ಪ್ರಚಲಿತ

ಬಿಗ್ ಬ್ರೇಕಿಂಗ್: ರಾಹುಲ್ ಗಾಂಧಿಯ ಕಾಲಿಗೆರಗಿದ ಪವರ್ ಮಿನಿಸ್ಟರ್..!!! ಬಿಎಸ್‍ವೈ, ಅಮಿತ್ ಶಾ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ಸಿಗರು ಈಗ ಏನನ್ನುತ್ತಾರೆ?!

ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ಪ್ಲಾಫ್ ಶೋ ಕರ್ನಾಟಕದ ಗಣಿ ನಾಡು ಬಳ್ಳಾರಿಯಿಂದ ಆರಂಭವಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಪುನಶ್ಚೇತನಗೊಳಿಸಲು ಇಂದು ರಾಹುಲ್ ಗಾಂಧಿ ಬಳ್ಳಾರಿಗೆ ಆಗಮಿಸಿದ್ದಾರೆ. ಹಲವಾರು ಗೊಂದಲಗಳ ನಡುವೆಯೂ ರಾಹುಲ್ ಗಾಂಧಿಯ ಕಾರ್ಯಕ್ರಮ ನಡೆದಿದ್ದು, ಇಡೀ ಕರ್ನಾಟಕವೇ ರಾಹುಲ್ ಗಾಂಧಿಗೆ ಸೋಲಿನ ಸ್ವಾಗತವನ್ನು ನೀಡಿದೆ.

ರಾಹುಲ್ ಗಾಂಧಿಯ ಕಾಲಿಗೆ ಬಿದ್ದ ಡಿಕೆಶಿ…!!!

ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ಆಗಮಿಸಿದ್ದರು. ಈ ವೇಳೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸ್ವಲ್ಪ ಬಗ್ಗಿದ ಮಾತ್ರಕ್ಕೆ ಇಡೀ ಕಾಂಗ್ರೆಸ್ ಪಕ್ಷವೇ ಬೇರೆನೇ ಪಟ್ಟ ಕಟ್ಟಿತ್ತು. ಸಿಕ್ಕಿದ್ದೇ ಛಾನ್ಸ್ ಎಂದು ತಿಳಿದುಕೊಂಡು ಬಾಯಿಗೆ ಬಂದ ಹಾಗೆ ಮಾತನಾಡಿತ್ತು. “ಬಿ.ಎಸ್. ಯಡಿಯೂರಪ್ಪನವರು ವಯಸ್ಸಿನಲ್ಲಿ ಅಮಿತ್ ಶಾ ಅವರಿಗಿಂತ ದೊಡ್ಡವರು. ಅವರು ಅಮಿತ್ ಶಾ ಅವರ ಕಾಲಿಗೆ ಎರಗಿದ್ದು ಅಪಮಾನ” ಎಂದು ಕಾಂಗ್ರೆಸ್ ಪಕ್ಷ ಮಾತನಾಡಿತ್ತು.

ಆದರೆ ಇಂದು ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲಿಗೆ ಕಾಂಗ್ರೆಸ್‍ನ ಪ್ರಚಾರ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕಾಲಿಗೆ ಎರಗಿದ್ದಾರೆ. ನಿಜವಾಗಿಯೂ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗಿಂತ ರಾಜ್ಯ ಕಾಂಗ್ರೆಸ್‍ನ ಪವರ್ ಮಿನಿಸ್ಟರ್ ತುಂಬಾನೆ ಹಿರಿಯರು. ಬಹುಷಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ವಯಸ್ಸಿನ ಅಂತರವೂ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ವಯಸ್ಸಿನ ಅಂತರವೂ ಒಂದೇ ಸಮವಾಗಿ ಇರಬಹುದು. ಆದರೂ ಅವರು ರಾಹುಲ್ ಗಾಂಧಿಯವರ ಕಾಲಿಗೆ ಬಿದ್ದಿದ್ದು ಎಷ್ಟು ಸರಿ ಎಂಬ ವಾದಗಳೂ ಆರಂಭವಾಗಿದೆ.

ಯಡಿಯೂರಪ್ಪನವರು ಇಂತಹ ಆರೋಪಗಳನ್ನು ಅಲ್ಲಗಳೆದಿದ್ದಾರೆ. ತಾನು ಅಮಿತ್ ಶಾ ಅವರ ಕಾಲು ಹಿಡಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಇಂದು ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ಕಾಲಿಗೆ ಡಿಕೆ ಶಿವಕುಮಾರ್ ಎರಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕರ್ನಾಟಕದ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ,ರಾಜಕೀಯ ಪಕ್ಷಗಳ ಪ್ರಚಾರವೂ ಭರ್ಜರಿಯಾಗಿ ನಡೆಯುತ್ತಿದೆ.ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ..!
ಚುನಾವಣೆಗಾಗಿ ಬಿಜೆಪಿ ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷಗಳು ತೀವ್ರ ಪೈಪೋಟಿಗೆ ಇಳಿದಿದ್ದು, ಜೆಡಿಎಸ್ ಕೂಡ ಮ್ಯಾಜಿಕ್ ಮಾಡಲು ಯತ್ನಿಸುತ್ತಿದೆ.


ಈಗಾಗಲೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದೇಶದಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿದ್ದು ತನ್ನ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ.ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮತ್ತು ದೇಶದ ಜನರ ಹಿತಕ್ಕಾಗಿ ಜಾರಿಗೆ ತರುತ್ತಿರುವ ಯೋಜನೆಗಳಿಂದಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಜನತೆ ಮೆಚ್ಚಿಕೊಂಡಿದೆ.ಕರ್ನಾಟಕದಲ್ಲಿ ಮತ್ತೆ ಅಧಿಕಾರ ಮುಂದುವರೆಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ತನ್ನ ಪಕ್ಷದ ರಾಷ್ಟ್ರೀಯ ನಾಯಕರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ.

ರಾಜ್ಯ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನವರ ನೇತ್ರತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆಯು ರಾಜ್ಯ ಬಿಜೆಪಿ ಗೆ ಹೊಸ ಹುರುಪು ನೀಡಿತ್ತು.ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಾಗಿದ ಈ ಯಾತ್ರೆಯು ಯಶಸ್ವಿಯಾಗಿ ಪ್ರಚಾರ ನಡೆಸಿತ್ತು.ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ನ ಎಲ್ಲಾ ಭ್ರಷ್ಟಾಚಾರ, ಹಗರಣ,ಹಿಂದೂ ವಿರೋಧಿ ನೀತಿ, ಇವೆಲ್ಲವನ್ನೂ ಜನರ ಮುಂದಿಟ್ಟ ಬಿಜೆಪಿ ಕಾಂಗ್ರೆಸ್ ನ ಎಲ್ಲಾ ಅವ್ಯವಹಾರಗಳನ್ನು ರಾಜ್ಯದ ಜನತೆಗೆ ತಿಳಿಸಿದರು.ಇದರಿಂದಾಗಿ ಕಂಗಾಲಾದ ಕಾಂಗ್ರೆಸ್ ಇದೀಗ ತನ್ನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರ್ನಾಟಕಕ್ಕೆ ಕರೆಸುತ್ತಿದ್ದು ಪ್ರಚಾರ ನಡೆಸಲು ಸಿದ್ಧವಾಗಿದೆ..!

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದು ಮುಂದಿನ ವಿಧಾನಸಭಾ ಚುನಾವಣೆಗೆ ಶಂಖನಾದ ಹೊರಡಿಸಿದ್ದರು.ರಾಜ್ಯ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನ ಎಲ್ಲಾ ಹಗರಣಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ನೋಡಿ ಕಾಂಗ್ರೆಸ್ ಬೆಚ್ಚಿಬಿದ್ದಿತ್ತು..!
ನರೇಂದ್ರ ಮೋದಿಯವರು ಸಮಾವೇಶದಲ್ಲಿ ಮಾಡಿದ ಭರ್ಜರಿ ಭಾಷಣದ ನಂತರ ಬಿಜೆಪಿ ಯಲ್ಲಿ ಉತ್ಸಾಹ ನೂರ್ಮಡಿಗೊಂಡಿತ್ತು.ರಾಜ್ಯ ನಾಯಕರು ಬಹಳ ಕುತೂಹಲದಿಂದ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜಯಭೇರಿ ಸಾದಿಸಲು ತಯಾರಾಗುತ್ತಿದ್ದಾರೆ..!

ನರೇಂದ್ರ ಮೋದಿಯವರ ಸಮಾವೇಶದ ಬಳಿಕ ರಾಜ್ಯ ಬಿಜೆಪಿ ಯಲ್ಲಿ ಹೊಸ ಚೈತನ್ಯ ಕಂಡುಬರುತ್ತಿರುವುದರಿಂದಲೇ ಇದೀಗ ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರಕ್ಕೆ ಸಜ್ಜಾಗಿದೆ.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಕರ್ನಾಟಕ ಪ್ರವಾಸ ಆರಂಭಿಸಿದ್ದು ,ನಾಲ್ಕು ದಿನಗಳ ಕಾಲ ಕರ್ನಾಟಕದಲ್ಲಿ ಪ್ರಚಾರ ನಡೆಸಲಿರುವ ರಾಹುಲ್ ಗಾಂಧಿಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ವಿಶೇಷ ಬಸ್ ತಯಾರಾಗಿದೆ.ಯಡಿಯೂರಪ್ಪ ನವರ ಮಾದರಿಯಲ್ಲೇ ಪ್ರಚಾರ ನಡೆಸಲು ರಾಹುಲ್ ಗಾಂಧಿ ಎಲ್ಲಾ ತಯಾರಿ ನಡೆಸಿದ್ದಾರೆ..!

ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ವಯಸ್ಸಿನ ಅಂತರವೂ ಒಂದೇ ಸಮವಾಗಿ ಇರಬಹುದು. ಆದರೂ ಅವರು ರಾಹುಲ್ ಗಾಂಧಿಯವರ ಕಾಲಿಗೆ ಬಿದ್ದಿದ್ದು ಎಷ್ಟು ಸರಿ ಎಂಬ ವಾದಗಳೂ ಆರಂಭವಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ಸಮಾವೇಶವು ಮತ್ತೆ ವಿವಾದದಿಂದ ಕೂಡಿದ್ದು ಮತ್ತೊಮ್ಮೆ ರಾಜ್ಯ ಕಾಂಗ್ರೆಸ್‍ನ ಮುಖಂಡರನ್ನು ತಲೆ ತಗ್ಗಿಸಿದೆ. ನಮ್ಮದು ಗುಲಾಮಗಿರಿಯ ಸಂಸ್ಕøತಿ ಅಲ್ಲ ಎನ್ನುತ್ತಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಈಗ ತನಗಿಂತ ಕಿರಿಯನಾಗಿರುವ ರಾಹುಲ್ ಗಾಂಧಿಯ ಕಾಲಿಗೆ ಎರಗಿದ್ದು ಮಾತ್ರ ವಿಪರ್ಯಾಸವೇ ಸರಿ. ರಾಜಕೀಯ ಆಸೆಗಾಗಿ ಕಾಂಗ್ರೆಸ್ ನಾಯಕರು ಯಾವ ಮಟ್ಟಕ್ಕೂ ಇಳಿಯಲು ಸಿದ್ದರಿದ್ದಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ…!

-ಸುನಿಲ್ ಪಣಪಿಲ

Tags

Related Articles

Close