ಪ್ರಚಲಿತ

ಕಾಂಗ್ರೆಸ್‍ಗೆ ಬಿಗ್ ಶಾಕ್! ಮೋದಿಯನ್ನು ಹಾಡಿ ಹೊಗಳಿ ಕಾಂಗ್ರೆಸ್‍ನ್ನು ಝಾಡಿಸಿದ ದೊಡ್ಡಗೌಡರು…! ಮೋದಿಯ ಮೊದಲ ಭೇಟಿಯನ್ನು ನೆನೆದು ದೇವೇಗೌಡರು ಏನಂದ್ರು ಗೊತ್ತಾ..?

 ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಉತ್ತಮ ವ್ಯಕ್ತಿ. ಇಂತಹಾ ನಾಯಕರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರ ಪ್ರದರ್ಶಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದರು. ಪ್ರಧಾನಿ ಮೋದಿಯ ಈ ಮಾತಿಗೆ ಕಾಂಗ್ರೆಸ್ ನಾಯಕರು ವಾಗ್ದಾಳಿಯನ್ನೇ ನಡೆಸಿದ್ದರು. ದೇವೇಗೌಡರನ್ನು ಹೊಗಳಿದ ಮೋದಿಯ ವಿರುದ್ಧ ಕಾಂಗ್ರೆಸ್ ನಾಯಕರು ಹರಿ ಹಾಯ್ದಿದ್ದರು.
ಕಾಂಗ್ರೆಸ್‍ಗೆ ಶಾಕ್ ನೀಡಿದ ದೊಡ್ಡ ಗೌಡರು…!
  ಮೋದಿ ಹೊಗಳಿಕೆ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದೇವೇಗೌಡರು ಸಖತ್ ಟಾಂಗ್ ಕೊಟ್ಟಿದ್ದಾರೆ. ನನ್ನನ್ನು ಹೊಗಳಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು ಕಳೆದ 2 ತಿಂಗಳಿನಿಂದ ನನ್ನನ್ನು ಯಾವ ರೀತಿ ನೋಡಿಕೊಂಡಿದ್ದಾರೆ..? ಓರ್ವ ಕನ್ನಡಿಗ ಮಾಜಿ ಪ್ರಧಾನಿಯನ್ನು ಕಾಂಗ್ರೆಸ್ ನಾಯಕರು ಕಳೆದ 2 ತಿಂಗಳಿನಿಂದ ಯಾವ ರೀತಿ ನೋಡಿಕೊಂಡಿದ್ದಾರೆಂದು ಪ್ರಧಾನಿ ಮೋದಿಗೆ ತಿಳಿದಿದೆ. ಹೀಗಾಗಿ ಅವರು ಈ ಬಗ್ಗೆ ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ನಾನು ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ಪಕ್ಷ ನನ್ನನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬುವುದೂ ನನಗೆ ತಿಳಿದಿದೆ” ಎಂದು ಗೌಡರು ಹೇಳಿದ್ದಾರೆ.
    “ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವೇಷ ರಾಜಕೀಯ ನಡೆಸುತ್ತಿದ್ದಾರೆ. ನಾನು ಓರ್ವ ಕನ್ನಡಿಗ ಪ್ರಧಾನಿ ಎಂದು ಗೌರವ ನೀಡುತ್ತಿಲ್ಲ. ಆದರೆ ಪ್ರಧಾನಿ ಮೋದಿ ಆ ಗೌರವ ನೀಡಿದ್ದಾರೆ. ಜೆ ಹೆಚ್ ಪಾಟೀಲ್ ಮುಖ್ಯಮಂತ್ರಿ ಆಗಿದ್ದಾಗ ನನ್ನ ಭಾವಚಿತ್ರವನ್ನು ವಿಧಾನ ಸೌಧಾದಲ್ಲಿ ಅಳವಡಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಅದನ್ನು ತೆರವುಗೊಳಿಸಿದ್ದಾರೆ. ಕನ್ನಡಿಗ ಪ್ರಧಾನಿ ಆಗಿದ್ದಕ್ಕೆ ಹೆಮ್ಮೆ ಇರಬೇಕಿತ್ತು. ಆದರೆ ಕಾಂಗ್ರೆಸ್ ನನ್ನನ್ನು ಅವಮಾನಿಸಿದೆ. ಯಡಿಯೂರಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆಯೂ ನನ್ನ ಬಗ್ಗೆ ಆ ರೀತಿ ಮಾತಾಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾತಾಡಿದ್ದಾರೆ. ಇದು ಓರ್ವ ಕನ್ನಡಿಗೆ ಮಾಜಿ ಪ್ರಧಾನಿಗೆ ಮುಖ್ಯಮಂತ್ರಿಯೋರ್ವರು ನೀಡಿದ ಗೌರವ ಎಂದು ಕಿಡಿಕಾರಿದ್ದಾರೆ.
Image result for devegowda with modi
ಮೋದಿ ಹೊಗಳಿಕೆ ಸ್ವೀಕರಿಸಿದ ಮಾಜಿ ಪ್ರಧಾನಿ…

    ದೇವೇಗೌಡರನ್ನು ಹೊಗಳಿದ್ದ ಪ್ರಧಾನಿ ಮೋದಿಯವರ ಮಾತುಗಳನ್ನು ಇಂದು ದೇವೇಗೌಡರು ಮುಕ್ತಂಠದಿಂದ ಸ್ವೀಕರಿಸಿದ್ದಾರೆ. “ಪ್ರಧಾನಿ ಮೋದಿಯವರು ಎಲ್ಲರ ಬಗ್ಗೆಯೂ ಚೆನ್ನಾಗಿ ತಿಳಿದಿದ್ದಾರೆ. ಅವರು ಎಲ್ಲಿ ಹೇಗೆ ಮಾತನಾಡಬೇಕೆಂದು ತಿಳಿದುಕೊಂಡು ಮಾತನಾಡುತ್ತಾರೆ. ಕರ್ನಾಟಕದಲ್ಲಿ ಹೇಗೆ ಮಾತನಾಡಬೇಕು, ಬಿಹಾರದಲ್ಲಿ ಹೇಗೆ ಮಾತನಾಡಬೇಕು ಎಂದು ತಿಳಿದು ಮಾತನಾಡುತ್ತಾರೆ. ಅವರು ನನ್ನನ್ನು ಹೊಗಳಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅದರಲ್ಲೇನೂ ಉತ್ಪ್ರೇಕ್ಷೆ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಮೇಲೆ ಗೌರವ ಇದೆ. ಹೀಗಾಗಿ ಅವರು ಈ ಮಾತನ್ನು ಹೇಳಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಳ್ಳಬೇಕು” ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೊದಲ ಭೇಟಿ ಮರೆಯಲಾಗಲ್ಲ…
   ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಮೊದಲ ಭೇಟಿಯನ್ನು ಮಾಜಿ ಪ್ರಧಾನಿ ದೇವೇಗೌಡರು ತೆರೆದಿಟ್ಟಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಮೊದಲ ಭೇಟಿಯನ್ನು ಮರೆಯಲಾಗೋದಿಲ್ಲ. ಅದೊಂದು ಅದ್ಭುತ ಕ್ಷಣ. ಚುನಾವಣಾ ಸಂದರ್ಭದಲ್ಲಿ ನಾನು ಮೋದಿ ವಿರುದ್ಧ ಮಾತನಾಡಿದ್ದೆ. ಮೋದಿ ಪ್ರಧಾನಿಯಾದ್ರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ. ಈ ಪ್ರಕಾರವಾಗಿ ನಾನು ರಾಜೀನಾಮೆ ನೀಡಲು ಮೋದಿ ಬಳಿ ಹೋಗಿದ್ದೆ. ಆದರೆ ಪ್ರಧಾನಿ ಮೋದಿಯವರು ನನ್ನನ್ನು ನಡೆಸಿಕೊಂಡ ರೀತಿಯೇ ವಿಶೇಷವಾಗಿತ್ತು. ನಾನು ರಾಜೀನಾಮೆ ನೀಡಬಾರದೆಂದು ಅವರು ಹೇಳಿದ್ದರು. ನೀವು ಹಿರಿಯರಿದ್ದೀರಿ. ನಿಮ್ಮಿಂದ ನಾನು ಕಲಿಯಬೇಕಾದದ್ದು ತುಂಬಾನೆ ಇದೆ. ಪ್ರಧಾನಿಯಾಗಿದ್ದಾಗ ಉತ್ತಮ ಆಡಳಿತವನ್ನು ನೀಡಿದ್ದೀರಿ. ರಾಜೀನಾಮೆ ನೀಡಬೇಡಿ ಎಂದು ನನ್ನನ್ನು ಮನವೊಲಿಸಿದ್ದರು. ಇದನ್ನೆಲ್ಲಾ ಮರೆಯೋಕ್ಕೆ ಸಾಧ್ಯವೇ ಇಲ್ಲ” ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೇಳಿದ್ದಾರೆ.
   “ತಾನು ಮೋದಿ ಭೇಟಿಗೆ ತೆರಳಿದಾಗಲೆಲ್ಲ ಮೋದಿಯವರು ನನ್ನನ್ನು ಸ್ವಾಗತಿಸಲು ಬಾಗಿಲವರೆಗೆ ಬರುತ್ತಿದ್ದರು. ಬಾಗಿಲವರೆಗೆ ಬಂದು ನನ್ನನ್ನು ಸ್ವಾಗತಿಸುತ್ತಿದ್ದರು. ಮಾತುಕತೆ ಮುಗಿದ ನಂತರ ಕಾರಿನವರೆಗೆ ಬೀಳ್ಕೊಟ್ಟು ನನ್ನನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರು. ಇಂತಹಾ ಗೌರವವನ್ನು ನಾನು ಪ್ರಧಾನಿ ಮೋದಿಯವರಿಂದ ಕಂಡಿದ್ದೇನೆ” ಎಂದು ಹೇಳಿದ್ದಾರೆ.
Image result for devegowda with modi
ರಾಹುಲ್ ಮಗು..!
  “ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇನ್ನೂ ಎಳಸು. ಅವರಿಗೆ ರಾಜಕೀಯ ಅನುಭವ ಇಲ್ಲ. ಅವರು ಇನ್ನೂ ಬೆಳೆಯಬೇಕಿದೆ. ಹೋಗ್ತಾ ಹೋಗ್ತಾ ಸರಿ ಹೊಂದುತ್ತಾರೆ. ಅವರಿಗೆ ಸರಿಯಾಗಿ ಆಡಳಿತ ನಡೆಸಲು ಹಾಗೂ ಮಾತನಾಡಲು ಬರೋದಿಲ್ಲ” ಎಂದು ದೇವೇಗೌಡರು ಹೇಳಿದ್ದಾರೆ.
   ಪ್ರಧಾನಿ ಮೋದಿಯವರು ಉಡುಪಿಯ ಚುನಾವಣಾ ಭಾಷಣದಲ್ಲಿ ಮಾಜಿ ಪ್ರಧಾನಿಯನ್ನು ಮುಕ್ತಕಂಠದಿಂದ ಹೊಗಳಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದರು. ಇದಕ್ಕೆಲ್ಲಾ ಇಂದು ಮಾಜಿ ಪ್ರಧಾನಿ ದೇವೇಗೌಡರೇ ಉತ್ತರ ನೀಡಿದ್ದು ಕಾಂಗ್ರೆಸ್ ನಾಯಕರಿಗೆ ಹುಬ್ಬೇರಿಸುವಂತೆ ಆಗಿದ್ದಂತು ಸುಳ್ಳಲ್ಲ.
-ಸುನಿಲ್ ಪಣಪಿಲ
Tags

Related Articles

Close