ಪ್ರಚಲಿತ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ತ್ಯಜಿಸುವತ್ತ ಮಾಜಿ ಸಿಎಂ ಕುಟುಂಬ! ಪಕ್ಷದ ವಿರುದ್ಧವೇ ಸಿಡಿದೆದ್ದ ಮಾಜಿ ಸಿಎಂ ಪುತ್ರ, ಅಳಿಯ…

5 ವರ್ಷಗಳ ತನ್ನ ಆಡಳಿತದ ಅವಧಿಯಲ್ಲಿ ತಾನು ಮಾಡಿದ ದರ್ಪ ಹಾಗೂ ಅಹಂಕಾರದ ರಾಜಕಾರಣಕ್ಕೆ ಬೆಲೆ ತೆರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮಾಡಿದ ಕೆಲವು ಗೊಂದಲಗಳು, ರಚಿಸಿದ್ದ ಹೊಸ ಪಕ್ಷಗಳಿಂದ ಭಾರೀ ತೊಂದರೆಯನ್ನು ಅನುಭವಿಸಿದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತೂರಿಕೊಂಡು ಗೆದ್ದಿತ್ತು. ಕರ್ನಾಟಕ ಮತ್ತೊಮ್ಮೆ ಕಾಂಗ್ರೆಸ್ ಕೈ ವಶವಾಗಿತ್ತು.

ನಂತರ ನಡೆದಿದ್ದೇ ಕಾಂಗ್ರೆಸ್‍ನ ಆನೆ ನಡಿಗೆ. ತಾನು ನಡೆದಿದ್ದೇ ದಾರಿ ಎಂದೇ ತಿಳಿದುಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ತನ್ನ ಕೊನೆಯ ಅವದಿಯನ್ನು ಎಣಿಸುತ್ತಿರುವಾಗ ಪ್ರಕರಣಗಳ ಮೇಲೆ ಪ್ರಕರಣಗಳು ದಾಖಲಾಗಿ, ಗೂಂಡಾಗಿರಿ, ಭ್ರಷ್ಟಾಚಾರ, ಅತ್ಯಾಚಾರ, ಕೊಲೆಗಳಂತಹ ಕೃತ್ಯಗಳನ್ನು ಮಾಡುತ್ತಾ ರಾಜ್ಯವನ್ನು ಪಾತಾಳದ ಅಂಚಿಗೆ ದೂಡಿದ್ದ ಅಷ್ಟೂ ಪ್ರಕರಣಗಳು ಹೊರ ಬೀಳುತ್ತಿದ್ದುದು ಮಾತ್ರವಲ್ಲದೆ ಕಾಂಗ್ರೆಸ್‍ನ ಒಳಜಗಳವೂ ಬಟಬಯಲಾಗುತ್ತಿದೆ.

ಸಿಎಂ ವಿರುದ್ಧವೇ ಸಿಡಿದೆದ್ದ ಮಾಜಿ ಸಿಎಂ ಕುಟುಂಬ..!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್‍ನ ಹಿರಿಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ ಎಂಬುವುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಅನೇಕ ಹಿರಿಯ ಕಾಂಗ್ರೆಸ್ ಮುಖಂಡರು ಈಗ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷ ಹಾಗೂ ಜನತಾದಳವನ್ನು ಸೇರಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಿಎಂ ಮೇಲಿನ ಕೋಪದಿಂದ ಸಿಡಿದೆದ್ದು ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಂಡಿದ್ದರೆ, ಮಾಜಿ ಸಂಸದ ಹೆಚ್.ವಿಶ್ವನಾಥ್ ಕಾಂಗ್ರೆಸ್ ತ್ಯಜಿಸಿ ಜನತಾ ದಳವನ್ನು ಸೇರಿಕೊಂಡಿದ್ದಾರೆ. ಇನ್ನುಳಿದಂತೆ ಕೇಂದ್ರದ ಮಾಜಿ ಮಂತ್ರಿಗಳಾದ ಬಿ.ಜನಾರ್ಧನ ಪೂಜಾರಿ, ಜಾಫರ್ ಶರೀಫ್ ಸೇರಿದಂತೆ ಅದೆಷ್ಟೋ ಕಾಂಗ್ರೆಸ್ ನಾಯಕರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಢಳಿತಕ್ಕೆ ರೋಸಿ ಹೋಗಿ ಪಕ್ಷದಿಂದ ತಟಸ್ಥರಾಗಿದ್ದಾರೆ.

ಈಗ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಕುಟುಂಬದ ಸರದಿ. ಮಾಜಿ ಮುಖ್ಯಮಂತ್ರಿ ದಿ|ಧರಂ ಸಿಂಗ್ ಅವರು ನಿಧನರಾದ ನಂತರ ಅವರ ಕುಟುಂಬಕ್ಕೆ ಕಾಂಗ್ರೆಸ್ ಯಾವ ಕಿಮ್ಮತ್ತೂ ನೀಡುತ್ತಿಲ್ಲ ಎಂಬ ವಿಚಾರ ಹಿಂದಿನಿಂದಲೂ ಕೇಳಿಬರುತ್ತಿತ್ತು. ಸ್ವತಃ ಧರಂ ಸಿಂಗ್ ಅವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಬೆಲೆಯನ್ನೂ ನೀಡುತ್ತಿರಲಿಲ್ಲ. ಆದರೆ ತಾನು ಕಟ್ಟರ್ ಕಾಂಗ್ರೆಸ್ ಅಭಿಮಾನಿ ಎಂದೇ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರು ಉಳಿದುಬಿಡುತ್ತಿದ್ದರು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಯಿಂದ ಮಾಜಿ ಮುಖ್ಯಮಂತ್ರಿ ದಿ|ಧರಂ ಸಿಂಗ್ ಅವರ ಕುಟುಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ.

ಧರಂ ಸಿಂಗ್ ಪುತ್ರನ ವಾಗ್ದಾಳಿ…

ಕೇವಲ ಧರಂ ಸಿಂಗ್ ಅಳಿಯ ಚಂದ್ರ ಸಿಂಗ್ ಮಾತ್ರವಲ್ಲದೆ ಸ್ವತಃ ಕಾಂಗ್ರೆಸ್ ಶಾಸಕ ಹಾಗೂ ಧರಂ ಸಿಂಗ್ ಅವರ ಪುತ್ರನೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಮಗ ಜೇವರ್ಗಿ ಶಾಸಕ ಅಜಯ್ ಸಿಂಗ್ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. “ಪಕ್ಷದ ಶಾಸಕರ ವಿರೋಧ ಇದ್ದರೂ ಅಶೋಕ್ ಖೇಣಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು ನಮಗೆಲ್ಲಾ ಅಚ್ಚರಿಯನ್ನುಂಟು ಮಾಡಿದೆ. ಇದು ಮುಖ್ಯಮಂತ್ರಿಗಳಿಗೆ ಹಗೂ ಪಕ್ಷದ ನಾಯಕರಿಗೆ ಒಳ್ಳೆಯದಲ್ಲ. ನಾನು ನಮ್ಮ ಮುಖಂಡರ ಜೊತೆಗೆ ಮಾತನಾಡುತ್ತೇನೆ. ಇದು ಯಾರಿಗೂ ಒಳ್ಳೆಯದಲ್ಲ” ಎಂದು ಕಿಡಿ ಕಾರಿದ್ದಾರೆ.

ಪಕ್ಷಸೇರಿದ್ದ ಮಹಾ ಭ್ರಷ್ಟ ಖೇಣಿ…

ಕರ್ನಾಟಕ ಮಕ್ಕಳ ಪಕ್ಷ ಎಂದು ನಾಮಾಂಕಿತಗೊಂಡು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಸ್ತಿತ್ವಕ್ಕೆ ಬಂದು, ಆ ಪಕ್ಷದಲ್ಲಿ ಸ್ಪರ್ಧಿಸಿ ಜಯಸಿದ ನೈಸ್ ಹಗರಣದ ರೂವಾರಿ ಅಶೋಕ್ ಖೇಣಿ ಈಗ ಕಾಂಗ್ರೆಸ್ ಪಕ್ಷದ ಸ್ವತ್ತಾಗಿದ್ದಾರೆ. ಸಾವಿರಾರು ಕೋಟಿ ರೂಗಳ ನೈಸ್ ಹಗರಣವನ್ನು ನಡೆಸಿದೆ ಕರ್ನಾಟಕ ಮಕ್ಕಳ ಪಕ್ಷದ ಸ್ಥಾಪಕ ಖೇಣಿ ಇಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಶುದ್ಧ”ಹಸ್ತ”ನಲ್ಲ ಖೇಣಿ…

ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಶಾಸಕ ಅಶೋಕ್ ಖೇಣಿ ಶುದ್ಧ ಹಸ್ತರಲ್ಲೆ ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ. ನೈಸ್ ಹಗರಣದಲ್ಲಿ ಭಾರೀ ಅಕ್ರಮವನ್ನೇ ಎದುರಿಸಿದ ಅಶೋಕ್ ಖೇಣಿ ಈಗ ಕಾಂಗ್ರೆಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡು ಕೈ ಹಿಡಿದಿದ್ದಾರೆ. ತನು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚರವನ್ನು ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನಿಝೆಗೆ ಆದೇಶಿಸಿತ್ತು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಈ ಹಗರಣದ ಬಗ್ಗೆ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದರು. ಆದರೆ ಈಗ ಸ್ವತಃ ನೈಸ್ ಹಗರಣದ ರೂವಾರಿ ಖೇಣಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ತನ್ನದು ಭ್ರಷ್ಟ ಪಕ್ಷವೆಂದು ಸಾಭೀತು ಪಡಿಸಿದೆ.

ಸಿಡಿದೆದ್ದ ಮಾಜಿ ಸಿಎಂ ಅಳಿಯ…

ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅಳಿಯ ಚಂದ್ರ ಸಿಂಗ್ ಕಾಂಗ್ರೆಸ್ ಪಕ್ಷ ಹಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನ ನಾಯಕರ ಇಂತಹಾ ಧೋರಣೆಯನ್ನು ನಾವು ಒಪ್ಪೋದಿಲ್ಲ. ಇದರ ವಿರುದ್ಧ ನಾವು ಪ್ರತಿಭಟಿಸುತ್ತೇವೆ. ಓರ್ವ ಭ್ರಷ್ಟನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಿದ್ದರಾಮಯ್ಯರಿಗೆ ಅದೆಷ್ಟೋ ವರ್ಷದಿಂದ ನಾವು ಪಕ್ಷಕ್ಕಾಗಿ ದುಡಿಯುವ ನಾವು ಕಾಣೋದೇ ಇಲ್ಲ. ಇದು ಕಾಂಗ್ರೆಸ್ ಪಕ್ಷದ ಅವನತಿಯ ಸಂಕೇತ. ಈಗಾಗಲೇ ನಾವು ಬೆಂಬಲಿಗರ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರ ಸಭೆಗಳನ್ನು ನಡೆಸಿದ್ದು, ಕಾಂಗ್ರೆಸ್ ಪಕ್ಷ ತ್ಯಜಿಸುವ ಬಗ್ಗೆಯೂ ಯೋಚಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿರ್ಧಾರವನ್ನು ಆದಷ್ಟು ಬೇಗ ಪ್ರಕಟಿಸಲಿ” ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಯನ್ನು ವಿರೋಧಿಸಿ ಬೀದರ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ. ತಮ್ಮ ಪಕ್ಷಕ್ಕೆ ಭ್ರಷ್ಟರ ಆಗಮನ ಬೇಡವೇ ಬೇಡ. ತಮ್ಮ ಹಗರಣವನ್ನು ಮುಚ್ಚಿಹಾಕಲು ಖೇಣಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಆದರೆ ಪಕ್ಷ ಅವರ ಸೇರ್ಪಡೆಗೆ ಅವಕಾಶ ನೀಡಬಾರದಾಗಿತ್ತು. ಪಕ್ಷಕ್ಕೆ ಅವರನ್ನು ಸೇರ್ಪಡೆಗೊಳಿಸುವ ಮೂಲಕ ಭಾರೀ ಪ್ರಮಾದವನ್ನೇ ಮಾಡಿದೆ. ಇದು ಸರ್ಕಾರಕ್ಕೂ ಹಾಗೂ ಪಕ್ಷಕ್ಕೂ ಬಹಳ ಹಿನ್ನಡೆಯಾಗಲಿದೆ. ಈ ಕೂಡಲೇ ಅವರನ್ನು ಪಕ್ಷದಿಂದ ಹೊರದಬ್ಬಿ ಎಂದು ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಅದೂ ಪ್ರತಿಭಟಿಸಿದ ಕಾಂಗ್ರೆಸ್‍ನ ಗುಂಪಿನಲ್ಲಿ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವೇ ಇರದೆ ಕಾಂಗ್ರೆಸ್‍ನ ಜನಪ್ರತಿನಿದಿಗಳು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸಹಿತ ವಿವಿದ ಪ್ರಮುಖ ಹುದ್ದೆಗಳನ್ನು ಹೊಂದಿಕೊಂಡಿರುವ ನಾಯಕರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಮ್ಮನ್ನು ಕೇಳದನೇ ಖೇಣಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ. ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಶಾಸಕ ಸೋಮಶೇಖರ್‍ರಿಂದಲೂ ವಿರೋಧ…

ಇನ್ನು ಯಶವಂತಪುರದ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಕೂಡಾ ನೈಸ್ ಮುಖ್ಯಸ್ಥನ ಕಾಂಗ್ರೆಸ್ ಸೇರ್ಪಡೆಗೆ ಆಕ್ಷೇಪವೆತ್ತಿದ್ದಾರೆ. ಅಶೋಕ್ ಖೇಣಿ ಓರ್ವ ಭ್ರಷ್ಟ. ಆತನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರೆ ನಮ್ಮ ಪಕ್ಷದ ಮಾನ ಸಮಾಜದಲ್ಲಿ ಹರಾಜಾಗುವುದು. ಆತನ ನೈಸ್ ಹಗರಣದಿಂದ ನನ್ನ ಕ್ಷೇತ್ರದ ಅದೆಷ್ಟೋ ಕುಟುಂಬಗಳು ತಮ್ಮ ಜಮೀನನ್ನು ಕಳೆದುಕೊಂಡಿದೆ. ಹೀಗಾಗಿ ಸಮಗ್ರ ತನಿಖೆಯನ್ನು ನಡೆಸುತ್ತಿರುವ ಹೊತ್ತಿನಲ್ಲಿ ಆತನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಸೋಮಶೇಖರ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಧರಂ ಸಿಂಗ್ ಅವರ ಅಳಿಯ ಚಂದ್ರ್ ಸಿಂಗ್ ಅವರಿಗೆ ಟಿಕೆಟ್ ನೀಡದೆ ಅಶೋಕ್ ಖೇಣಿಗೆ ಮಣೆ ಹಾಕಿರುವುದನ್ನು ಖಂಡಿಸಿದ ಬೀದರ್ ಕಾಂಗ್ರೆಸ್ ಮುಖಂಡರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಜಿಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಓರ್ವ ಕಾಂಗ್ರೆಸ್ ಶಾಸಕನ ಸಹಿತ 200ಕ್ಕೂ ಅಧಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಚಂದ್ರ್ ಸಿಂಗ್ ಅವರನ್ನು ಪಕ್ಷೇತರವಾಗಿ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಕೊನೇ ದಿನಗಳನ್ನು ಕಾಂಗ್ರೆಸ್ ಎಣಿಸುತ್ತಿರುವಾಗಲೇ ಇಂತಹ ಒಂದು ಆಘಾತ ಎದುರಾಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಓರ್ವ ಭ್ರಷ್ಟ ಶಾಸಕನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‍ಗೆ ಹಿನ್ನಡೆಯಾಗುವ ಎಲ್ಲ ಆಸಾಧ್ಯತೆಗಳೂ ಇದೆ ಎನ್ನಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close