ಪ್ರಚಲಿತ

ಸಿಎಂಗೆ ಕಿಚ್ಚ ಶಾಕ್! ಸಿದ್ದರಾಮಯ್ಯ ಪರ ಪ್ರಚಾರ ಮಾಡೋದಿಲ್ಲ ಎಂದ ಸುದೀಪ್..! ಪ್ರತಿಭಟನೆಗೆ ಬೆಚ್ಚಿ ಬಿದ್ದರಾ ಕಿಚ್ಚ..?

ರಾಜಕೀಯ ಅಂದ್ರೆ ಈ ಸಿನಿಮಾ ನಟೆರಿಗೆ ಇನ್ನೂ ಏನೂಂತ ಅರ್ಥವಾಗಿಲ್ಲ ಅಂತ ಕಾಣ್ಸುತ್ತೆ. ಸಿನಿಮಾ ಪ್ರಚಾರವನ್ನು ಮಾಡಿದ ಹಾಗೆ ರಾಜಕೀಯ ಪ್ರಚಾರವೂ ಸಲೀಸು ಎಂದು ಎನಿಸಿಕೊಂಡಿದ್ದಾರೆ ಈ ಸಿನಿಮಾ ನಾಯಕರು. ಆದರೆ ಚುನಾವಣಾ ಅಖಾಡಕ್ಕೆ ಇಳಿಯುವಾಗಲೇ ಗೊತ್ತಾಗೋದು ರಾಜಕೀಯವೇ ಬೇರೆ ಸಿನಿಮಾವೇ ಬೇರೆ ಎಂದು. ಅಂತೆಯೇ ಕನ್ನಡ ಚಲನ ಚಿತ್ರ ನಟ ಕಿಚ್ಚ ಸುದೀಪ್ ಗೂ ಇದೀಗ ಇದು ಅರ್ಥವಾಗಿದೆ.

ಸಿಎಂ ಪರ ಪ್ರಚಾರಕ್ಕೆ ನಿಂತಿದ್ದ ಸುದೀಪ್..!

ಕನ್ನಡ ಚಲನ ಚಿತ್ರ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಲು ಮುಂದಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಸೋಲಿನ ಭೀತಿಯಲ್ಲಿದ್ದಾರೆ ಅನ್ನೋದು ನಗ್ನ ಸತ್ಯ. ಯಾಕೆಂದರೆ ತಾನು ಈ ಮೊದಲೇ ಆಯ್ಕೆ ಮಾಡಿಕೊಂಡಿದ್ದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಪಷ್ಟ ಸಂದೇಶ ಸಿಕ್ಕ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸೋಲಿನ ಭಯದಿಂದ ಅದ್ಯಾವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರವನ್ನು ಆಯ್ಕೆಮಾಡಿಕೊಂಡರೋ ಅಂದಿನಿಂದ ಬಾದಾಮಿ ಕ್ಷೇತ್ರ ಹೈವೋಲ್ಟೇಜ್ ಚುನಾವಣಾ ಕ್ಷೇತ್ರವಾಗಿ ಬದಲಾಯಿಸಿಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಕೂಡಲೇ ಭಾರತೀಯ ಜನತಾ ಪಕ್ಷ ಮತ್ತೊಂದು ಸಖತ್ ಪ್ಲಾನ್ ಒಂದನ್ನು ಮಾಡಿಕೊಂಡಿತ್ತು. ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಬಳ್ಳಾರಿ ಸಂಸದ ಶ್ರೀ ರಾಮುಲು ಅವರನ್ನು ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಸಿತು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಖತ್ ಟಾಂಗ್ ಕೊಡಲು ಭಾರತೀಯ ಜನತಾ ಪಕ್ಷ ಮುಂದಾಗಿತ್ತು.

Image result for sudeep

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಮರ್ಯಾದೆಯ ಪ್ರಶ್ನೆಯಾಗಿರುವ ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಶತಾಯ ಗತಾಯ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದು ನಾನಾ ತಂತ್ರಗಳ ಮೊರೆ ಹೋಗಿದ್ದಾರೆ. ಈ ಕಾರಣಕ್ಕಾಗಿಯೇ ನಟ ಸುಧೀಪ್ ರನ್ನು ಹಾಗೂ ಇತರೆ ನಟರನ್ನು ಚುನಾವಣಾ ರಂಗಕ್ಕೆ ಇಳಿಸಿತ್ತು. ಆರಂಭದಲ್ಲಿ ಕೇವಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರಚಾರ ಎಂದು ಆಮಂತ್ರಿಸಿ ನಂತರ ಅಲ್ಲಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಬಗ್ಗೆಯೂ ಪ್ರಸ್ತಾಪಿಸಲಾಯಿತು ಆದರೆ ಸುದೀಪ್ ಪ್ರಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕಣದಿಂದ ಹಿಂದೆ ಸರಿದಿದ್ದಾರೆ.

“ನಾನು ಬಾದಾಮಿಯಲ್ಲಿ ಪ್ರಚಾರಕ್ಕೆ ತೆರಳುತ್ತೇನೆ. ಆದರೆ ನನ್ನ ಪ್ರಚಾರ ಮುಖ್ಯಮಂತ್ರಿಗಳ ಪರವಾಗಿಯೇ ಹೊರತು ಶ್ರೀ ರಾಮುಲು ಅವರ ವಿರುದ್ಧ ಅಲ್ಲ. ಶ್ರೀ ರಾಮುಲು ಕೂಡಾ ನನ್ನ ಸ್ನೇಹಿತರು” ಎಂದು ಹೇಳಿದ್ದರು. ಮಾತ್ರವಲ್ಲದೆ ಕಿಚ್ಚ ಸುದೀಪ್ ವಿರುದ್ಧ ಜನರು ಬೀದಿಗಿಳಿದು ಪ್ರಚಾರ ಮಾಡಿದ್ದರು. ಸುದೀಪ್ ಓರ್ವ ವಾಲ್ಮೀಕಿ ಜನಾಂಗದ ನಾಯಕ, ಶ್ರೀ ರಾಮುಲು ಕೂಡಾ ವಾಲ್ಮೀಕಿ ಜನಾಂಗದ ನಾಯಕ. ಹೀಗಾಗಿ ಶ್ರೀ ರಾಮುಲು ವಿರುದ್ಧ ಪ್ರಚಾರ ನಡೆಸುವುದು ಎಷ್ಟು ಸರಿ ಎಂದು ಬಾದಾಮಿ ಕ್ಷೇತ್ರದ ಜನತೆಯೇ ಸುದೀಪ್ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು.

ಇದರಿಂದ ಗಲಿಬಿಲಿಗೊಂಡ ಕಿಚ್ಚ ಸುದೀಪ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಯಾವುದೇ ಕಾರಣಕ್ಕೂ ತಾನು ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡೋದಿಲ್ಲ. ನಾನು ಬಾದಾಮಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಮಾತ್ರವೇ ಹೇಳಿದ್ದೆ. ನಾನು ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಚಾರ ಮಾಡೋದಿಲ್ಲ ಎಂದು ಹೇಳಿದ್ದಾರೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಭಾರೀ ಹಿನ್ನೆಡೆಯಾಗಿದೆ. ಪ್ರಬಲ ವಾಲ್ಮೀಕಿ ಸಮುದಾಯದ ನಾಯಕರಾದ ಶ್ರೀ ರಾಮುಲು ಅವರನ್ನು ಮಣಿಸಲು ಅವರದ್ದೇ ಸಮುದಾಯದ ಸುದೀಪ್ ಅವರನ್ನು ಪ್ರಚಾರಕ್ಕಿಳಿಸಲು ತಂತ್ರ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸುದೀಪ್ ನಿರ್ಧಾರ ಭಾರೀ ಮುಖಭಂಗ ಅನುಭವಿಸುವಂತಾಗಿದೆ.

ಚುನಾವಣೆಯಲ್ಲಿ ಸಿನಿಮಾ ನಟರನ್ನು ಕರೆತಂದು ಗೆಲ್ಲಿಸುವ ತಂತ್ರಗಳನ್ನು ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಪ್ಲಾನ್ ಇದೀಗ ಉಲ್ಟಾ ಆಗಿದ್ದು, ಮುಖಭಂಗದೊಂದಿಗೆ ಹಿನ್ನೆಡೆಯೂ ಅನುಭವಿಸುವಂತಾಗಿದೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋಲಿಸಲೇ ಬೇಕು ಎಂಬ ಹಠದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ದಾರಿ ಇನ್ನಷ್ಟು ಸುಲಭವಾಗಲಿದೆ.

-ಸುನಿಲ್ ಪಣಪಿಲ

Tags

Related Articles

Close