ಪ್ರಚಲಿತ

ನಕ್ಸಲಿಸಂ ಬಗ್ಗೆ ಅಮಿತ್ ಶಾ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭಯೋತ್ಪಾದನೆಯ ವಿರುದ್ಧ, ನಕ್ಸಲಿಸಂ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಮಾಡುತ್ತಿದೆ. ದೇಶವನ್ನು ಸುರಕ್ಷಿತವಾಗಿ ಕಾಪಾಡುವ ನಿಟ್ಟಿನಲ್ಲಿ ಕೇಂದ್ರದ ಪ್ರಧಾನಿ ನಮೋ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ದೇಶದ ರಕ್ಷಣೆ ಮತ್ತು ದೇಶವಾಸಿಗಳ ರಕ್ಷಣೆ ಪ್ರಧಾನಿ ಮೋದಿ ಸರ್ಕಾರದ ಪ್ರಮುಖ ಆದ್ಯತೆ ಯಾಗಿದೆ. ಭಯೋತ್ಪಾದಕರನ್ನು, ಭಯೋತ್ಪಾದನೆಯನ್ನು, ನಕ್ಸಲಿಸಂ ಅನ್ನು ಬೇರು ಸಮೇತ ಕಿತ್ತು ಹಾಕಿ ಶಾಂತಿಯುತ ಮತ್ತು ಉಗ್ರವಾದ ಮುಕ್ತ ರಾಷ್ಟ್ರ ನಿರ್ಮಾಣದ ಗುರಿಯನ್ನು ಇರಿಸಿಕೊಂಡು ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ಸತ್ಯ.

ಪ್ರಧಾನಿ ಮೋದಿ ಸರ್ಕಾರ ಭದ್ರತೆ ಗೆ ಆದ್ಯತೆ ನೀಡಿ, ಅಭಿವೃದ್ಧಿಯ ಸಮಗ್ರವಾದ ವಿಧಾನದ ಜೊತೆಗೆ ನಕ್ಸಸರಿಗೆ ದೊಡ್ಡ ಮಟ್ಟದ ಸೋಲನ್ನು ಉಣಬಡಿಸಿದೆ ಎನ್ನಬಹುದು. ಪ್ರಸ್ತುತ ಎಡಪಂಥೀಯ ಉಗ್ರವಾದವು ಕೊನೆಯುಸಿರು ಎಳೆದಿದೆ ಎಂದು ಹೇಳಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ NaxalFreeBharath ಎನ್ನುವ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ, ಅವರ ಮಾರ್ಗದರ್ಶನದಲ್ಲಿ ಕೇಂದ್ರ ಗೃಹ ಸಚಿವಾಲಯವು ನಕ್ಸಲಿಸಂ ಅನ್ನು ನಿವಾರಣೆ ಮಾಡಲು ಆಕ್ರಮಣಕಾರಿ ನೀತಿಗಳನ್ನು ಅಳವಡಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಎಡಪಂಥೀಯ ಉಗ್ರವಾದದ ವಿರುದ್ಧ ಹೋರಾಡುತ್ತಿದೆ. ಅದಕ್ಕೆ ಪೂರಕವಾಗಿ ಎಡಪಂಥೀಯ ಉಗ್ರವಾದಕ್ಕೆ ಹೊಡೆತ ನೀಡುತ್ತಿದೆ. ಎಡಪಂಥೀಯ ಉಗ್ರವಾದ ‌ಪ್ರಸ್ತುತ‌‌ ತನ್ನ ಕೊನೆಯ ಉಸಿರಾಟ ನಡೆಸುತ್ತಿದೆ. ನಕ್ಸಲ್ ಬಾಧಿತ ಪ್ರದೇಶಗಳನ್ನು ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯ ವ್ಯವಸ್ಥೆಗಳನ್ನು ಅಭಿವೃದ್ಧಿ ಮಾಡುವ ಮೂಲಕ, ಅಲ್ಲಿನ ಜನತೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ಶಾ ತಿಳಿಸಿದ್ದಾರೆ.

Tags

Related Articles

Close