ಪ್ರಚಲಿತ

ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ! ಆಯುಷ್ಮಾನ್ ಭಾರತ್ ಯೋಜನೆಯ ಹೆಲ್ತ್ ಕೇರ್ ವಲಯದಡಿಯಲ್ಲಿ 1 ಲಕ್ಷ ಸುದೀರ್ಘಾವಧಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ ಮೋದಿ ಸರಕಾರ!!

ಮೋದಿ ಸರಕಾರದ ‘ಆಯುಷ್ಮಾನ್ ಭಾರತ್’ ಅಡಿಯಲ್ಲಿ ಬರುವ ಆರೋಗ್ಯ ಸೇವೆ ವಿಭಾಗದಲ್ಲಿ 100000 ದೀರ್ಘಕಾಲೀನ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಯೋಜನಾ ಮುಖ್ಯಸ್ಥ ಇಂದು ಭೂಷಣ್ ಹೇಳಿದ್ದಾರೆ ಎಂದು ಎಕೋನೋಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಭಾರತದ 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ಐದು ಲಕ್ಷದಷ್ಟು ಆರೋಗ್ಯ ರಕ್ಷಣೆ ನೀಡುವ ಈ ಯೋಜನೆಗೆ ಖಾಸಗಿ ಆಸ್ಪತ್ರೆಗಳ ವಿಸ್ತರಣೆ ಅಗತ್ಯವಿರುತ್ತದೆ. ಇದು ನೇರವಾಗಿ 100,000 ಕ್ಕಿಂತ ಹೆಚ್ಚು ನುರಿತ ಮತ್ತು ಅರೆಕಾಲಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ವರದಿ ಹೇಳುತ್ತದೆ. ಹಾಗಾದಲ್ಲಿ ಭಾರತ ಬಹುದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ.

ಈ ಯೋಜನೆ ಉದ್ಯೋಗ ಹೇಗೆ ಸೃಷ್ಟಿಸುತ್ತದೆ?

ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಮತ್ತು ಟ್ರಸ್ಟ್ ನಿರ್ವಹಣೆ ಹಾಗೂ ವಿಮಾ ಕಂಪನಿಗಳಲ್ಲಿ ಕೆಲಸ ಮಾಡಲು ನುರಿತ ಮತ್ತು ಅರ್ಹತೆ ಹೊಂದಿದ ವ್ಯಕ್ತಿಗಳು ಬೇಕಾಗುತ್ತಾರೆ. ಹಾಗಾಗಿ ಈ ಯೋಜನೆಯು ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಆರೋಗ್ಯ ಸೇವೆಯ ಬೇಡಿಕೆಯನ್ನು ಪೂರೈಸಲು ಸುಮಾರು 25,000 ಆಸ್ಪತ್ರೆಗಳನ್ನು ಯೋಜನೆಯಡಿಲ್ಲಿ ತರಲಾಗುವುದು ಎಂದು ಭೂಷಣ್ ಹೇಳಿದ್ದಾರೆ.

ಯೋಜನೆಯ ಭಾಗವಾಗಿ 300 ಹೊಸ ಖಾಸಗಿ ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಭಾವಿಸಿ, ಆಗ ಪ್ರತಿ ಆಸ್ಪತ್ರೆಯು 200 ಜನರನ್ನು ನೇಮಿಸಿಕೊಳ್ಳುತ್ತದೆ. ಇದರಿಂದ 60,000 ನೇರ ಉದ್ಯೋಗಗಳು ಸೃಷ್ಟಿ ಆಗುತ್ತದೆ. ಮಾತ್ರವಲ್ಲ “ಆಯುಷ್ಮಾನ್ ಮಿತ್ರ” ಎನ್ನುವ ಮಿಶನ್ ನಲ್ಲಿ ರೋಗಿಗಳ ಮಾರ್ಗದರ್ಶಕರಾಗಿ ಕೆಲಸ ಮಾಡಲು ಅಲ್ಪಾವಧಿಯ ಉದ್ಯೋಗಗಳನ್ನೂ ಈ ಯೋಜನೆ ಸೃಷ್ಟಿಸುತ್ತದೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ನುರಿತ ಉದ್ಯೋಗಕಾಂಕ್ಷಿಗಳು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.

ಇದಲ್ಲದೆ, ಹೆಚ್ಚುವರಿ ಆಸ್ಪತ್ರೆಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ಖಾಸಗಿ ಆಸ್ಪತ್ರೆಗಳ ವಿಸ್ತರಣೆ, ಸೇರಿದಂತೆ ಒಟ್ಟು 80 ಲಕ್ಷಕ್ಕೂ ಹೆಚ್ಚಿನ ಅಲ್ಪಾವಧಿಯ ‘ಕೌಶಲ್ಯರಹಿತ’ ಮತ್ತು ‘ಅರೆ-ನುರಿತ’ ಉದ್ಯೋಗಗಳು ಸಹ ಯೋಜನೆಯನ್ನು ಕಾರ್ಯಗತಗೊಳಿಸುವಾಗ ಸೃಷ್ಟಿಸಲ್ಪಡುತ್ತವೆ ಎಂದು ಭೂಷಣ್ ಹೇಳಿದ್ದಾರೆ. ಫಲಾನುಭವಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ, ಸುಮಾರು ಎರಡು ಲಕ್ಷ ಜನರನ್ನು ಅಲ್ಪಾವಧಿಯವರೆಗೆ ಸರ್ಕಾರದಿಂದಲೇ ನೇಮಕ ಮಾಡಲಾಗುವುದೆಂದೂ ಅವರು ತಿಳಿಸಿದರು.

ಭಾರತದ ಅತಿ ದೊಡ್ಡ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ ಸರಕಾರ, ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಜ್ಜಾಗಿದೆ. ದೇಶದ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ನೀಡುವ ಜೊತೆ ಜೊತೆಗೆ, ಅವರನ್ನು ಸ್ವಾವಲಂಬಿಗಳಾಗಿಸಿ ಸ್ವಂತ ಉದ್ಯಮ ಸ್ಥಾಪಿಸುವಂತೆಯೂ ಪ್ರೇರೇಪಿಸುತ್ತಿದೆ ಮೋದಿ ಸರಕಾರ. ದೇಶದ ಯುವಕ-ಯುವತಿಯರು ಮೋದಿ ಸರಕಾರದ ಈ ಯೋಜನೆಗಳ ಲಾಭವನ್ನು ಪಡೆದು ಭಾರತವನ್ನು ಬಲಿಷ್ಟ ಆರ್ಥಿಕ ಶಕ್ತಿಯಾಗಿ ರೂಪಿಸುವ ನಿಟ್ಟಿನಲ್ಲಿ ಯೋಚಿಸಬೇಕು.

-ಶಾರ್ವರಿ

Tags

Related Articles

Close