ಪ್ರಚಲಿತ

ಬ್ರೇಕಿಂಗ್: ದೆಹಲಿಯಲ್ಲಿ ಮೋದಿಯ ಸೂಪರ್ ಮಾತು!! ಚಾಯ್ ಪೇ ಚರ್ಚಾ ನಂತರ ಪರೀಕ್ಷಾ ಪೇ ಚರ್ಚಾದಲ್ಲಿ ನಮೋ ಮಂತ್ರವೇನು ಗೊತ್ತಾ..?!

ಪ್ರಧಾನಿ ನರೇಂದ್ರ ಮೋದಿ. ಅವರೊಬ್ಬ ಡಿಫರೆಂಟ್ ಪ್ರಧಾನ ಮಂತ್ರಿ ಎಂಬುವುದು ಜಗತ್ತಿಗೆ ತಿಳಿದಿದೆ. ಪ್ರತಿಯೊಂದು ವಿಚಾರದಲ್ಲೂ ವಿನೂತನ ವೈಶಿಷ್ಟತೆಗಳನ್ನು ಹೊಂದಿರುವ ಜಗತ್ತಿನ ಸರ್ವ ಶ್ರೇಷ್ಟ ನಾಯಕ. ಈ ವ್ಯಕ್ತಿ ಮಾತನಾಡಲು ನಿಂತರೆ ಇಡೀ ಜಗತ್ತೇ ಕಿವಿನಿವಿರಿಕೊಂಡು ಕುಂತಿರುತ್ತದೆ. ಅವರ ಮಾತಿನ ಶೈಲಿಯೇ ಹಾಗೆ. ಅದು ವಿಶ್ವವನ್ನೇ ಗೆಲ್ಲುವಂತಹ ಮಾತು. ಅವರು ಬರುತ್ತಾರೆಂದರೆ ಇಡೀ ಜಗತ್ತೇ ಕೆಂಪು ಹಾಸಿನ ಹಾಸಿಗೆಯನ್ನು ಚಾಚಿ, ನಮೋ ಎಂದುಬಿಡುತ್ತದೆ. ಮಾತ್ರವಲ್ಲ, ಮೋದಿ ಬಂದು ತಮ್ಮ ರಾಷ್ಟ್ರಗಳಲ್ಲಿ ಮಾತನಾಡಿದರೆ ತಮ್ಮ ರಾಷ್ಟ್ರದ ಘನತೆ ಗೌರವ ಹೆಚ್ಚುತ್ತದೆ ಎಂದು ತಿಳಿಯುತ್ತಾರೆ. ಅಷ್ಟೊಂದು ಶ್ರೀಮಂತ ವ್ಯಕ್ತಿತ್ವವನ್ನು ಹೊಂದಿಕೊಂಡಿದ್ದಾರೆ ನಮ್ಮ ಭವ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ.

ಪರೀಕ್ಷಾ ಪೇ ಚರ್ಚಾ ನಡೆಸಿದ ನಮೋ…

ದೆಹಲಿಯ ಟಲ್ಕಾ ಟೋರ ಸ್ಟೇಡಿಯಂನಲ್ಲಿ ಇಂದು ನರೇಂದ್ರ ಮೋದಿಯವರ ಮಾತುಗಳು ಮಕ್ಕಳನ್ನು ಮತ್ತಷ್ಟು ಪರೀಕ್ಷೆಗೆ ತಯಾರಾಗುವಂತೆ ಮಾಡಿತ್ತು. ಪರೀಕ್ಷೆಯ ವೇಳೆ ಶಾಲಾ ಕಾಲೇಜಿನ ಮಕ್ಕಳು ಯಾವ ರೀತಿ ತಯಾರಾಗಬೇಕೆಂಬ ಇಂಚಿಂಚೂ ಮಾಹಿತಿಯನ್ನು ನೀಡಿ ಮಕ್ಕಳು ಪುಳಕಿತರಾಗುವಂತೆ ಮಾಡಿದರು. ಬನ್ನಿ ಹಾಗಾದರೆ, ಪ್ರಧಾನಿ ನರೇಂದ್ರ ಮೋದಿಯವರು ಶಾಲಾ ಮಕ್ಕಳಿಗೆ ಯಾವ ರೀತಿ ಬೋಧನೆ ಮಾಡಿದರು ಎಂಬುವುದನ್ನು ಹೇಳುತ್ತೇವೆ.

ಮಕ್ಕಳಿಗೆ ಹೇಳಿದ ಪ್ರಮುಖ ನಮೋ ಮಂತ್ರ…

* ನಾನು ಭಾರತದ ಪ್ರಧಾನಿಯಾಗಿ ಬಂದಿಲ್ಲ. ನಾನು ನಿಮ್ಮ ಸ್ನೇಹಿತನಾಗಿ ಬಂದಿದ್ದೇನೆ. ನನ್ನನ್ನು ಪ್ರಧಾನಿ ಎಂದು ತಿಳಿಯದೆ ನಿಮ್ಮ ಸ್ನೇಹಿತನಂತೆ ತಿಳಿದುಕೊಳ್ಳಿ.

* ಹಲವಾರು ಮಕ್ಕಳು ಆತ್ಮ ವಿಶ್ವಾಸದ ಕೊರತೆ ಹಾಗೂ ಪರೀಕ್ಷೆಯ ಬಗ್ಗೆ ಟೆನ್ಷನ್ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೀರಿ. ಇದು ನಿಮ್ಮ ದೌರ್ಬಲ್ಯವಲ್ಲ. ಬದಲಾಗಿ ಅದು ನಿಮ್ಮ ವ್ಯಕ್ತಿತ್ವವನ್ನು ನಿರ್ಮಿಸುವುದಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಆತ್ಮವಿಶ್ವಾಸವನ್ನು ಸಧೃಢವಾಗಿಟ್ಟುಕೊಳ್ಳಿ ಹಾಗೂ ತಲೆ ಬಿಸಿ ದೂರಮಾಡಿಕೊಳ್ಳಿ.

* ಆತ್ಮವಿಶ್ವಾಸ ಹಾಗೂ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ವಿದ್ಯಾರ್ಥಿಗಳು ದಿನನಿತ್ಯ ಯೋಗಾಭ್ಯಾಸವನ್ನು ಮಾಡಿ. ಯೋಗಾಭ್ಯಾಸ ನಿಮ್ಮನ್ನು ಮತ್ತಷ್ಟು ಆತ್ಮ ವಿಶ್ವಾಸ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ನಿಮ್ಮಲ್ಲಿರುವ ಚಿಂತೆಯನ್ನೂ ದೂರ ಮಾಡುತ್ತದೆ.

* ಅನೇಕ ಮಂದಿ ಮಕ್ಕಳಿಗೆ ತನ್ನತನದ ಕೊರತೆ ಇದೆ. ತನಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬ ವಿಶ್ವಾಸದ ಕೊರತೆ ಇರುತ್ತದೆ. ನೀವು ಮೊದಲು ತನ್ನತನವನ್ನು ನಿರ್ಮಿಸಿಕೊಳ್ಳಿ. ನಾವು ನಮ್ಮ ನಮ್ಮೊಳಗೆ ತನ್ನತನವನ್ನು ರೂಪಿಸಿಕೊಳ್ಳಬೇಕು. ಇದರಿಂದ ಯಾವ ಸಾಧನೆ ಬೇಕಾದರೂ ಮಾಡಬಹುದು.

* ಪೋಷಕರು ತಮ್ಮ ಮಕ್ಕಳಿಗೆ ಒತ್ತಡವನ್ನು ಹೇರಬೇಡಿ. ಮಕ್ಕಳನ್ನು ನಿರಾಳರನ್ನಾಗಿ ಬೆಳೆಸಿ.

* ಓರ್ವ ತಂದೆಗೆ ತನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗುವ ಆಸೆ ಇರುತ್ತೆ. ಅದು ತಂದೆ ತಾಯಿಯ ತಪ್ಪಲ್ಲ. ಆದರೆ ತಮ್ಮ ಆಸೆಗಾಗಿ ತಮ್ಮ ಮಕ್ಕಳನ್ನು ಮಾನಸಿಕವಾಗಿ ಹಿಂಸಿಸಬೇಡಿ. ಅವರಿಗೆ ಯಾವ ಆಯ್ಕೆ ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳಲಿ.

* ಜನ ಏನು ಹಾಳ್ತಾರೆ, ಸಮಾಜ ಏನು ಹೇಳುತ್ತೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನೇ ಮಾಡಿ.

* ಹಲವಾರು ಮಂದಿಗೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಲು ಆಸೆ ಇರುತ್ತದೆ. ಆದರೆ ಅವರಲ್ಲಿ ಹಣಕಾಸಿನ ಕೊರತೆ ಇರುತ್ತದೆ. ಇದರಿಂದಾಗಿ ಸಮಾಜ ಏನು ಹೇಳುತ್ತೋ ಎನ್ನುವ ಭಯದಿಂದ ಮಿತಿ ಮೀರಿದ ಸಾಲ ಮಾಡಿ ಶಾಲೆಗೆ ಕಳಿಸುತ್ತಾರೆ. ಸಮಾಜಕ್ಕೆ ಹೆದರಿ ಈ ರೀತಿಯ ಕೆಲಸಗಳನ್ನು ಮಾಡಬೇಡಿ. ನಿಮಗೆ ಯಾವುದು ಸಾಧ್ಯವೋ ಅಥವಾ ಯಾವುದು ಯೋಗ್ಯವೋ ಅದನ್ನೇ ಮಾಡಿ.

ಇದು ಪ್ರಧಾನಿ ನರೇಂದ್ರ ಮೋದಿ ಇಂದು ಮಕ್ಕಳಿಗೆ ಹೇಳಿದ್ದ ಪರಿಕ್ಷಾ ಪಾಠದ ಕೆಲವೊಂದು ಪ್ರಮುಖ ಅಂಶಗಳು. ಮಕ್ಕಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಹಾಗೂ ತಮ್ಮ ಆತ್ಮ ವಿಶ್ವಾಸವನ್ನು ಹೇಗೆ ವೃದ್ಧಿಸಿಕೊಳ್ಳಬೇಕೆಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಸ್ವತಃ ವೃತ್ತಿ ನಿರತ ಶಿಕ್ಷಕರೂ ನಾಚುವಂತೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ್ದರು ಪ್ರಧಾನಿ ನರೇಂದ್ರ ಮೋದಿ.

ಪುಸ್ತಕ ಬರೆದಿದ್ದರು ಮೋದಿ..!

ಮಕ್ಕಳ ಓದಿನ ಬಗ್ಗೆ ಹಾಗೂ ಅವರು ಎದುರಿಸುವ ಪರೀಕ್ಷೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕವನ್ನು ಫೆಬ್ರವರಿ 3ರಂದು ಬಿಡುಗಡೆ ಮಾಡಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಪುಸ್ತಕವನ್ನು ಬರೆದಿದ್ದು, ಇದರ ಹಿಂದೆ ಯಾರ ಐಡಿಯಾ ಹಾಗೂ ಕೆಲಸವೂ ಇರಲಿಲ್ಲವಂತೆ. ಇದು ಕೇವಲ ಇಂಗ್ಲಿಷ್ ಭಾಷೆಯಲ್ಲಿ ಇದ್ದು, ಇದು ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರವಾಗಿ ದೇಶದ ಮೂಲೆ ಮೂಲೆಯಲ್ಲೂ ಪಸರಿಸುವ ಯೋಜನೆ ಇದೆ ಎನ್ನಲಾಗಿದೆ. ಈ ಪುಸ್ತಕವನ್ನು ಬಹಳ ಅಚ್ಚುಕಟ್ಟಾಗಿ ಬರೆದಿದ್ದು, ಇದನ್ನು ಓದಿದರೆ ಬೇರೆ ಯಾವ ಶಿಕ್ಷಕರ ಅಗತ್ಯವೂ ಇಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮನ್ ಕೀ ಬಾತ್ ಪ್ರೇರಣೆ…!

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಬಗ್ಗೆ ಮಾತನಾಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂಧನೆಯೂ ಲಭಿಸಿತ್ತು. ಇದನ್ನು ಮನಗಂಡ ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಪರೀಕ್ಷೆಯ ವಿಚಾರವಾಗಿ ಪುಸ್ತಕವನ್ನು ರಚಿಸಿದ್ದಾರೆ. 2015, 2016 ಹಾಗೂ 2017ರಲ್ಲಿಯೂ ಪುಸ್ತಕ ರಚನೆಯ ಬಗ್ಗೆ ಹೇಳುತ್ತಾ ಬಂದಿದ್ದರು. ಆದರೆ ಸಮಯದ ಕೊರತೆಯಿಂದ ಈ ಪುಸ್ತಕವನ್ನು ರಚಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈಗ ಈ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು, ಬಹಳಷ್ಟು ಮಕ್ಕಳಿಗೆ ಇದರಿಂದ ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ.

ಏನಿದೆ ಈ ಪುಸ್ತಕದಲ್ಲಿ..?

ಈ ಪುಸ್ತಕ ಒಂದು ಅಪರೂಪದ ವಿಚಾರವನ್ನೊಳಗೊಂಡ ಪುಸ್ತಕವಾಗಿದೆ. ಇದರಲ್ಲಿ ಅಂಕಕ್ಕಿಂತ ಕಳಿಕೆಗೆ ಹೆಚ್ಚು ಒತ್ತನ್ನು ನೀಡಲಾಗಿದೆಯಂತೆ. ಅಂಕ ಮುಖ್ಯವೇ.. ಆದರೆ ಅದಕ್ಕಿಂತಲೂ ಕಲಿಕೆ ತುಂಬಾ ಮುಖ್ಯವಾದುದು. ಇದು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಕೇವಲ ಅಂಕಕ್ಕೋಸ್ಕರ ಅಭ್ಯಾಸ ಬೇಡ. ಹೊಸದನ್ನು ಕಲಿಯುವ ಉತ್ಸಾದಿಂದ ಕಲಿಕೆ ಬೇಕು ಎಂದಿದ್ದಾರೆ. ಇನ್ನುಳಿದಂತೆ ಪ್ರಾಕ್ಟಿಕಲ್ ಶಿಕ್ಷಣ, ಯೋಗಾ ಹಾಗೂ ಪರೀಕ್ಷೆಗಳನ್ನು ಎದುರಿಸುವ ಸಾಮಥ್ರ್ಯ ಮತ್ತು ಧೈರ್ಯದ ಬಗ್ಗೆ ವಿವರವಾಗಿ ಹೇಳಲಾಗಿದೆ.

ಇನ್ನೂ ಒಂದು ವಿಶೇಷವೆಂದರೆ, ಈ ಪುಸ್ತಕ ಕೇವಲ ಭಾರತದಲ್ಲಿ ಮಾತ್ರವೇ ಪ್ರಸಿದ್ಧಿಯಾಗದೆ ವಿಶ್ವ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಇದು ಭಾರತದ ಮಕ್ಕಳಿಗೆ ಮಾತ್ರವಲ್ಲದೆ ಜಗತ್ತಿನ ಎಲ್ಲಾ ವಿದ್ಯಾರ್ಥಿಗಳಿಗೂ ಈ ಪುಸ್ತಕ ಸಹಕಾರಿಯಾಗಿದೆ ಎಂದು ಖ್ಯಾತ ಉಪನ್ಯಾಸಕರೊಬ್ಬರು ಹೇಳಿದ್ದಾರೆ. ಈ ಮೂಲಕ ಮೋದಿಯ ಮಕ್ಕಳ ಬಗೆಗೆ ಇರುವ ಕಾಳಜಿಯನ್ನು ಬಹಿರಂಗಪಡಿಸಿದ್ದಾರೆ.

ಒಟ್ಟಿನಲ್ಲಿ ಇಂದು ನಡೆದ ಕಾರ್ಯಕ್ರಮ ಕೇವಲ ದೆಹಲಿಯ ಮಕ್ಕಳಿಗೆ ಮಾತ್ರವಲ್ಲದೆ ಇಡೀ ದೇಶದ ಶಾಲಾ ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿಯನ್ನು ಹಾಗೂ ಪರೀಕ್ಷಾ ವೇಳೆಯಲ್ಲಿ ಮಾಡಬೇಕಾದ ಕ್ರಮಗಳನ್ನು ಬಿತ್ತರಿಸಿದೆ. ಇದು ಭಾರತದ ಪ್ರತಿಯೋರ್ವ ಪೋಷಕರ ಕಾಳಜಿಯೂ ಹೌದು. ಇಂದು ನರೇಂದ್ರ ಮೋದಿಯವರು ಮಾಡಿದ್ದ ಈ ಭಾಷಣವು ದೇಶದ ವಿವಿದೆಡೆ ನೇರ ಪ್ರಸಾರವೂ ಆಗಿದ್ದು, ಕೋಟ್ಯಾಂತರ ಮಕ್ಕಳೂ ಈ ಬಗ್ಗೆ ಪ್ರಯೋಜನವನ್ನು ಪಡೆದಿದ್ದಾರೆ. ಇದೊಂದು ಉತ್ತಮ ಯೋಜನೆ ಎಂದರೆ ತಪ್ಪಾಗಲಾರದು.

-ಸುನಿಲ್ ಪಣಪಿಲ

Tags

Related Articles

Close