ಪ್ರಚಲಿತ

ಬಿಗ್ ಬ್ರೇಕಿಂಗ್: ಮಠಾಧೀಶರಿಗೆ ಸವಾಲು ಹಾಕಿದ ಸಿದ್ದರಾಮಯ್ಯ!! ಸಿಎಂ ಮೇಲೆ ವಾಗ್ದಾಳಿ ನಡೆಸಿದ ಮಠಾಧೀಶರು! ಸಿಎಂ ಬಿಟ್ಟ ಬಾಣ ಹಿಂತಿರುಗಿದ್ದು ಹೇಗೆ ಗೊತ್ತಾ?

ಚುನಾವಣೆಗಾಗಿ ಧರ್ಮ ಒಡೆಯುವ ಕಾರ್ಯಕ್ಕಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆ ಕೆಲಸ ತನಗೇ ಉರುಳಾಗುವಾಗ ಪೇಚಿಗೆ ಸಿಲುಕಿದ್ದಾರೆ. ಅಖಂಡವಾಗಿದ್ದ ಹಿಂದೂ ಧರ್ಮವನ್ನು ಕೇವಲ ಓಟಿಗೋಸ್ಕರ ಒಡೆಯುವ ಹುನ್ನಾರ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈಗ ಅದೇ ಸಿದ್ಧಾಂತ ಹಿಂಬಾಣವಾಗಿದ್ದು ನಾಡ ದೊರೆ ಅಕ್ಷರಷಃ ಬೆಚ್ಚಿ ಬಿದ್ದಿದ್ದಾರೆ. ಯಾಕಪ್ಪಾ ಈ ಧರ್ಮ ಒಡೆಯುವ ಕಾರ್ಯಕ್ಕೆ ಹೋಗಿದ್ದೇನೆ ಎಂದು ಗೋಳಾಡಿಕೊಂಡಿದ್ದಾರೆ.

ಮಠಾಧೀಶರ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ..!

ಈ ಹಿಂದೆ ತನಗೆ ನೆರವಾಗಬಹುದು ಎಂದು ಮಠಾಧೀಶರಿಗೆ ಬೇಕಾದ ರೀತಿಯಲ್ಲಿ ವರ್ತಿಸಿ ನಾಟಕ ಮಾಡುತ್ತಿದ್ದ ಸಿದ್ದರಾಮಯ್ಯರಿಗೆ ಈಗ ತಲೆ ನೋವಾಗಿದೆ. ಧರ್ಮದ ವಿಚಾರಕ್ಕೆ ಕೈ ಹಾಕಿದ್ರೆ ಏನೆಲ್ಲಾ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುವುದನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅರಿವಾದಂತಿದೆ. ಈ ಹಿಂದೆ ತನ್ನ ಓಟ್ ಬ್ಯಾಂಕ್‍ಗೋಸ್ಕರ ಹಿಂದೂ ಧರ್ಮದಿಂದ ಲಿಂಗಾಯುತ ವೀರಶೈವರನ್ನು ಬೇರ್ಪಡಿಸುವ ನಾಟಕ ಮಾಡಿದ್ದ ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ಈಗ ಅದೇ ತತ್ವ ಉರುಳಾಗಿ ಪರಿಣಮಿಸಿದೆ.

ಮಠಾಧೀಶರೆಲ್ಲಾ ಒಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದರು. ಮುಖ್ಯಮಂತ್ರಿಗಳು ಈ ಹಿಂದೆ ನೀಡಿದ್ದ ಭರವಸೆಯಂತೆ ಲಿಂಗಾಯುತ ಧರ್ಮವನ್ನು ಪ್ರತ್ಯೇಕಿಸಿ ಅಲ್ಪಸಂಖ್ಯಾತರ ಸ್ಥಾನ ಮಾನವನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೂ ಮಾಡುತ್ತೇನೆ ಎಂದು ವಾಗ್ದಾನವನ್ನು ನೀಡಿದ್ದರು. ಆದರೆ ಯಾವಾಗ ಇದು ತನಗೆ ತಿರುಗು ಬಾಣವಾಗಿ ವಾಪಾಸು ಬಂತೋ ಅಂದಿನಿಂದ ಮುಖ್ಯಮಂತ್ರಿಗಳು ಧರ್ಮ ವಿಭಜನೆಯ ಸಹವಾಸ ಬೇಡ ಎಂದು ಬಾಯಿ ಮುಚ್ಚಿ ಕುಳಿತಿದ್ದರು. ಆದರೆ ಮೊದಲು ಮಾಡಿದ ಪಾಪ ಮುಖ್ಯಮಂತ್ರಿಗಳನ್ನು ಸುತ್ತದೇ ಇರುತ್ತದೆಯೇ..?

ಯಾವಾಗ ಮುಖ್ಯಮಂತ್ರಿಗಳ ವಿರುದ್ಧ ಮಠಾಧೀಶರು ಸಿಡಿದೆದ್ದಿದ್ದಾರೋ ಆವಾಗ ಮುಖ್ಯಮಂತ್ರಿಗಳೂ ತಮ್ಮ ರೌದ್ರಾವತಾರವನ್ನು ತೋರಿಸಿಬಿಟ್ಟಿದ್ದಾರೆ. “ಮಠಾಧೀಶರು ಏನು ಬೇಕಾದ್ರೂ ಮಾಡಲಿ. ಪ್ರತಿಭಟನೆಯನ್ನು ನಡೆಸಲಿ ಅಥವಾ ಧರಣಿಯೇ ಕೂರಲಿ, ನಾನು ಅದಕ್ಕೆಲ್ಲಾ ಜಗ್ಗಲ್ಲ. ಮಾತ್ರವಲ್ಲದೆ ತಾನು ಸಮಿತಿ ನೀಡಿದ ವರಧಿಯನ್ನು ಕೇಂದ್ರಕ್ಕೆ ಕಳಿಸುತ್ತೇನೆ. ನಂತರದ ಕೆಲಸ ಕೇಂದ್ರದ್ದು” ಎಂದು ಹೇಳುವ ಮೂಲಕ ಮಠಾಧೀಶರಿಗೆ ಸವಾಲು ಹಾಕಿದ್ದಲ್ಲದೆ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನೂ ಮಾಡುತ್ತಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

ಕಾಂಗ್ರೆಸ್ಸೇ ಹುಟ್ಟಿಸಿದ್ದ ಕೂಸು..!

ವಿಧಾನ ಸಭಾ ಚುನಾವಣೆಯಲ್ಲಿ ಲಿಂಗಾಯುತ ಸಮಾಜ ಭಾರತೀಯ ಜನತಾ ಪಕ್ಷವನ್ನು ಸದಾ ಬೆಂಬಲಿಸಿಕೊಂಡು ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ಮುಖಂಡ ಜಗಧೀಶ್ ಶೆಟ್ಟರ್, ವಿಜಯ್ ಸಂಕೇಶ್ವರ್ ಸಹಿತ ಅನೇಕ ನಾಯಕರು ಲಿಂಗಾಯುತ ಸಮಾಜಕ್ಕೆ ಸೇರಿದ ನಾಯಕರು ಆದ ಕಾರಣ ಅವರನ್ನು ಲಿಂಗಾಯುತ ಸಮಾಜ ಬೆಂಬಲಿಸಿಕೊಂಡು ಬಂದಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಇದನ್ನು ಮನಗಂಡ ಕಾಂಗ್ರೆಸ್ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಸಹಿತ ಅನೇಕ ಲಿಂಗಾಯುತ ಮುಖಂಡರು ಧರ್ಮವಿಭಜನೆಯ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಭಾರತೀಯ ಜನತಾ ಪಕ್ಷ ಧರ್ಮ ವಿಭಜನೆಯನ್ನು ಒಪ್ಪಿಕೊಳ್ಳಲ್ಲ ಎಂಬ ವಿಚಾರ ಗೊತ್ತಿದ್ದೇ ಕಾಂಗ್ರೆಸ್ ಈ ದಾಳವನ್ನು ಉರುಳಿಸಿತ್ತು. ಲಿಂಗಾಯಿತ ಪ್ರತ್ಯೇಕ ಧರ್ಮವಾಗಬೇಕು. ನಂತರ ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆರಂಭದಲ್ಲಿ ಎಲ್ಲವೂ ಈ ಕಾಂಗ್ರೆಸ್ ನಾಯಕರು ಅಂದುಕೊಂಡಂತೆಯೇ ಆಗಿತ್ತು.

ಆದರೆ ಯಾವಾಗ ಕಾಂಗ್ರೆಸ್ ನಾಯಕರ ಈ ಬೇಡಿಕೆಗೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳು ಸಿಡಿದೆದ್ದರೋ ಅಂದಿನಿಂದ ಈ ವಿಚಾರ ಮುಖ್ಯಮಂತ್ರಿ ಸಿದ್ದರಮಯ್ಯ ಹಾಗೂ ಕಾಂಗ್ರೆಸ್‍ನ ಆ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ನಂತರ ಲಿಂಗಾಯಿತ ಹಾಗೂ ವೀರಶೈವರಲ್ಲೇ ಬಿರುಕು ಮೂಡಿ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ತಲೆ ನೋವಾಗುವಂತೆ ಪರಿಣಮಿಸಿತ್ತು. ಇದೀಗ ಮುಖ್ಯಮಂತ್ರಿಗಳು ಈ ಶಿಫಾರಸ್ಸನ್ನು ಕಳಿಸುವ ಮೂಲಕ ತಾನೂ ಈ ಅಪವಾದದಿಂದ ಪಾರಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಅನುಸರಿಸಿದ್ದ ಕುತಂತ್ರೀ ನಡೆಯಿಂದ ಈಗ ಪಶ್ಚಾತಾಪವನ್ನು ಅನುಭವಿಸುವಂತಾಗಿದೆ. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾದ ಅನಿವಾರ್ಯತೆಯೂ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close