ಪ್ರಚಲಿತ

ಬ್ರೇಕಿಂಗ್: ಸಿಎಂ ಮಗನ ವಿರುದ್ಧವೇ ಸ್ಪರ್ಧೆಗಿಳಿದ ಮೈಸೂರು ಒಡೆಯ? ಬಿಜೆಪಿಯ ಮುಂದಿನ ದಾರಿ ಏನು..? ವರುಣಾದಲ್ಲಿ ಅರಳುತ್ತಾ ಕಮಲ?

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ತಪ್ಪಿದ್ದರಿಂದ ಭುಗಿಲೆದ್ದ ಭಾರೀ ಆಕ್ರೋಶಕ್ಕೆ ಇದೀಗ ಎಳ್ಳು ನೀರು ಬಿಡಲು ಭಾರತೀಯ ಜನತಾ ಪಕ್ಷ ಮುಂದಾಗಿದೆ. ಯಾವುದೇ ಕಾರಣಕ್ಕೂ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರನನ್ನು ಸೋಲಿಸಲೇ ಬೇಕು  ಎಂದು ಕಂಕಣ ತೊಟ್ಟಿರುವ ಭಾರತೀಯ ಜನತಾ ಪಕ್ಷ ಇದೀಗ ಮತ್ತೊಂದು ಮಾಸ್ಟರ್ ಪ್ಲಾನ್‍ಗೆ ಮುಂದಾಗಿದೆ.

ವರುಣಾದಿಂದ ಕಣಕ್ಕಿಳಿಯುತ್ತಾರಾ ಮೈಸೂರು ಒಡೆಯರ್..?

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮೈಸೂರಿನ ವರುಣಾದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಯಡಿಯೂರಪ್ಪನವರ ಭಾಷಣ ವಿಜಯೇಂದ್ರ ಸ್ಪರ್ಧೆಗೆ ಎಳ್ಳು ನೀರು ಬಿಟ್ಟಿತ್ತು. ಇದರಿಂದಾಗಿ ವರುಣಾ ಕ್ಷೇತ್ರ ರಣರಂಗವಾಗಿ ಮಾರ್ಪಾಡಾಗಿತ್ತು. ವರುಣಾದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಎಲ್ಲಾ ಗೊಂದಲಗಳಿಗೂ ಸ್ವತಃ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಸ್ಪಷ್ಟನೆ ನೀಡಿದ್ದರೂ ಕೂಡಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಲು ಸುತಾರಾಮ್ ಒಪ್ಪುತ್ತಿಲ್ಲ.

ಈ ಕಾರಣಕ್ಕಾಗಿಯೇ ಇದೀಗ ಮೈಸೂರು ಅರಸ ಶ್ರೀ ಯದುವೀರ ದತ್ತ ಒಡೆಯರ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಮೈಸೂರು ಅರಮನೆಯ ಒಡೆಯ ಯದುವೀರ್ ದತ್ತ ಒಡೆಯರ್ ಅವರನ್ನು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲು ಪಕ್ಷ ಸರ್ವ ಸನ್ನದ್ಧವಾಗಿ ನಿಂತಿದೆ. ಆದರೆ ಭಾರತೀಯ ಜನತಾ ಪಕ್ಷದ ಈ ಆಫರ್‍ಗೆ ಯದುವೀರ್ ಏನನ್ನುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

Related image

ವರುಣಾದಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ ಎಂದ ಬಿಎಸ್‍ವೈ…!

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಎದುರಾಳಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಕಳೆದ 10 ದಿನಗಳಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಬೀಡು ಬಿಟ್ಟು ಯತೀಂದ್ರರನ್ನು ಸೋಲಿಸಲು ತಂತ್ರವನ್ನು ರೂಪಿಸಿದ್ದರು. ಭಾರತೀಯ ಜನತಾ ಪಕ್ಷವನ್ನು ವರುಣಾದಲ್ಲಿ ಗೆಲ್ಲಿಸಿಯೇ ತೀರುತ್ತೇವೆ ಎಂಬ ಪಣವನ್ನು ತೊಟ್ಟಿದ್ದರು. ಅಪಾರ ಸಂಖ್ಯೆಯ ಕಾರ್ಯಕರ್ತರನ್ನೂ ಅವರು ಹೊಂದಿದ್ದರು. ಚುನಾವಣಾ ಜಾಥಾ, ಮನೆ ಮನೆ ಭೇಟಿ ಪ್ರಚಾರ ಎಂದೆಲ್ಲಾ ಹೊಸ ಹೊಸ ತಂತ್ರಗಳನ್ನು ಹೂಡುತ್ತಾ ವಿಜಯೇಂದ್ರ ಸ್ಪರ್ಧೆಗೆ ಎಲ್ಲಾ ತಂತ್ರಗಳನ್ನು ಅನುಸರಿಸಿ ಸಿದ್ದರಾಗಿ ನಿಂತಿದ್ದರು.

ಒಟ್ಟಾರೆ ವಿಜಯೇಂದ್ರಗೆ ಕೆಲ ಗೊಂದಲಗಳಿಂದ ಕೈತಪ್ಪಿ ಟಿಕೆಟ್‍ನಿಂದಾಗಿ ಉಂಟಾಗಿರುವ ಗೊಂದಲವನ್ನು ಶಮನ ಮಾಡಲು ಮುಂದಾಗಿರುವ ಭಾರತೀಯ ಜನತಾ ಪಕ್ಷ ಇದೀಗ ಮತ್ತೊಂದು ಪ್ಲಾನ್‍ನ್ನು ಮುಂದಿಟ್ಟಿದ್ದು ಕುತೂಹಲಕ್ಕೆ ಕಾರಣವಾಗಿದೆ. ಯದುವೀರ್ ಈ ಆಫರ್‍ನ್ನು ಒಪ್ಪುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.

-ಏಕಲವ್ಯ

Tags

Related Articles

Close