ಪ್ರಚಲಿತ

ಬ್ರೇಕಿಂಗ್! ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮುಖಂಡರ ಬಿಗ್ ಫೈಟ್.! ಸಚಿವ ಸ್ಥಾನಕ್ಕಾಗಿ ಜಿದ್ದಾಜಿದ್ದಿಗೆ ಬಿದ್ದ ರಾಜ್ಯ ನಾಯಕರು.!

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯ ನಂತರದಲ್ಲಿ ಮಾಡಿಕೊಂಡ ಅಪವಿತ್ರ ಮೈತ್ರಿ ಸರಕಾರ ನಡೆಸಲು ಅನುಕೂಲವಾಗುತ್ತಿಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ನಂತರದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗುತ್ತಿದ್ದು, ರಾಜ್ಯದಲ್ಲಿ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬೂದೇ ತಿಳಿಯದಂತಾಗಿದೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಯ ವೇಳೆ ಭಾರೀ ಗದ್ದಲ ಉಂಟು ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇದೀಗ ಮತ್ತೆ ಉಳಿದಿರುವ ಕೆಲ ಅಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಒಂದೆಡೆ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರನ್ನು ಒಟ್ಟುಗೂಡಿಸಿ ತಮ್ಮ ತಂತ್ರ ರೂಪಿಸಲು ತಯಾರಿ ನಡೆಸುತ್ತಿದ್ದರೆ, ಇತ್ತ ಮತ್ತೊಂದೆಡೆ ಕೆಲ ಕಾಂಗ್ರೆಸ್ ಮುಖಂಡರು ನೇರವಾಗಿ ಹೈಕಮಾಂಡ್ ಜೊತೆ ಸಂಪರ್ಕ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಲು ತಯಾರಿ ನಡೆಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.!

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಿರುವ ಜೆಡಿಎಸ್ ನಿಂದ ಹೊರ ಬಂದು ಕಾಂಗ್ರೆಸ್ ಸೇರಿಕೊಂಡು ಇದೀಗ ಮತ್ತೆ ಕುಮಾರಸ್ವಾಮಿ ಅವರ ಬೆನ್ನ ಹಿಂದೆ ಬಿದ್ದಿರುವ ಸಚಿವ ಜಮೀರ್ ಅಹ್ಮದ್ , ತಮ್ಮದೇ ಪಕ್ಷದ ಇನ್ನೋರ್ವ ಮುಸ್ಲಿಂ ಮುಖಂಡನಾದ ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಜಮೀರ್ ಅಹ್ಮದ್‌ಗೆ ಈಗಾಗಲೇ ರಾಜ್ಯ ಸರಕಾರದಲ್ಲಿ ಸಚಿವ ಸ್ಥಾನ ಬಂದೊದಗಿದೆ, ಆದರೆ ರೋಷನ್ ಬೇಗ್ ಅವರು ಉಳಿದ ಕೆಲ ಸ್ಥಾನಗಳಲ್ಲಿ ಒಂದಕ್ಕೆ ಪ್ರಯತ್ನಿಸುತ್ತಿದ್ದು, ಇದೀಗ ಜಮೀರ್ ಅಹ್ಮದ್ ಅದಕ್ಕೆ ಕಲ್ಲು ಹಾಕುವ ಪ್ರಯತ್ನಕ್ಕೆ ಇಳಿದಿದ್ದಾರೆ.!

 

ಆಪ್ತನಿಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಜಮೀರ್ ಪ್ಲಾನ್..!

ಜಮೀರ್ ಅಹ್ಮದ್ ಬಣ್ಣ ಬದಲಾಯಿಸುವ ಊಸರವಳ್ಳಿ ಎಂದರೆ ತಪ್ಪಾಗದು. ಯಾಕೆಂದರೆ ಜೆಡಿಎಸ್‌ನಿಂದ ಹೊರ ಬಂದ ಸಂದರ್ಭದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದೇ ನಡೆಸಿದ್ದು. ಆದರೆ ಇದೀಗ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡ ನಂತರ ಚಡ್ಡಿದೋಸ್ತ್‌ಗಳಂತೆ ಮತ್ತೆ ಒಂದಾಗಿದ್ದಾರೆ. ಆದರೆ ತಮ್ಮ ಹಳೇ ಬುದ್ದಿ ಬದಲಾಯಿಸದ ಜಮೀರ್, ತನ್ನ ಆಪ್ತನಾಗಿರುವ ಬೀದರ್ ಶಾಸಕ ರಹೀಂ ಖಾನ್ ಅವರನ್ನು ಸಚಿವನನ್ನಾಗಿ ಮಾಡಲು ಲಾಭಿ ನಡೆಸುತ್ತಿದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಿಗಲಿರುವ ಸಚಿವ ಸ್ಥಾನವನ್ನು ತಪ್ಪಿಸಿ , ತನ್ನ ಆಪ್ತನಿಗೆ ಸಿಗುವಂತೆ ಮಾಡುವ ಪ್ರಯತ್ನ ಜಮೀರ್ ಅಹ್ಮದ್ ಮಾಡುತ್ತಿದ್ದಾರೆ‌. ಈ ಬಗ್ಗೆ ಈಗಾಗಲೇ ಕಾಂಗ್ರೆಸ್‌ನಲ್ಲೇ ಅಸಮಧಾನ ಉಂಟಾಗಿದ್ದು, ಜಮೀರ್ ವರ್ತನೆಗೆ ಮೈತ್ರಿ ಸರಕಾರ ತಲೆಕೆಡಿಸಿಕೊಂಡಿದೆ.!

ಜಮೀರ್ ಅಹ್ಮದ್ ಈಗಾಗಲೇ ಆಹಾರ ಇಲಾಖೆಯ ಸಮಾವೇಶದ ನೆಪ ಇಟ್ಟುಕೊಂಡು ದೆಹಲಿಗೆ ತೆರಳಿದ್ದು, ರಾಜ್ಯ ನಾಯಕರಿಗೆ ತಿಳಿಯದಂತೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳು ಬಹಿರಂಗಪಡಿಸಿದ್ದವು. ಕಾಂಗ್ರೆಸ್‌ ಹೈಕಮಾಂಡ್‌ನ ಮುಸ್ಲಿಂ ನಾಯಕರೊಂದಿಗೆ ಜಮೀರ್ ಮಾತುಕತೆ ನಡೆಸಿ, ತಮ್ಮ ಆಪ್ತ ಶಾಸಕ ರಹೀಂ ಖಾನ್‌ಗೆ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದಾರೆ.!

ಆದರೆ ಇತ್ತ ರೋಷನ್ ಬೇಗ್ ಕೂಡ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ಜಮೀರ್ ಅಹ್ಮದ್ ಮತ್ತು ರೋಷನ್ ಬೇಗ್ ಅವರಲ್ಲಿ ಯಾರ ಕಡೆಗೆ ಹೈಕಮಾಂಡ್ ಮುಖ ಮಾಡುತ್ತದೆ ಎಂಬುದು ಕಾದು ನೋಡಬೇಕು. ಯಾಕೆಂದರೆ ಇನ್ನೂ ಕೆಲ ಸಚಿವ ಸ್ಥಾನಗಳನ್ನು ಕಾಂಗ್ರೆಸ್ ತನ್ನಲ್ಲೇ ಇಟ್ಟುಕೊಂಡಿದ್ದು, ಯಾರಿಗೆ ಈ ಸ್ಥಾನ ಒಲಿಯುತ್ತದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ..!

–ಅರ್ಜುನ್

Tags

Related Articles

Close