ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ನ ಗೂಂಡನನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದ ನ್ಯಾಯಾಧೀಶರು!! ಬೀಳಬಹುದೇ ಅಟ್ಟಹಾಸಕ್ಕೆ ಬ್ರೇಕ್..!?

ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಎನ್.ಎ. ಹ್ಯಾರಿಸ್ ಎಂಬವರ ಪುತ್ರ ಮಹಮ್ಮದ್ ನಲಪಾಡ್ ಅಮಾಯಕ ಯುವಕನೊಬ್ಬನ ಮೇಲೆ ಮಾರಣಾಂತಿಕ‌ ಹಲ್ಲೆ ಮಾಡಿದ್ದು , ಮತ್ತೆ ಕಾಂಗ್ರೆಸ್ ನ ಕರಾಳ ಮುಖ ಬಯಲಾಗಿದೆ.

ಶನಿವಾರ ರಾತ್ರಿ ಯುಬಿ ಸಿಟಿಯಲ್ಲಿ ಇರುವ ರೆಸ್ಟೋರೆಂಟ್ ಒಂದರಲ್ಲಿ‌ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಮಹಮ್ಮದ್ ನಲಪಾಡ್ ಮತ್ತು ಆತನ‌ ಸಂಗಡಿಗರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.  ಹಲ್ಲೆಗೊಳಗಾದ ವಿದ್ವತ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ವತ್ ಒಬ್ಬ ವಿದ್ಯಾರ್ಥಿಯಾಗಿದ್ದು ತಂದೆಯ ಅಧಿಕಾರದ ಅಹಂಕಾರದಿಂದ ಶಾಸಕ ಹ್ಯಾರಿಸ್ ರವರ ಮಗ ಮಹಮ್ಮದ್ ನಲಪಾಡ್ ವಿದ್ವತ್ ನ ಜೊತೆಗಿದ್ದ ಸಾತ್ವಿಕ್ ಎಂಬ ಯುವಕನ ಮೇಲೂ ಹಲ್ಲೆ ನಡೆಸಿದ್ದಾರೆ. ಹ್ಯಾರಿಸ್ ಕಾಂಗ್ರೆಸ್ ಶಾಸಕರಾಗಿದ್ದು ಅವರ ಇನ್ನೊಬ್ಬ ಮಗ ಉಮರ್ ಕೂಡಾ ರೌಡಿಸಂ‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಈಗಾಗಲೇ ಹಲವಾರು ಆರೋಪಗಳು ಕೇಳಿಬಂದದೆ. ಉಮರ್ ತನ್ನ ಗೆಳೆಯರ ಜೊತೆ ಸೇರಿಕೊಂಡು ಪಬ್ ನಲ್ಲಿ ಗಲಾಟೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಯಲ್ಲಿ ಕೇಸ್ ಕೂಡಾ ದಾಖಲಾಗಿತ್ತು.

ಶನಿವಾರ ಈ ಘಟನೆ ನಡೆದಿದ್ದು ಕೂಡಲೆ ಹಲ್ಲೆಗೊಳಗಾದ ಯುವಕ ದೂರು ನೀಡಿದ್ದರು. ಆದರೆ ಶಾಸಕನಾಗಿರುವ ಹ್ಯಾರಿಸ್ ತನ್ನ ಅಧಿಕಾರವನ್ನು ಬಳಸಿ ಪೋಲೀಸರು ತನ್ನ ಮಗನನ್ನು ಬಂಧಿಸದಂತೆ ತಡೆದಿದ್ದರು. ತನ್ನ ಮಗ ಎಲ್ಲಿದ್ದಾನೆ ಎಂಬೂದು ನನಗೂ ಮಾಹಿತಿ ಇಲ್ಲ. ಆತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ ಎಂದು ಪೋಲೀಸರ ಬಳಿ ಹೇಳಿಕೊಂಡಿದ್ದರು.

ಶನಿವಾರ ಮತ್ತು ಭಾನುವಾರ ಕೋರ್ಟ್ ನಲ್ಲಿ ಕೇಸ್ ನಡೆಯುವುದಿಲ್ಲ ಎಂದು ಅರಿತ ಹ್ಯಾರಿಸ್ ಈ ರೀತಿ ನಾಟಕವಾಡಿದ್ದರು. ಆದರೆ ಇಂದು ಸ್ವತಃ ಮಗನೇ ಶರಣಾಗುತ್ತಾನೆ ಎಂದು ಹೇಳಿಕೆ ನೀಡಿದ್ದ ಹ್ಯಾರಿಸ್ ತನ್ನ ಮಗನನ್ನು ಮನೆಯಲ್ಲಿಯೇ ಬಚ್ಚಿಟ್ಟಿರುವ ಸತ್ಯಾಂಶ ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದೆ.

ವಿದ್ವತ್ ಮತ್ತು ಸಾತ್ವಿಕ್ ಮೇಲೆ ಹಲ್ಲೆ ನಡೆಸಿದ ಮಹಮ್ಮದ್ ನಲಪಾಡ್ ಸದ್ಯ ನಾಪತ್ತೆಯಾಗಿದ್ದು ,ಶಾಸಕ ಹ್ಯಾರಿಸ್ ಹಲ್ಲೆಗೊಳಗಾದ ಯುವಕನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದಾರೆ. ಮಗ ಮಾಡಿದ ತಪ್ಪಿಗೆ ಹ್ಯಾರಿಸ್ ಕ್ಷಮೆ ಯಾಚಿಸಿದ್ದು , ಮಹಮ್ಮದ್ ನಲಪಾಡ್ ನ ಬಂಧನಕ್ಕಾಗಿ ಪೋಲೀಸರು ಬಲೆ ಬೀಸಿದ್ದರು.

ಹಲ್ಲೆ ನಡೆಸಿದ ಮಹಮ್ಮದ್ ದ ಬೆಂಬಲಕ್ಕೆ ನಿಂತ ಹ್ಯಾರಿಸ್ ನ ನೆಂಬಲಿಗರೊಬ್ಬರು ವಿದ್ವತ್ ನ ವಿರುದ್ದ ಪ್ರತಿ ದೂರು ನೀಡಿದ್ದರು. ಶಾಸಕರ ಬೆಂಬಲಿಗರಾದ ಕಾರಣದಿಂದ ಏನು ಬೇಕಾದರೂ ಮಾಡಬಹುದು ಎಂದು ಅರಿತು ಹಲ್ಲರಗೊಳಗಾದವನ ಮೇಲೆಯೇ ಪ್ರತಿ ದೂರು ನೀಡಿದ್ದರು.

ತಲೆಮರೆಸಿಕೊಂಡಿದ್ದ ನಲಪಾಡ್ ನ ಬಂಧನದ ನಾಟಕವಾಡುತ್ತಿದ್ದ ಪೋಲೀಸರು ಕೂಡ ಶಾಸಕರ ಅಡಿಯಾಳಾಗಿ ಇದ್ದರೆಯೇ ? ಎಂಬ ಮಾತೂ ಕೇಳಿಬಂದಿತ್ತು. ಹಲ್ಲೆ ನಡೆಸಿ ತನ್ನ ಮನೆಯಲ್ಲಿಯೇ ಇದ್ದರೂ ಶಾಸಕ ಹ್ಯಾರಿಸ್ ಮಾತ್ರ ತನ್ನ ಮಗ ಎಲ್ಲಿದ್ದಾನೆ ಎಂಬ ಮಾಹಿತಿಯೂ ನನಗೆ ಇಲ್ಲ ಎಂದು ಸುಳ್ಳು ಹೇಳಿ ನಾಟಕವಾಡಿದ್ದರು.
ಆದರೆ ಎಲ್ಲೆಡೆಯಿಂದ ಪುಡಾರಿ ನಲಪಾಡ್ ನ ಬಂಧನಕ್ಕೆ ಒತ್ತಡ ಹೆಚ್ಚಿದಾಗ ಸ್ವತಃ ಪೋಲೀಸರ ಮುಂದೆ ಶರಣಾಗುವ ನಾಟಕವಾಡಿದ್ದಾರೆ.

ಮನೆಯಿಂದ ಹೊರ ಬರುತ್ತಲೇ ಮಹಮ್ಮದ್ ನಲಪಾಡ್ ನನ್ನು ಬಂಧಿಸಿದ ಪೋಲೀಸರು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದರು. ವಿಚಾರಣೆಯ ವೇಳೆ ಪೋಲೀಸರ ಪ್ರಶ್ನೆಗಳಿಗೆ ಉಡಾಫೆಯ ಉತ್ತರವನ್ನೇ ನೀಡುತ್ತಿದ್ದ ನಲಪಾಡ್ ತನ್ನ ತಂದೆ ಕಾಂಗ್ರೆಸ್ ಶಾಸಕ ಎಂಬ ಅಹಂನಿಂದಲೇ ವರ್ತಿಸುತ್ತಿದ್ದ. ವಿಚಾರಣೆ ಮುಗಿಸಿ ಕೋರ್ಟ್ ಗೆ ಹಾಜರಿಪಡಿಸಿದ ಪೋಲೀಸರು, ಹೆಚ್ಚಿನ ವಿಚಾರಣೆಗೆ ೮ ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಸಿಸಿಬಿ ಪೋಲೀಸರು ಕೋರಿದ್ದರು. ಆದರೆ ಪ್ರಕರಣವನ್ನು ಗಮನಿಸಿದ ನ್ಯಾಯಾಧೀಶರು ನಲಪಾಡ್ ನನ್ನು ೨ ದಿನಗಳ ಕಾಲ ಸಿಸಿಬಿ ಪೋಲೀಸರ ಕಸ್ಟಡಿಗೆ ನೀಡಬೇಕೆಂದು ತೀರ್ಪು ನೀಡಿದ್ದಾರೆ. ನಲಪಾಡ್ ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿದ್ದು , ಸಾಬೀತಾದರೆ ಏಳರಿಂದ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.

ಅನಾಚರಗಳನ್ನು ಮಾಡುತ್ತಾ ಅಧಿಕಾರದ ಬಲದಿಂದ ಜನಸಾಮಾನ್ಯರನ್ನು ಶಾಂತಿಯಿಂದ ಬದುಕಲು ಬಿಡುತ್ತಿಲ್ಲ ಈ ಕಾಂಗ್ರೆಸ್. ತಾವು ಸಮಾಜವಾದಿಗಳು ಎಂದು ರಾಜ್ಯದ ಜನತೆಯನ್ನು ನಂಬಿಸಿ ಅಧಿಕಾರ ಹಿಡಿದವರು, ಇಂದು ಅದೇ ಜನತೆಯ ಮೇಲೆ ದಬ್ಬಾಳಿಕೆ ನಡೆಸಿ , ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ.

ಅರ್ಜುನ್

Tags

Related Articles

Close