ಪ್ರಚಲಿತ

ಅಮೆರಿಕಾದ ಜಾರ್ಜಿಯಾ ರಾಜ್ಯದಿಂದ ಹಿಂದೂ ವಿರೋಧಿ ಕೃತ್ಯ ಖಂಡಿಸುವ ನಿರ್ಣಯ ಅಂಗೀಕಾರ

ಹಿಂದೂ ಧರ್ಮದ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅಮೆರಿಕಾದ ಜಾರ್ಜಿಯಾ ರಾಜ್ಯ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗುತ್ತಿರುವ ಹಿಂದೂಗಳ ಫೋಬಿಯಾವನ್ನು ಗುರುತಿಸಿರುವ ಜಾರ್ಜಿಯಾ, ಹಿಂದೂ ವಿರೋಧಿ ಕೃತ್ಯಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಆ ಮೂಲಕ ಹಿಂದೂ ಫೋಬಿಯಾವನ್ನು ಗುರುತಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಅಮೆರಿಕ ಪಾತ್ರವಾಗಿದೆ. ಅಮೆರಿಕದಲ್ಲಿ ಹಿಂದೂ ಧರ್ಮ ವಿರೋಧಿ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಒಂದು ಮಹತ್ವದ ನಿರ್ಣಯವನ್ನು ಜಾರ್ಜಿಯಾ ತೆಗೆದುಕೊಂಡಿದೆ. ಜಾರ್ಜಿಯಾವು ಭಾರತೀಯ ಅಮೆರಿಕನ್ನರು ಮತ್ತು ಹಿಂದೂ ಅಮೆರಿಕನ್ನರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಸಹ ಗುರುತಿಸಿದೆ.

ಈ ಮಹತ್ವದ ನಿರ್ಣಯವನ್ನು ಜಾರ್ಜಿಯಾದ ಪ್ರತಿನಿಧಿ ಲಾರೆನ್ ಮೆಕ್ ಡೊನಾಲ್ಡ್ ಅವರು ಶಾಸಕಾಂಗ ಸಭೆಯಲ್ಲಿ ಮಂಡಿಸಿದ್ದಾರೆ. ಇದರಲ್ಲಿ ಹಿಂದೂ ಧರ್ಮವು ಪ್ರಪಂಚದ ಅತೀ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಹಿಂದೂ ಧರ್ಮಕ್ಕೆ ನೂರಕ್ಕೂ ಅಧಿಕ ದೇಶಗಳಲ್ಲಿ೧.೨ ಶತಕೋಟಿಗೂ ಅಧಿಕ ಅನುಯಾಯಿಗಳಿದ್ದಾರೆ. ಪರಸ್ಪರ ನಂಬಿಕೆ, ಗೌರವ, ಶಾಂತಿಯ ಜೊತೆಗೆ ಹಿಂದೂ ಧರ್ಮ ಮಿಳಿತವಾಗಿದೆ ಎಂದು ಈ ನಿರ್ಣಯದಲ್ಲಿ ಹೇಳಲಾಗಿದೆ.

ಹಿಂದೂ ಫೋಬಿಯಾವು ಹಿಂದೂ ಧರ್ಮದ ಬಗ್ಗೆ ಪೂರ್ವಾಗ್ರಹಪೀಡಿತವಾಗಿದೆ. ಭಯ, ವಿನಾಶಕಾರಿ ವರ್ತನೆಗಳನ್ನು ಒಳಗೊಂಡಿರುವುದಾಗಿಯೂ ಈ ನಿರ್ಣಯದಲ್ಲಿ ಹೇಳಲಾಗಿದೆ.

Tags

Related Articles

Close