ಪ್ರಚಲಿತ

ಬಿಗ್ ಬ್ರೇಕಿಂಗ್: ವಿಧಾನ ಮಂಡಲದಲ್ಲಿ ಕಮಲ ಪಡೆಯ ಗದ್ದಲ!! ಪಟ್ಟು ಬಿಡದ ಕಾಂಗ್ರೆಸ್!! ಹಿಂದುತ್ವದ ವಿಷಯವೇ ಅಸ್ತ್ರವಾಯಿತೇ?!

ರಾಜ್ಯ ಕಾಂಗ್ರೆಸ್ ಸರ್ಕಾರದ 5 ವರ್ಷಗಳ ಆಡಳಿತದ ಕೊನೆಯ ವಿಧಾನ ಸಭಾ ಬೆಂಗಳೂರಿನ ವಿಧಾನ ಸೌಧಾದಲ್ಲಿ ನಡೆಯುತ್ತಿದೆ. ನಿನ್ನೆ ತಾನೇ ಆರಂಭವಾದ ವಿಧಾನ ಸಭಾ ಕಲಾಪ ಇಂದು 2ನೇ ದಿನವನ್ನು ಮುಂದೂಡುತ್ತಿದೆ. ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನವೆಂದೇ ಪರಿಗಣಿಸಲಾಗಿರುವ ಈ ಅಧಿವೇಶನ ವಾಕ್ಸಮರದ ವೇದಿಕೆಯಾಗುವತ್ತ ಸಾಗುತ್ತಿದೆ.

ಸುಳ್ಳು ಭಾಷಣ ಓದಿಸಿದ್ದ ಕಾಂಗ್ರೆಸ್ ಸರ್ಕಾರ!

ನಿನ್ನೆ ವಿಧಾನ ಮಂಡಲ ಅಧಿವೇಶನ ಆರಂಭವಾಗಿತ್ತು. ವಾಡಿಕೆಯಂತೆ ಕಲಾಪ ಆರಂಭಗೊಂಡಾಗ ರಾಜ್ಯಪಾಲರು ಭಾಷಣ ಮಾಡುವುದು ಶಿಷ್ಟಾಚಾರ. ಅಂತೆಯೇ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿದ್ದರು. ಆದರೆ ಅವರ ಭಾಷಣ ಕಾಂಗ್ರೆಸ್ ಸರ್ಕಾರ ಬರೆದು ಕೊಟ್ಟ ಭಾಷಣವಾಗಿತ್ತು ಎಂಬುವುದರಲ್ಲಿ ಸಂದೇಹವೇ ಇಲ್ಲ. ಯಾಕೆಂದರೆ ರಾಜ್ಯಪಾಲರ ಭಾಷಣದಲ್ಲಿ ಸುಳ್ಳಿನ ಕಂತೆಗಳೇ ಮೊಳಗಿದ್ದವು. ಸರ್ಕಾರವನ್ನು ಬಾಯಿತುಂಬಾ ಹೊಗಳುವಷ್ಟರ ಮಟ್ಟಿಗೆ ಆ ಭಾಷಣವನ್ನು ಸರ್ಕಾರ ಸಿದ್ದಪಡಿಸಿತ್ತು.

ಕಾನೂನು ಸುವ್ಯವಸ್ಥೆಯನ್ನು ಹೊಗಳಿದ್ದ ರಾಜ್ಯಪಾಲರು?

ನಿನ್ನೆ ಕರ್ನಟಕ ರಾಜ್ಯಪಾಲರಾದ ಶ್ರೀ ವಜುಬಾಯಿ ವಾಲಾ ಅವರು ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಭಾರೀ ಹೊಗಳಿಕೆಗಳ ಸುರಿಮಳೆಯನ್ನೇ ಗೈದಿದ್ದರು. ರಾಜ್ಯದಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿಕೊಂಡು ಹೋಗುತ್ತಿದೆ. ಇದೊಂದು ಉತ್ತಮ ಸರ್ಕಾರ. ದೇಶದಲ್ಲೇ ನಂಬರ್ ವನ್ ಸರ್ಕಾರ ಎಂದು ರಾಜ್ಯಪಾಲರು ಬಣ್ಣಿಸಿದ್ದರು. ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಿದ್ದರಿಂದ ಅದರಲ್ಲಿ ಸುಳ್ಳಿನ ಕಂತೆಗಳೇ ಮಾರ್ಧನಿಸಿತ್ತು.

ಸಿಡಿದೆದ್ದ ಕಮಲ ಪಡೆಗಳು!

ರಾಜ್ಯಪಾಲರಿಗೆ ಈ ರೀತಿ ಸುಳ್ಳು ಭಾಷಣವನ್ನು ಬರೆದು ಕೊಟ್ಟ ಕಾಂಗ್ರೆಸ್ ಸರ್ಕಾರದ ಬಗ್ಗೆ ಭಾರತೀಯ ಜನತಾ ಪಕ್ಷ ಸಿಡಿದೇಳುತ್ತೆ. ಇಂದು ನಡೆದ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಕಲಾಪದಲ್ಲಿ ಭಾರೀ ಗದ್ದಲಗಳು ಏರ್ಪಟ್ಟಿತ್ತು. “ನೀವು ರಾಜ್ಯಪಾಲರಲ್ಲಿ ಸುಳ್ಳು ಭಾಷಣವನ್ನು ಓದಿಸಬಹುದು. ಆದರೆ ರಾಜ್ಯದ ಜನತೆಗೆ ಸುಳ್ಳು ಯಾವುದು ಸತ್ಯ ಯಾವುದು ಎಂದು ಅರ್ಥವಾಗುತ್ತದೆ. ನೀವು ರಾಜ್ಯಪಾಲರಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡಿಸಿದ್ದೀರಿ. ಈಗ ನಮ್ಮ ಬಳಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆಗೆ ಬನ್ನಿ” ಎಂದು ಭಾರತೀಯ ಜನತಾ ಪಕ್ಷದ ನಾಯಕರು ಹಠ ಹಿಡಿಯುತ್ತಾರೆ.

ಆದರೆ ಇದಕ್ಕೆ ಒಪ್ಪದ ಸಭಾಪತಿಗಳ ವಿರುದ್ಧ ಭಾರತೀಯ ಜನತಾ ಪಕ್ಷದ ನಾಯಕರು ಪ್ರತಿಭಟನೆಗಳನ್ನು ನಡೆಸುತ್ತಾರೆ. ಗದ್ದಲ ಕೋಲಾಹಲಗಳು ಭುಗಿಲೇಳುತ್ತದೆ. ಕಲಾಂ 68ರ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತಾರೆ. ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಬೇಕು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಎಷ್ಟು ಹಿಂದೂಗಳ ಕೊಲೆಯಾಗಿದೆ. ಕೊಲೆ ಮಾಡಿದವರು ಯಾರು. ಅವರನ್ನು ಯಾವ ಪಕ್ಷ ರಕ್ಷಿಸುತ್ತಿದೆ. ಮಾತ್ರವಲ್ಲದೆ ಈ ಎಲ್ಲಾ ಕೊಲೆಗಳಿಗೆ ಕಾರಣವೇನು ಎಂಬುವುದರ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ.

ರಾಜ್ಯದಲ್ಲಿ ಮಿತಿ ಮೀರಿದ ಅತ್ಯಾಚಾರ, ಕೊಲೆ, ಸುಲಿಗೆಗಳು ನಡೆಯುತ್ತಿವೆ. ಮನೆಗೆ ನುಗ್ಗಿ ಕಳ್ಳ ಕಾಕರು ದರೋಡೆ ನಡೆಸುತ್ತಿದ್ದಾರೆ. ದರೋಡೆಕಾರರಿಗೆ ಕರ್ನಾಟಕ ಸ್ವರ್ಗವಾಗಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಈ ರಾಜ್ಯದಲ್ಲಿ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಸಚಿವರುಗಳು ಇದರ ಬಗ್ಗೆ ಉತ್ತರಿಸಬೇಕು ಎಂದು ಭಾರತೀಯ ಜನತಾ ಪಕ್ಷ ಪಟ್ಟು ಹಿಡಿದಿದೆ.

ಪಾಕ್ ಪ್ರೇಮಿಗಳಿಗೆ ರಕ್ಷಣೆ, ದೇಶಪ್ರೇಮಿಗಳಿಗೆ ಶಿಕ್ಷೆ!

ಬಿಜೆಪಿ ಶಾಸಕ ಸುನಿಲ್ ಕುಮಾರ್ ಹಾಗೂ ಸಿಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ಮಾಡುತ್ತಾರೆ. ರಾಜ್ಯದಲ್ಲಿ ಪಾಕಿಸ್ಥಾನದ ಧ್ವಜ ಹಿಡಿದು ಪಾಕ್ ಪರ ಘೋಷಣೆ ಕೂಗಿದರೆ ರಾಜ್ಯ ಸರ್ಕಾರ ಅವರನ್ನು ರಕ್ಷಿಸುತ್ತದೆ. ಆದರೆ ಭಗವಾದ್ ಧ್ವಜ ಹಿಡಿದು ದೇಶಪ್ರೇಮದ ಕೆಲಸ ಮಾಡಿದವರನ್ನು ಸರ್ಕಾರ ಕೋಮುವಾದಿಗಳು ಎಂದು ರೌಡಿ ಶೀಟರ್ ಹಾಕುತ್ತಾರೆ. ಇದು ಯಾವ ನ್ಯಾಯ. ನಾವು ಭಾರತದಲ್ಲಿ ಇದ್ದೇವೋ ಅಥವಾ ಪಾಕಿಸ್ಥಾನದಲ್ಲಿ ಇದ್ದೇವೋ ಎನ್ನುವ ಸಂಶಯ ಮೂಡುತ್ತದೆ ಎಂದು ಆಕ್ರೋಶಭರಿತವಾಗಿಯೇ ಪ್ರಶ್ನಿಸಿದರು.

ಪರಿಷತ್‍ನಲ್ಲಿ ಗದ್ದಲವೆಬ್ಬಿಸಿದ ಕಲ್ಲಡ್ಕ ಬಿಸಿಯೂಟ ವಿವಾದ…

ಇನ್ನು ವಿಧಾನ ಪರಿಷತ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಸಿಯೂಟದ ಬಗ್ಗೆ ಭಾರೀ ಚರ್ಚೆಗೆ ಕಾರಣವಾಯಿತು. ಭಾರತೀಯ ಜನತಾ ಪಕ್ಷದ ಸದಸ್ಯರ ಗದ್ದಲಕ್ಕೆ ಪವರ್ ಮಿನಿಸ್ಟರ್ ತಮ್ಮ ಪವರ್ ಉಪಯೋಗಿಸಿದರೂ ಕಮಲ ಪಡೆಗಳು ಕ್ಯಾರೇ ಎನ್ನಲಿಲ್ಲ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ತಾರಾ ಸಹಿತ ಎಲ್ಲಾ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ.

ಮನವೊಲಿಸಲು ಯತ್ನಿಸಿದ ಪವರ್ ಮಿನಿಸ್ಟರ್‍ಗೆ ವಿಪಕ್ಷ ಸದಸ್ಯರು ಡೋಂಟ್ ಕ್ಯಾರ್ ಎಂದಿದ್ದಾರೆ. ವಿಪಕ್ಷ ಭಾರತೀಯ ಜನತಾ ಪಕ್ಷದ ನಾಯಕರ ಆರೋಪಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಮುಜುರಾಯಿ ಇಲಾಖೆಯಿಂದ ಶಾಲೆಗಳಿಗೆ ಬಿಸಿಯೂಟ ನೀಡಲು ಸಾಧ್ಯವೇ ಇಲ್ಲ. ಕಲ್ಲಡ್ಕ ಶಾಲೆಗೆ ಬಿಸಿಯೂಟ ನೀಡೋದಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಈ ಉತ್ತರಕ್ಕೆ ಕೆಂಡಾಮಂಡಲರಾದ ಭಾರತೀಯಯ ಜನತಾ ಪಕ್ಷದ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆಯನ್ನು ಮಾಡುತ್ತಾರೆ.

ಆಡಳಿತ ಮಂಡಳಿಯ ವಿರುದ್ಧ ಇರುವ ಧ್ವೇಷಕ್ಕೆ ಮಕ್ಕಳನ್ನು ಯಾಕೆ ಬಲಿ ತೆಗೆದುಕೊಳ್ಳುತ್ತೀರಾ? ಸರ್ಕಾರ ಧ್ವೇಷ ರಾಜಕೀಯ ಮಾಡೋದನ್ನು ಮೊದಲು ಬಿಟ್ಟು ಬಿಡಬೇಕು. ಪ್ರತಿಯೊಂದು ವಿಚಾರದಲ್ಲೂ ಸರ್ಕಾರ ಧ್ವೇಷ ರಾಜಕೀಯ ಮಾಡುತ್ತಿದೆ. ಈಗ ಆಡಳಿತ ಮಂಡಳಿಯ ಅಧ್ಯಕ್ಷರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು ಎಂಬ ಕಾರಣಕ್ಕೆ ಅಲ್ಲಿಗೆ ಕೊಲ್ಲೂರು ದೇವಸ್ಥಾನದಿಂದ ಸಲ್ಲುತ್ತಿದ್ದ ಅನ್ನವನ್ನು ನಿಲ್ಲಿಸಿದ್ದಾರೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿದೆ.

ಕೆಲ ತಿಂಗಳುಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖ ಡಾ. ಪ್ರಭಾಕರ್ ಭಟ್ ಅವರ ನೇತೃತ್ವದ ಶಾಲೆಗೆ ಸಲ್ಲುತ್ತಿದ್ದ ಅನ್ನವನ್ನು ಸರ್ಕಾರ ಧ್ವೇಷ ರಾಜಕಾರಣ ಮಾಡಿ ನಿಲ್ಲಿಸಿತ್ತು. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ರಮಾನಾಥ್ ರೈ ಕೈಚಳಕ ಕೆಲಸ ಮಾಡಿತ್ತು. ಸರ್ಕಾರದ ಈ ನಡೆಯ ವಿರುದ್ಧ ಭಾರೀ ಆಕ್ರೋಷಗಳೇ ಬುಗಿಲೆದ್ದಿದ್ದವು. ಪೋಸ್‍ಕಾರ್ಡ್ ಮಾಧ್ಯಮ ಸಹಿತ ಅನೇಕರು ಸರ್ಕಾರದ ವಿರುದ್ಧ ತೊಡೆತಟ್ಟಿ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಭಾರೀ ಅನುದಾನವನ್ನು ದೊರಕಿಸಿ ಕೊಟ್ಟಿದ್ದರು.

ಒಟ್ಟಿನಲ್ಲಿ ಕಾಂಗ್ರೆಸ್‍ನ ಹಠಕ್ಕೆ ಭಾರತೀಯ ಜನತಾ ಪಕ್ಷದ ಪ್ರತಿಹಠವು ಉಭಯ ಸದನಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದು ಯಾವ ಹಂತಕ್ಕೆ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close