ಪ್ರಚಲಿತ

ಕಾಮುಕರಿಗೆ ಭಯ ಹುಟ್ಟಿಸಿದ ಮೋದಿ ಸಂದೇಶ!! ಅತ್ಯಾಚಾರ ಮುಕ್ತ ಭಾರತಕ್ಕೆ ಮೋದಿ ಪಣ!!

ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಅತ್ಯಾಚಾರಿಗಳ ಚಳಿ ಬಿಡಿಸಲು ಕೇಂದ್ರ ಸರಕಾರ ತಯಾರಾಗಿ ನಿಂತಿವೆ!! 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವಂಥವರಿಗೆ ಮರಣದಂಡನೆ ವಿಧಿಸುವ ಕುರಿತಂತೆ ಪೆÇೀಕ್ಸೋ ಕಾಯ್ದೆಗೆ ತಿದ್ದುಪಡಿ ತರಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‍ಗೆ ಕೇಂದ್ರ ಅರಿಕೆ ಮಾಡಿಕೊಂಡಿದೆ. ಇದೇ ವೇಳೆ, ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಮಾತುಗಳೂ ಕೇಳಿಬಂದಿದ್ದು, ಇಂದು ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯಲಿದೆ!!

2012ರ ಡಿಸೆಂಬರ್‍ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ಕ್ರಿಮಿನಲ್ ಕಾನೂನಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿತ್ತು. ಅತ್ಯಾಚಾರದ ವೇಳೆ ಮಹಿಳೆ ಮೃತಪಟ್ಟರೆ ಅಥವಾ ದೈಹಿಕ ಜರ್ಜರಿತ ಸ್ಥಿತಿಯಲ್ಲಿದ್ದರೆ ಅಂಥ ಅಪರಾಧಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕ್ರಿಮಿನಲ್ ಕಾಯಿದೆಯಲ್ಲಿ ತಿದ್ದುಪಡಿ ಮಾಡಲಾಗಿತ್ತು. ಈಗ ಪೆÇೀಕ್ಸೋ ಕಾಯಿದೆಯಲ್ಲಿ ಮಾಡಲಾಗುವ ಬದಲಾವಣೆ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಮಾಡುವ ದುಷ್ಟರಿಗೆ ಮರಣ ದಂಡನೆ ಶಿಕ್ಷೆ ನೀಡಲು ಅವಕಾಶ ನೀಡುತ್ತದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸಬೇಕೆಂಬ ಕೂಗು ರಾಷ್ಟ್ರ ವ್ಯಾಪಿ ಕೇಳಿ ಬರುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. 8 ತಿಂಗಳ ಶಿಶುವಿನ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರ ಈ ರೀತಿ ಪ್ರತಿಕ್ರಿಯೆ ನೀಡಿದೆ.

ಪೋಕ್ಸೋ ಕಾಯ್ದೆ ಎಂದರೇನು?

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಪೆÇಲೀಸರು ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಪೆÇ್ರಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಶುವಲ್ ಅಫೆನ್ಸಸ್ ಆಕ್ಟ್ 2012 ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ಪೆÇೀಕ್ಸೋ ಕಾಯ್ದೆ. ಇದು ವಿಶೇಷ ಮಕ್ಕಳ ಪರ ಕಾಯ್ದೆ. 18 ವರ್ಷದೊಳಗಿನ ಮಕ್ಕಳನ್ನು ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯಗಳಿಂದ ತಡೆದು ರಕ್ಷಣೆ ನೀಡುವ ಕಾನೂನು. ಈ ಕಾಯ್ದೆ ಜಾರಿಗೆ ಬಂದಿದ್ದು ನವೆಂಬರ್ 14, 2012ರಂದು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ 2007ರ ದತ್ತಾಂಶದ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 53 ಮಕ್ಕಳು ಒಂದಲ್ಲಾ ಒಂದು ರೀತಿಯ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಇದು ಸರ್ಕಾರಕ್ಕೆ ಲಭ್ಯವಾದ ಅಂಕಿಸಂಖ್ಯೆ. ದುರಂತವೆಂದರೆ ಶೇಕಡಾ 80ರಷ್ಟು ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿರುವುದು ಬಂಧು, ಬಳಗ, ಅಕ್ಕಪಕ್ಕದ ಮನೆಯವರು ಹಾಗೂ ಪೆÇೀಷಕರಿಂದಲೇ. ಆದರೆ ಕುಟುಂಬದ ಮರ್ಯಾದೆ, ಘನತೆ ಕಾಪಾಡುವ ಸಲುವಾಗಿ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಪೆÇೀಕ್ಸೋ ಜಾರಿಗೆ ಬಹುತೇಕ ತಡೆಯಾಗಿರುವವರು ಮಗುವಿನ ಕುಟುಂಬ ಅಥವಾ ಹತ್ತಿರ ಸಂಬಂಧಿಗಳು. ಮಕ್ಕಳ ಮೇಲೆ ಲೈಂಗಿಕ ಅಪರಾಧ ನಡೆದರೂ ಅವರು ಮರ್ಯಾದೆಗೆ ಅಂಜಿ ಪೆÇಲೀಸರಿಗೆ ದೂರು ನೀಡಲು ಹೋಗುವುದಿಲ್ಲ.

ಪೆÇೀಕ್ಸೋ ಉದ್ದೇಶ ಅದ್ಭುತವಾದದ್ದು ಈ ಮೊದಲೇ ಹೇಳಿದಂತೆ ಹೇಳಿದ ಹಾಗೆ ಇದು ವಿಶೇಷ ಕಾಯ್ದೆ. ವಯಸ್ಕರು ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯಗಳಾದ ಅತ್ಯಾಚಾರ, ಗ್ಯಾಂಗ್ ರೇಪ್, ಮಕ್ಕಳಿಗೆ ಕಿರಿಕಿರಿ ಆಗುವಂತಹ ಸ್ಪರ್ಶಗಳು, ಲೈಂಗಿಕತೆಗೆ ಪ್ರಚೋದಿಸುವುದು, ಪೆÇೀರ್ನ್ ಚಿತ್ರಗಳನ್ನು ತೋರಿಸುವುದು, ಅವಾಚ್ಯ ಮಾತುಗಳ ಬಳಿಕೆ ಹೀಗೆ ಒಟ್ಟು ಏಳು ತರಹದ ಅಪರಾಧಗಳು ಪೆÇೀಕ್ಸೋ ಅಡಿ ಬರುತ್ತವೆ. ಪೆÇೀಕ್ಸೋ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ವಿಶೇಷ ನ್ಯಾಯಾಲಯಗಳು ಆರಂಭವಾಗಿವೆ. ಸದ್ಯ ಕರ್ನಾಟಕದಲ್ಲಿ ಒಟ್ಟು 10 ವಿಶೇಷ ಕೋರ್ಟ್‍ಗಳಿವೆ. ಈ ನ್ಯಾಯಾಲಯಗಳು ವಿಶೇಷ ನ್ಯಾಯಾಧೀಶ (ಸ್ಪೆಷಲ್ ಮ್ಯಾಜಿಸ್ಟ್ರೇಟ್)ರನ್ನು ಹೊಂದಿರುತ್ತವೆ. ಈ ಕೋರ್ಟ್‍ಗಳಿಗೆ ಪ್ರಬಲ ಅಧಿಕಾರವಿದೆ ಎಂದು ಅನ್ನಿಸಿದರೂ ಇವು ಕನಿಷ್ಠ ಸೌಲಭ್ಯದಿಂದ ವಂಚಿತಗೊಂಡಿವೆ ಮತ್ತು ಸವಾಲುಗಳ ಪಂಜರದಲ್ಲಿ ಬಂಧಿ ಆಗಿವೆ ಎಂಬುದು ಸತ್ಯಾಂಶ!!

ಮಗುವಿನ ಹಿತರಕ್ಷಣೆಯೇ ಈ ಪೋಕ್ಸೋ ಕಾಯ್ದೆಯ ಪ್ರಮುಖ ಉದ್ದೇಶ!! ಲೈಂಗಿಕ ಕಿರುಕುಳ, ಅಶ್ಲೀಲ ಚಿತ್ರಕ್ಕೆ ಮಕ್ಕಳನ್ನು ಬಳಕೆ ಮಾಡಿದಲ್ಲಿ ಪೋಕ್ಸೋ ಕಾಯ್ದೆಯಡಿ ಶಿಕ್ಷೆಯನ್ನು ವಿಧಿಸಲಾಗುವುದು!! ಲೈಂಗಿಕ ಅಪರಾಧ ಎಸಗುವ ಪ್ರಯತ್ನಕ್ಕೂ ಕೂಡ ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಈ ರೀತಿ ಕೃತ್ಯ ನಡೆಸಿ ತಿಳಿದ ಮೇಲೂ ಪೆÇಲೀಸರಿಗೆ ಮಾಹಿತಿ ಕೊಡದವರ ವಿರುದ್ಧ ಕ್ರಮಕ್ಕೆ ಪೋಕ್ಸೋ ಕಾಯ್ದೆ ಅವಕಾಶ ಕಲ್ಪಿಸಿದೆ!! ಮಗುವಿನ ಮೇಲೆ ಅತ್ಯಚಾರ ಸಂಬಂಧ ಪೆÇಲೀಸರು ಮಗುವಿನ ಹೇಳಿಕೆಯನ್ನು ಮನೆಯಲ್ಲೇ ಪಡೆದುಕೊಳ್ಳಬೇಕಾಗುತ್ತದೆ. ಎಫ್.ಐ.ಆರ್’ಗೂ ಮುನ್ನ ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಬಹುದು.. ಆದರೆ, ಮಗುವಿನ ಪೆÇೀಷಕರು, ನಂಬುಗೆಯ ವ್ಯಕ್ತಿಯ ಸಮ್ಮುಖದಲ್ಲಿ ಪರೀಕ್ಷೆ ನಡೆಸಬೇಕು. ಪ್ರಕರಣ ದಾಖಲಾದ 24 ಗಂಟೆಯೊಳಗೆ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತರಬೇಕು.. ರಾತ್ರಿ ಹೊತ್ತಿನಲ್ಲಿ ಮಗುವನ್ನು ಠಾಣೆಯಲ್ಲಿಟ್ಟುಕೊಳ್ಳುವಂತಿಲ್ಲ… ವಿಚಾರಣೆಗಾಗಿ ಮಗುವನ್ನು ಮತ್ತೆ ಮತ್ತೆ ಠಾಣೆಗೆ ಕರೆಸುವಂತಿಲ್ಲ. ಅದಲ್ಲದೆ ಮಾಧ್ಯಮಗಳು ಮಗುವಿನ ಚಿತ್ರ ಬಿತ್ತರಿಸಿದರೆ 6 ತಿಂಗಳಿಂದ 1 ವರ್ಷದವರೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ!! ಒಂದು ವರ್ಷದ ಒಳಗೆ ವಿಶೇಷ ನ್ಯಾಯಾಲಯ ವಿಚಾರಣೆ ಮುಗಿಸಬೇಕು… ಒಂದು ವೇಳೆ ದುರುದ್ದೇಶದಿಂದ ಸುಳ್ಳು ದೂರು ಕೊಟ್ಟಿರುವುದು ಸಾಬೀತಾದರೆ ದೂರುದಾರರಿಗೂ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ..

ಒಟ್ಟಾರೆಯಾಗಿ ಈ ಪೋಕ್ಸೋ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ಸರಕಾರ ತೆಗೆದುಕೊಂಡ ನಿರ್ಧಾರ ನಿಜವಾಗಿಯೂ ಆಭೂತಪೂರ್ವ!! ಅತ್ಯಾಚಾರ ಮುಕ್ತ ಭಾರತ ಮಾಡಬೇಕೆಂದು ಮೋದಿ ಸರಕಾರ ಪಣ ತೊಟ್ಟಿದ್ದು ಈ ನಿರ್ಧಾರ ಕೇಳುತ್ತಿದ್ದಂತೆಯೇ ಅತ್ಯಾಚಾರಿಗಳಿಗೆ ನಡುಕ ಶುರುವಾಗಿದೆ!!

source: udayavani

source: https://postcard.news/big-move-by-pm-modi-central-government-begins-process-to-ensure-maximum-punishment-of-death-penalty-in-child-rape-cases/

Economic Times

ಪವಿತ್ರ

Tags

Related Articles

Close