ಪ್ರಚಲಿತ

ಬಿಗ್ ಬ್ರೇಕಿಂಗ್: ಪೋಲಿಸ್ ಠಾಣೆಯಲ್ಲಿ ರಾಜ ಮರ್ಯಾದೆ ಪಡೆಯುತ್ತಿರುವ ಕಾಂಗ್ರೆಸ್ ಗೂಂಡಾ..!! ಆತ ಉಪಯೋಗಿಸುತ್ತಿರುವ ಮೊಬೈಲ್ ಯಾವುದು ಗೊತ್ತಾ?!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬೂದಕ್ಕೆ ಸಿದ್ದರಾಮಯ್ಯನವರ ಆಡಳಿತ ವೈಫಲ್ಯವೇ ಸಾಕ್ಷಿ. ಯಾಕೆಂದರೆ ದಿನೇ ದಿನೇ ಈ ಕಾಂಗ್ರೆಸ್ ನ ಅಟ್ಟಹಾಸ ಮಿತಿಮೀರುತ್ತಿದ್ದು , ಕಡಿವಾಣ ಹಾಕಬೇಕಿದ್ದ ಸರಕಾರವೇ ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರ ಗೂಂಡಾ ಮಗ ಮಹಮ್ಮದ್ ನಲಪಾಡ್ ರೆಸ್ಟೋರೆಂಟ್ ಒಂದರಲ್ಲಿ ಅಮಾಯಕ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡರಸಿದ್ದಲ್ಲದೆ, ತಲೆಮರೆಸಿಕೊಂಡಿದ್ದ.

ಆದರೆ ಹಲ್ಲೆಗೊಳಗಾದ ವಿದ್ವತ್ ಎಂಬ ಯುವಕ ಈ ಬಗ್ಗೆ ದೂರು ನೀಡಿದ್ದರು. ಕೊಲೆಯತ್ನ ಕೇಸ್ ದಾಖಲಿಸಿಕೊಂಡಿದ್ದ ಪೋಲೀಸರು ಮಹಮ್ಮದ್ ನಲಪಾಡ್ ನ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ತನ್ನ ಮಗನನ್ನು ಮನೆಯಲ್ಲಿಯೇ ಇರಿಸಿಕೊಂಡ ಶಾಸಕ ಹ್ಯಾರಿಸ್ ನಲಪಾಡ್ , ಪೋಲೀಸರ ಕಣ್ಣಿಗೆ ಮಣ್ಣೆರಚುತ್ತಲೇ ಬಂದಿದ್ದರು.
ಘಟನೆ ನಡೆದು ಎರಡು ದಿನಗಳ ನಂತರ ಪೋಲೀಸರ ಮುಂದೆ ಸ್ವತಃ ಶರಣಾಗುವ ನಾಟಕವಾಡಿದ ಮಹಮ್ಮದ್ ನಲಪಾಡ್ ಗೆ ಇದೀಗ ಸಂಕಷ್ಟ ಎದುರಾಗಿದೆ.

ಯಾಕೆಂದರೆ ನಲಪಾಡ್ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಗುರುತಿಸಿಕೊಂಡವನು. ಡ್ರಗ್ಸ್ , ಪಿಸ್ತೂಲು ಹೊಂದಿರುವ ವಿಚಾರದಲ್ಲಿ ಮತ್ತು ಸಿಕ್ಕ ಸಿಕ್ಕಲ್ಲಿ ಗಲಾಟೆ ಮಾಡಿಕೊಂಡು ಅನೇಕ ವಿಚಾರಗಳಲ್ಲಿ ನೋಟೆಡ್ ಆಗಿದ್ದನು.ಆದರೆ ಇದೀಗ ಪೋಲಿಸ್ ಕಸ್ಟಡಿಯಲ್ಲಿರುವ ಆರೋಪಿ ನಲಪಾಡ್ ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಬಯಲಾಗಿದೆ.

ರಾಜ್ಯದಲ್ಲಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ , ಯಾವುದೇ ರೀತಿಯ ಸರಿಯಾದ ತನಿಖೆ ನಡೆಸಲು ಬಿಡುತ್ತಿಲ್ಲ‌ . ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋದ ಪೋಲೀಸರ ಮುಂದೆಯೇ ಮಹಮ್ಮದ್ ನಲಪಾಡ್ ಕಾಲ ಮೇಲೆ ಕಾಲು ಹಾಕಿ ದರ್ಪ ತೋರಿಸಿದ್ದ. ಇಷ್ಷೇ ಅಲ್ಲದೇ ಸಾಮಾನ್ಯವಾಗಿ ಸೆಲ್ ನಲ್ಲಿ ವಿಚಾರಣೆಗೈಯ ಬೇಕಾಗಿದ್ದ ಪೋಲೀಸರು ಇನ್ಸ್‌ಪೆಕ್ಟರ್ ಚೇಂಬರ್ ನಲ್ಲಿ ನಲಪಾಡ್ ನನ್ನು ಕೂರಿಸಿ ರಾಜ ಮರ್ಯಾದೆ ನೀಡಿ ನಾಟಕೀಯವಾಗಿ ವಿಚಾರಣೆ ನಡೆಸಿದ್ದರು. ನಂತರದಲ್ಲಿ ಕೋರ್ಟ್ ಗೆ ಹಾಜರು ಪಡಿಸಿ , ನಲಪಾಡ್ ನನ್ನು ಸಿಸಿಬಿ ಪೋಲೀಸರ ಕಸ್ಟಡಿಗೆ ನೀಡಲಾಗಿತ್ತು.

ಇಂದು ಬೆಳಿಗ್ಗೆ ವಿಚಾರಣೆ ಆರಂಭಿಸಿದ ಸಿಸಿಬಿ ಪೋಲೀಸರು ನಲಪಾಡ್ ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈ ವೇಳೆಯಲ್ಲೂ ಉಡಾಫೆಯಿಂದ ವರ್ತಿಸುತ್ತಿದ್ದ ನಲಪಾಡ್ ಪೋಲೀಸರ ಯಾವುದೇ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸದೆ , ಕೇವಲ ತಾನು ವಿದ್ವತ್ ನ ಮೇಲೆ ಹಲ್ಲೆ ನಡೆಸಿರುವುದು ನಿಜ ಎಂದು ತಪ್ಪು ಒಪ್ಪಿಕೊಂಡಿದ್ದಾನೆ.

ಆದರೆ ಇಂದು ವಿಚಾರಣೆ ಮಾಡುವ ವೇಳೆಯೇ ಕಬ್ಬನ್ ಪಾರ್ಕ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಿರೀಶ್ ನಲಪಾಡ್ ಗೆ ಮೊಬೈಲ್ ನೀಡಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ನಲಪಾಡ್ ತನ್ನ ತಂದೆಯ ಅಧಿಕಾರ ಬಲದಿಂದ ಈ ರೀತಿ ವರ್ತಿಸುತ್ತಿರುವುದು , ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರವನ್ನು ಯಾವ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬೂದು ತಿಳಿಯುತ್ತದೆ.

ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಶಾಸಕ ಹ್ಯಾರಿಸ್ ನಲಪಾಡ್ ರವರ ಕೃಪಾಕಟಾಕ್ಷದಿಂದಲೇ ಪೋಸ್ಟಿಂಗ್ ಆಗಿದ್ದರು. ಆದ್ದರಿಂದಲೇ ಋಣ ತೀರಿಸಿಕೊಂಡು ಬರುತ್ತಿರುವ ಗಿರೀಶ್, ಈ ಹಿಂದೆಯೂ ಶಾಸಕ ಹ್ಯಾರಿಸ್ ನ ಗೂಂಡಾ ಮಗ ಮಹಮ್ಮದ್ ನಲಪಾಡ್ ನ ರೌಡಿಸಂ ಬಗ್ಗೆ ನಿರ್ಲಕ್ಷ ವಹಿಸುತ್ತಲೇ ಬಂದಿದ್ದರು. ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಬಂದಿದ್ದ ನಲಪಾಡ್ ಗೆ ವಿಶೇಷ ಸೌಕರ್ಯಗಳನ್ನು ನೀಡಿದ್ದ ಗಿರೀಶ್ , ರಾತ್ರಿಯಿಡೀ ನಲಪಾಡ್ ಗೆ ತನ್ನ ಗೆಳೆಯರ ಜೊತೆ ಮಾತನಾಡಿಕೊಂಡು ಕಾಲಹರಣ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಅದೂ ಅಲ್ಲದೇ ಆರೋಪಿಯ ಕೈಗೆ ೧೧೦೦ ಮೊಬೈಲ್ ನೀಡಿದ ಪಿ ಎಸ್ ಐ ಗಿರೀಶ್ ತಮ್ಮ ಕರ್ತವ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.

ಅತ್ತ ಶಾಸಕ ಹ್ಯಾರಿಸ್ ತನ್ನ ಮಗ ತಪ್ಪು ಮಾಡಿರುವುದು ನಿಜ, ಆ ವಿಚಾರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ನಾಟಕವಾಡಿ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದರೆ, ಒಂದು ಕಡೆಯಿಂದ ತನ್ನ ತಪ್ಪಿತಸ್ಥ ಮಗನಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು ಪೋಲೀಸರನ್ನು ಬಳಸುತ್ತಿದ್ದಾರೆ..!

ಹಲ್ಲೆಗೊಳಗಾದ ವಿದ್ವತ್ , ನಲಪಾಡ್ ವಿರುದ್ಧ ದೂರು ನೀಡಿದರೆ, ಇತ್ತ ಪಿ ಎಸ್ ಐ ಗಿರೀಶ್ ಅಮಾಯಕ ವಿದ್ವತ್ ಮೇಲೆಯೇ ನೋಟೀಸ್ ಜಾರಿಗೊಳಿಸಿದ್ದಾರೆ. ಶಾಸಕರ ಗುಲಾಮರಂತೆ ವರ್ತಿಸುತ್ತಿರುವ ಗಿರೀಶ್, ನಲಪಾಡ್ ನನ್ನು ರಾಜಮರ್ಯಾದೆ ನೀಡಿ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ..!

ಅಧಿಕಾರವನ್ನು ಬಳಸಿಕೊಂಡು ಕಾನೂನನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ನಿಂದ ರಾಜ್ಯದ ಜನತೆಯನ್ನು ಕಾಪಾಡುವುದು ಕನಸಿನ ಮಾತೇ ಸರಿ.‌ ಯಾಕೆಂದರೆ ತಮ್ಮದೇ ಸರಕಾರ ಇದೆ ಎಂಬ ದರ್ಪದಿಂದ ವರ್ತಿಸುತ್ತಿರುವ ಕಾಂಗ್ರೆಸ್ ನಾಯಕರು ಅಮಾಯಕರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿ , ತಮ್ಮ ಅಧಿಕಾರವನ್ನು ಬಳಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ..!

–ಅರ್ಜುನ್

 

Tags

Related Articles

Close