ಪ್ರಚಲಿತ

ಬಾಬ್ರಿಗಾಗಿ ಹೋರಾಡಿದವರೇ ರಾಮ ಮಂದಿರ ಲೋಕಾರ್ಪಣೆಗೆ ಬಂದರು, ಆದರೆ ಕಾಂಗ್ರೆಸ್‌ನವರು ಮಾತ್ರ ಬರಲಿಲ್ಲ

ಹಿಂದೂ ವಿರೋಧಿ, ದೇಶ ವಿರೋಧಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂದರ್ಭವನ್ನು ಸ್ಮರಿಸಿದ ಅವರು, ಈ ಕಾರ್ಯಕ್ರಮಕ್ಕೆ ಬಾಬ್ರಿ ಮಸೀದಿಗಾಗಿ ಹೋರಾಟ ನಡೆಸಿದವರು ಆಗಮಿಸಿದ್ದರು. ಆದರೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿತ್ತಾದರೂ, ಅವರು ಹಾಜರಾಗಲಿಲ್ಲ ಎಂದು ಹೇಳಿದ್ದಾರೆ.

ಹಿಂದೆ ಬಾಬ್ರಿ ಮಸೀದಿಯ ಪರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಕುಟುಂಬದ ಎರಡು ತಲೆಮಾರಿನವರು, ಬಾಬ್ರಿ ಮಸೀದಿಗಾಗಿ ಹಿಂದೂಗಳ ವಿರುದ್ಧ ನ್ಯಾಯಾಲಯದಲ್ಲಿ ಶತಮಾನಗಳ ಕಾಲ ಹೋರಾಟ ಮಾಡಿದರು. ಆದರೆ, ಸುಪ್ರೀಂ ಕೋರ್ಟ್ ಹಿಂದೂಗಳ ಪರ ತೀರ್ಪು ನೀಡಿದಾಗ ಅದನ್ನು ಅವರು ಸಂತೋಷದಿಂದ ಸ್ವೀಕಾರ ಮಾಡಿದರು. ಅವರು ಸಹ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ವಾಗಿ, ಲೋಕಾರ್ಪಣೆಯ ಸಮಯದಲ್ಲಿ ಸಂತೋಷದಿಂದ ಅಯೋಧ್ಯೆಗೆ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ‌ಗೆ ಆಹ್ವಾನ ನೀಡಿದ್ದರೂ ಅವರು ಮಾತ್ರ ಈ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ರಾಮ ಜನ್ಮಭೂಮಿ ವಿರುದ್ಧ ಬಾಬ್ರಿ ಮಸೀದಿ ಪರ ಹೋರಾಟ ಮಾಡಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ರಾಮ ಮಂದಿರ ಟ್ರಸ್ಟ್ ಆಹ್ವಾನ ನೀಡಿತ್ತು. ಅದನ್ನು ಸ್ವೀಕರಿಸಿದ ಅವರು ರಾಮ ಮಂದಿರ ಕಾರ್ಯಕ್ರಮಕ್ಕೆ ಸ್ವತಃ ಹಾಜರಾಗಿದ್ದರು. ಆ ಮೂಲಕ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದರು ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಇಕ್ಬಾಲ್ ಅನ್ಸಾರಿ ಅವರಿಗೆ ಆಹ್ವಾನ ನೀಡಿದ ರೀತಿಯಲ್ಲಿಯೇ ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷ, ಇಂಡಿ ಒಕ್ಕೂಟದ ನಾಯಕರಿಗೂ ರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂದು ಮೋದಿ ತಿಳಿಸಿದ್ದಾರೆ.

ಜೀವನ ಪರ್ಯಂತ ಬಾಬ್ರಿ ಮಸೀದಿಗಾಗಿ ಹೋರಾಟ ನಡೆಸಿದ್ದವರೇ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ತಲೆ ಬಾಗಿದ್ದರು. ಶ್ರೀರಾಮ ಮಂದಿರ ಲೋಕಾರ್ಪಣೆಗೆ ಆಗಮಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ‌ ಸಮಾರಂಭಕ್ಕೆ ಆಗಮಿಸಲಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷಕ್ಕೆ ರಾಮ ಮಂದಿರದ ಮೇಲಿನ ದ್ವೇಷ, ಬಿಜೆಪಿ ಮೇಲಿನ ದ್ವೇಷ, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಓಲೈಕೆ ರಾಜಕಾರಣದ ಮುಖವನ್ನು ಬಯಲು ಮಾಡಿದ್ದಾರೆ.

Tags

Related Articles

Close