಸ್‍ನ್ನು ಅರ್ಧಕ್ಕೆ ತಡೆದಿದ್ದರು. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಆಸ್ಪತ್ರೆವರೆಗೆ ಕರೆದುಕೊಂಡು ಹೋಗಿದ್ದರು. ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿತ್ತು.. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ರೀತಿಯ ನಡೆಯನ್ನು ಜನರು ತೀವ್ರವಾಗಿ ಅಂದು ಕೂಡಾ ಟೀಕಿಸಿದ್ದರು… ಮಹಿಳೆಯನ್ನು ನೋಡಿ ಮರುಗಿದ ಜನ ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಹೇಳಬೇಕು ಎಂದು ಆಕ್ರೋಷ ವ್ಯಕ್ತ ವಾಗಿತ್ತು…. ಪೆÇಲೀಸರನ್ನು ತನ್ನ ಕಪಿಮುಷ್ಟಿಲ್ಲಿರಿಸುವ ಸರ್ಕಾರ ತನಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಇಂತಹ ಅಮಾನವೀಯ ಕೆಲಸಗಳು ಸ್ವತಃ ಪೆÇಲೀಸರಿಂದಲೇ ನಡೆಯುತ್ತಿದ್ದರೂ ತುಟಿ ಬಿಚ್ಚದೆ ಬೆಚ್ಚಗೆ ನಿದ್ರೆ ಮಾಡುತ್ತಿದೆ.

ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವುದು ಜನಸಮಾನ್ಯರಿಗೆ ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ ಜನ ಸರ್ಕಾರದಿಂದ ಯಾವುದನ್ನು ಬಯಸುತ್ತಿದ್ದರೋ ಅದ್ಯಾವುದೂ ಆಗುತ್ತಿಲ್ಲ. ಹಲವಾರು ಆಶ್ವಾಸನೆಗಳನ್ನು ನೀಡುತ್ತಾ ಬಂದಂತಹ ಸರ್ಕಾರದಿಂದ ಜನ ಇನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಮುಖ್ಯಮಂತ್ರಿಗಳ ಕಾರ್ಯಕ್ರಮದ ನಿಮಿತ್ತ ಸೆಕ್ಯೂರಿಟಿ ನೆಪದಲ್ಲಿ ಆಂಬುಲೆನ್ಸ್ ವಾಹನವನ್ನು ತಡೆದು ಅದರಲ್ಲಿದ್ದ ಮಹಿಳಾ ರೋಗಿಯನ್ನು ಆಸ್ಪತ್ರೆಯವರೆಗೂ ನಡೆದುಕೊಂಡು ಹೋಗುವಂತೆ ಮಾಡಿದ್ದರು. ರಾಜ್ಯ ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂಬುವುದನ್ನು ಇಷ್ಟರಲ್ಲೇ ಅರ್ಥಮಾಡಿಕೊಳ್ಳಬೇಕಾಗಿದೆ. ಪೆÇಲೀಸರನ್ನು ತಮಗೆ ಬೇಕಾದ ಹಾಗೆ ನಡೆಸಿಕೊಳ್ಳುವ ಈ ಸರ್ಕಾರ ದಕ್ಷ ಪೆÇಲೀಸ್ ಅಧಿಕಾರಿಗಳನ್ನ ಮಾತ್ರ ಮೂಲೆಗುಂಪು ಮಾಡಿ ಅವರ ಅಧಿಕಾರವನ್ನೇ ಕಿತ್ತುಕೊಳ್ಳುತ್ತಿದೆ. ಹಲವಾರು ಅಪರಾಧ ಕೃತ್ಯಗಳನ್ನು ಬಯಲಿಗೆಳೆದ ದಕ್ಷ ಪೆÇಲೀಸ್ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ, ಕೊಲೆ ಭಾಗ್ಯ, ವರ್ಗಾವಣೆ ಭಾಗ್ಯಗಳನ್ನು ಕರುಣಿಸಿದ ಈ ರಾಜ್ಯ ಸರ್ಕಾರ ತಮ್ಮ ಮಾತನ್ನು ಕೇಳುವ ಪೆÇಲೀಸರನ್ನು ಈ ರೀತಿ ಅಮಾನವೀಯವಾಗಿ ವರ್ತಿಸುವಂತೆ ಪೆÇ್ರೀತ್ಸಾಹಿಸುತ್ತಿದೆ. ಇದು ರಾಜ್ಯ ಸರ್ಕಾರದ ಅಹಂಕಾರದ ಆಡಳಿತ ಅನ್ನದೆ ಮತ್ತಿನ್ನೇನನ್ನಬೇಕು..?

ಈ ಹಿಂದೆ ಒಡಿಸ್ಸಾದಲ್ಲಿ ತನ್ನ ಸಂಬಂಧಿಕರೋರ್ವರ ಹೆಣ ಸಾಗಾಟ ಮಾಡಲು ಹಣವಿಲ್ಲದ ಕಾರಣ ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆ ಮಾಡಿದ್ದ ಮನಕಲಕುವ ಘಟನೆ ರಾಷ್ಟ್ರವ್ಯಾಪಿ ಚರ್ಚೆಯಾಗಿತ್ತು. ಅಲ್ಲಿನ ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕಾಪ್ರಹಾರವೇ ನಡೆದಿತ್ತು. ಕೇವಲ ಹೆಣವನ್ನು ಸಾಗಾಟ ಮಾಡಲು ಸಾಧ್ಯವಾಗದ ಸರ್ಕಾರಕ್ಕೆ ಮತ್ತಿನ್ನೇನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಜನರು ಸರ್ಕಾರದ ಮುಂದಿಟ್ಟಿದ್ದರು. ಆದರೆ ಈಗ ಕರ್ನಾಟಕ ಸರ್ಕಾರ ನಡೆಸಿಕೊಳ್ಳುತ್ತಿರುವ ಈ ರೀತಿಯ ಅಮಾನವೀಯ ಕೃತ್ಯಗಳನ್ನು ನೋಡಿದರೆ ಯಾವ ಸಾಮಾನ್ಯ ಪ್ರಜೆಯೂ ಈ ಸರ್ಕಾರಕ್ಕೆ ಶಾಪ ಹಾಕದೆ ಇರಲಾರ… ಯಾವುದೇ ಸಾಮಾನ್ಯ ಪ್ರಜೆಯನ್ನೂ ತನ್ನ ಭದ್ರತೆಗಿಂತಲೂ ಆತನ ಭದ್ರತೆಯನ್ನು ಮೊದಲು ಮಾಡಬೇಕಾದ ಸರ್ಕಾರ, ತನ್ನ ಭದ್ರತೆಯೇ ಪ್ರಮುಖವಾಗಿರುವ ಮುಖ್ಯಮಂತ್ರಿಗಳ ಈ ರೀತಿಯ ಧೋರಣೆಯು ಸಾಮಾನ್ಯ ಪ್ರಜೆಗಳಲ್ಲಿ ಕೆಂಗಣ್ಣು ಬೀರುವಂತೆ ಮಾಡಿದೆ.

ಯಾವುದೇ ಕಾರ್ಯಕ್ರಮ ಅಥವಾ, ಯಾವುದೇ ವಾಹನ ಜಾಥಾಗಳು ಇದ್ದರೂ ಆಂಬುಲೆನ್ಸ್‍ಗೆ ದಾರಿ ನೀಡುವ ನಮ್ಮ ಸಾಮಾನ್ಯ ಜನರ ಎದುರು ತನ್ನ ಭದ್ರತೆಗಾಗಿ ಓರ್ವ ರೋಗಿಯನ್ನು ಕರೆದುಕೊಂಡು ಹೋಗುವ ಆಂಬುಲೆನ್ಸ್ ಅನ್ನು ಬದಿಗಿಡುವುದು ನಿಜವಾಗಿಯೂ ಸರಿಯಲ್ಲ…

-ಪವಿತ್ರ

Tags

Related Articles

Close