ಪ್ರಚಲಿತ

ಬಿಗ್ ಬ್ರೇಕಿಂಗ್: ಚೀಟಿ ಹರಿದಿದ್ದ ಭ್ರಷ್ಟ ಸಚಿವ ಡಿಕೆಶಿ ಬಂಧನಕ್ಕೆ ಕ್ಷಣಗಣನೆ!! ಡಿಕೆಶಿ ಕೇಸ್ ಬಗ್ಗೆ ನ್ಯಾಯಾಧೀಶರು ನೀಡಿದ್ದ ಆದೇಶ ಏನು ಗೊತ್ತಾ?!

ಡಿಕೆ ಶಿವಕುಮಾರ್ ಭಾರತದ ಅತ್ಯಂತ ಶ್ರೀಮಂತ ಹಾಗೂ ಅತ್ಯಂತ ಭ್ರಷ್ಟ ಸಚಿವ. ಕೇವಲ ಹಣದಲ್ಲಿ ಮಾತ್ರವಲ್ಲ, ತನ್ನ ಗೂಂಡಾಗಿರಿ ಹಾಗೂ ದರ್ಪದ ರಾಜಕಾರದಿಂದ ಸದಾ ಸುದ್ಧಿಯಲ್ಲಿರುವ ನಾಯಕ. ತಾನು ನಡೆದಿದ್ದೇ ದಾರಿ ಎಂದು ತಿಳಿದುಕೊಂಡು, ತನ್ನ ದಾರಿಗೆ ಅಡ್ಡ ಬಂದ ಯಾವೊಬ್ಬ ವ್ಯಕ್ತಿಯನ್ನೂ ಸಹಿಸಲಾಗದೆ ಅವರ ವಿರುದ್ಧ ದಾಳಿ ನಡೆಸುವ ನಾಯಕ. ಈ ನಾಯಕನಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಸಂಕಷ್ಟ ಎದುರಾಗಿದೆ. ನೋಟ್ ಬ್ಯಾನ್, ಆದಾಯ ತೆರಿಗೆಯನ್ನು ಸಧೃಢಗೊಳಿಸಿರುವ ಮೋದಿಯ ಯೋಜನೆ ಇಂತಹ ಭ್ರಷ್ಟರಿಗೆ ಈಗ ಉರುಳಾಗಿದೆ.

ಪವರ್ ಮಿನಿಸ್ಟರ್ ಮೇಲೆ ಐಟಿ ರೇಡ್…

ಕಳೆದ ಕೆಲ ತಿಂಗಳುಗಳ ಹಿಂದೆ ರಾಜ್ಯ ಕಾಂಗ್ರೆಸ್‍ನ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ ನಡೆದಿತ್ತು. ಒಂದಲ್ಲಾ ಎರಡಲ್ಲಾ… ಬರೋಬ್ಬರಿ 4 ದಿನಗಳ ಕಾಲ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಅವರಿಗೆ ಮೂಗುದಾರವನ್ನು ಹಾಕಿದ್ದರು. ಡಿಕೆ ಶಿವಕುಮಾರ್ ಅಕ್ಷರಷಃ ಬೆಚ್ಚಿ ಬಿದ್ದಿದ್ದರು. ಲೆಕ್ಕ ಹಾಕಿದಷ್ಟು ಹಣಗಳು, ಆಕ್ರಮ ಆಸ್ತಿಗಳು, ಒಡವೆಗಳು ಸಹಿತ ಅಕ್ರಮ ಆಸ್ತಿ ಪಾಸ್ತಿಗಳ ಭಂಡಾರವೇ ಡಿಕೆಶಿವಕುಮಾರ್ ಅವರ ಖಜಾನೆಯಲ್ಲಿ ದೊರಕಿತ್ತು. ಬರೋಬ್ಬರಿ 400 ಕೋಟಿ ರೂಗಳಷ್ಟು ದಾಖಲೆ ಇಲ್ಲದ ಹಣಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೆಯಲ್ಲಿ ಪತ್ತೆಯಾಗಿತ್ತು.

ಇಡಿ ವಹಿಸಿತ್ತು ತನಿಖೆ?

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಮಾತ್ರವಲ್ಲದೆ ಸಚಿವರಿಗೆ ಸಂಬಂಧಪಟ್ಟ ಎಲ್ಲಾ ಕಟ್ಟಡಗಳ ಮೇಲೂ ಐಟಿ ದಾಳಿ ನಡೆಸಿತ್ತು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಸ್ನೇಹಿತರು, ಜ್ಯೋತಿಷಿಗಳು ಸಹಿತ ಅನೇಕ ಆಪ್ತರ ಮೇಲೂ ಐಟಿ ರೇಡ್ ನಡೆದಿತ್ತು. ಹೀಗೆ ನಡೆದಿದ್ದ ದಾಳಿ ವೇಳೆ ಭಾರೀ ಅಕ್ರಮ ಆಸ್ತಿ ಪತ್ತೆಯಾದ ಕಾರಣ ಜಾರಿ ನಿರ್ಧೇಶನಾಲಯಕ್ಕೂ ವಹಿಸುವ ಸಾಧ್ಯತೆ ಇತ್ತು ಎನ್ನಲಾಗಿತ್ತು.

ಗುಜರಾತಿನಿಂದ ರಾಜ್ಯಸಭೆಗೆ ನಡೆಯುತ್ತಿದ್ದ ಚುನಾವಣಾ ಸಂದರ್ಭ ಗುಜರಾತಿನ ಎಲ್ಲಾ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಈ ಸಂದರ್ಭ ಈ ಎಲ್ಲಾ ಶಾಸಕರನ್ನು ಉಳಿಸಿಕೊಳ್ಳಬೇಕು ಎನ್ನುವ ಉದ್ಧೇಶದಿಂದ ಆ ಶಾಸಕರನ್ನು ಕಾಂಗ್ರೆಸ್ ಆಡಳಿತವುಳ್ಳ ಕರ್ನಾಟಕದಲ್ಲಿ ತಂದು ಅವರಿಗೆ ಆಶ್ರಯವನ್ನು ನೀಡಲಾಗಿತ್ತು. ಈ ಶಾಸಕರ ಸಂಪೂರ್ಣ ಜವಬ್ಧಾರಿಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ವಹಿಸಿತ್ತು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಆ ಶಾಸಕರಿಗೆ ಬೇಕಾದಷ್ಟು ಹಣಗಳನ್ನು ನೀಡಿ ಅವರನ್ನು ಆರೈಕೆ ಮಾಡಿದ್ದರು ಎನ್ನಲಾಗಿತ್ತು. ಈ ಕಾರಣಕ್ಕಾಗಿಯೇ ಗುಜರಾತ್ ಶಾಸಕರು ತಂಗಿದ್ದ ಆ ಹೋಟೆಲ್ ಮೇಲೂ ಆದಾಯ ತೆರಿಗೆಯ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಹಣಗಳನ್ನೆಲ್ಲಾ ವಶಪಡಿಸಿಕೊಂಡಿದ್ದರು.

ಎಫ್.ಐ.ಆರ್ ದಾಖಲಿಸಲು ನ್ಯಾಯಾಧೀಶರ ಸೂಚನೆ…

ಎಲೆಕ್ಷನ್ ನಿಂತು ಜಯಭೇರಿ ಬಾರಿಸಿ ಪಕ್ಷವನ್ನು ಮುನ್ನೆಡಸೋ ಉತ್ಸಾಹದಲ್ಲಿದ್ದ ಪವರ್ ಮಿನಿಸ್ಟರ್ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ. 2017, ಆಗಸ್ಟ್ ತಿಂಗಳಲ್ಲಿ ಐಟಿ ರೇಡ್ ವೇಳೆ ದಾಖಲೆ ಹರಿದು ಹಾಕಿರೋ ಆರೋಪಕ್ಕೆ ಗುರಿಯಾಗಿರೋ ಪವರ್ ಮಿನಿಸ್ಟರ್ ಗೆ ಆರ್ಥಿಕ ಅಪರಾಧಗಳ ಕೋರ್ಟ್ ಎಫ್‍ಐಆರ್ ದಾಖಲಿಸಲು ಸೂಚನೆ ನೀಡಿದೆ. ದಾಖಲೆ ಹರಿದು ಹಾಕಿರುವ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ ಐಟಿ ಅಧಿಕಾರಿಗಳಿಗೆ ಕೂಡಲೇ ಅವರ ವಿರುದ್ಧ ದೂರು ದಾಖಲಿಸಿ ಅಂತ ಸೂಚನೆ ನೀಡಿ ಮಾರ್ಚ್ 22 ರೊಳಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.

ಕೋರ್ಟ್ ಸೂಚನೆ ನೀಡುತ್ತಿದ್ದಂತೆ ಘಟನೆ ನಡೆದ ಈಗಲ್ ಟನ್ ರೆಸಾರ್ಟ್ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಸ್ಟೇಷನ್‍ನಲ್ಲಿ ಐಟಿ ಇಲಾಖೆ ಇಂದು ಐಪಿಸಿ ಸೆಕ್ಷನ್ 201 ಮತ್ತು 204 ಜೊತೆಗೆ ಐಟಿ ಸೆಕ್ಷನ್ 276 (ಸಿ)ಯ ಅಡಿಯಲ್ಲಿ ದೂರು ನೀಡಲು ಸಿದ್ದತೆ ಮಾಡಿಕೊಂಡಿದೆ. ದೂರು ದಾಖಲಾಗುತ್ತಿದ್ದಂತೆ ಎಫ್‍ಐಆರ್ ದಾಖಲಿಸಲಿರೋ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸೋ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ.

ಇನ್ನೊಂದು ಕಡೆ ಈಗಾಗಲೇ ಕೋರ್ಟ್ ಆದೇಶದಿಂದ ಬಂಧನದ ಭೀತಿ ಎದುರಿಸುತ್ತಿರೋ ಡಿ ಕೆ ಶಿವಕುಮಾರ್ ಇಂದು ಆರ್ಥಿಕ ಅಪರಾಧಗಳ ಕೋರ್ಟ್ ನೀಡಿರೋ ಆದೇಶದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಿರೋ ಡಿ.ಕೆ.ಶಿವಕುಮಾರ್ ಯಾವುದಕ್ಕೂ ರೆಡಿ ಇರುವಂತೆ ವಕೀಲರಿಗೆ ಸೂಚನೆ ನೀಡಿದ್ದಾರೆ.

ಪ್ರಮುಖ ಸಾಕ್ಷ್ಯಗಳ ನಾಶಕ್ಕೆ ಡಿ.ಕೆ.ಶಿವಕುಮಾರ್ ಯತ್ನಿಸಿರುವ ಆರೋಪ ಹಿನ್ನೆಲೆಯಲ್ಲಿ ಮಾರ್ಚ್ 22 ಕ್ಕೆ ಕೋರ್ಟ್ ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಈ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಗೆ ಆರ್ಥಿಕ ಅಪರಾಧಗಳ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು , ಡಿ.ಕೆ.ಶಿ ಈಗ ಬೇಲ್ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಅನುಮತಿ ನೀಡಲಾಗಿದ್ದು, ಐಪಿಸಿ ಸೆಕ್ಷನ್ 201, 204 ಹಾಗೂ ಐಟಿ ಕಾಯ್ದೆ 276 ಸಿ ಅಡಿಯಲ್ಲಿ ಕೇಸ್ ದಾಖಲಾಗಿದೆ. ಐಟಿ ಕಾಯ್ದೆ 276 – ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಆರೋಪದಡಿಯಲ್ಲಿ 6 ತಿಂಗಳಿನಿಂದ 7 ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ. ಇನ್ನು. ಐಪಿಸಿ 201 ಹಾಗೂ 204 – ಸಾಕ್ಷ್ಯಗಳನ್ನು ನಾಶ ಮಾಡಿರುವ ಆರೋಪ ಈ ಸೆಕ್ಷನ್ ಗಳ ಅಡಿ ಕೇಸ್​ ದಾಖಲಾಗಿದೆ. ಐಟಿ ದಾಳಿ ವೇಳೆ ಡಿಕೆ ಶಿವಕುಮಾರ್​ ಜೇಬಿನಲ್ಲಿದ್ದ ಸಣ್ಣ ಸಣ್ಣ ಕಾಗದದ ಚೂರು ಪತ್ತೆಯಾಗಿತ್ತು. ಕಾಗದದ ಚೂರುಗಳೆಲ್ಲವನ್ನೂ ಸಂಗ್ರಹಿಸಿ ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಡಿಕೆಶಿ ಜತೆಗೆ ಹಲವು ಕಂಪನಿಗಳು ಹಾಗೂ ವ್ಯಕ್ತಿಗಳ ಹಣಕಾಸು ವ್ಯವಹಾರ ಇರೋದು ಕಂಡು ಬಂದಿತ್ತು.

ಚೀಟಿ ಹರಿದು ಹಾಕಿದ್ದ ಡಿಕೆಶಿ…!

ಆದಾಯ ಇಲಾಖೆಯ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ್ದ ವೇಳೆ ಅವರ ಜೇಬಿನಲ್ಲಿದ್ದ ಚೀಟಿಯೊಂದನ್ನು ಹರಿದು ಹಾಕಿದ್ದರಂತೆ. ಅದು ಅಕ್ರಮ ಆಸ್ತಿಗೆ ಸಂಬಂಧಪಟ್ಟ ಚೀಟಿಯಾಗಿದ್ದು, ಅದು ಭಾರೀ ಸಾಕ್ಷಿಯಾಗಿ ಪರಿಣಮಿಸಿತ್ತು. ಆದರೆ ಆ ಚೀಟಿಯನ್ನು ಪವರ್ ಮಿನಿಸ್ಟರ್ ಹರಿದು ಹಾಕಿದ್ದರಂತೆ. ಇದು ಸಾಕ್ಷಿ ನಾಶದ ಪ್ರಕರಣ ಎಂದು ನ್ಯಾಯಾಧೀಶರು ಕೇಸ್ ದಾಖಲಿಸಲು ಆದೇಶವನ್ನು ನೀಡಿದ್ದಾರೆ.

ಬಂಧನದ ಭೀತಿಯಲ್ಲಿ ಪವರ್ ಮಿನಿಸ್ಟರ್..!

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಕ್ಷರಷಃ ಬೆಚ್ಚಿ ಬಿದ್ದಿದ್ದಾರೆ. ಜಾಮೀನು ಪಡೆಯಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಪತಪಿಸುತ್ತಿದ್ದಾರೆ. ಒಂದೊಮ್ಮೆ ಡಿಕೆಶಿ ಅವರು ಬಂಧನಕ್ಕೊಳಗಾದರೆ ಅವರು 6 ತಿಂಗಳ ಜೈಲುವಾಸವನ್ನು ಅನುಭವಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಹೀಗಾಗಿ ಆದಷ್ಟೂ ಜೈಲುವಾಸದಿಂದ ತಪ್ಪಿಸಿಕೊಳ್ಳಬೇಕೆಂಬ ಜಾಣ್ಮೆಯನ್ನು ಪವರ್ ಮಿನಿಸ್ಟರ್ ವಹಿಸಿಕೊಂಡಿದ್ದಾರೆ.

ಜೈಲುವಾಸಕ್ಕೆ ಸಿದ್ದ ಎಂದ ಡಿಕೆಶಿ..!

ಈ ಮಧ್ಯೆ ಐಟಿ, ಇಡಿ ಮಾತ್ರವಲ್ಲದೆ ಸಿಬಿಐ ಬೇಕಾದ್ರೂ ಬಂಧಿಸಲಿ ತಾನು ಸಿದ್ಧನಿದ್ದೇನೆ ಎಂಬ ಹೇಳಿಕೆಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ತಾನು ಜೈಲುವಾಸ ಅನುಭವಿಸುವುದು ಪಕ್ಕಾ ಎಂಬ ಮಾಹಿತಿಯೂ ಡಿಕೆಶಿಗೆ ಗೊತ್ತಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‍ನ ಭ್ರಷ್ಟ ಸಚಿವರ ಮೇಲಿನ ದಾಳಿಗಳು ಮುಂದುವರೆದಿದ್ದು, ಈಗ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೇ ಬಂಧಿಸಿ ವಿಚಾರಣೆ ಕೈಗೊಳ್ಳಲು ಐಟಿ ಮುಂದಾಗಿದೆ. ಆದಾಯ ಇಲಾಖೆಯ ಅಧಿಕಾರಿಗಳ ಈ ಮನವಿಗೆ ಪ್ರಾಷಿಕ್ಯೂಷನ್ ನ್ಯಾಯಾಧೀಶರು ಕೂಡಾ ಸ್ಪಂಧಿಸಿದ್ದು, ಎಫ್.ಐ.ಆರ್. ದಾಖಲಿಸಲೂ ಸೂಚನೆ ನೀಡಲಾಗಿದೆ. ರಾಜ್ಯದ ಪವರ್ ಮಿನಿಸ್ಟರ್ ಅವರ ಪವರ್ ತಗ್ಗಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಮುಂದೆ ಮತ್ತೊಬ್ಬ ಭ್ರಷ್ಟ ಸಚಿವ ಕೆಜೆ ಜಾರ್ಜ್ ಮೇಲೂ ಐಟಿ ಬ್ರಹ್ಮಾಸ್ತ್ರ ತಯಾರಿಗಿದೆ ಎಂದೂ ಹೇಳಲಾಗುತ್ತಿದ್ದು, ರಾಜ್ಯ ವಿಧಾನ ಸಭಾ ಚುನಾವಣೆಯ ಹೊತ್ತಿನಲ್ಲಿ ಚುನಾವಣೆಗೆಂದು ಖರ್ಚು ಮಾಡಲು ತಂತ್ರ ಹೂಡಿರುವ ಎಲ್ಲಾ ಅಕ್ರಮ ಹಣಗಳು ಸರ್ಕಾರದ ಪಾಲಾಗುವ ಆತಂಕವೂ ಈ ಭ್ರಷ್ಟ ಸಚಿವರಿಗೆ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close