ಪ್ರಚಲಿತ

ಬಿಗ್ ಬ್ರೇಕಿಂಗ್: ಬೀದಿಯಲ್ಲೇ ಸಚಿವರೆದುರು ಕೈ ಮಿಲಾಯಿಸಿದ ಕಾಂಗ್ರೆಸ್ ಶಾಸಕರು!! ನನ್ನ ಅಪ್ಪ ಅಲ್ಲ ನಿನ್ನ ಅಪ್ಪ ಎಂದವರು ಯಾರು?! ಯಾರಿಗೆ ಟಿಕೆಟ್?!

ಕಾಂಗ್ರೆಸ್ ಪಕ್ಷ ತನ್ನ ಕೊನೆ ಕಾಲವನ್ನು ಅನುಭವಿಸುತ್ತಿರುವಾಗಲೇ ಒಂದೊಂದೇ ಸಮಸ್ಯೆಯನ್ನು ಮೈಮೇಲೆ ಹಾಕಿಕೊಂಡು ಕಿರಿಕ್ ಮಾಡಿಕೊಳ್ಳುತ್ತಲೇ ಇದೆ. ಅತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್‍ನ ಮಗ ಮಹಮ್ಮದ್ ನಲಪಾಡ್ ನ ಗೂಂಡಾಗಿರಿಯ ಸ್ಟೋರಿ ಮುಗಿಯುತ್ತಿದ್ದಂತೆ ಅದೇ ಬೆಂಗಳೂರಿನಲ್ಲಿ ಕೆ.ಆರ್.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಆಪ್ತ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಾರಾಯಣ ಸ್ವಾಮಿಯಿಂದ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ದಾಳಿ ಪುರಾಣ ಆರಂಭವಾಗಿತ್ತು.

ಅತ್ತ ಕೃಷಿ ಸಚಿವ ಕೃಷ್ಣಬೈರೇಗೌಡರ ಗೂಂಡಾಗಳಿಂದ ಅಮಾಯಕರ ಮೇಲಿನ ಹಲ್ಲೆ ಪ್ರಕರಣ ಮುಗಿಯುತ್ತಲೇ ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಗ ಯತೀಂದ್ರ ಹಾಗೂ ಆತನ ಸ್ನೇಹಿತರಿಂದ ಗೂಂಡಾಗಿರಿಯ ಪ್ರಕರಣ ಕೂಡಾ ಬೆಳಕಿಗೆ ಬಂದಿತ್ತು. ಹೀಗೆ ಒಂದಲ್ಲಾ ಒಂದು ಕಾರಣದಿಂದ ಕಾಂಗ್ರೆಸ್ ಸರ್ಕಾರ ಕಳೆದ 2 ವಾರಗಳಿಂದ ಗೂಂಡಾಗಿರಿಯ ಪ್ರಕರಣದಿಂದ ಹೆಸರುವಾಸಿಯಾಗುತ್ತಲೇ ಬರುತ್ತಿದೆ.

ಬೀದಿಬದಿಯಲ್ಲಿಯೇ ಕಿತ್ತಾಡಿಕೊಂಡರು ಕಾಂಗ್ರೆಸ್ ಶಾಸಕರು…

ಕರಾವಳಿಯಲ್ಲಿ ಈಗ ಜಿಲ್ಲೆಯನ್ನು ಆಳುತ್ತಿರುವ ಬಹುತೇಕ ಶಾಸಕರು ಕಾಂಗ್ರೆಸ್ ಶಾಸಕರು. ಅದರಲ್ಲಿ 3 ಜನ ಶಾಸಕರು ಮಂತ್ರಿ ಸ್ಥಾನವನ್ನೂ ಅಲಂಕರಿಸಿದವರು. ಪ್ರಸ್ತುತ ಇಬ್ಬರು ಮಂತ್ರಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಶಾಂತಿ ಅನ್ನೋದು ಇವರ ಕಾಲದಲ್ಲಿ ನೆಲೆಯಾಗಲೇ ಇಲ್ಲ. ಈ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಅವರ ಕ್ಷೇತ್ರದಲ್ಲಿ ಕೊಲೆಗಳಂತಹ ಚಟುವಟಕೆಗಳೇ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಅನ್ನೋದು ಮರೀಚಿಕೆಯಾಗಿತ್ತು. ಆದರೆ ಈ ಶಾಸಕರು ಮಾತ್ರ ತಮ್ಮ ಪಕ್ಷದ ಒಳಜಗಳಗಳಲ್ಲೇ ಮಗ್ನರಾಗಿದ್ದಾರೆ. ಜನಗಳ ಸೇವೆಯನ್ನು ಮರೆತು ಟಿಕೆಟ್‍ಗಾಗಿ ಕಚ್ಚಾಡಿಕೊಂಡಿದ್ದಾರೆ.

ಜೈನ್-ಬಾವಾ ನಡುವೆ ಕಿತ್ತಾಟ…

ಮೂಲ್ಕಿ-ಮೂಡುಬಿದಿರೆ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಹಾಗೂ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ನಡುವಿನ ಕಿತ್ತಾಟಕ್ಕೆ ಇಂದು ಮಂಗಳೂರು ನಗರದ ಹೊರವಲಯ ಸಾಕ್ಷಿಯಾಗಿದೆ. ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ನಾಮಫಲಕದ ತಾರಾಲಯ ಉಧ್ಘಾಟನೆಯ ಮೊದಲು ಮೂಲ್ಕಿ ಮೂಡುಬಿದಿರೆ ಶಾಸಕ ಅಭಯ ಚಂದ್ರ ಜೈನ್ ಹಾಗೂ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ನಡುವೆ ಜಗಳ ಆರಂಭವಾಗಿದೆ. ಟಿಕೆಟ್ ವಿಚಾರವಾಗಿ ಆರಂಭಿಸಿದ ಈ ಜಗಳ ಬೀದಿಯಲ್ಲೇ ತಾರಕಕ್ಕೇರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಈ ಉಭಯ ಕಾಂಗ್ರೆಸ್ ಶಾಸಕರ ಬೀದಿಜಗಳವನ್ನು ವೀಕ್ಷಿಸುತ್ತಲೇ ಬೇಸತ್ತು ಹೋಗಿದ್ದಾರೆ.

ಘಟನೆಯ ವಿವರ…

ಸುಮಾರು ಮಧ್ಯಾಹ್ನದ ವೇಳೆ ಮಂಗಳೂರಿನ ಹೊರವಲಯದ ಪಿಲಿಕುಳದಲ್ಲಿ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಶಾಸಕ ಅಭಯ ಚಂದ್ರ ಜೈನ್, ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ, ಶಾಸಕ ಜೆ.ಆರ್.ಲೋಬೋ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತೀ ಕವಿತಾ ಸನಿಲ್ ಭಾಗವಹಿಸಿದ್ದರು. ಈ ವೇಳೆ ಶಾಸಕ ಅಭಯ ಚಂದ್ರ ಜೈನ್ ಹಾಗೂ ಶಾಸಕ ಮೊಯ್ದೀನ್ ಬಾವಾ ಪರಸ್ಪರ ಮಾತನಾಡುತ್ತಲೇ ಇದ್ದರು. ಈ ವೇಳೆ ಮೊಯ್ದೀನ್ ಬಾವಾ ಟಿಕೆಟ್ ಬಗ್ಗೆ ಮಾತಿಗಿಳಿದರು.

ಮಂಗಳೂರು ಮೇಯರ್ ಕವಿತಾ ಸನಿಲ್ ಬಳಿ ಮಾತನಾಡುತ್ತಿದ್ದ ಶಾಸಕ ಬಾವಾ “ಮೂಡುಬಿದಿರೆ ಬಿಲ್ಲವ ಸಮುದಾಯ ಶಕ್ತಿಯುತವಾದ ಕ್ಷೇತ್ರ. ಅಲ್ಲಿ ನಿಮಗೆ ಅವಕಾಶ ಇದೆ. ಅಲ್ಲಿ ನೀವು ಚುನಾವಣೆಗೆ ಸ್ಪರ್ಧಿಸಿ. ನಿಮ್ಮ ಮೇಯರ್ ಅವಧಿಯೂ ಮುಕ್ತಾಯದ ಹಂತದಲ್ಲಿದೆ ಎಲ್ವೇ” ಎಂದು ಹೇಳಿದ್ದರು. ಶಾಸಕ ಮೊಯ್ದೀನ್ ಬಾವಾರ ಈ ಮಾತನ್ನು ಕೇಳಿ ಕೆಂಡಾಮಂಡಲವಾದ ಶಾಸಕ ಅಭಯಚಂದ್ರ ಜೈನ್ ಮೊಯ್ದೀನ್ ಬಾವಾರನ್ನೂ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಾರೆ. ಕವಿತಾ ಸನಿಲ್ ನಮ್ಮ ಕ್ಷೇತ್ರಕ್ಕೆ ಅದೇಗೆ ಶಾಸಕರಾಗ್ತಾರೆ ಅಂತ ನೋಡೇ ಬಿಡೋಣ ಎಂದು ಅಭಯಚಂದ್ರ ಜೈನ್ ಗರಂ ಆಗಿಯೇ ಹೇಳುತ್ತಾರೆ. ಬೇಕಿದ್ದರೆ ನಿಮ್ಮ ಕ್ಷೇತ್ರಕ್ಕೆ ಕೊಂಡು ಹೋಗಿ ನಿಲ್ಲಿಸಿ. ನನ್ನ ಕ್ಷೇತ್ರದ ವಿಚಾರಕ್ಕೆ ತಲೆ ಹಾಕಬೇಡಿ ಎಂದು ಹೇಳಿದ್ದಾರೆ.

ಅಪ್ಪಂದಿರನ್ನು ಎಳೆದು ತಂದ ಉಭಯ ಶಾಸಕರು…

ಈ ವೇಳೆ ಕಾಂಗ್ರೆಸ್‍ನ ಉಭಯ ಶಾಸಕರು ಅವರ ಅಪ್ಪಂದಿರ ಹೆಸರನ್ನು ಬಳಸಿ ರಾಜಕೀಯ ಮಾಡಲು ಆರಂಭಿಸುತ್ತಾರೆ. ಮಂಗಳೂರು ಮೇಯರ್ ಕವಿತಾ ಸನಿಲ್ ಬಳಿ ಮುಂದಿನ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ದ ಅಭ್ಯರ್ಥಿ ನೀವೇ ಎಂದು ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಮೂಡುಬಿದಿರೆ ಶಾಸಕ ಅಭಯ ಚಂದ್ರ ಜೈನ್ “ಅಭ್ಯರ್ಥಿ ನಿನ್ನ ಅಪ್ಪ” ಎಂದು ನಿಂದಿಸಿದ್ದಾರೆ. ತನ್ನ ಕ್ಷೇತ್ರದ ವಿಚಾರಕ್ಕೆ ಬಂದ ಶಾಸಕ ಬಾವಾರನ್ನು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿ ಏಕವಚನದಲ್ಲಿಯೇ ನಿಂದಿಸಿದ್ದಾರೆ.

ಈ ವೇಳೆ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್‍ರ “ನಿನ್ನ ಅಪ್ಪ” ಎಂಬ ಮಾತಿಗೆ ಸುಮ್ಮನಾಗದ ಶಾಸಕ ಮೊಯ್ದೀನ್ ಬಾವಾ ಅಭಯಚಂದ್ರ ಜೈನ್ ಮಾತಿಗೆ ಕೆಂಡಾಮಂಡಲವಾಗುತ್ತಾರೆ. ಅಭ್ಯರ್ಥಿ ನಿನ್ನ ಅಪ್ಪ ಎಂದು ಹೇಳಿದ್ದ ಶಾಸಕ ಅಭಯಚಂದ್ರ ಜೈನ್‍ಗೆ ಶಾಸಕ ಮೋಯ್ದೀನ್ ಬಾವ “ನನ್ನ ಅಪ್ಪ ಅಲ್ಲ ನಿನ್ನ ಅಪ್ಪ” ಎಂದು ಮತ್ತೆ ಏಕವಚನದಲ್ಲೇ ತಿರುಗೇಟು ನೀಡುತ್ತಾರೆ. ಶಾಸಕ ಅಭಯ ಚಂದ್ರ ಜೈನ್ ಅವರ ಮುನಿಸಿಗೆ ಅಲ್ಲೇ ತಿರುಗೇಟು ನೀಡಿ ತಮ್ಮ ಆಕ್ರೋಷವನ್ನು ಹೊರ ಹಾಕುತ್ತಾರೆ ಮೊಯ್ದೀನ್ ಬಾವಾ.

ಕೈ ಮಿಲಾಯಿಸಿದ ಶಾಸಕರು…

ನಿನ್ನ ಅಪ್ಪ ಎಂಬ ಅಭಯ ಚಂದ್ರ ಜೈನ್ ಹೇಳಿಕೆಗೆ ಗರಂ ಆದಂತಹ ಶಾಸಕ ಮೊಯ್ದೀನ್ ಬಾವಾ ಶಾಸಕ ಅಭಯ ಚಂದ್ರ ಜೈನ್ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಮಾತ್ರವಲ್ಲದೆ ತಾಳ್ಮೆಯ ಕಟ್ಟೆ ಒಡೆದು ಅಭಯ ಚಂದ್ರ ಜೈನ್ ಮೇಲೆ ಕೈ ಎತ್ತಲು ಮುಂದಾಗುತ್ತಾರೆ. ಆದರೆ ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಅವರಿಬ್ಬರನ್ನೂ ಪ್ರತ್ಯೇಕಿಸಿ ಮಹಾ ಅನಾಹುತವೊಂದನ್ನು ತಪ್ಪಿಸಿದ್ದಾರೆ.

ಸಚಿವರ ಎದುರೇ ನಡೆದಿದೆ ಈ ಘಟನೆ..!!!

ವಿಜ್ನಾನ ಹಾಗೂ ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಇಂದು ಮಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ತಾರಾಲಯದ ಉಧ್ಘಾಟನಾ ಕಾರ್ಯಕ್ರಮವನ್ನು ಉಧ್ಘಾಟಿಸಲು ಆಗಮಿಸಿದ್ದರು. ಈ ವೇಳೆಯೇ ಈ ಘಟನೆ ನಡೆದಿದ್ದು, ಸಚಿವರ ಎದುರೇ ಕಾಂಗ್ರೆಸ್ ಶಾಸಕರ ಬೀದಿ ಜಗಳ ಬುಗಿಲೆದ್ದಿದೆ. ಈ ವೇಳೆ ಚಿತ್ರೀಕರಿಸುತ್ತಿದ್ದ ಮಾಧ್ಯಮಗಳ ಬಳಿ ತಿರುಗಿ ಹೇಳಿದ ಸಚಿವ ಸೀತಾರಾಮ್ “ಇದೆಲ್ಲಾ ತಮಾಷೆಗಾಗಿ. ಇದನ್ನೆಲ್ಲಾ ಚಿತ್ರೀಕರಿಸಿ ಗೊಂದಲ ಮಾಡ್ಬೇಡ್ರಪ್ಪ” ಎಂದು ಹೇಳಿದ್ದಾರೆ. ಆದರೆ ಇದನ್ನೆಲ್ಲಾ ಕಂಡಂತಹ ಸಚಿವ ಸೀತಾರಾಮ್ ಮುಖ್ಯಮಂತ್ರಿಯ ಬಳಿಗೆ ತೆರಳಿ ದೂರು ನೀಡುತ್ತಾರೆ ಎಂಬ ಭಯ ಈ ಉಭಯ ಶಾಸಕರನ್ನು ಕಾಡುತ್ತಲೇ ಇದೆ ಎಂದು ಎನ್ನಲಾಗಿದೆ.

ಅಭಯರ ಕಾಳಗ ಇದೇ ಮೊದಲಲ್ಲ…!

ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಮುಂಗೋಪ ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಇಂತಹ ಮುಂಗೋಪದಿಂದ ಶಾಸಕ ಅಭಯ ಚಂದ್ರ ಜೈನ್ ಸಾರ್ವಜನಿಕವಾಗಿಯೇ ಛೀಮಾರಿ ಹಾಕಿಸಿಕೊಂಡಿದ್ದರು. ತಮ್ಮ ಸ್ವಕ್ಷೇತ್ರ ಮೂಡುಬಿದಿರಿಯ ರಸ್ತೆ ನಿರ್ಮಾಣದ ವೇಳೆ ನಡೆದಿದ್ದ ಗಲಾಟೆ, ಮೂಲ್ಕಿಯಲ್ಲಿ ಆಟೋ ಚಾಲಕರ ಮೇಲೆ ನಡೆದಿದ್ದ ಹಲ್ಲೆ, ಮೂಡುಬಿದಿರೆಯ ಪಣಪಿಲ ಎಂಬಲ್ಲಿ ರಸ್ತೆ ಕೇಳಿದ್ದಕ್ಕೆ ಮಹಿಳೆಯನ್ನು ಏಕವಚನದಲ್ಲಿ ನಿಂದಿಸಿ ರಸ್ತೆ ನಿನ್ನ ಅಪ್ಪನದ್ದಾ ಎಂದ ಪ್ರಕರಣ ಹಾಗೂ ಇತ್ತೀಚೆಗೆ ಮುಸ್ಲಿಂ ಮಹಿಳೆಗೆ ತನ್ನ ಕಾರಿನಿಂದ ಗುದ್ದಿ ನಂತರ ಆಕೆಯನ್ನು ನಿಂದಿಸಿದ ಪ್ರಕರಣ ಸಹಿತ ಅದೆಷ್ಟೋ ಮುಂಗೋಪದ ಪ್ರಕರಣಗಳು ಮೂಡುಬಿದಿರೆ ಶಾಸಕ ಅಭಯ ಚಂದ್ರ ಜೈನ್ ಅವರ ಮೇಲಿದೆ.

ತನ್ನ ಕ್ಷೇತ್ರದಲ್ಲಿ ನಯಾ ಪೈಸೆಯ ಕೆಲಸವನ್ನೇ ಮಾಡದಿದ್ದರೂ ಸದಾ ಮುಂಗೋಪವನ್ನೇ ವ್ಯಕ್ತಪಡಿಸಿ ತನ್ನ ಪಕ್ಷದ ಕಾರ್ಯಕರ್ತರನ್ನೂ ಬಿಡದೆ ಈಗಾಗಲೇ ಹಲವಾರು ಕಾರ್ಯಕರ್ತರನ್ನು ಕಳೆದುಕೊಂಡಿದ್ದಾರೆ. ಈ ಹಿಂದೆ ನಡೆದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆ ವಿಚಾರದಲ್ಲೂ ಶಾಸಕ ಅಭಯ ಚಂದ್ರ ಜೈನ್ ಆರೋಪಿಗಳಿಗೆ ಭಾರೀ ಸಹಕಾರ ನೀಡಿದ್ದು ಆ ಭಾಗದ ಜನತೆಗೆ ಇನ್ನೂ ಅವರ ಮೇಲಿರುವ ಸಿಟ್ಟು ಮಾಸಿಲ್ಲ. ಈಗ ತಾನು ಸೋಲುತ್ತೇನೆ ಎಂಬ ವಿಚಾರ ಸ್ಪಷ್ಟವಾಗುತ್ತಲೇ ತನ್ನ ಶಿಷ್ಯ ಮಿಥುನ್ ರೈಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ. ಆದರೆ ಐವನ್ ಡಿಸೋಜಾ ಸಹಿತ ಟಿಕೆಟ್ ಆಕಾಂಕ್ಷಿಗಳು ಈಗ ನಾಯಿಕೊಡೆಯಂತೆ ಸೃಷ್ಟಿಯಾಗುತ್ತಿರುವುದು ಈ ಶಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಟ್ಟಾರೆ ಈ ಇಬ್ಬರೂ ಶಾಸಕರ ವೈಮನಸ್ಸು ಇಂದು ಬೀದಿ ನಡುವೆಯೇ ಸ್ಪೋಟವಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾವ ರೀತಿ ಅಧಿಕಾರವನ್ನು ನಡೆಸುತ್ತಿದೆ ಎಂಬುವುದನ್ನು ಕಾಣಬಹುದಾಗಿದೆ. ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಹಾಗೂ ಸುರತ್ಕಲ್‍ನಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಬರ್ಬರ ಹತ್ಯೆಗೆ ಕಾರಣವಾಗಿದ್ದ ಈ ಉಭಯ ಶಾಸಕರು ಇಂದು ಬೀದಿಯಲ್ಲಿ ನಿಂತು ಜಗಳವಾಡುತ್ತಿರುವುದು ಅವರು ಮಾಡಿಕೊಂಡಿರುವ ಪಾಪ ಹಾಗೂ ದುರಹಂಕಾರದ ಪರಮಾವಧಿಯನ್ನು ಬಿಂಬಿಸುತ್ತದೆ. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನಾಶವಾಗಲು ಸೂಚನೆ ಎಂದೇ ಬಣ್ಣಿಸಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close