ಪ್ರಚಲಿತ

ಬ್ರೇಕಿಂಗ್! ಕರಾವಳಿಯಲ್ಲಿ ಮುನ್ನುಗ್ಗಿದ ಕಮಲ ಪಡೆ..! ಕಾಂಗ್ರೆಸ್ ಕೋಟೆ ಧ್ವಂಸ ಮಾಡಿದ ಕೇಸರಿ ಸುನಾಮಿ..!

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಬೆಳಿಗ್ಗೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. ಈಗಾಗಲೇ ಸುಮಾರು ೫ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, ರಾಜ್ಯದ ಜನತೆ ಭಾರೀ ಕುತೂಹಲದಿಂದ ಕಾಯುವಂತಾಗಿದೆ. ಕರ್ನಾಟಕದ ಕರಾವಳಿ ಭಾಗವಾದ ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದು ಕೇಸರಿ ಪತಾಕೆ ಹಾರಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ.

ಪ್ರಥಮ ಬಾರಿಗೆ ವಿಜಯ ಪತಾಕೆ ಹಾರಿಸಿದ ಕೋಟ್ಯಾನ್..!

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ಭದ್ರಕೋಟೆ ಆದ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಅಧಿಕಾರಕ್ಕೆ ಬಂದ ಉದಾಹರಣೆಯೇ ಇಲ್ಲ. ಆದರೆ ಈ ಬಾರಿ ನರೇಂದ್ರ ಮೋದಿಯವರ ಹವಾ ಜೋರಾಗಿಯೇ ಇದ್ದಿದ್ದರಿಂದ ಕಾರ್ಯಕರ್ತರ ಹುಮ್ಮಸ್ಸು ನೂರ್ಮಡಿಯಾಗಿತ್ತು. ಅದರಂತೆಯೇ ಹಗಲು ರಾತ್ರಿ ಎನ್ನದೇ ಕ್ಯಾಂಪೇನ್ ನಡೆಸುತ್ತಿದ್ದ ಕಾರ್ಯಕರ್ತರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಯಾಕೆಂದರೆ ಸುಮಾರು ೨೪,೦೦೦ ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಮೂಡಬಿದಿರೆಯ ಇತಿಹಾಸದಲ್ಲೇ ಮೊದಲ ಬಿಜೆಪಿ ಶಾಸಕರಾಗಿ ಹೊರಹೊಮ್ಮಿದ್ದಾರೆ..!

ಹಿಂದೂ ಕಾರ್ಯಕರ್ತರ ಶ್ರಮದ ಪ್ರತಿಫಲವಾಗಿಯೇ ಮೂಡಬಿದ್ರೆಯಲ್ಲಿ ಈ ಮಟ್ಟಿಗೆ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದೆ ಎಂದರೆ ತಪ್ಪಾಗದು. ಯಾಕೆಂದರೆ ಇಡೀ ಹಿಂದೂ ಸಮೂಹವೇ ಅಹಂಕಾರಿ ಶಾಸಕ ಅಭಯಚಂದ್ರ ಜೈನ್ ಅವರ ಆಡಳಿತಕ್ಕೆ ಬೇಸತ್ತು ಈ ಬಾರಿ ಮೂಡುಬಿದಿರೆಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ.

ಕರಾವಳಿಯಲ್ಲಿ ಕೇಸರಿ ದರ್ಬಾರ್..!

ಕರಾವಳಿ ಯಾವತ್ತಿಗೂ ಹಿಂದೂಗಳ ಭದ್ರಕೋಟೆಯೇ. ಯಾಕೆಂದರೆ ಹಿಂದೂ ಸಂಘಟನೆಗಳ ಯಾವುದೇ ಕಾರ್ಯಕ್ರಮ ಇದ್ದರೂ ಅದು ಮಂಗಳೂರಿನಲ್ಲಿಯೇ ನಿರ್ಧಾರವಾಗುತ್ತದೆ. ಅದೇ ರೀತಿ ಈ ಬಾರಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ೮ ಕ್ಷೇತ್ರಗಳಲ್ಲಿ ೭ ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಯಾಕೆಂದರೆ ೭ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಆಡಳಿತವಿತ್ತು, ಆದರೆ ಇದೀಗ ಎಲ್ಲವನ್ನೂ ತನ್ನ ಬತ್ತಳಿಕೆಗೆ ಸೇರಿಸಿಕೊಂಡ ಬಿಜೆಪಿ ಕೇಸರಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ.

ಯಶಸ್ವಿಯಾದ ಮೋದಿ ರ್ಯಾಲಿ..!

ಸಮೀಕ್ಷೆಗಳ ಪ್ರಕಾರ ಯಾವುದೇ ಪಕ್ಷ ಬಹುಮತ ಸಾಧಿಸಲು ಸಾಧ್ಯವಿಲ್ಲ ಎಂಬುದಾಗಿತ್ತು. ಆದರೆ ಸಮೀಕ್ಷೆಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಲೆಂದೇ ರಾಜ್ಯಕ್ಕೆ ಎಂಟ್ರಿ ಕೊಟ್ಟ ಮೋದಿ ಇಡೀ ರಾಜ್ಯದಲ್ಲೇ ಹೊಸ ಸಂಚಲನ ಮೂಡಿಸಿದ್ದರು. ಸತತ ೨೧ ಸಮಾವೇಶಗಳನ್ನು ನಡೆಸಿದ ಮೋದಿ ಬಿಜೆಪಿಯ ಗೆಲುವಿಗೆ ಮೆಟ್ಟಿಲು ಏರಿಸಿ ಕೊಟ್ಟಿದ್ದರು. ಅದರಂತೆಯೇ ಇದೀಗ ಹೊರಬಿದ್ದ ಫಲಿತಾಂಶದ ಮೇಲೆ ಇನ್ನು ಕರಾವಳಿಯಲ್ಲಿ ಹಿಂದೂಗಳದ್ದೇ ದರ್ಬಾರ್..!

ಹಿಂದೂ ಸಂಘಟನೆಗಳ, ಮತ್ತು ಬಿಜೆಪಿ ಕಾರ್ಯಕರ್ತರ ಸತತ ಪರಿಶ್ರಮದಿಂದ ಈ ಗೆಲುವು ಕಂಡುಕೊಳ್ಳಲು ಸಾಧ್ಯವಾಯಿತು. ಅದರಂತೆಯೇ ಉಡುಪಿಯಲ್ಲೂ ಭರ್ಜರಿ ಯಶಸ್ಸು ಕಂಡ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ..!

–ಪಿ.ಆರ್.ಶೆಟ್ಟಿ

Tags

Related Articles

Close