ಪ್ರಚಲಿತ

ಮೋದಿ ಸರಕಾರದ ಪಾಸ್ ಪೋರ್ಟ್ ಸೇವಾ ಮೊಬೈಲ್ ಆ್ಯಪ್ ಗೆ ಭಾರಿ ಜನ ಬೆಂಬಲ!! ಕೇವಲ 2 ದಿನಗಳಲ್ಲಿ 1 ಮಿಲಿಯನ್ ಡೌನ್ಲೋಡ್!!

ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್‍ಗೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ. ಈ ಅಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ದೇಶದ ಯಾವುದೇ ಮೂಲೆಯಿಂದಲೂ ಪಾಸ್ ಪೋರ್ಟ್  ಗೆ ಅರ್ಜಿ ಸಲ್ಲಿಸಲು ನೆರವಾಗುವುದಕ್ಕೆ ಈ ಆ್ಯಪ್ ನ್ನು ತಯಾರಿಸಲಾಗಿತ್ತು. ಜೂನ್ 27 ರಂದು 6 ನೇ ಪಾಸ್ ಪೋರ್ಟ್ ಸೇವಾ ದಿವಸ್ ಕಾರ್ಯಕ್ರಮದ ಅಂಗವಾಗಿ ಈ ಆ್ಯಪ್ ನ್ನು ಲೋಕಾರ್ಪಣೆಗೊಳಿಸಲಾಗಿತ್ತು!!

ಆಂಡ್ರಾಯ್ಡ್ ಹಾಗೂ ಐಒಎಸ್ ಗಳಲ್ಲಿ ಆ್ಯಪ್ ಲಭ್ಯವಿದ್ದು, ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದು, ಹಣ ಪಾವತಿಸುವುದು ಹಾಗೂ ಪಾಸ್ ಪೋರ್ಟ್ ಪಡೆಯಲು ಸಮಯ ನಿಗದಿಪಡಿಸುವುದಕ್ಕೂ ಆ್ಯಪ್  ಮೂಲಕವೇ ಮಾಡಬಹುದಾಗಿದೆ. ಎರಡೇ ಎರಡು ದಿನದಲ್ಲಿ ಕೇಂದ್ರ ಸರಕಾರದ ಪಾಸ್ಪೋರ್ಟ್ ಸೇವಾ ಮೊಬೈಲ್ ಆ್ಯಪ್ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬರೋಬ್ಬರಿ 10 ಲಕ್ಷ ಆಪ್ ಗಳು ಡೌನ್ಲೋಡ್ ಆಗಿವೆ. ನಿನ್ನೆ ಈ ಸುದ್ದಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಬುಧವಾರದಂದು ಆರನೇ ಪಾಸ್ ಪೋರ್ಟ್  ಸೇವಾ ದಿವಸದ ಸಂದರ್ಭದಲ್ಲಿ ಈ ಮೊಬೈಲ್ ಆ್ಯಪ್ ಗೆ ಚಾಲನೆ ನೀಡಲಾಗಿತ್ತು.

ನೀವು ಎಲ್ಲೇ ನೆಲೆಸಿದ್ದರೂ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸುವಾಗ ಪ್ರಾದೇಶಿಕ ಪಾಸ್ ಪೋರ್ಟ್ ಕೇಂದ್ರ, ಪಾಸ್ಪೋರ್ಟ್ ಸೇವಾ ಕೇಂದ್ರ ಅಥವಾ ಪೆÇೀಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Image result for 1 million downloads in two days: Sushma Swaraj’s passport seva mobile app a big hit

ಗೂಗಲ್‍ಪ್ಲೇ ಸ್ಟೋರ್ ಅಥವಾ ಐಫೋನ್ನಲ್ಲಿರುವ ಆ್ಯಪ್ ಸ್ಟೋರ್ ಮೂಲಕ ಕೂಡಾ ಪಾಸ್‍ಪೋರ್ಟ್ ಆಪ್ ಡೌನ್‍ಲೋಡ್ ಮಾಡಬಹುದು.

* ಬಳಿಕ ಪಾಸ್‍ಪೋರ್ಟ್ ಕಚೇರಿ ಯನ್ನು ಆಯ್ಕೆ ಮಾಡಿ. ಹೆಸರು, ಹುಟ್ಟಿದ ದಿನಾಂಕ, ಇ-ಮೇಲ್, ಲಾಗ್‍ ಇನ್‍ ಐಡಿ ನಮೂದಿಸಿಕೊಳ್ಳಬೇಕು.

* ಲಾಗ್ ಇನ್ ಐಡಿ ಮತ್ತು ಇ-ಮೇಲ್ ದೃಢೀಕರಣ ಬಳಿಕ ಪಾಸ್‍ವರ್ಡ್, ಹಿಂಟ್‍ಕ್ವೆಶ್ಚನ್, ಕ್ಯಾಪ್ಚ ಕೋಡ್‍ಎಂಟರ್ ಮಾಡಬೇಕು!!

 

* ನಿಗದಿತ ಪಾಸ್‍ಪೋರ್ಟ್ ಚೇರಿಯಲ್ಲಿ ದಾಖಲಾಗಿರುವ ಇ-ಮೇಲ್‍ಗೆ ಲಿಂಕ್‍ಬರುತ್ತದೆ. ಅದನ್ನು ಕ್ಲಿಕ್‍ ಮಾಡಿ ಖಾತೆ ಆಕ್ಟಿವೇಟ್ ಮಾಡಿದ ನಂತರ ಅಲ್ಲಿ ನೀಡಿರುವ ಸೂಚನೆ ಪಾಲಿಸಬೇಕು!!.

ಹೀಗೆ ಲಿಂಕ್‍ಮೂಲಕ ಖಾತೆ ಆಕ್ಟಿವೇಟ್ ಆದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದೃಢೀಕರಣಕ್ಕೆ ಅಗತ್ಯವಾಗಿರುವ ದಾಖಲೆಗಳು, ಪಾಸ್‍ಪೋರ್ಟ್ ಕೇಂದ್ರ, ಶುಲ್ಕಗಳ ವಿವರ ಕೂಡ ಸಿಗುತ್ತದೆ.

source: kannada.oneindia.com

  • ಪವಿತ್ರ
Tags

Related Articles

Close