ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಜ್ವರದ ಮಧ್ಯೆಯೂ ಕರ್ನಾಟದಲ್ಲಿ ಅಬ್ಬರಿಸಿದ ಬಿಜೆಪಿ ಚಾಣಾಕ್ಯ… ಹುತಾತ್ಮ ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಶಾ!!

ಇಂದು ಕರ್ನಾಟದಲ್ಲಿ ಕಾಂಗ್ರೆಸ್ ಗೂಂಡಾಗಿರಿಯದ್ದೇ ಸದ್ದು. ಯಾವ ಸುದ್ಧಿ ವಾಹಿನಿ ನೋಡಿದ್ರೂ ಕಾಂಗ್ರೆಸ್ ಗೂಂಡಾಗಿರಿಯದ್ದೇ ಸದ್ದು. ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಮಗ ನಲಪಾಡ್‍ನ ಗೂಂಡಾಗಿರಿ ಹಾಗೂ ಕಾಂಗ್ರೆಸ್‍ನ ಬ್ಲಾಕ್ ಅಧ್ಯಕ್ಷ ನಾರಾಯಣ ಸ್ವಾಮಿಯ ಗೂಂಡಾಗಿರಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಮಧ್ಯೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಘರ್ಜಿಸಿದ್ದು ಹೆಚ್ಚೇನೂ ಸುದ್ಧಿಯಾಗಲೇ ಇಲ್ಲ.

ಕುಕ್ಕೆಯಲ್ಲಿ ಪೂಜೆ ಸಲ್ಲಿಸಿದ್ದರು ಚಾಣಾಕ್ಯ…

ನಿನ್ನೆ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿದ್ದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಬೆಳಗ್ಗೆ ಸುಬ್ರಹ್ಮಣ್ಯದಲ್ಲಿ ಪೂಜಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಶ್ಲೇಷ ಬಲಿ ಹಾಗೂ ಇನ್ನಿತರ ಪೂಜೆಗಳನ್ನು ನೆರವೇರಿಸಿದ ಅಮಿತ್ ಶಾ ಅಲ್ಲಿ ಸುಬ್ರಹ್ಮಣ್ಯ ಶ್ರೀಗಳನ್ನು ಭೇಟಿಯಾಗಿ ಆಶಿರ್ವಾದವನ್ನು ಪಡೆದಿದ್ದಾರೆ.

ಅಲ್ಲಿಂದ ನೇರವಾಗಿ ಪುತ್ತೂರಿಗೆ ತೆರಳಿದ್ದ ಅಮಿತ್ ಶಾ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳಿಗೆ ನವ ಭಾರತ ನಿರ್ಮಾಣಕ್ಕಾಗಿ ಯುವಕರ ಪಾತ್ರವೇನು ಎಂಬುವುದರ ಬಗ್ಗೆ ವಿವರಣೆ ನೀಡಿದ್ದರು. ಕೆಲ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಮಿತ್ ಶಾ ನಂತರ ಅಲ್ಲಿಂದ ನೇರವಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಕ್ಕೆ ತೆರಳಿದ್ದರು. ಬಂಟ್ವಾಳ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ, ಚುನಾವಣಾ ಚಾಣಾಕ್ಯ ಅಮಿತ್ ಶಾ ಭರ್ಜರಿಯಾಗಿಯೇ ಮಾತನಾಡಿದರು.

ನಲಪಾಡ್ ಗೂಂಡಾಗಿರಿಗೆ ಖಂಡನೆ…

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗ ವಾಗ್ಧಾಳಿ ನಡೆಸಿದ್ದರು. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅನ್ನೋದು ಇಲ್ಲವೇ ಇಲ್ಲ. ದಿನಕ್ಕೊಬ್ಬ ಸಾಮಾನ್ಯ ಜನರ ಮೇಲೆ ಹಲ್ಲೆಯಾಗುತ್ತಿದೆ. ಹಿಂದು ಕಾರ್ಯಕರ್ತರ ಕೊಲೆಗಳು ಆಗುತ್ತಿವೆ. ಆದರೆ ಪೊಲೀಸ್ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿವೆ. ಸರ್ಕಾರದ ಅಪ್ಪಣೆಯಂತೆ ವ್ಯವಹರಿಸುವ ಈ ಪೊಲೀಸ್ ಇಲಾಖೆ ಕಾಂಗ್ರೆಸ್ ಪಕ್ಷ ಹೇಳಿದಂತೆ ಕೇಳುತ್ತಿದೆ. ಇಲ್ಲಿ ಸಾಮಾನ್ಯವಾಗಿ ಜೀವಿಸಲೂ ಕಷ್ಟವಾಗುತ್ತಿದೆ. ಕಾಂಗ್ರೆಸ್ ಶಾಸಕನ ಪುತ್ರನೇ ಓರ್ವ ಅಮಾಯಕನ ಮೇಲೆ ಮಾರಣಾಂತಿಕೆ ಹಲ್ಲೆ ನಡೆಸಿ ಅಮಾನವೀಯತೆಯನ್ನು ಮೆರೆದಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಗೂಂಡಾ ಸರ್ಕಾರಿ ಇಲಾಖೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಇದು ಸರ್ಕಾರದ ಯಾವ ಸಾಧನೆಯನ್ನು ಬಿಂಬಿಸುತ್ತದೆ..?” ಎಂದು ಬಂಟ್ವಾಳದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸುರತ್ಕಲ್‍ನಲ್ಲಿ ಮತ್ತೆ ಅಬ್ಬರಿಸಿದ ಚಾಣಾಕ್ಯ…

ಬಂಟ್ವಾಳದಲ್ಲಿ ಕಾಂಗ್ರೆಸ್ ವಿರುದ್ಧ ಆರ್ಭಟಿಸಿದ್ದ ಬಿಜೆಪಿ ಚಾಣಾಕ್ಯ ಸುರತ್ಕಲ್‍ನಲ್ಲಿ ಮತ್ತೆ ಅಬ್ಬರಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಮುಂದುವರೆಸಿದ್ದಾರೆ. “ಕಾಂಗ್ರೆಸ್ ನಾಯಕರು ಭ್ರಷ್ಟ ರಾಜಕಾರಣವನ್ನು ನಡೆಸುತ್ತಿದ್ದಾರೆ. ಅವರ ಆಡಳಿತಕ್ಕೆ ಜನರು ರೋಸಿ ಹೋಗಿದ್ದರೆ. ಮುಂದಿನ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಸಾಕಾರಗೊಳ್ಳಲಿದೆ. ಈ ಸಾಧನೆಗಾಗಿ ನಾವು ಶಕ್ತಿ ಕೇಂದ್ರದ ಮಟ್ಟದಲ್ಲಿ ಭಾರತೀಯ ಜನತಾ ವಪಕ್ಷದ ಸಮಾವೇಶವನ್ನು ಮಾಡಲಿದ್ದೇವೆ. ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲಿದ್ದೇವೆ” ಎಂದು ಅಮಿತ್ ಶಾ ಸುದ್ಧಿಗೋಷ್ಟಿ ನಡೆಸಿ ಹೇಳಿದ್ದಾರೆ.

ದೀಪಕ್ ರಾವ್ ಮನೆಗೆ ಭೇಟಿ…

ಸುದ್ಧಿ ಗೋಷ್ಟಿಯ ನಂತರ ಮತಾಂಧರಿಂದ ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ನ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ. ನಾವು ನಿಮ್ಮ ಜೊತೆಗೆ ಸದಾ ಇದ್ದೇವೆ ಎಂದು ಧೈರ್ಯ ಹೇಳಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಉಡುಪಿಯ ಮಲ್ಪೆಗೆ ತೆರಳಿದ್ದು ಅಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಶಾ…

ಶಾ ಕರಾವಳಿಗೆ ಆಗಮಿಸುತ್ತಲೇ ತೀವ್ರ ಜ್ವರದಿಂದ ಬಳಲುತ್ತಿದ್ದರು. ಜ್ವರದ ನಡುವೆಯೇ ಪಕ್ಷದ ಇಷ್ಟೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬಿಡುವಿಲ್ಲದ ಸಮಯದಲ್ಲೂ ಇಷ್ಟೊಂದು ಭರ್ಜರಿಯಾಗಿ ಪ್ರವಾಸವನ್ನು ಮಾಡಿದ್ದು ಅಮಿತ್ ಶಾ ಅವರ ಕಾರ್ಯ ದಕ್ಷತೆಗೆ ಕೈಗನ್ನಡಿಯಗಿತ್ತು.

ರಾಜ್ಯದಲ್ಲಿ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರವೂ ಹೆಚ್ಚಾಗುತ್ತಿದೆ. ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಯತ್ತ ಮತ್ತು ಕಾಂಗ್ರೆಸ್ ಗೆ ಪ್ರತಿಷ್ಟೆಯ ವಿಚಾರವಾಗಿದ್ದು ಗೆಲ್ಲಲು ತಂತ್ರ ರೂಪಿಸಿವೆ.
ಈಗಾಗಲೇ ನರೇಂದ್ರ ಮೋದಿಯವರ ಆಡಳಿತಕ್ಕೆ ಮತ್ತು ಬಿಜೆಪಿ ಚಾಣಾಕ್ಯ ಅಮಿತ್ ಷಾ ರವರ ರಾಜಕೀಯ ತಂತ್ರಕ್ಕೆ ನೆಲಕಚ್ಚಿರುವ ಕಾಂಗ್ರೆಸ್ ಗೆ ಮತ್ತೆ ಏಟು ಬಿದ್ದಿದೆ.

ಅಮಿತ್ ಷಾ ರವರ ರಾಜಕೀಯ ತಂತ್ರಕ್ಕೆ ಈಗಾಗಲೇ 19 ರಾಜ್ಯಗಳಲ್ಲಿ ಬಿಜೆಪಿ ಕೇಸರಿ ಪತಾಕೆ ಹಾರಿಸಿದ್ದು, ಷಾ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿ ಯ ಚುನಾವಣಾ ಉಸ್ತುವಾರಿಯನ್ನು ಇದೇ ಷಾ ವಹಿಸಿಕೊಂಡಿದ್ದರು ಎಂಬುದು ವಿಶೇಷ. ಯಾಕೆಂದರೆ ನರೇಂದ್ರ ಮೋದಿಯವರ ಗೆಲುವಿನ ಹಿಂದೆ ಅಮಿತ್ ಷಾ ಎಂಬ ಮಾಸ್ಟರ್ ಮೈಂಡ್ ಕೆಲಸ ನಿರ್ವಹಿಸಿದೆ. ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ಅವರು ಗುಜರಾತ್ ನಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಒಂದೆಡೆಯಾದರೆ ಅಮಿತ್ ಷಾ ರವರ ರಾಜಕೀಯ ತಂತ್ರ ಮತ್ತೊಂದೆಡೆ ಯಶಸ್ವಿಯಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿತ್ತು.

ಈಗಾಗಲೇ 2-3 ಬಾರಿ ಕರ್ನಾಟಕಕ್ಕೆ ಪ್ರಚಾರದ ದೃಷ್ಟಿಯಿಂದ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದೀಗ ಮತ್ತೆ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಲಗ್ಗೆಯಿಟ್ಟಿದ್ದಾರೆ. 33 ದಿನಗಳ ಕಾಲ ಕರಾವಳಿಯಲ್ಲಿ ಬಿಜೆಪಿಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ಅಮಿತ್ ಷಾ ಪದೇ ಪದೇ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಸಿದ್ದರಾಮಯ್ಯನವರ ಕಾಂಗ್ರೆಸ್ ಕಂಗಾಲಾಗಿದೆ. ಒಂದೆಡೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದುಕಾಣುತ್ತಿದ್ದು , ಬಿಜೆಪಿ ರಾಷ್ಟ್ರೀಯ ನಾಯಕರು ಪ್ರಚಾರದ ದೃಷ್ಟಿಯಿಂದ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಕಾಂಗ್ರೆಸ್ ಗೆ ತಲೆನೋವಾಗತೊಡಗಿದೆ.

ಈ ಹಿಂದೆ ಮೈಸೂರಿನ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ಅಮಿತ್ ಷಾ ಆಗಮಿಸುವ ಸುದ್ದಿ ಕೇಳಿ , ಈ ಕಾಂಗ್ರೆಸ್ ಮತ್ತು ಕೆಲ ಸೋಕಾಲ್ಡ್ ಸಂಘಟನೆಗಳು ಸೇರಿ ಕರ್ನಾಟಕ ಬಂದ್ ನಡೆಸಿ ಅಮಿತ್ ಷಾ ರ ಸಮಾವೇಶವನ್ನು ವಿಫಲಗೊಳಿಸಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್ ನ ಯಾವ ತಂತ್ರವೂ ಫಲಿಸಲಿಲ್ಲ. ರಾಜ್ಯಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಬಿಜೆಪಿ ಚಾಣಾಕ್ಯ ಅಮಿತ್ ಷಾ , ಯಶಸ್ವಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!

ಒಟ್ಟಿನಲ್ಲಿ ಅಮಿತ್ ಶಾ ರ ಇಂದಿನ ಪ್ರವಾಸ ಸುದ್ಧಿ ಮಾಧ್ಯಮಗಳಲ್ಲಿ ಅಷ್ಟೊಂದು ಚರ್ಚೆಯಾಗದಿದ್ದರೂ ಕೂಡಾ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮನೆ ಮಾಡಿದೆ. ಮುಂದಿನ ಬಾರಿ ನಾವೇ ಜಯಭೇರಿ ಭಾರಿಸೋದು ಎಂಬ ಉತ್ಸಾಹ ಎದ್ದು ಕಾಣುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close