ಪ್ರಚಲಿತ

ಬಿಗ್ ಬ್ರೇಕಿಂಗ್! ಬಯಲಾಯ್ತು ಬಿ.ಎಸ್.ವೈ. ಬ್ರೇಕಿಂಗ್ ನ್ಯೂಸ್ ಟ್ವೀಟ್ ರಹಸ್ಯ! ಫೇಸ್‍ ಬುಕ್‍ನಲ್ಲೂ ಅಬ್ಬರಿಸಿದ ಮಾಜಿ ಸಿಎಂ!!

ನಿನ್ನೆಯಿಂದ ಭಾರೀ ಕುತೂಹಲ ಕೆರಳಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬ್ರೇಕಿಂಗ್ ನ್ಯೂಸ್ ಕೊನೆಗೂ ಬಹಿರಂಗವಾಗಿದೆ. ನಿನ್ನೆ ತಾನೇ ತಮ್ಮ ಟ್ವಿಟರ್‍ನಲ್ಲಿ “ಬ್ರೇಕಿಂಗ್ ನ್ಯೂಸ್ ಟುಮಾರೋ 5 ಪಿಎಮ್” ಎಂದು ಹಾಕಿಕೊಂಡಿದ್ದು ರಹಸ್ಯವನ್ನು ಕಾಯ್ದಿರಿಸಿದ್ದರು. ಇಂದು 5 ಗಂಟೆಗೆ ಸರಿಯಾಗಿ ತಮ್ಮ ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್‍ಗಳನ್ನು ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.

5 ಗಂಟೆಗೂ ಮೊದಲು ಶುರುವಾಗಿತ್ತು ಟ್ವೀಟ್ ವಾರ್..!

ನಿನ್ನೆ ತಾನೇ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಇಂದು 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಇಂದು 5 ಗಂಟೆಗೆ ಇನ್ನೂ 15 ನಿಮಿಷಗಳು ಬಾಕಿ ಇರುವಾಗಲೇ ತಮ್ಮ ಟ್ವಿಟರ್ ಖಾತೆಯ ಮೂಲಕ ಸರಣಿ ಟ್ವೀಟ್‍ಗಳನ್ನು ಆರಂಭಿಸಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಹಿಗ್ಗಾ ಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ವಿರುದ್ಧ ಮಾಜಿ ಸಿಎಂ ಬ್ರಹ್ಮಾಸ್ತ್ರ..!

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಪ್ರಹಾರವನ್ನೇ ನಡೆಸಿದ ಮಾಜಿ ಮುಖ್ಯಮಂತ್ರಿಗಳು ಒಂದೊಂದೇ
ಟ್ವೀಟ್‍ಗಳನ್ನು ಹರಿಯಬಿಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರ ಎಂತಹಾ ನಡತೆ ಗೆಟ್ಟ ಸರ್ಕಾರ ಎಂದರೆ ಆ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುತ್ತಾ ಬಂದಿದೆ. ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕಾಂಗ್ರೆಸ್ ಪಕ್ಷದ ಅವಸ್ಥೆಯನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷದವರು ಕಾಲ ಕಸಕ್ಕಿಂತ ಕಡೆಯಾಗಿ ಮಾಡುತ್ತಾರೆ. ಈಗಲೂ ಅವರಿಗೆ ನೆಲೆ ಇಲ್ಲದ ಹಾಗೆ ಮಾಡಿದ್ದಾರೆ. ಕೇವಲ ಜನಾರ್ಧನ ಪೂಜಾರಿ ಮಾತ್ರವಲ್ಲದೆ ಹೆಚ್.ವಿಶ್ವನಾಥ್‍ರನ್ನೂ ಕಡೆಗಣನೆ ಮಾಡಿದ್ದಾರೆ. ಮಾಜಿ ಸಂಸದ ಕಾಂಗ್ರೆಸ್ ನಾಯಕರಾಗಿದ್ದ ಹೆಚ್.ವಿಶ್ವನಾಥ್ ಇಂದು ಕಾಂಗ್ರೆಸ್ ಪಕ್ಷದ ಹಿಟ್ಲರ್ ಧೋರಣೆ ನೀತಿಯಿಂದ ಕಾಂಗ್ರೆಸ್ ತ್ಯಜಿಸಿ ಬೇರೆ ಪಕ್ಷವನ್ನು ಸೇರಿಕೊಂಡಿದ್ದಾರೆ.

ಇದೀಗ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೂಯ್ಲಿಯವರು ಕೂಡಾ ತೆರೆಮರೆಗೆ ಸರಿಯುತ್ತಿದ್ದಾರಾ ಎಂಬ ಸೂಚನೆಗಳೂ ಕಾಣುತ್ತಿದೆ. ಯಾಕೆಂದರೆ ಕಾಂಗ್ರೆಸ್‍ನಲ್ಲಿ ವೀರಪ್ಪ ಮೂಯ್ಲಿ ಇಂದು ಭಾರೀ ಅವಮಾನವನ್ನು ಕಾಂಗ್ರೆಸ್ ಪಕ್ಷದಿಂದ ಅನುಭವಿಸುತ್ತಿದ್ದು ಹಿರಿಯರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅವಕಾಶ ಇಲ್ಲ ಎಂಬುವುದನ್ನು ಸಾಭೀತು ಪಡಿಸಿದೆ. ಮೋಯ್ಲಿ ಅವರಿಗೆ ಪಕ್ಷದ ಎಲ್ಲಾ ವಿಚಾರ ಗೊತ್ತಿದೆ. ಆದರೆ ಅವರು ಈ ವೇಳೆ ತನ್ನ ಪಕ್ಷಕ್ಕೋಸ್ಕರ ಮೌನವಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೂಯ್ಲಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂಬುವುದನ್ನು
ನಿರೂಪಿಸಿಬಿಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಎಷ್ಟೊಂದು ಭ್ರಷ್ಟ ಪಕ್ಷ ಎಂದು ಸಾರಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಎಷ್ಟೊಂದು ಹೊಲಸು ಪಕ್ಷ
ಎಂಬುವುದನ್ನು ಸಾಭೀತು ಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಫೇಸ್ ಬುಕ್ ಲೈವ್‍ನಲ್ಲಿ ಪ್ರತ್ಯಕ್ಷರಾದ ಬಿಎಸ್‍ವೈ..!

ಟ್ವೀಟ್ ಬಿಟ್ಟು ಫೇಸ್‍ಬುಕ್ ಲೈವ್‍ನಲ್ಲಿ ಪ್ರತ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಲ್ಲಿಯೂ ಕಾಂಗ್ರೆಸ್ ಪಕ್ಷದ ವಿರುದ್ಧ ವಾಕ್ಪ್ರಹಾರವನ್ನೇ ನಡೆಸಿದ್ದಾರೆ. “ಕಾಂಗ್ರೆಸ್ ನಂಬರ್ ವನ್ ಸುಳ್ಳುಗಾರ ಪಕ್ಷ. ನಾಡಿನ ಜನತೆಗೆ ವಿಶ್ವಾಸ ದ್ರೋಹ ಬಗೆದಿರುವ ಕಾಂಗ್ರೆಸ್ ಅಧಿಕಾರ ಗದ್ದುಗೆಗೆ ಯೋಗ್ಯ ಪಕ್ಷವಲ್ಲ. ಕಾಂಗ್ರೆಸ್ ಹಸಿಸುಳ್ಳುಗಳನ್ನೇ ನೀಡುತ್ತಿದೆ. ಹೈದರ್ ಬಾದ್ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ರಾಜ್ಯದಲ್ಲಿ ಪ್ರಗತಿಗೆ ಹತ್ತಿಕ್ಕಿದೆ. ಅಭಿವೃದ್ಧಿ ಅನ್ನೋದು ಕೇವಲ ಬಾಯಿ ಮಾತು ಆಗಿ ಹೋಗಿದೆ” ಎಂದು ಹೇಳಿದ್ದಾರೆ.

ಇನ್ನು ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಬಿಡುಗಡೆಗೊಳಿಸಿರುವ ಬಿ.ಎಸ್.ಯಡಿಯೂರಪ್ಪ ಅಂಕಿ ಅಂಶಗಳ ಸಮೇತ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಸಾಧನೆಯನ್ನೂ ಬಿತ್ತರಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ರಾಜ್ಯ ಯಾವ ರೀತಿ ತೆವಲುತ್ತಾ ಸಾಗುತ್ತಿದೆ ಎಂಬುವುದನ್ನು ಸಾಕ್ಷಿ ಸಮೇತ ಹೇಳಿಕೆ ನೀಡಿರುವ ಬಿ.ಎಸ್.ಯಡಿಯೂರಪ್ಪ 4 ನಿಮಿಷಗಳ ಕಾಲ ಫೇಸ್ ಬುಕ್ ಲೈವ್‍ನಲ್ಲಿ ಮಾತನಾಡಿದ್ದಾರೆ.

ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬ್ರೇಕಿಂಗ್ ನ್ಯೂಸ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ವೇದಿಕೆಯಾಗಿದ್ದು, ಸಾಕಷ್ಟು ಜನರೂ ಮಾಜಿ ಮುಖ್ಯಮಂತ್ರಿಗಳನ್ನು ಬೆಂಬಲಿಸಿದ್ದಾರೆ. ತಾನೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದೇನೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯಕರ್ತರಿಗೂ ಸಂದೇಶ ನೀಡಲು ಹೊರಟಿದ್ದಾರೆ ಎಂಬುವುದು ಸ್ಪಷ್ಟವಾಗಿದೆ.

-ಸುನಿಲ್ ಪಣಪಿಲ

Tags

Related Articles

Close