ಪ್ರಚಲಿತ

ಬಿಗ್ ಬ್ರೇಕಿಂಗ್! ಚಪ್ಪಲಿ ಎತ್ತಿ ಹೊಡೆದಾಡಿಕೊಂಡ ಲಿಂಗಾಯತ-ವೀರಶೈವರ ಆಕ್ರೋಶ! 2 ಜಾತಿಯ ನಡುವೆ ಬೆಂಕಿ ಇಟ್ಟ ಸಿದ್ದರಾಮಯ್ಯ!

ಯಾಕೆ ಬೇಕಿತ್ತು ಮುಖ್ಯಮಂತ್ರಿ ಸಿದ್ದರಾಮನಯ್ಯರಿಗೆ ಈ ಧರ್ಮ ಒಡೆಯುವ ಉಸಾಬರಿ. ಹಿಂದೂ ಧರ್ಮದ ಮೇಲೆ ಕೆಂಡ ಕಾರುತ್ತಲೇ ಇರುವ ಈ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮತ್ತೆ ಹಿಂದೂ ಧರ್ಮದ ಮೇಲೆ ವಿಭಜನೆಯ ಅಸ್ತ್ರವನ್ನು ಪ್ರಯೋಗಿಸಿ ತನ್ನ ಬಹುಕಾಲದ ಆಕಾಂಕ್ಷೆಯನ್ನು ತೀರಿಸಿ ಬಿಟ್ಟಿದ್ದಾರೆ. ಹಿಂದೂ ಧರ್ಮದಲ್ಲೇ ಜನಿಸಿ, ಹಿಂದೂ ಧರ್ಮದಲ್ಲೇ ಜೀವಿಸಿ, ಹಿಂದೂ ಧರ್ಮದ ಆರಾಧ್ಯ ದೇವರು ಶ್ರೀ ರಾಮ ಚಂದ್ರನ ಹೆಸರನ್ನೇ ಇಟ್ಟುಕೊಂಡು ಮುಖ್ಯಮಂತ್ರಿಯಾಗಿ ಇದೀಗ ಅದೇ ಹಿಂದೂ ಧರ್ಮವನ್ನು ಒಡೆಯುವಂತಹಾ ದುಸ್ಸಾಹಸಕ್ಕೆ ಕೈ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅದೇನನ್ನಬೇಕೋ ಗೊತ್ತಿಲ್ಲ.

ಕೊನೆಗೂ ಧರ್ಮ ವಿಭಜನೆಗೈದ ಸಿದ್ದರಾಮಯ್ಯ…

ಲಿಂಗಾಯತ ಹಾಗೂ ವೀರಶೈವರ ನಡುವೆ ಭಾರೀ ಕಿಚ್ಚು ಹಚ್ಚಿ ಬಿಟ್ಟಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಒಂದು ಕಡೆ ಹಿಂದೂ ಧರ್ಮದಿಂದ ಲಿಂಗಾಯತ ಧರ್ಮವನ್ನು ಬೇರ್ಪಡಿಸಿದ ಆಕ್ರೋಶ ಹಿಂದೂಗಳಲ್ಲಿ ಇದ್ದರೆ ಮತ್ತೊಂದೆಡೆ ಧರ್ಮ ವಿಭಜನೆ ಸರಿಯಾಗಿಲ್ಲ ಅನ್ನೋ ಕಿಚ್ಚು ಲಿಂಗಾಯತ ವೀರಶೈವರಲ್ಲಿ. ಇದನ್ನೆಲ್ಲಾ ನೋಡಿಕೊಂಡು ತನ್ನ ರಾಜಕೀಯ ಲಾಭಕ್ಕಾಗಿ ಬೇಳೆ ಬೇಯಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಯಾವ ಧರ್ಮದ ಓಟು ಸಿಗಬಹುದು ಎಂದು ನಿರೀಕ್ಷಿಸುತ್ತಾ ಇದ್ದಾರೆ.

ರಾಜ್ಯದಾದ್ಯಂತ ಭುಗಿಲೆದ್ದ ಲಿಂಗಾಯತ ವೀರಶೈವರ ಆಕ್ರೋಶ..!

ತನ್ನ ರಾಜಕೀಯ ಲಾಭಕ್ಕೋಸ್ಕರ ಲಿಂಗಾಯತ ವೀರಶೈವರನ್ನು ಹಿಂದೂ ಧರ್ಮದಿಂದ ವಿಭಜನೆಗೊಳಿಸಿದ್ದಾಯ್ತು. ಆದರೆ ಇದೀಗ ಆ 2 ಸಮಾಜದಿಂದಲೂ ಆಕ್ರೋಶ ಭುಗಿಲೆದ್ದಿದೆ. ರಾಜಕೀಯಕ್ಕೋಸ್ಕರ ತಮ್ಮ ಧರ್ಮವನ್ನೇ ವಿಭಜಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಅದೇ 2 ಸಮಾಜದಿಂದ ಆಕ್ರೋಶ ಭುಗಿಲೆದ್ದಿದೆ. ವೀರಶೈವರನ್ನು ಲಿಂಗಾಯತ ಧರ್ಮಕ್ಕೆ ಯಾಕೆ ಹೋಲಿಸಿದ್ದೀರಿ. ಅವರು ಬೇರೆಯೇ ನಾವು ಬೇರೆಯೇ ಎಂದು ಎಂಬಿ ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ವೀರಶೈವರು ಹಿಂದೂ ಆಚರಣೆ ಪಾಲನೆ ಮಾಡಬಾರದು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೀರಶೈವರ ಆಕ್ರೋಶ ಎದ್ದಿದೆ.

ಹೊಡೆದಾಡಿಕೊಂಡ ಲಿಂಗಾಯತ ಹಾಗೂ ವೀರಶೈವರು..!

ಇನ್ನು ಪ್ರತ್ಯೇಕ ಧರ್ಮದ ವಿಚಾರವಾಗಿ ಪ್ರತ್ಯೇಕಗೊಂಡ ಆ 2 ಧರ್ಮಗಳು ಕಿತ್ತಾಡಿಕೊಂಡಿದೆ. ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಧರ್ಮ ವಿಭಜನೆಯ ಕೆಲಸ ಮುಗಿಸುತ್ತಿದ್ದಂತೆ ಅತ್ತ ಕಲಬುರ್ಗಿಯಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರತಿಭಟಿಸುತ್ತಿದ್ದಂತೆಯೇ 2 ಸಮಾಜ, ಅಂದರೆ ಲಿಂಗಾಯತ ಹಾಗೂ ವೀರಶೈವ ಸಮಾಜದ ಪ್ರತಿಭಟನಾಕಾರರು ಹೊಡೆದಾಡಿಕೊಂಡಿದ್ದಾರೆ. ಚಪ್ಪಲಿ ಎತ್ತಿ ಹೊಡೆಯುವ ಮೂಲಕ ಅಣ್ಣ ತಮ್ಮಂದಿರಂತಿದ್ದ ಸಮಾಜ ಇಂದು ಕಿತ್ತುಕೊಳ್ಳುತ್ತಿದೆ. ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು 2 ಸಮಾಜದ ಬಂಧುಗಳು ಪ್ರತಿಭಟಿಸುತ್ತಿದ್ದಾರೆ. ಓಟಿಗೋಸ್ಕರ ಧರ್ಮವನ್ನೇ ಎತ್ತಿಕಟ್ಟಲು ಹೊರಟ ಮುಖ್ಯಮಂತ್ರಿಗಳಿಗೆ ಇದು ಇದೀಗ ಭಾರೀ ಸಂಕಷ್ಟವನ್ನೇ ತಂದಿಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಲು
ನಿರ್ಧರಿಸಲಾಗಿದೆ. ಲಿಂಗಾಯತ ಜಾತಿಯನ್ನು ಪ್ರತ್ಯೇಕ ಧರ್ಮವನ್ನಾಗಿಸುವ ವಿಚಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಲಿಂಗಾಯತ ಜಾತಿಯನ್ನು ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮವನ್ನಾಗಿ ಮಾಡಬೇಕೋ ಬೇಡವೋ ಎಂಬ ವಿಚಾರದ ಮೇಲೆ ಚರ್ಚೆ ನಡೆದಿತ್ತು. ನ್ಯಾ.ನಾಗಮೋಹನ್ ದಾಸ್ ಅವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಕೊನೆಗೂ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸ್ಸು ಕಳಿಸುವುದಾಗಿ ಹೇಳಿದ್ದಾರೆ.

ಒಟ್ಟಾರೆ ಹಿಂದೂ ಧರ್ಮವನ್ನೇ ವಿಭಜನೆ ಮಾಡಿ ತನ್ನ ರಾಜಕೀಯ ವಾಂಛೆಯನ್ನು ತೀರಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜನತೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಈವರೆಗೂ ಧರ್ಮ ವಿರೋಧಿ ಕೆಲಸವನ್ನು ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಧರ್ಮ ಒಡೆಯುವಂತಹಾ ಕೆಲಸವನ್ನು ಮಾಡಿದ್ದು ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಮಾತ್ರವಲ್ಲದೆ ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉರುಳಿಸಲೂ ಕಾರಣವಾಗುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close