ಅಂಕಣಪ್ರಚಲಿತರಾಜ್ಯ

ಕನ್ನಡ ವಿರೋಧಿ ಎಂದ ಮಾಧ್ಯಮಗಳನ್ನು ಜಾಡಿಸಿದ ಕನ್ನಡದ ಫೈರ್ ಬ್ರಾಂಡ್ !! ಅಪ ಪ್ರಚಾರಕ್ಕೆ ಅನಂತ್ ಕುಮಾರ್ ಹೆಗಡೆ ನೀಡಿದ ಸ್ಪಷ್ಟೀಕರಣ ಏನು ಗೊತ್ತಾ..?

ಅನಂತ್ ಕುಮಾರ್ ಹೆಗಡೆ. ಕೇಂದ್ರದ ಕೌಶಲ್ಯೋಧ್ಯಮ ಸಚಿವರು.ಇವರು ಎಲ್ಲಿಗೇ ಹೋದರೂ ತಮ್ಮ ಪ್ರಕರ ಮಾತುಗಳ ಮೂಲಕ ಎದುರಾಳಿಗಳನ್ನು ಝಾಡಿಸಿ ದೇಶದ ಘನತೆಯನ್ನು ಎತ್ತಿ ಹಿಡಿಯುವಗರು. ಇವರು ಭಾಷಣ ಮಾಡುತ್ತಾರೆ ಎಂದರ ದೇಶ ಪ್ರೇಮಿಗಳು ಹುಚ್ಚೆದ್ದು ಕುಣಿಯುತ್ತಾಭಾಷೆಒಂದರ್ಥದಲ್ಲಿ ಇವರ ಭಾಷಣವನ್ನು ಎಲ್ಲರಿಗಿಂತ ಹೆಚ್ಚಾಗಿ ಛಾತಕ ಪಕ್ಷಿಯಂತೆ ಕಾಯುತ್ತಿರುವುದು ಮಾಧ್ಯಮಗಳು. ತಮ್ಮ ಚಾನೆಲ್ ನ ಟಿ.ಆರ್.ಪಿ.ಯನ್ನು ಹೆಚ್ಚಿಸಲು ಅನಂತ್ ಕುಮಾರ್ ಹೆಗ್ಗಡೆಯವರ ಭಾಷಣವನ್ನು ತಿರುಚಿ ಸಾಧ್ಯವಾದಷ್ಟು ಮಟ್ಟಿಗೆ ವಿವಾದಾತ್ಮಕವಾಗಿ ಬಳಸಿ ನಂತರ ಬುದ್ಧಿಜೀವಿಗಳ ಪ್ರತಿಭಟನೆಯ ಕಾವು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ ಅಷ್ಟೆ.

ಸದ್ಯ ಅನಂತ್ ಕುಮಾರ್ ಹೆಗಡೆಯವರ ಭಾಷಣ ವನ್ನು ತಿರುಚಲು ಯತ್ನಿಸಿದ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕಾರ್ಯಕ್ರಮ. ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕಾರ್ಯಕ್ರಮ ದಲ್ಲಿ ನಡೆದ ಅವರ ಭಾಷಣದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿಭರ್ಜರಿಯಾಗಿ ಮಾತನಾಡಿದ್ದರು. ಆದರೆ ಮಾದ್ಯಮಗಳು ಹೆಗ್ಗಡೆ ಅವರ ಮಾತುಗಳನ್ನು ತಿರುಚಿ ಕನ್ನಡ ವಿರೋಧಿ ಎಂದು ಪಟ್ಟ ಕಟ್ಟಿವೆ.

ಅಹಂ ಕುಮಾರ್ ಹೆಗಡೆಯವರು ಕನ್ನಡ ಬರುವುದು ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಮೂರು ಜಿಲ್ಲೆಯವರಿಗೆ ಮಾತ್ರ ಎಂಬ ಪ್ರಚಾರವನ್ನು ಮಾಡಿ ಭಾರೀ ಟಿ.ಆರ್.ಪಿ.ಯನ್ನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಅನಂತ್ ಕುಮಾರ್ ಹೆಗಡೆಯವರ ನಂತರದ ಫೇಸ್ ಬುಕ್ ಪೋಸ್ಟ್ ಆ ಮಾಧ್ಯಮಗಳೇ ಬೆಕ್ಒಸ ಬೆರಗಾಗುವಂತೆ ಮಾಡಿತ್ತು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಿಷ್ಟು…

ಕೌಶಲ್ಯ ಅಭಿವೃದ್ದಿಯ ಅಗತ್ಯತೆ ಹಾಗೂ ಅವಕಾಶಗಳ ಮಾತನಾಡುತ್ತ ಅವರು ಹೇಳಿದ್ದು “ ಕರ್ನಾಟಕದಲ್ಲಿ ಇಂಗ್ಲಿಷ್, ಇಂಗ್ಲಿಷ್ ಅಂತಾ ಹೋರಾಟ, ಒದರಾಟ ಮಾಡಿ ಮಾಡಿ ಇದೀಗ ಇಲ್ಲಿ ಕನ್ನಡ ಮಾಯವಾಗಿ ಇಂಗ್ಲಿಷನ್ನು ಕನ್ನಡಕ್ಕೆ ಟ್ರಾನ್ಸ್ ಲೇಟು ಮಾಡಬೇಕಾದ ಕಾಲ ಬಂದಿದೆ. ಆದರೆ ಆ ರೀತಿ ಟ್ರಾನ್ಸ್ ಲೇಟು ಮಾಡುವಂತಹ ಜನ ಇಲ್ಲಿ ಸರಿಯಾಗಿ ಸಿಗುತ್ತಿಲ್ಲ , ಎಲ್ಲೋ ಅಪರೂಪಕ್ಕೆ ದ ಕ ,ಉತ್ತರ ಕನ್ನಡ ,ಶಿವಮೊಗ್ಗದ ಹಳ್ಳಿಯ ಕನ್ನಡ ಶಾಲೆಯ ಹುಡುಗರು ಮಾಡುತ್ತಾರೆ ಬಿಟ್ಟರೆ ಬಾಕಿ ಉಳಿದವರಿಗೆ ಯೋಗ್ಯತೆಯೇ ಇಲ್ಲ .ನಾನು ಶುದ್ದವಾದ ಕನ್ನಡ ಮಾತನಾಡೋಕೆ ಹೋದರೆ ತುಂಬಾ ಜನಕ್ಕೆ ಅದು ಅರ್ಥಾನೆ ಆಗಲಿಕ್ಕಿಲ್ಲ.ಅದು ಬೆಂಗಳೂರಿನವರಿಗಂತೂ ಆರ್ಥವೇ ಆಗೋದಿಲ್ಲ ಬಿಡಿ “ ಎಂದಿದ್ದರು ಅಷ್ಟೇ.

ಇದು ತಪ್ಪೇ? ಅವರ ಒಂದು ಗಂಟೆಯ ಭಾಷಣ ‌ದಲ್ಲಿ ಕೇವಲ ಒಂದು ಙಿಮಿಷವನ್ನು ಕಟ್ ಮಾಡಿ ವಿಕ್ರತಿ ಮೆರೆದ ಮಾಧ್ಯಮಗಳನ್ನು ್ನಬೇಕೋ ಗೊತ್ತಿಲ್ಲ.ಆದರೆ ಇಂದು ಸಚಿವರ ಹೇಳಿಕೆಯನ್ನು ತಿರುಚಿ ವರದಿ ಮಾಡಿದ ಕನ್ನಡದ ಮಾಧ್ಯಮಗಳು ತಮ್ಮಲ್ಲಿರುವ ಅದೆಷ್ಟು ವರದಿಗಾರರು ಕನ್ನಡದಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ ಹಾಗೂ ಕನ್ನಡವನ್ನು ಸ್ಪಷ್ಟವಾಗಿ ಬರೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆತ್ಮಾವಲೋಕನ ಮಾಡಬೇಕಾಗಿದೆ. ವಸ್ತು ಸ್ಥಿತಿಯನ್ನು ವಿವರಿಸಿದರೆ ಅಲ್ಪತನದಿಂದ ವಿವಾದ ಎಬ್ಬಿಸುವ ಮಾಧ್ಯಮಗಳಿಂದ ಮಾಧ್ಯಮಗಳ ಮೇಲಿನ ಗೌರವ ಕಡಿಮೆಯಾಗುತ್ತದೆ ಎಂಬ ಸಣ್ಣ ವಿವೇಕ ಮಾಧ್ಯಮಗಳು ಮತ್ತು ವರದಿಗಾರರು ಹೊಂದುವ ಅಗತ್ಯತೆ ಕಂಡು ಬರುತ್ತಿರುವುದು ಸುಳ್ಳಲ್ಲ.

ಫೈರ್ ಬ್ರಾಂಡ್ ಉಗುಳಿದ ಬೆಂಕಿಗೆ ತತ್ತರಿಸಿದ ಮಾಧ್ಯಮಗಳು…

ತನ್ನನ್ನು ಕನ್ನಡ ಕನ್ನಡ ವಿರೋಧಿ ಎಂಬ ಪಟ್ಟ ಕಟ್ಟಿ ಕನ್ನಡಿಗರ ಪಾಲಿಗೆ ವಿಲನ್ ಎಂಬಂತೆ ಕಾಣಿಸಲು ಶತ ಪ್ರಯತ್ನ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಅನಂತ್ ಕುಮಾರ್ ಹೆಗಡೆಯವರು ಸರಿಯಾಗಿ ಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮ ಫೇಸ್ ಬುಕ್ ನಲ್ಲಿ ತನ್ನ ಅನಿಸಿಕೆಯನ್ನು ಬರೆದುಕೊಂಡ ಫೈರ್ ಬ್ರಾಂಡ್ ಮಾಧ್ಯಮಗಳಿಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ತಮ್ಮ ಫೇಸ್‌ಬುಕ್‌ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

ಮಾತೃ ಭಾಷೆಯ ಉಳಿವು ಪ್ರಶ್ನೆಯಲ್ಲ…. ಬದಲಿಗೆ ಇಂದು ಅವು ಗಟ್ಟಿಯಾಗಿ ಇನ್ನು ಹಲವಾರು ತಲೆಮಾರಿಗೆ ಶ್ರೀಮಂತವಾಗಿ ಧಾರೆಯೆರೆಯುವ ಒಂದು ಸುವ್ಯವಸ್ಥೆಯನ್ನು ನಿರ್ಮಾಣಮಾಡಬೇಕಿದೆ. ಇಂದು ಬಹುತೇಕ ಭಾಷೆಯ ಬಗ್ಗೆ ಹೋರಾಟ ಕೇವಲ ವ್ಯಯಕ್ತಿಕ ಮತ್ತು ರಾಜಕೀಯ ಕೀಳು ದೊಂಬರಾಟವಾಗಿ ಮಾರ್ಪಟ್ಟಾಗಿರುವುದು ಪ್ರಸ್ತುತ ನಮ್ಮ ಸಮಾಜದ ಒಂದು ದೊಡ್ಡ ದುರಂತ. ಆಂಗ್ಲ ಮಾಧ್ಯಮದ ಪ್ರಭಾವ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ.

ಶುದ್ಧವಾಗಿ ಕನ್ನಡ ಭಾಷೆ ಮಾತನಾಡುವುದು ಸಹ ಇಂದು ಒಂದು ಅಪರೂಪದ ಕಲೆಯಾಗಿ ನೋಡಲಾಗುತ್ತಿದೆ ಮತ್ತು ಇಂದಿನ ತಲೆಮಾರಿನ ಹಲವರಿಗೆ ಶುದ್ಧ ಕನ್ನಡ ಅರ್ಥವಾಗದಿರುವ ಭಾಷೆಯು ಹೌದು!!! ಕನ್ನಡ ಸಂಭಾಷಣೆಯಲ್ಲಿ ಆಂಗ್ಲ ಮತ್ತು ಇನ್ನಿತರ ಭಾಷೆಯ ಕಲಸು ಮಿಶ್ರಿತ ಮಾಡದಿದ್ದರೆ ಸಂವಹನ ಪೂರ್ಣಗೊಳ್ಳುವುದಿಲ್ಲ ಮತ್ತು ಅದು ಒಂದು status ನಿರ್ಮಾಣ ಮಾಡುವುದಿಲ್ಲವೆನ್ನುವುದು ಸಹ ಇಂದಿನ ಹದೆಗೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಹೆಚ್ಚಾಗಿ ಬೆಂಗಳೂರು ನಗರದಲ್ಲಿ ಕಂಡು ಬರುತ್ತಿದ್ದ ಒಂದು ನಕಾರಾತ್ಮಕ ಬೆಳವಣಿಗೆ; ಇಂದು ಬೇರೆ ಗ್ರಾಮಾಂತರ ಹಳ್ಳಿ- ಪಟ್ಟಣಗಳಿಗೆ ಸಹ ದಟ್ಟವಾಗಿ ವ್ಯಾಪಿಸುತ್ತಿದೆ.

ಭಾಷೆಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಮೆರೆಯಬೇಕಾದವರು ಇಂದು ಅನಾದಾರದಿಂದ ಅದನ್ನು ಕಡೆಗಣಿಸುತ್ತಿದ್ದೇವೆ. ಇಂದು ಹಲವಾರು ಭಾರತೀಯರ ಮನೆಮಾತು ಆಂಗ್ಲ ಭಾಷೆಯಾಗಿ ಬದಲಾಗಿದೆ. ಹಾಗಾದರೆ ನಮ್ಮ ಎಲ್ಲ ಭಾರತೀಯ ಭಾಷೆಗಳು ನಮ್ಮ ಇಂದಿನ ಸ್ಥಿತಿ-ಗತಿಗೆ ಸಮರ್ಥವಲ್ಲವೇ??? ನಮ್ಮ ಕನ್ನಡದಷ್ಟು ವೈವಿಧ್ಯ ಚೆಲುವನ್ನು ಇನ್ನೆಲ್ಲಿ ಕಾಣಲು ಸಾಧ್ಯ??? ನಗರಗಳಲ್ಲಿ ಇಂದು ಅಂತರರಾಷ್ಟ್ರೀಯ ಶಾಲೆಗಳಲ್ಲಿ ನಮ್ಮ ಮಾತೃ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಐರೋಪ್ಯ ಭಾಷೆಗಳ ಹೇರಿಕೆ ನಡೆಯುತ್ತಿದೆ.

ಈ ಭಾಷೆಗಳು ಇಂದು ಯುರೋಪ್ ಖಂಡದ ಆಯಾ-ಪ್ರದೇಶ ದೇಶಗಳಲ್ಲೇ ಅವನತಿಯತ್ತ ಸಾಗುತ್ತಿದೆ. ಮೂಲ ಜನಸಂಖ್ಯೆ ಕುಸಿತ, ವಲಸೆ ಭಾಷೆಯ ಬೆಳೆಯುತ್ತಿರುವ ಪ್ರಭಾವ, ಬದಲಾಗುತ್ತಿರುವ ಜನಸಂಖ್ಯೆ ಪರಿವರ್ತನೆ, ಇಂದು ಈ ಖಂಡದ ಪ್ರಮುಖ ಸವಾಲಾಗಿದೆ. ಆದರೆ ನಾವು ಇಂದು, ಅರ್ಥವಾಗದ ಮತ್ತು ನಮ್ಮ ಪರಂಪರೆಗೆ ಯಾವುದೇ ಸಂಭಂದವಿಲ್ಲದ ಈ ವಿದೇಶಿ ಭಾಷೆಗಳಿಗೆ ಮನ್ನಣೆ ನೀಡುತ್ತಿದ್ದೇವೆ. ಹಾಗು ನಮ್ಮ ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ಅವಮಾನದ ಲಕ್ಷಣವೆಂದೇ ಪರಿಗಣಿಸುತ್ತೇನೆ.

ಭಾಷೆ ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಂದು ಕನ್ನಡಿಗರಿಗೆ ಸಿಗುತ್ತಿರುವ ಸ್ಥಾನ-ಮಾನ, ಮರ್ಯಾದೆ ಎಲ್ಲವೂ ನಮ್ಮ ಶ್ರೀಮಂತ ಪರಂಪರೆಯ ಬಳುವಳಿಯಿಂದ ಬಂದದ್ದು. ಅದನ್ನು ನಾವು ಹೆಮ್ಮೆಯಿಂದ ಬಳಸಿ, ಉಳಿಸಿ ಇನ್ನಷ್ಟು ಮೆರುಗುಗೊಳಿಸುವುದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೈಯುತ್ತದೆ. ಶುದ್ಧ ಕನ್ನಡ ಬಳಕೆ ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹಾಗು ಸಂವಹನದಲ್ಲಿ ಹೆಚ್ಚಿನ ಆಲೋಚನೆಯ ನಿಖರತೆಯನ್ನು ತಲುಪಬಹುದಾಗಿದೆ.

ಇದಷ್ಟು ಹೇಳಲು ಕಾರಣ ನಮ್ಮ ಕೆಲವು ದೃಶ್ಯ ಮಾಧ್ಯಮದವರು ಭಾಷೆಗೆ ಸಂಬಂಧಿಸಿದಂತೆ ಪುತ್ತೂರಿನ ಕಾರ್ಯಕ್ರಮ ಒಂದರಲ್ಲಿ ನನ್ನ ಮಾತು ಮತ್ತು ಆಲೋಚನೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವುದ್ದಕ್ಕೆ ಹೃದಯಪೂರ್ವಕ ಸ್ವಾಗತ! ಹೀಗೆ ಕಳೆದ ೨ ದಶಕಕ್ಕೂ ಹೆಚ್ಚಿನ ನನ್ನ ರಾಜಕಾರಣದ ಜೀವನದ ಉದ್ದಕ್ಕೂ ಸದಾ ನನ್ನ ಬಗ್ಗೆ ವಿಷ ಕಾರುತ್ತಲೇ ನನ್ನನ್ನು ಅನಾವರಣಗೊಳಿಸಿದ ಈ ಕೆಲವು ಮಾಧ್ಯಮದ ಮಂದಿಗೆ ಈ ವಿಷಯವನ್ನು ಇನ್ನು ಹೆಚ್ಚಾಗಿ ನಿಮ್ಮ ಅಪ್ರಬುದ್ಧ ಭಾಷೆಯಲ್ಲೇ ಚರ್ಚೆ ಮುಂದುವರಿಸುವಂತೆ ಶುಭ ಕೋರುತ್ತೇನೆ. ಅನಂತ ಧನ್ಯವಾದಗಳು!!!

#ಅನಂತಕುಮಾರಹೆಗಡೆ #ಕನ್ನಡ #ಮಾತೃ_ಭಾಷೆ

ಇದು ನಿಜವಾಗಿಯೂ ಸೋಗಲಾಡಿಮಾಧ್ಯಮಗಳಿಗೆ ಭಾರೀ ಪ್ರಮಾಣದ ಹೊಡೆತವನ್ನು ನೀಡುವ ಸಂದೇಶ ವಾಗಿದ್ದು ಇದರಿಂದ ಮಾಧ್ಯಮಗಳು ಅಕ್ಷರಷಃ ಬೆಚ್ಚಿ ಬಿದ್ದವೆ… ಅಭಿಮಾನಿಗಳು ಮಾತ್ರ ಅನಂತ್ ಕುಮಾರ್ ಹೆಗಡೆಯವರನ್ನು ಕಂಡು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಏನೇ ಆಗಲಿ. ಇಂತಹ ನಾಯಕನನ್ನು ಎಷ್ಟು ವಿರೋಧಿಸಿದರೂಬಾದು ಕೊನೆಗೆ ಕೊಡಲಿಯೇಟು ಬೀಳುವುದು ತಮ್ಮ ಬುಡಕ್ಕೇನೆ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

  • ಸುನಿಲ್ ಪಣಪಿಲ
Tags

Related Articles

Close