ಪ್ರಚಲಿತ

ರಾಹುಲ್ ಗಾಂಧಿಗಾಯಿತು ಭಾರೀ ಮುಖಭಂಗ!! ರಾಷ್ಟ್ರೀಯ ಅಧ್ಯಕ್ಷನಿಗೆ ಬೆವರಿಳಿಸಿದ ರಾಜಕೀಯ ಚಾಣಕ್ಯ ಅಮಿತ್ ಷಾ!!

We know!! ಈ ಕಾಂಗ್ರೆಸ್ ಪಕ್ಷಕ್ಕೂ, ದೇಶದಲ್ಲಿ ನಡೆದ ದೊಡ್ಡ ದೊಡ್ಡ ಹಗರಣಗಳಿಗೂ ಎಲ್ಲಿಂದಲಾದರೂ ಸಂಬಂಧವಿರುತ್ತದೆ ಎನ್ನುವುದು ನಮಗೆ ಗೊತ್ತಿದೆ! ಅದೆಷ್ಟೋ ವರ್ಷಗಳಿಂದ ನಡೆದು ಬಂದ ಹಗರಣವೊಂದು ಮೊನ್ನೆ ಮೊನ್ನೆ ಬಹಿರಂಗವಾದಾಗ, ಕಳೆದ ಮನಮೋಹನ್ ಸಿಂಗ್ ಸರಕಾರ ಕೇವಲ ಮಾಡಿದ್ದೇ ಹಗರಣಗಳನ್ನೇ ಎನ್ನುವಷ್ಟಾಗಿತ್ತು! ಲಲಿತ್ ಮೋದಿ, ವಿಜಯ್ ಮಲ್ಯ, ಮತ್ತು ನೀರವ್ ಮೋದಿ ಕಾಂಗ್ರೆಸ್ ನ ಕೃಪಾ ಕಟಾಕ್ಷದಿಂದ ಮೆರೆದು, ಬ್ಯಾಂಕಿನೊಳಗಿಂದಲೇ ಕನ್ನ ಕೊರೆದಿದ್ದು ಗೊತ್ತೇ ಇರುವಾಗ, ಇನ್ನು ಸಣ್ಣ ಪುಟ್ಟ ಹಗರಣಗಳು ಎಷ್ಟು ನಡೆದಿರಬಹುದು?! ಯೋಚಿಸಿ! ರಾಷ್ಟ್ರೀಯ ಮಟ್ಟದಲ್ಲಿಯೇ ನಡೆಯುವ ಮಿಲಿಯನ್ನುಗಟ್ಟಲೇ ಹಗರಣಗಳ ಜೊತೆ, ತಳಮಟ್ಟದಲ್ಲಿ ಇನ್ನೆಷ್ಟು ನಡೆದಿರಬೇಡ! ಅದಕ್ಕೇ, ಬಹುಷಃ ಕೆಲ ಪ್ರಜೆಗಳು ಕಾಂಗ್ರೆಸ್ ಬರಲೆಂದಯ ಹಾರೈಸುತ್ತಿರಿವುದು!! ಅಕ್ರಮವನ್ನು ಸಕ್ರಮವನ್ನಾಗಿಸುವ ಸುವರ್ಣ ಅವಕಾಶ ಸಿಗುವುದು ಇದರಲ್ಲಿಯೇ!!

ಈಗ, ಮತ್ತೊಂದು ಬಿಲಿಯನ್ ರೂಗಳ ಹಗರಣವೊಂದು ಬಯಲಾಗಿದೆ!! ಅದೂ, ಸಹ ಬ್ಯಾಂಕುಗಳನ್ನು ದೋಚಿದ್ದೇ ಕಥೆ! ಯಾವ ಪಕ್ಷ ಸಹಕರಿಸಿದೆ ಗೊತ್ತಾ?! ಯೆಸ್!! ನಿಮ್ಮ ಊಹೆ ಸರಿಯೇ?! ಕಾಂಗ್ರೆಸ್!! ಈ ಹಗರಣ ಗಂಭೀರವಾಗುವುದಕ್ಕೂ ಬಲವಾದ ಕಾರಣವಿದೆ! ಹಗರಣದಲ್ಲಿ ನೇರ ಭಾಗಿಯಾದವರು ಬೇರಾರೂ ಅಲ್ಲ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯ ಕುಟುಂಬದವರೇ ಆದವರೊಬ್ಬರು ಈ ಹಗರಣದ ಪ್ರಮುಖ ರೂವಾರಿ!! ವಿಚಿತ್ರವೆಂದರೆ, ಯಾವಾಗ ಹಗರಣವೊಂದು ಬಯಲಾಯಿತೋ, ಆಗ ರಾಹುಲ್ ಗಾಂಧಿ ಮತ್ತು ತಂಡ , ಮೋದಿ ಸರಕಾರವನ್ನು ಆರೋಪಿಸಿರುವುದಲ್ಲದೇ, ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ!!

ಅರೆ ವ್ಹಾ! ಕಾಂಗ್ರೆಸ್ ಮಾಡಿದ ಹಗರಣಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದರೆ ಹೇಗೆ ಹೇಳಿ?! ಅದರಲ್ಲಿಯೂ, ತಮ್ಮದೇ ಸರಕಾರದ
ಆಡಳಿತಾವಧಿಯಲ್ಲಿ ನಡೆದ ಹಗರಣಗಳಿಗೆ ಸ್ವತಃ ಕಾಂಗ್ರೆಸ್ ಉತ್ತರಿಸುತ್ತಿಲ್ಲ! ಬದಲಿಗೆ , ವಿರೋಧ ಪಕ್ಷವಾಗಿದ್ದ ಬಿಜೆಪಿಯ ನಾಯಕರ ಹತ್ತಿರ ಉತ್ತರ ಕೇಳುವುದನ್ನು ನೋಡಿದರೆ, ಕಾಂಗ್ರೆಸ್ ಗೆ ಅರವತ್ತರ ಅರಳು ಮರಳು ಹಿಡಿದಿದೆ ಎನ್ನುವುದರಲ್ಲ ಸಂಶಯವೇ ಇಲ್ಲ ಅಲ್ಲವೇ?!

ಆದರೆ, ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಹಗರಣ ಮಾಡಿದ್ದು ಬೇರಾರು ಅಲ್ಲ ಬದಲಿಗೆ, ಪಂಜಾಬ್ ನ ಮುಖ್ಯಮಂತ್ರಿಯಾದ ಕ್ಯಾಪ್ಟನ್ ಅಮರೀಂದರ್ ಸಿಂಗ್ ನ ಅಳಿಯ ಎಂದು ಗೊತ್ತಾದೊಡನೇ, ಕಾಂಗ್ರೆಸ್ ಗ ತೀರಾ ಮುಖಭಂಗವಾಗಿದೆ!! ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನ ಲ್ಲಿ ನಡೆದ ೩೯೦ ಕೋಟಿಯಷ್ಟು ಹಣವನ್ನು ಅಕ್ರಮವಾಗಿ ವಹಿವಾಟು ನಡೆಸಿದ್ದಕ್ಕೆ, ಸಿಬಿಐ ಪೋಲಿಸರು ದೆಹಲಿ ಮೂಲದ ವಜ್ರ ವ್ಯಾಪಾರಿಯ ಮೇಲೆ ಮೊಕದ್ದಮೆ ದಾಖಲಿಸಿದ್ದರು!! ಆದರೆ, ಅದೀಗ ಪಂಜಾಬ್ ನ ಮುಖ್ಯಮಂತ್ರಿಯ ಅಳಿಯನೂ ಸಹ ಈ ಹಗರಣದಲ್ಲಿ ಭಾಗಿಯಾಗಿದ್ದಾನೆಂಬ ಆರೋಪ ಕೇಳಿ ಬಂದಿದೆ!!

  • OBC sanctioned a loan of Rs 148.60 crore to the company in 2011. The loan was sanctioned for financing 5,762 sugarcane farmers based on a tie-up agreement under an RBI scheme for supplying sugar produce to the company from January 25, 2012 to March 13, 2012. The loan money was “dishonestly and fraudulently diverted by the company for its own needs.
  • OBC has allegedly cheated to the tune of Rs 97.85 crore, but the loss incurred by the bank is Rs 109.08 crore. 

ಸಿಂಭಾಯೋಲಿ ಶುಗರ್ಸ್ ಲಿಮಿಟೆಡ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಗುರ್ಮೀತ್ ಸಿಂಗ್ ಮನ್ ಮತ್ತು, ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆದ ಅಮರೀಂದರ್ ಸಿಂಗ್ ಅಳಿಯ ಗುರ್ಪಾಲ್ ಸಿಂಗ್ ಮತ್ತು ಇತರೆ ಸಿಬ್ಬಂದಿಗಳ ಮೇಲೆ ೧೦೯ ಕೋಟಿ ರೂ ಗಳ ಸಾಲವನ್ನು ಪಬ್ಲಿಕ್ ಸೆಕ್ಟರ್ ಹೆಸರಿನಲ್ಲಿ ಪಡೆದು ವಂಚಿಸಿದ ಪ್ರಕಾರಣದಲ್ಲಿ, ಸಿಬಿಐ ಪೋಲಿಸರು ಮೊಕದ್ದಮೆ ದಾಖಲಿಸಿದ್ದಾರೆ!

ಅದಲ್ಲದೇ, ದೂರಿನಲ್ಲಿ ಹೆಚ್ಚುವರಿಯಾಗಿ ನೀಡಿದ್ದ೧೪೮.೬೦ ಕೋಟಿ ರೂಗಳಷ್ಟು ಸಾಲವನ್ನು ೫,೭೬೨ ಕಬ್ಬು ಬೆಳೆಯುವ ರೈತರಿಗೆ ಹಣಕಾಸಿನ ಸಹಾಯ ಮಾಡುವ ವಿಚಾರದಲ್ಲಿ ಸಾಲ ತೆಗೆದುಕೊಂಡಿದ್ದ ಶುಗರ್ಕೇನ್ ಕಂಪೆನಿ, ಕೊನೆಗೆ ರೈತರಿಗೆ ನೀಡದೇ ತನ್ನ ಸ್ವಂತದ ಅವಶ್ಯಕತೆಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ ಎಂದು ಹೇಳಲಾಗಿದೆ!

ಆದರೆ, ಯಾವಾಗ ರಾಹುಲ್ ಗಾಂಧಿ ಇದ್ಯಾವುದನ್ನೂ ಯೋಚಿಸದೆ, ಮೋದಿ ಸರಕಾರವನ್ನು ದೂಷಿಸಿ ಟ್ವೀಟ್ ಮಾಡಿದರೋ, ತಕ್ಷಣವೇ ಅಮಿತ್ ಷಾ ಪ್ರತಿಕ್ರಿಯೆ ನೀಡಿದ್ದಾರೆ!! ಅದರಲ್ಲೂ, ಕಾಂಗ್ರೆಸ್ ನವರೆಂದರೆ ಬಿಟ್ಟಾರೆಯೇ ಅಮಿತ್ ಷಾ!?

  • Why delete this tweet highlighting the loot of Captain Amarinder Singh’s son-in-law. Congress has always been at the forefront of highlighting their own robberies such as the NPA mess, bad loans, the free hand they gave to Vijay Mallya and Nirav Modi.

“ಯಾಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಳಿಯನ ಹಗರಣದ ಬಗ್ಗೆ ಇದ್ದ ಟ್ವೀಟ್ ಅನ್ನು ಅಳಿಸಿಹಾಕಿದಿರಿ?! ಕಾಂಗ್ರೆಸ್ ತನ್ನ ಪಕ್ಷದ ಹಗರಣ ಮತ್ತು ಲೂಟಿಗಳಿಗೆ ಸಾಕ್ಷಿಯಾಗಲು ಮುಂಚೂಣಿಯಲ್ಲಿ ನಿಂತಿರುತ್ತದೆ! ಅದರಲ್ಲೂ, ಎನ್ ಪಿ ಎ ಹಗರಣ, ಅಕ್ರಮ ಸಾಲ, ಮತ್ತು ವಿಜಯ್ ಮಲ್ಯ ಹಾಗೂ ನೀರವ್ ಮೋದಿಗೆ ನೀಡಿದ ಉಚಿತವಾದ ಸಾಲಗಳನ್ನು ಸ್ವತಃ ಪಕ್ಷವೇ ಹೇಳಿಕೊಂಡಿದೆ!!” ಎಂದಿದ್ದಾರಷ್ಟೇ!!

ಮಜಾ ಎಂದರೆ, ಈ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಎನ್ನಿಸಿಕೊಂಡ ರಾಹುಲ್ ಗಾಂಧಿಯವರು ಮಾತ್ರ ಕಾಮಿಡಿ ಪೀಸ್ ಬಿಡಿ!! ಯಾಕೆಂದರೆ, ದೇಶದಲ್ಲಿ ಏನೇ ಆದರೂ ಸಹ ಮೋದಿಯವರನ್ನೇ ಆರೋಪಿಸುವ ರಾಹುಲ್ ಗಾಂಧಿಯ ಹರಿಕಥೆ ಬಹುಷಃ ಗಾಂಧಿ ಕುಟುಂಬದವರೇ ಹಗರಣ ನಡೆಸಿದರೂ ಮೋದಿಯನ್ನು ದೂಷಿಸಿ ಆರೋಪಿಸುವುದು ನಿಲ್ಲುವುದಿಲ್ಲವೇನೋ!! ಪ್ರಧಾನಿ ಮೋದಿಯ ನೋಟು ರದ್ದತಿ ಮತ್ತು, ಜಿಎಸ್ ಟಿಯಿಂದಲೇ ಹೀಗಾಯಿತು ಎನ್ನಬಹುದು ನಮ್ಮ ರಾಹುಲ್ ಗಾಂಧಿ!!

  • Gurupal Singh, son-in-law of Punjab Congress CM Amarinder Singh. He is booked by CBI for alleged bank loan fraud of 97.85 crore and default of 110 crore by Simbhaoli Sugars. Which idiot runs the Congress handle?

ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರವಲ್ಲವೇ?!! ಕಳೆದ ಎಪ್ಪತ್ತು ವರ್ಷಗಳಲ್ಲಿ ಯಾವುದೇ ಹಗರಣವನ್ನು ಕೆದಕಿ ನೋಡಿದರೆ, ಕಾಂಗ್ರೆಸ್ ನ ನೆರಳೊಂದು ಸಿಕ್ಕೇ ಸಿಗುತ್ತದೆ ಎಂದರೆ, ಅದೆಷ್ಟು ಈ ಭಾರತವನ್ನು ದೋಚಿರಬೇಡ?!

  • Caught by the neck, Congress IT Cell woke up and deleted the Tweet. Here is the screen shot of the tweet. CBI booked Gurupal Singh son in law of CM Amarinder Singh among others in a bank scam perpetuated by “Simbhaoli Sugars”. Congress scored self goal blaming BJP for it.

ಕಾಂಗ್ರೆಸ್ ನ ಐಟಿ ಸೆಲ್ ಗಳ ಕಥೆ ಇದೇ!! ದೋಚುವುದು ಕಾಂಗ್ರೆಸ್ ಆದರೂ, ದೂಷಿಸುವುದು ಬಿಜೆಪಿಯನ್ನು!! ಬಿಡಿ!! ಇದೆಲ್ಲ, ನಮ್ಮ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾರ ಕೈ ಚಳಕ!!

ಇದೂ ಸಹ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಮಾದರಿಯನ್ನು ಹೊಂದಿದೆ ಎಂದು ಹೇಳಿರುವ ಸಿಬಿಐ ವಕ್ತಾರ ಅಭಿಷೇಕ್ ಸಿಂಗ್, “ಈ ಕಾರ್ಪೋರೇಟ್ ಸಾಲವನ್ನೂ ಸಹ, ನವೆಂಬರ್ ೨೯, ೨೦೧೬ ರಲ್ಲಿ ಎನ್ ಪಿ ಎ ಆಗಿ ಪರಿವರ್ತಿಸಲಾಗಿದೆ ” ಎಂದಿದ್ದಾರೆ!!

ಅಬ್ಬೋ!! ಶ್ರೀ ಸಾಮಾನ್ಯನಾದವನು ಒಂದು ಹತ್ತು ಸಾವಿರ ಸಾಲ ತೆಗೆದುಕೊಂಡು ಕೊನೆಗೆ ಕಾರಣಾಂತರಗಳಿಂದ ಪಾವತಿಸುವುದು ಸ್ವಲ್ಪ ತಡವಾದರೂ, ಬಡ್ಡಿ ಚಕ್ರಬಡ್ಡಿ ಎಂದೆಲ್ಲ ಹಾಕಿ, ಕೊನೆಗೆ ಮನೆ ಮಠವನ್ನೂ ವಶ ಪಡಿಸಿಕೊಳ್ಳುವ ಬ್ಯಾಂಕುಗಳು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಸಾಲವನ್ನು ಬಗೆಬಗೆದು ಕೊಡುತ್ತವೆ!! ಬಡ್ಡಿ ಸಾಯಲಿ, ಅಸಲನ್ನೂ ಸಹ ಎನ್ ಪಿ ಎ ಆಗಿ ಪರವರ್ತಿಸುವ ಬ್ಯಾಂಕುಗಳ ಕರ್ಮಕಾಂಡ ಇವತ್ತು ನೆನ್ನೆಯದಾ?! ಸಾಮಾನ್ಯ ಪ್ರಜೆಗೆ ಸಾವಿರ ಸಾಲ ಕೊಡುವುದಕ್ಕೆ ದಾಖಲೆ ಎಂದೆಲ್ಲ ನೂರು ದಿನ ಅಲೆದಾಡಿಸುವ ಬ್ಯಾಂಕುಗಳು, ನೀರವ್ ಮೋದಿ, ಮಲ್ಯರಂತಹವರಿಗೆ ಮಾತ್ರ ಸಾಲ ಕೇಳಿದ ದಿನವೇ ಬಾಚಿ ಕೊಡುತ್ತವಲ್ಲ?! ಮೆಚ್ಚಲೇಬೇಕು ಬಿಡಿ!!

– ಪೃಥು ಅಗ್ನಿಹೋತ್ರಿ

Tags

Related Articles

Close