ಪ್ರಚಲಿತ

ಬಿಗ್ ಬ್ರೇಕಿಂಗ್!! ಸಿದ್ಧರಾಮಯ್ಯ ಸರಕಾರದ ಹೊಸ ಹಗರಣ ಬಯಲು!! ಯಡಿಯೂರಪ್ಪರವರಿಂದ ಮುಖ್ಯಮಂತ್ರಿಗೆ ಚಾಟಿಯೇಟು!!

ಇದನ್ನು ಮುಂಚೆಯೇ ಯೋಚಿಸಬೇಕಿತ್ತು!! ಕರ್ನಾಟಕದ ಜನತೆ, ಸಿದ್ಧರಾಮಯ್ಯನಂತಹ ಮುಖ್ಯಮಂತ್ರಿಯನ್ನಾರಿಸಿ ಜೈಕಾರ ಹಾಕಬೇಕಾದರೇ ಇನಿತು ಯೋಚಿಸಬೇಕಿತ್ತು! ಯಾಕೆ ಗೊತ್ತಾ?! ಹಾಡ ಹಗಲೇ ದರೋಡೆ ಮಾಡುತ್ತಾ, ಹಿಂದೂಗಳ ಹೆಣ ಬೀಳಿಸುತ್ತಾ, ಭ್ರಷ್ಟ ಸಚಿವರನ್ನು ಆಡಳಿತ ವರ್ಗದಲ್ಲಿಟ್ಟುಕೊಂಡು ನಡೆಸುವ ಹಗರಣಗಳಿವೆಯಲ್ಲ?! ಉಹೂಂ! ಬಿಡಿ! ಕರ್ನಾಟಕ ಸರಕಾರದ ಇತಿಹಾಸದಲ್ಲಿಯೇ ಬಹುಷಃ ಅತಿ ದೊಡ್ಡದಾದ ಹಗರಣವೆಂದರೆ ಇದೇ!!

ಪಾಪ! ಸ್ಟೀಲ್ ಬ್ರಿಡ್ಜ್ ನಲ್ಲೇನಾದರೂ ಬಾಚಬಹುದು ಎಂದುಕೊಂಡು ದರೋಡೆಗಿಳಿದ ಸಿದ್ಧರಾಮಯ್ಯರವರಿಗೆ ಕೈ ಸುಟ್ಟುಕೊಂಡ ನೋವು ಸಿಕ್ಕಿತೇ ವಿನಃ, ಅಂದುಕೊಂಡಷ್ಟು ಹಣವಲ್ಲ! ಹೇಗಾದರೂ ಮಾಡಿ, ಚುನಾವಣೆಗೂ ಹಣ ಮಾಡಬೇಕಿದೆ! ಚುನಾವಣೆ ನೆಪದಲ್ಲಿ ಹೈ ಕಮಾಂಡ್ ಗೊಂದಿಷ್ಟು, ಕರ್ನಾಟಕದ ಚುನಾವಣೆಗೊಂದಿಷ್ಟು ಎಂದು ಚೆಲ್ಲಿಬಿಟ್ಟರೆ ಅಲ್ಲಿಗೆ ಮುಗಿತಲ್ಲವಾ?! ಜನರ ಬದುಕನ್ನು ಅಭಿವೃದ್ಧಿ ಮಾಡುವ ಬದಲು, ತಮ್ಮ ಬದುಕನ್ನು ಜನರ ದುಡ್ಡಿನಲ್ಲಿ ಉದ್ಧಾರ ಮಾಡಿಕೊಳ್ಳೋರನ್ನ ಕಾಂಗ್ರೆಸ್ ನವರಿಂದ ಕಲಿಯಬೇಕು ಅಷ್ಟೇ ಬಿಡಿ!

ಅದಕ್ಕೇ, ಬಿಡಿಎ ಯನ್ನ ಹಾಡ ಹಗಲೇ ದರೋಡೆ ಮಾಡ್ತಿರೋ ಸಿದ್ಧರಾಮಯ್ಯರವರ ಸರಕಾರಕ್ಕೆ ಬೇಕಿರುವುದು ಕೇವಲ ಹಣವಷ್ಟೇ!ಸಿದ್ದರಾಮಯ್ಯ ಸರ್ಕಾರ, ಕೆಂಪೇಗೌಡ ಲೇಔಟ್‌ನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 12 ಕಿಮೀ. ರಸ್ತೆ ನಿರ್ಮಾಣಕ್ಕೆ ಖರ್ಚು ಮಾಡಿರುವುದು ₹468 ಕೋಟಿ ಎಂದು ದಾಖಲೆಯಲ್ಲಿ ತೋರಿಸಿದೆ! ವ್ಹಾ!! ಅಂದರೆ, ಒಂದು ಕಿ.ಮೀ ರಸ್ತೆಯ ನಿರ್ಮಾಣಕ್ಕೆ ಬೇಕಿರುವುದು 39 ಕೋಟಿಯೇ?! ಬಾಪ್ ರೇ! 39 ಕೋಟಿ ರೂ ನಲ್ಲಿ ಅರಮನೆಯನ್ನು ಕಟ್ಟಬಹುದು! ಆದರೆ, ರಸ್ತೆ ನಿರ್ಮಾಣ ಸಾಧ್ಯವಿಲ್ಲ ಎನ್ನೋ್ದು ಈಗ ಹೊಸಾ ಗಾದೆ!!

ವ್ಹಾ ಸಿದ್ಧರಾಮಯ್ಯ ವ್ಹಾ!!

ನಿಜಕ್ಕೂ ಬೆನ್ನು ತಟ್ಟಬೇಕಿದೆ ಬಿಡಿ! ಸಿದ್ಧರಾಮಯ್ಯರವರ ಸರಕಾರವೊಂದು ಭಾಗ್ಯಗಳಲ್ಲಿ ಫೇಮಸ್ಸಲ್ಲವೇ?! ಹಾಗೇ ಇದೂ ಕೂಡ ಹೊಸಾ ಭಾಗ್ಯ ಬಿಡಿ! ಹಗರಣ ಭಾಗ್ಯ! ಅದೂ ಕೂಡ.. ಕೆಂಪೇ ಗೌಡ ಕಟ್ಟಿದ ನಾಡಿನಲ್ಲಿ, ಕೆಂಪೇಗೌಡ ನ ಹೆಸರಿಟ್ಟುಕೊಂಡು ಲೂಟಿ ಮಾಡಿದ ಪರಿ ಮಾತ್ರ ಸೂಪರ್ರು ಬಿಡಿ!

ಅಯ್ಯ! ನಮ್ಮ ಸರಕಾರದ ಹಣೆಬರಹ ನೋಡಿ!! ಇಸ್ರೋದ ಮಂಗಳಯಾನ ಯೋಜನೆಯ ವೆಚ್ಚ ₹450 ಕೋಟಿ. ಆದರೆ ಸಿದ್ದರಾಮಯ್ಯ ಸರ್ಕಾರ, ಕೆಂಪೇಗೌಡ ಲೇಔಟ್‌ನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 12 ಕಿಮೀ. ರಸ್ತೆ ನಿರ್ಮಾಣಕ್ಕೆ ಖರ್ಚು ಮಾಡಿರುವುದು ₹468 ಕೋಟಿ!! ಅಂದರೆ, ರಸ್ತೆ ಮಾಡುವುದಕ್ಕಿಂತ, ಮಂಗಳಯಾನ ಮಾಡುವುದೇ ಚೀಪ್ ಅಲ್ವೇ?! ಅಲ್ಲಿಗೆ, ಜನಗಳಿಗೆ ರಸ್ತೆಯ ಅಗತ್ಯವೇ ಇಲ್ಲ ಬಿಡಿ! ಎಲ್ಲರ ಮನೆಯ ಮೇಲೂ, ಒಂದೊಂದು ಹೆಲಿಪ್ಯಾಡ್ ನಿರ್ಮಿಸಿದರೆ ಮುಗಿಯಿತು!! ರಸ್ತೆ ನಿರ್ಮಾಣವೇ ಜಾಸ್ತಿ ಖರ್ಚಲ್ಲವೇ ಅದಕ್ಕಿಂತ?!

ಸಿದ್ಧರಾಮಯ್ಯನವರ ಈ ಯಡವಟ್ಟಿಗೆ ಪ್ರಸ್ತುತ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಯಾದ ಬಿ ಎಸ್ ಯಡಿಯೂರಪ್ಪ ಚಾಟಿಯೇಟು ಬೀಸಿದ್ದಾರೆ! ಜೊತೆಗೆ, ಸಾರ್ವಜನಿಕರೂ ಕೂಡ ಸಿದ್ಧರಾಮಯ್ಯ ಸರಕಾರದ ಹಾಡ ಹಗಲಿನ ದರೋಡೆಗೆ ಮುಖ್ಯಮಂತ್ರಿಯವರ ಮೈ ಚಳಿ ಬಿಡಿಸಿರುವುದು ಮಾತ್ರ ಶಾನೇ ಚೆನಾಗಿದೆ ಬಿಡಿ!

– ಪೃಥು ಅಗ್ನಿಹೋತ್ರಿ

Tags

Related Articles

Close