ಪ್ರಚಲಿತ

ಬಿಗ್ ಬ್ರೇಕಿಂಗ್! ಕೊನೆಗೂ ಬಿಡುಗಡೆಯಾದ ಗೂಂಡಾ ನಲಪಾಡ್.! ಕೋರ್ಟ್ ವಿಧಿಸಿದ ಷರತ್ತು ಏನು ಗೊತ್ತಾ.?

ಕಾಂಗ್ರೆಸ್ ಆಡಳಿತದಲ್ಲಿ ಗೂಂಡಾಗಳಿಗೆ ರಾಜಾರೋಷವಾಗಿ ತಿರುಗಾಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಯಾಕೆಂದರೆ ಹಿಂದೂಗಳ ವಿರುದ್ಧ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೋರಾಟ ನಡೆಸುವಂತೆ ಕರೆ ಕೊಟ್ಟಿದ್ದರು. ಅಂದಿನಿಂದ ರಾಜ್ಯದಲ್ಲಿ ಶಾಂತಿ ಎಂಬುದು ಮರಿಚಿಕೆಯಾಗಿತ್ತು. ಆದ್ದರಿಂದಲೇ ಪ್ರತೀ ದಿನ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇತ್ತು. ಅದೇ ರೀತಿ ಇಡೀ ರಾಜ್ಯಾದ್ಯಾಂತ ಸುದ್ದಿಯಾಗಿದ್ದ ಬೆಂಗಳೂರು ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಅವರ ಪುತ್ರ ಮಹಮ್ಮದ್ ನಲಪಾಡ್ ನಡೆಸಿದ ಗೂಂಡಾಗಿರಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ತಮ್ಮದೇ ಸರಕಾರ ಇದ್ದಿದ್ದರಿಂದ ಮಾಡಿದ ಅಪರಾಧದಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಆಲೋಚನೆಯಲ್ಲಿದ್ದ ನಲಪಾಡ್‌ಗೆ ಭಾರೀ ಆಘಾತ ಎದುರಾಗಿತ್ತು. ಯಾಕೆಂದರೆ ಹಲ್ಲೆಗೊಳಗಾದ ವಿದ್ವತ್ ಕೂಡ ಪ್ರಬಲವಾಗಿ ಕಾನೂನು ರೀತಿಯಲ್ಲೇ ಹೋರಾಟ ನಡೆಸಿದ್ದರಿಂದ ಇಂದಿನವರೆಗೂ ನಲಪಾಡ್ ಜೈಲು ವಾಸವೇ ಅನುಭವಿಸುವಂತಾಗಿತ್ತು.!

ಬರೋಬ್ಬರಿ ೧೧೬ ದಿನಗಳ ನಂತರ ಜಾಮೀನು..!

ಮಹಮ್ಮದ್ ನಮಪಾಡ್ ಬರೋಬ್ಬರಿ ೧೧೬ ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕೊಳೆಯುವಂತಾಗಿತ್ತು. ಹೊಟೇಲ್ ಒಂದರಲ್ಲಿ ಕುಡಿದ ಮತ್ತಿನಲ್ಲಿ ರಂಪಾಟ ನಡೆಸಿದ ನಲಪಾಡ್ ವಿದ್ವತ್ ಎಂಬ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆದರೆ ಈ ಬಗ್ಗೆ ದೂರು ನೀಡಿದ ವಿದ್ವತ್ ಕಡೆಯವರು ನಲಪಾಡ್ ವಿರುದ್ದ ಕೋರ್ಟ್ ಮೂಲಕ ಹೋರಾಟ ನಡೆಸಿದ್ದರು. ಇತ್ತ ನಲಪಾಡ್ ತಂದೆ ಕಾಂಗ್ರೆಸ್‌ನ ಪ್ರಭಾವಿ ಶಾಸಕ ಆಗಿದ್ದರಿಂದ ಜಾಮೀನಿಗಾಗಿ ಭಾರೀ ಪ್ರಯತ್ನಿಸಿದ್ದರು. ಆದರೆ ವಿದ್ವತ್ ಕಡೆ ಸಾಕ್ಷ್ಯಾಧಾರಗಳಿದ್ದರಿಂದ ನಲಪಾಡ್ ತಪ್ಪಿಸಿಕೊಳ್ಳಲಾಗಲಿಲ್ಲ. ಸತತ ಐದು ಬಾರಿ ಜಾಮೀನಿಗಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪದೇ ಪದೇ ಕೋರ್ಟ್ ಮುಂದೆ ವಾದ ಮಂಡಿಸಿದರೂ ಕೂಡ ಜಾಮೀನು ದೊರಕಲಿಲ್ಲ. ಆದರೆ ಇದೀಗ ೧೧೬ ದಿನಗಳ ನಂತರ ಗೂಂಡಾ ನಲಪಾಡ್‌ಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.!

ನಲಪಾಡ್ ಈ ಹಿಂದೆ ಜಾಮೀನು ಸಿಗದೇ ಇದ್ದಾಗ ಕೋರ್ಟ್ ಮುಂದೆಯೇ ಕಣ್ಣೀರಿಟ್ಟಿದ್ದನು. ಸತತ ಪ್ರಯತ್ನದ ಬಳಿಕ ಇದೀಗ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಭಾರೀ ಷರತ್ತುಗಳನ್ನು ವಿಧಿಸಿ ನಲಪಾಡ್‌ಗೆ ರಿಲೀಫ್ ಒದಗಿಸಿದೆ. ಕಳೆದ ನಾಲ್ಕು ಬಾರಿ ಜಾಮೀನಿಗಾಗಿ ಪ್ರಯತ್ನಿಸಿದಾಗಲೂ ನಲಪಾಡ್‌ಗೆ ನಿರಾಸೆಯೇ ಉಂಟಾಗಿತ್ತು. ಆದರೆ ಇದೀಗ ೫ನೇ ಬಾರಿಗೆ ಜಾಮೀನು ಸಿಕ್ಕಿದ್ದರಿಂದ ನಲಪಾಡ್ ನಿಟ್ಟುಸಿರು ಬಿಡುವಂತಾಗಿದೆ.!

ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹೈಕೋರ್ಟ್..!

ನಲಪಾಡ್‌ಗೆ ಹೈಕೋರ್ಟ್ ಇದೀಗ ಜಾಮೀನು ನೀಡಿದರೂ ಕೂಡ ಇನ್ನೂ ಕಂಟಕ ಮಾತ್ರ ತಪ್ಪಿಲ್ಲ. ಯಾಕೆಂದರೆ ಈವರೆಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದ ನಲಪಾಡ್‌ಗೆ ಕೋರ್ಟ್ ಜಾಮೀನು ನೀಡಿರಲಿಲ್ಲ. ಆದರೆ ಇದೀಗ ಷರತ್ತಬದ್ಧ ಜಾಮೀನು ವಿಧಿಸಿದ ಹೈಕೋರ್ಟ್, ಯಾವುದೇ ಕಾರಣಕ್ಕೂ ಕೋರ್ಟ್ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಹೋಗುವಂತಿಲ್ಲ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವಂತಿಲ್ಲ, ತಮ್ಮ ಪಾಸ್‌ಪೋರ್ಟ್ ಕೂಡಾ ಹೈಕೋರ್ಟ್‌ಗೆ ಒಪ್ಪಿಸಬೇಕು ಎಂದು ಆದೇಶ ನೀಡಿದೆ. ಅದೇ ರೀತಿ, ೨ ಲಕ್ಷ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಹ್ಯಾರಿಸ್ ಕುಟುಂಬ ಸದಸ್ಯರು ಮಾತ್ರ ಜೈಲಿನ ಬಳಿ ತೆರಳಲು ಕೋರ್ಟ್ ಆದೇಶ ನೀಡಿದೆ. ನಲಪಾಡ್ ಜೈಲಿನಿಂದ ಹೊರಬರುವಾಗ ಯಾವುದೇ ಕಾರಣಕ್ಕೂ ಗುಂಪುಕೂಡಿ ಸಂಭ್ರಮಾಚರಣೆ ಮಾಡುವಂತಿಲ್ಲ, ಪಟಾಕಿ ಸಿಡಿಸಿ ಖುಷಿ ಪಡುವಂತಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದೆ.!

ಆದ್ದರಿಂದ ಕಳೆದ ಮೂರೂವರೆ ತಿಂಗಳಿನಿಂದ ಜೈಲುವಾಸ ಅನುಭವಿಸಿರುವ ಗೂಂಡಾ ನಲಪಾಡ್‌ಗೆ ಸದ್ಯ ಕೋರ್ಟ್ ಜಾಮೀನು ನೀಡಿದ್ದರೂ ಕೂಡ ಇನ್ನೂ ಸಂಪೂರ್ಣವಾಗಿ ನಿರಾಳಗೊಳ್ಳುವಂತಿಲ್ಲ. ಯಾಕೆಂದರೆ ಕೋರ್ಟ್ ಅನುಮತಿ ಇಲ್ಲದೆ ನಲಪಾಡ್‌ಗೆ ಊರು ಬಿಟ್ಟು ಹೋಗುವುದಕ್ಕೂ ಇಲ್ಲದಂತಾಗಿದೆ. ಆದರೆ ರಂಜಾನ್ ತಿಂಗಳಲ್ಲೇ ಮಹಮ್ಮದ್ ನಲಪಾಡ್‌ಗೆ ಜಾಮೀನು ದೊರಕಿದರಿಂದ ಸ್ವಲ್ಪ ಮಟ್ಟಿಗೆ ಖುಷಿ ಪಡುವಂತಾಗಿದೆ.!

–ಅರ್ಜುನ್

Tags

Related Articles

Close