ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ಗೂಂಡಾನಿಂದ ಹಲ್ಲೆಗೊಳಗಾದ ವಿದ್ವತ್ ಮೇಲೆನೇ ಕೇಸ್.!! ಕಾಂಗ್ರೆಸ್ ಶಾಸಕರಿಗಾಗಿ ಗುಲಾಮರಾದ ಪೊಲೀಸರು..!!!

ನಿನ್ನೆಯಿಂದ ಭಾರೀ ಸುದ್ಧಿಯಾಗಿದ್ದ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರನ ಅವಾಂತರದ ಪ್ರಕರಣ ಕೊನೆಗೂ ಆತನ ಬಂಧನದ ಮೂಲಕ ಅಂತ್ಯವಾಗಿತ್ತಾದರೂ ಇಂದು ಮತ್ತೆ ಬೇರೆನೇ ಪುರಾಣ ಊದಲು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸಿದ್ಧವಾಗಿದ್ದಾರೆ. ಕಾಂಗ್ರೆಸ್ ಮುಖಂಡ ತನ್ನ ಮಗನನ್ನು ಗೂಂಡಾನಂತೆ ಬೆಳಸಿ, ಈಗ ಆತನ ಮೇಲೆ ಕೇಸ್ ದಾಖಲಿಸಿ ಬಂಧಿಸಿದ ನಂತರ ಆತನಿಂದ ಹಲ್ಲೆಗೊಳಗಾದ ವಿದ್ವತ್ ಮೇಲೆಯೇ ಪ್ರಕರಣವನ್ನು ದಾಖಲಿಸಿದ್ದಾರೆ.

ಏನಿದು ಪ್ರಕರಣ..?

ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಎಂಬವರ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ಓರ್ವ ದಿವ್ಯಾಂಗನಿಗೆ ಮನಬಂದಂತೆ ಭಾರಿಸಿದ್ದಾನೆ. ಶನಿವಾರ ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್ ಒಂದರಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ರ ಮಗ ಗೂಂಡ ಮಹಮ್ಮದ್ ನಲಪಾಡ್ ಎಂಬಾತ ತನ್ನ ದರ್ಪದ ಅಮಲಿನಲ್ಲಿ ದುಷ್ಕøತ್ಯವನ್ನು ಮೆರೆದಿದ್ದಾನೆ. ಅದೇ ಹೋಟೆಲ್‍ನಲ್ಲಿದ್ದ ದಿವ್ಯಾಂಗ ವಿದ್ವತ್ ಎಂಬವನೇ ಹಲ್ಲೆಗೊಳಗಾದ ವ್ಯಕ್ತಿ.

ವಿದ್ವತ್ ಮೇಲೆ ಎಫ್‍ಐಆರ್…!

ಇದೇನು ಕಾನೂನುರೀ… ಹಲ್ಲೆ ಮಾಡಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನ ಮಗ ನಲಪಾಡ್‍ನನ್ನು ಬಂಧಿಸಲು ಇಷ್ಟು ಸಮಯಗಳನ್ನು ತೆಗೆದುಕೊಂಡ ಪೊಲೀಸರು ಈಗ ಆತ ನೀಡಿದ್ದ ದೂರನ್ನು ಯಥಾಶೀಘ್ರ ಸ್ವೀಕರಿಸಿ ಎಫ್‍ಐಆರ್ ದಾಖಲಿಸಿದ್ದಾರೆ. “ನಾನು ವಿದ್ವತ್ ಮೇಲೆ ಹಲ್ಲೆ ಮಾಡಿಲ್ಲ. ಅವನೇ ಕಾಲು ಜಾರಿ ಬಿದ್ದಿದ್ದ. ನನ್ನ ಕಾಲು ಅವನಿಗೆ ತಾಗಿತ್ತು. ಹೀಗಾಗಿ ಆತ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಆತನೇ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದ” ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಹಲ್ಲೆ ಮಾಡಿದ್ದ ನಲಪಾಡ್ ನನ್ನು ಬಂಧಿಸಿ ಎಫ್.ಐ.ಆರ್ ದಾಖಲಿಸಲು 3 ದಿನಗಳನ್ನು ತೆಗೆದುಕೊಂಡಿದ್ದ ಪೊಲೀಸರು, ಹಲ್ಲೆಗೊಳಗಾದ ವಿದ್ವತ್ ಮೇಲೆ ನಲಪಾಡ್ ನೀಡಿದ್ದ ಪ್ರಕರಣವನ್ನು ಶೀಘ್ರ ಸ್ವೀಕರಿಸಿ ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಮೂಲಕ ನಾವು ಕಾಂಗ್ರೆಸ್ ಶಾಸಕ ಕೈಗೊಂಬೆ. ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ ಎಂಬುವುದನ್ನು ಪೊಲೀಸರು ಸಾಭೀತುಪಡಿಸಿದ್ದಾರೆ. ಹಲ್ಲೆಗೊಳಗಾಗಿ ಮೈತುಂಬಾ ರಕ್ತವನ್ನೇ ಮಾಡಿಕೊಂಡಿದ್ದ ವಿದ್ವತ್ ಮೇಲೆ ಕಾಲು ಜಾರಿ ಬಿದ್ದಿದ್ದಾನೆ ಎಂಬ ಪಟ್ಟ ಕಟ್ಟಿ ತರಾತುರಿಯಲ್ಲಿ ಎಫ್.ಐ.ಆರ್.ನ್ನು ದಾಖಲಿಸಿರುವ ಪೊಲೀಸರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅದನ್ನು ವಿದ್ವತ್ ಎಂಬ ಅಂಗವಿಕಲ ಬಾಧಿತನೊಬ್ಬ ನೋಡತ್ತಿದ್ದೆಂಬ ಕ್ಷುಲ್ಲಕ ಕಾರಣಕ್ಕಾಗಿ ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿ ಅಮಾನವೀಯತೆಯನ್ನು ಮೆರೆದಿದ್ದಾನೆ. ಮನಬಂದಂತೆ ಥಳಿಸಿದ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ರಕ್ತದ ಜೊತೆಗೆ ಚೆಲ್ಲಾಟವನ್ನೇ ನಡೆಸಿದ್ದಾನೆ. ಆತ ಓರ್ವ ದಿವ್ಯಾಂಗ ಎಂಬ ಕನಿಷ್ಟ ಯೋಚನೆಯನ್ನೂ ಮಾಡದ ಕಾಂಗ್ರೆಸ್ ಗೂಂಡಾ ಆ ವ್ಯಕ್ತಿಯನ್ನು ಮನ ಬಂದಂತೆ ಭಾರಿಸಿ ತನ್ನ ಗೂಂಡಾಗಿರಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾನೆ. ಇದು ಈ ಗುಟ್ಟಾಗಿ ಉಳಿದಿಲ್ಲ. ಆದರೆ ಈಗ ಅದೇ ವಿದ್ವತ್ ಮೇಲೆ ಬೇರೆನೇ ಕಥೆಯನ್ನು ಈ ಕಾಂಗ್ರೆಸ್ ಗುಲಾಮರು ಹೆಣೆಯುತ್ತಿದ್ದಾರೆ.

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ…

ದಿವ್ಯಾಂಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನ ಪುತ್ರ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಘಟನೆಯ ಬಳಿಕ ನಾಪತ್ತೆಯಾಗಿದ್ದ. ರಕ್ತ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಗೂಂಡ ಎಲ್ಲೋ ಹೋಗಿ ಅಡಗಿ ಕುಳಿತಿದ್ದ. ಪೊಲೀಸರ ಹಾಗೂ ತನ್ನ ತಂದೆ ಶಾಸಕ ಹ್ಯಾರಿಸ್ ಅವರ ಸುಪರ್ಧಿಯಲ್ಲಿ ಭದ್ರವಾಗಿದ್ದ.

ಮತ್ತೆ ಬಂದು ಆಸ್ಪತ್ರೆಯಲ್ಲೇ ಧಮ್ಕಿ ಹಾಕಿದ್ದ ಗೂಂಡಾ..!!!

ಕಾಂಗ್ರೆಸ್ ಮುಖಂಡ ಗೂಂಡಾ ನಲಪಾಡ್ ಎಂಬಾತ ಪರಾರಿಯಾಗಿದ್ದಾನೆ ಎಂದುಕೊಂಡೇ ಕಾಲಹರಣ ಮಾಡುತ್ತಿದ್ದರು ಕಬ್ಬನ್ ಪಾರ್ಕ್ ಪೊಲೀಸರು. ಆದರೆ ಈ ಗೂಂಡಾ ಅದರ ಮಧ್ಯೆ ಹಲ್ಲೆಗೊಳಗಾದ ವಿದ್ವತ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ದೌಡಾಯಿಸಿ ಮತ್ತೆ ವಿದ್ವತ್ ಎಂಬಾತನಿಗೆ ಧಮ್ಕಿ ಹಾಕಿದ್ದ. ಒಂದು ವೇಳೆ ಪೊಲೀಸರಿಗೆ ವಿಚಾರ ತಿಳಿಸಿದರೆ ನಿನ್ನನ್ನು ಉಳಿಸೋದಿಲ್ಲ ಎಂದು ಭಾರೀ ಬೆದರಿಕೆಯನ್ನು ಹಾಕಿದ್ದನು. ಆದರೆ ಈ ಎಲ್ಲಾ ಬೆದರಿಕೆಗೂ ಜಗ್ಗದ ವಿದ್ವತ್ ಪೋಷಕರು ಪೊಲೀಸ್ ಠಾಣೆಯಲ್ಲಿ ರೌಡಿ ನಲಪಾಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತನ್ನ ಮಗ ಗೂಂಡಾ ಮಹಮ್ಮದ್ ನಲಪಾಡ್‍ನ ಈ ರೀತಿಯ ವರ್ತನೆ ಬಗ್ಗೆ ಸೆಂಟಿಮೆಂಟ್ ಕ್ರಿಯೇಟ್ ಮಾಡಲು ಯತ್ನಿಸಿದ್ದರು. “ಹೌದು ನನ್ನ ಮಗ ತಪ್ಪು ಮಾಡಿದ್ದಾನೆ. ಅವನನ್ನು ನಾನೇ ಪೊಲೀಸರ ಮುಂದೆ ಸರೆಂಡರ್ ಮಡುತ್ತೇನೆ. ಕಾಲಾವಲಕಾಶ ಕೊಡಿ” ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಪೊಲೀಸರಿಗೂ ಗೊತ್ತಿತ್ತು..?

ಇದು ಕೇವಲ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ನಾಟಕವಲ್ಲ. ಇದು ಸ್ವತಃ ಕಬ್ಬನ್ ಪಾರ್ಕ್ ಪೊಲೀಸರ ಒಪ್ಪಂದವೂ ಹೌದು. ಇದು ಈಗ ಬಹಿರಂಗವಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಆತ ಕಾಂಗ್ರೆಸ್ ಶಾಸಕರ ಮನೆಯಲ್ಲಿ ಇದ್ದಾನೆ ಎಂಬ ಸ್ಪಷ್ಟ ಮಾಹಿತಿ ಇದ್ದರೂ ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಇದೊಂದು ಕಾಂಗ್ರೆಸ್ ಸರ್ಕಾರವನ್ನು ಬಳಸಿಕೊಂಡು ದರ್ಪ ಮೆರೆದ ಶಾಸಕ ಹ್ಯಾರೀಸ್ ಹಾಗೂ ಪೊಲೀಸರ ನಾಟಕ ಎಂಬುವುದು ಸುಳ್ಳಲ್ಲ.

ಎಫ್.ಐ.ಆರ್. ದಾಖಲು…

ಮೀನಾಮೇಷವೆನಿಸಿದ ಪೊಲೀಸರು ಕೊನೆಗೂ ಗೂಂಡಾ ಪುತ್ರ ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 307 ನಡಿ ಪ್ರಕರಣ ದಾಖಲಿಸಿದ್ದಾರೆ. ಜನತೆ ಬೀದಿಗಿಳಿದು ಹೋರಾಟ ನಡೆಸಿದ ನಂತರ ಈ ಕ್ರಮವನ್ನು ಕೈಗೊಂಡ ಪೊಲೀಸರು ಆತನ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಧೀಶರಿಗೆ ಕಳಿಸಿದ್ದಾರೆ. ಮಾತ್ರವಲ್ಲದೆ ನ್ಯಾಯಾಧೀಶರ ಬಳಿ 5 ದಿನಗಳವರೆಗೆ ಆತನನ್ನು ತಮ್ಮ ಕಸ್ಟಡಿಗೆ ಕೊಡುವಂತೆ ಬೇಡಿಕೆಯನ್ನೂ ಇಡಲಿದ್ದಾರೆ. ಆದರೆ ಅತನನ್ನು ಜೈಲಿಗೆ ಕಳಿಸುವ ತೀರ್ಮಾನವೂ ನ್ಯಾಯಾಧೀಶರಿಂದ ಬರಬಹುದು ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಸರ್ಕಾರದ ಅನತಿಯಂತೆ ಅವರ ಮಾತುಗಳನ್ನೇ ಕೇಳಿಕೊಂಡು ಹಲ್ಲೆಗೊಳಗಾದ ವಿದ್ವತ್ ಮೇಲೆನೇ ಕೇಸ್ ದಾಖಲು ಮಾಡಿದ್ದು ಮಾತ್ರ ಈಗ ತೀವ್ರ ಆಕ್ರೋಷಕ್ಕೆ ಕಾರಣವಾಗಿದೆ.

-ಸುನಿಲ್ ಪಣಪಿಲ

Tags

Related Articles

Close