ಪ್ರಚಲಿತ

ಬಿಗ್ ಬ್ರೇಕಿಂಗ್!! ಯೋಗಿ ಸರಕಾರದಿಂದ ಮಹತ್ವದ ನಿರ್ಧಾರ! ಗೋ ಸೇವೆಗೆ ತೊಡೆ ತಟ್ಟಿದ ಯೋಗಿ!! ಗೋ ಪಾಲಕರಾಗಲಿದ್ದಾರೆ ಜೈಲು ಕೈದಿಗಳು!!

ಯಾವತ್ತೂ ಅಷ್ಟೇ! ಸೇವೆಗೆಂದು ನಿಂತವನಾಗಲಿ, ಕರ್ತವ್ಯ ಪಾಲನೆಗೆ ಬದ್ಧವನಾಗಿರಲಿ, ದೇಶವನ್ನು ಬದಲಾಯಿಸಬೇಕೆಂದು ಅಂದುಕೊಂಡವನಾಗಿರಲಿ! ಯುಕ್ತಿಯಿಂದಲೇ ತನ್ನೆಲ್ಲ ಕೆಲಸಗಳನ್ನೂ ಯಶಸ್ವಿಯಾಗಿಯೇ ಪೂರೈಸುವ ರಾಜಕೀಯ ಸಂತರಿಗೆ ಜ್ವಲಂತ ಉದಾಹರಣೆ ಯೋಗಿ ಆದಿತ್ಯನಾಥ್! ಯಾವುದೇ ಸಮಸ್ಯೆಯನ್ನಾದರೂ ತೆಗೆದುಕೊಳ್ಳಿ, ಉತ್ತರ ಪ್ರದೇಶ ಈ ಹಿಂದೆ ಬದುಕಲು ಯೋಗ್ಯವೇ ಅಲ್ಲ ಎಂಬಂತಿದ್ದಷ್ಟು ಅಪರಾಧಗಳು! ಉತ್ತರ ಪ್ರದೇಶಕ್ಕೆ ಹೋಗುವುದೇ ದೊಡ್ಡ ಅಪಾಯ ಎನ್ನುವಂತಿದ್ದ ಪರಿಸ್ಥಿತಿಯನ್ನು ಬದಲು ಮಾಡಿದ್ದು ಯೋಗಿ ಆದಿತ್ಯನಾಥ್ ಸರಕಾರ! ನಿರಾಶ್ರಿತರಿಗೆ ಸೂರನ್ನು ಮಾತ್ರವೇ ಕಲ್ಪಿಸಿಕೊಡದೇ ಜೊತೆಗೆ, ಉದ್ಯೋಗವನ್ನು ಕಲ್ಪಿಸಿದ ಯೋಗಿ ಸರಕಾರದ ಬಲದಿಂದ ಇವತ್ತು ಉತ್ತರ ಪ್ರದೇಶ ದಿನೇ ದಿನೇ ಅಪರಾಧ ರಹಿತವಾಗುತ್ತ ಹೋಗುತ್ತಿದೆ! ಇನ್ನೂ ಅಚ್ಚರಿಯೆಂದರೆ, ಈ ಹಿಂದೆ ಇದ್ದ ಸರಕಾರಗಳು ರೌಡಿಗಳನ್ನು ಬಂಧಿಸುವುದು ಹೋಗಲಿ, ಹುಡುಕುವ ನಾಟಕ ಮಾಡುತ್ತಲೇ ದಿನ ಕಳೆದಿದ್ದವು! ಆದರೆ, ಯೋಗಿ ಸರಕಾರ ಮಾತ್ರ, ‘ಅಪರಾಧ ಮಾಡಿದವನು ಒಂದೋ ಜೈಲು ಸೇರಬೇಕು, ಇಲ್ಲವೇ ಯಮಸದನದ ಬಾಗಿಲು ತಟ್ಟಬೇಕು” ಎಂಬ ನೀತಿಗನುಸಾರವಾಗಿ ವರ್ಷವೊಂದರಲ್ಲೇ, ಅದೆಷ್ಟೋ ನಿರಂತರ ಎನ್ ಕೌಂಟರ್ ಗಳ ಮೂಲಕ ಸಮಾಜವನ್ನು ಸ್ವಚ್ಛಗೊಳಿಸುತ್ತಿರುವ ಯೋಗಿ ಸರಕಾರ ಈಗ ಮಹತ್ವದ ನಿರ್ಧಾರಕ್ಕೆ ಕೈ ಹಾಕಿದೆ!!

Image result for yogi with cow

ಗೋ ರಕ್ಷಣೆಗೆ ತೊಡೆ ತಟ್ಟಿದ ಯೋಗಿ ಸರಕಾರ! ಗೋ ಸೇವೆ ಮಾಡಿ! ಪಾಪ ಪರಿಹಾರ ಮಾಡಿಕೊಳ್ಳಿ!

ಹಾ! ಇನ್ನು ಗೋ ಶಾಲೆಗಳು ಊರ ಹೊರಗಿರುವುದಿಲ್ಲ! ಬದಲಾಗಿ, ಜೈಲಿನ ಒಳಗಡೆ ಗೋ ಶಾಲೆಗಳಾಗಿವೆ!! ಜೈಲಿನ ಕೈದಿಗಳು ಗೋ ಸೇವೆಯ ಜವಾಬ್ದಾರಿಯನ್ನು ಹೊರಲಿದ್ದಾರೆ!! ವ್ಹಾ!! ಇದೊಂದು ಅದ್ಭುತ! ಜೈಲಿನ ಕೈದಿಗಳು ಪ್ರತಿ ದಿನವೂ ತಪ್ಪದೇ, ಗೋವುಗಳ ಸೇವೆಯನ್ನು ಮಾಡುವುದು ಅನಿವಾರ್ಯವಾಗಿದೆ!

ವಿಷಯ ಎರಡು ಸಾಲುಗಳಲ್ಲಿ! ಆದರೆ, ಹಿಂದಿರುವ ಉದ್ದೇಶ ಮಾತ್ರ ಬಹಳ ಸ್ಪಷ್ಟ!! ವೇದಗಳ ಪ್ರಕಾರ, ಗೋ ಸೇವೆ ಮಾಡಿದವನು ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ! ಸಂಸ್ಕಾರಗಳನ್ನು ಮೈಗೈಡಿಸಿಕೊಳ್ಳುತ್ತಾನೆ! ಸಾತ್ವಿಕ ಮನೋಭಾವವನ್ನು ಹೊಂದಿ, ಚಿತ್ತ ವಿಕೃತಿಯಿಂದ ಹೊರಬರುತ್ತಾನೆ! ಪ್ರತಿದಿನ ಗೋಸೇವೆಯಿಂದ ಶಿಸ್ತನ್ನು ಮೈಗೂಡಿಸಿಕೊಳ್ಳುವುದರಿಂದ ಎಂತಹ ಅಪರಾಧಿಯಾದರೂ ಸಹ, ಆತನ ಮನಃಸ್ಥಿತಿ ವಿಕೃತಿಯಿಂದ ಆಕೃತಿಗೊಳಲ್ಪಟ್ಟು,
ಉತ್ತಮನಾಗುತ್ತಾನೆ ಎನ್ನುತ್ತದೆ! ಯಾಕೆಂದರೆ, ಗೋ ಎಂಬಂತಹ ಪೂರ್ಣ ಚೈತನ್ಯದ, ಮಾತೃ ಸ್ವರೂಪಿಯಾದ ಜೀವಿಯೊಂದನ್ನು ಪೂಜಿಸುವುದು ಅದರ ವಾತ್ಸಲ್ಯಕ್ಕೂ ಸಹ!

Related image

ಅದನ್ನೇ ಮಾಡಲು ಹೊರಟಿದೆ ಯೋಗಿ ಆದಿತ್ಯನಾಥ್ ಸರಕಾರ! ಕೇವಲ, ಗೋವುಗಳನ್ನು ನೋಡಿಕೊಳ್ಳಿ ಇಷ್ಟ ಬಂದ ಹಾಗೆ ಎಂದು ಬಿಟ್ಟಿಲ್ಲ ಯೋಗಿ ಸರಕಾರ! ಬದಲಾಗಿ, ಜಾವದಲ್ಲಿಯೇ ಎದ್ದು, ಇಡೀ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ಜಾನುವಾರುಗಳ ಮೈ ತೊಳೆಸಿ, ಹುಲ್ಲು ನೀಡಿ, ಜೊತೆಗೆ ಹಾಲನ್ನೂ ಹಿಂಡಬೇಕು,! ಹುಷಾರಿಲ್ಲದಿದ್ದರೆ, ಔಷಧಿಗಳನ್ನು ನೀಡಿ ಉಪಚರಿಸಬೇಕು! ಯಾವುದೇ ಕಾರಣಕ್ಕೂ ಜಾನುವಾರಗಳನ್ನು ಹಿಂಸಿಸುವ ಹಾಗಿಲ್ಲ!! ಉತ್ರ ಪ್ರದೇಶದಲ್ಲಿ, ಗೋವನ್ನು ಕಡಿಯುವುದು ಹೋಗಲಿ, ಗೋವಿಗೆ ಏನಾದರೂ ತೊಂದರೆ ಕೊಟ್ಟಿದ್ದೇ ಆದರೆ, ಜೈಲಿನ ಕಂಬಿ ಎಣಿಸಬೇಕಾಗುತ್ರದೆ! ಇನ್ನು ಕೈದಿಯೇ ಹಿಂಸಿಸಿದರೆ, ಇನ್ಯಾವ ಘೋರ ಶಿಕ್ಷೆಗೆ ಆತ ಒಳಗಾಗಬಹುದು ಯೋಚಿಸಿ!!

ಹೇಳಲೇಬೇಕೆಂದರೆ, ಯೋಗಿ ಆದಿತ್ಯನಾಥ್ ನಂತಹವರು ಪ್ರತಿ ರಾಜ್ಯಕ್ಕೂ ಅವಶ್ಯಕತೆ ಇದೆ! ಯಾಕೆ ಗೊತ್ತಾ?! ಅವರ ಆಡಳಿತ ನೀತಿನೆಂತಹವರನ್ನೂ ನಡುಗಿಸುತ್ತದೆ! ಎಂತಹವನೂ ಸಹ, ಅಪರಾಧ ಮಾಡಬೇಕಾದರ ನೂರು ಬಾರಿ ಯೋಚಿಸುತ್ತಾನೆ! ಪ್ರಾಮಣಿಕನಾದವನು ಯಾವುದೇ ಭಯವಿಲ್ಲದೆಯೇ ಬದುಲು ನಡೆಸುತ್ತಾನೆ! ಅದು ಇವತ್ತಿನ ಉತ್ತರ ಪ್ರದೇಶ! ಸರಕಾರದ ಕಠಿಣ ಕಾನೂನುಗಳು, ಸಮಾಜವನ್ನು ಉತ್ತಮಗೊಳಿಸುವ ಕೆಲಸ ಮಾಡುತ್ತಿದೆಯಷ್ಟೇ! ಬಿಡಿ! ಪ್ರೇಮದಿಂದ ಅಪರಾಧಿಗಳನ್ನು ಗೆಲ್ಲಬೇಕು ಯೋಗಿ ಜಿ ಎಂದು ಒಬ್ಬ ಸಂದರ್ಶನಕಾರ ಹೇಳಿದಾಗ, ಯೋಗಿ ಹೇಳಿದ್ದಿಷ್ಟೇ! ಗನ್ನು ಹಿಡಿದು ಮಾತನಾಡುವವಗೆ ಗನ್ನಿನಿಂದಲೇ ಉತ್ತರ ಕೊಡಬೇಕು! ಅಪರಾಧಿಯನ್ನು ಶಿಕ್ಷಿಸದೆ, ಆರತಿ ಎತ್ತಬೇಕೇನು ?! ಎಂದು ಯೋಗಿ ಕೇಳಿದ್ದಷ್ಟೇ! ಸಂದರ್ಶನಕಾರನಿಗೆ ಹುಚ್ಚು ಹಿಡಿದು ಹೋಗಿತ್ತು!

Image result for yogi with cow

ನಿಷ್ಪಕ್ಷಪಾತ ಸರಕಾರ ಯೋಗಿಯದು! ಆದರೆ, ಹಿಂದುತ್ವವೊಂದೇ ಧ್ಯೇಯ!!

ಅದು ಅನಿವಾರ್ಯ ಕೂಡಾ! ಇತಿಹಾಸವನ್ನು ಕೆದಕಿ ನೋಡಿ! ಎಲ್ಲಿ ಗೋವನ್ನು ಪೂಜಿಸಲಾಯಿತೋ, ಅಲ್ಲಿ ದೇಶ ಸುಭಿಕ್ಷವಾಗಿತ್ತು, ಎಲ್ಲಿ ಗೋ ಹರಣ ಪ್ರಾರಂಭವಾಯಿತೋ, ದೇಶದ ಆಚಾರ ವಿಚಾರಗಳೇ ಬದಲಾಗಿ ತನ್ನ ಸ್ವಂತಿಕೆಯನ್ನೇ ಕಳೆದುಕೊಂಡಿತು! ಇದಕ್ಕೆ ಉದಾಹರಣೆ ನಾವೇ! ಮತ್ಯಾರೂ ಅಲ್ಲ! ಭಾರತ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತ ಹೋಯಿತು!!

ಈಗಾಗಲೇ, ೨೪ ಕಡೆಗಳಲ್ಲಿ ಗೋ ಶಾಲೆಗಳನ್ನು ನಿರ್ಮಿಸಲು ತಯಾರಿ ನಡೆಸಲಾಗಿದೆ! ಈ ಹಿಂದೆಯೇ, ಯೋಗಿ ಸರಕಾರ, ರಾಜ್ಯದಲ್ಲಿರುವ ಗೋವುಗಳ ಸಂಖ್ಯೆಯನ್ನು ಕೇಳಿ, ಅಧೀಕ್ಷಕರಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಹೇಳಿತ್ತು! ಅದೇ ರೀತಿ, ವೃದ್ಧವಾದ ಜಾನುವಾರುಗಳನ್ನೂ ಸಾಕಲು, ಅನುದಾನ ನೀಡಿದ್ದ ಯೋಗಿ ಸರಕಾರ, ಪ್ರತಿ ಗೋವನ್ನೂ ಸಹ ರಕ್ಷಿಸುವ ಸಂಕಲ್ಪ ಮಾಡಿ, ಗೋ ರಕ್ಷಣೆಯೇ ನಮ್ಮ ಧ್ಯೇಯ ಎಂದಿತ್ತಷ್ಟೇ! ಆದರೆ, ಶ್ರೀಘ್ರದಲ್ಲಿಯೇ ಧ್ಯೇಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವ ಯೋಗಿ ಸರಕಾರ, ಮತ್ತೆ ರಾಮ ರಾಜ್ಯವನ್ನು ತರುವುದರಲ್ಲಿ ಅಚ್ಚರಿಯೇನೂ ಇಲ್ಲ!

Related image

ಬಿಡಿ! ಯೋಗಿ ಸರಕಾರದ ನಿರ್ಧಾರದಿಂದ ಈಗಾಗಲೇ ಕಮ್ಮಿನಿಷ್ಟರು ಪತರುಗುಟ್ಟಿ ಹೋಗಿದ್ದಾರೆ! ಗೋವು ನಮ್ಮ ಆಹಾರ ಎಂದಿದ್ದವರೆಲ್ಲ ಮು!ದೆ ಗೋ ಸೇವೆ ಮಾಡಬೇಕಾದ ಕಾಲ ಬಂದಾಗ, ಏನು ಮಾಡುತ್ತಾರೋ ಪಾಪ! ಒಂದೋ ಗೋವಿನ ಸೇವೆ ಮಾಡಬೇಕು! ಗೋವು ನಮ್ಮ ಆಹಾರವೆಂದರೆ, ಜೈಲಿಗೆ ಆಹಾರವಾಗಬೇಕು! ವ್ಹಾ!!

ಇಂತಹ ನಿರ್ಧಾರವಿದೆಯಲ್ಲವಾ?! ಅದು ಕೇವಲ, ಯೋಗಿಯಂತಹ ಯೋಗಿಗೆ ಮಾತ್ರ ನಿರ್ಧರಿಸಲು ಸಾಧ್ಯ!! ಅಷ್ಟೇ!

Source : www.india.com : news: india : uttar pradesh jails to work as cow shelters as well!

– ಪೃಥು ಅಗ್ನಿಹೋತ್ರಿ

Tags

Related Articles

Close