ಪ್ರಚಲಿತ

ರಾಷ್ಟ್ರೀಯ ಕಾಂಗ್ರೆಸ್ ಗೆ ಬಿಗ್ ಶಾಕ್.! ಮೋದಿ ಮಾಡಿದ ಆರೋಪವನ್ನು ಸತ್ಯವೆಂದ ಕಾಂಗ್ರೆಸ್ ನಾಯಕನ ಟ್ವಿಟ್..! ಕಾಂಗ್ರೆಸ್ ನಲ್ಲಿ ತೀವ್ರ ತಳಮಳ!!

ಕಾಂಗ್ರೆಸ್ ಗೆ ಅದೇನೋ ಗ್ರಹಚಾರ ಹಿಡಿದಂತಿದೆ. ಆಡಳಿತ ಅವಧಿಯಲ್ಲಿ ಮಾಡಿದ ಎಲ್ಲಾ ಮೋಸಗಳು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹೊರಬೀಳುತ್ತಿದೆ. ಅಧಿಕಾರದ ಅಹಂಕಾರದಿಂದ ಏನು ಬೇಕಾದರೂ ಮಾಡಬಹುದು ಎಂಬ ಆಲೋಚನೆಯಲ್ಲಿದ್ದ ಕಾಂಗ್ರೆಸ್ ನಾಯಕರ ನಿಜ ಬಣ್ಣ ಇದೀಗ ಸ್ವತಃ ಕಾಂಗ್ರೆಸ್ ನಾಯಕರಿಂದಲೇ ಬಯಲಾಗುತ್ತಿದೆ. ಕಾಂಗ್ರೆಸ್ ನ ದುರಾಡಳಿತಕ್ಕೆ ನೊಂದ ಹಿರಿಯ ನಾಯಕರೇ ಇದೀಗ ಕಾಂಗ್ರೆಸ್ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಬಾರಿಯೂ ತನ್ನದೇ ಸರಕಾರ ರಚನೆ ಮಾಡಲು ಹರಸಾಹಸ ಪಡುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕರೇ ಚುನಾವಣೆಯ ಅಂಚಿನಲ್ಲಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕಾಂಗ್ರೆಸ್ ವಿರುದ್ಧ ಮೊಯ್ಲಿ ಬಾಂಬ್..!

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರದ ಸಚಿವರಾಗಿದ್ದ ವೀರಪ್ಪ ಮೊಯ್ಲಿ , ಇದೀಗ ಕಾಂಗ್ರೆಸ್ ವಿರುದ್ಧ ಟ್ವಿಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಚುನಾವಣಾ ಟಿಕೆಟ್ ಪಡೆಯಬೇಕಾದರೆ ಕೋಟಿ ಕೋಟಿ ಹಣವನ್ನು ವ್ಯಯಿಸಬೇಕು. ಇಂತಹ ವ್ಯವಸ್ಥೆ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಕಾಂಗ್ರೆಸ್ ನಲ್ಲಿ ಕಂಟ್ರಾಕ್ಟರ್ ಗಳ ಅಟ್ಟಹಾಸವೇ ಹೆಚ್ಚಾಗಿದೆ. ಪಕ್ಷದ ಹಿರಿಯ ನಾಯಕರಿಗೆ ಯಾವ ಮರ್ಯಾದೆಯೂ ಸಿಗಯತ್ತಿಲ್ಲ ಎಲ್ಲಾ ಕಾಂಟ್ಯಾಕ್ಟರ್ ಗಳ ಕೈಯಲ್ಲೇ ಇದೆ ಎಂದು ಗಂಭಿರ ಆರೋಪ ಮಾಡಿದ್ದಾರೆ.!

ಸಿದ್ದರಾಮಯ್ಯನವರದ್ದು ಬಿಲ್ಡಿಂಗ್ ಕಂಟ್ರಾಕ್ಟರ್ ಸರ್ಕಾರ..!

ಇತ್ತೀಚೆಗೆ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಿಜೆಪಿಯ ಸಮಾವೇಶದಲ್ಲಿ ಮಾತನಾಡುತ್ತಾ , ಕರ್ನಾಟಕದಲ್ಲಿ ಇರುವುದು ಜನಪರ ಸರಕಾರವಲ್ಲ, ಅದು ೧೦% ಸರಕಾರ ಎಂದು ವಾಗ್ದಾಳಿ ನಡೆಸಿದ್ದರು‌. ಕೇಂದ್ರ ನೀಡಿದ ಹಣವನ್ನು ಸರಿಯಾಗಿ ಉಪಯೋಗಿಸದೆ ತನ್ನ ಪಕ್ಷದ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿರುವ ರಾಜ್ಯ ಸರ್ಕಾರ , ಪರ್ಸಂಟೇಜ್ ಸರಕಾರ ಎಂದು ಆರೋಪ ನಡೆಸಿದ್ದರು.

ಆದರೆ ಸಿದ್ದರಾಮಯ್ಯನವರು ಮಾತ್ರ ಈ ಬಗ್ಗೆ ಒಪ್ಪಿಕೊಳ್ಳದೆ , ಇದಕ್ಕೆ ಏನಾದರೂ ಸಾಕ್ಷಿ ಇದೆಯೇ ಎಂದು ಪ್ರತಿಯಾಗಿ ಕೇಳಿದ್ದರು. ಆದರೆ ಇದೀಗ ಸ್ವತಃ ತಮ್ಮ ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸಿದ್ದರಾಮಯ್ಯನವರ ಸರಕಾರ ಬಿಲ್ಡಿಂಗ್ ಕಂಟ್ರಾಕ್ಟರ್ ಸರಕಾರ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿದವರಿಗಿಂತ , ಲೋಕೋಪಯೋಗಿ ಸಚಿವರು ಮತ್ತು ಕಂಟ್ರಾಕ್ಟರ್ ಗಳ ಪ್ರಾಬಲ್ಯವೇ ಹೆಚ್ಚುತ್ತಿದೆ ಎಂದು ಟ್ವಿಟ್ ಮಾಡಿದ ವೀರಪ್ಪ ಮೊಯ್ಲಿ ,ರಾಜ್ಯ ಸರಕಾರದ ಲೋಕೋಪಯೋಗಿ ಸಚಿವರ ಮತ್ತು ಕಂಟ್ರಾಕ್ಟರ್ ಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಹಣದ ಪ್ರಭಾವ ಹೆಚ್ಚು..!

ಈ ಹಿಂದೆಯೇ ಕಾಂಗ್ರೆಸ್ ವಿರುದ್ಧ ಈ ಆರೋಪ ಕೇಳಿ ಬಂದಿತ್ತಾದರೂ ಇದರ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಸ್ವತಃ ಕಾಂಗ್ರೆಸ್ ಹಿರಿಯ ನಾಯಕನೇ ತಮ್ಮ ಪಕ್ಷದ ವಿರುದ್ಧ ಆರೋಪ ಮಾಡಿದ್ದು , ಕಾಂಗ್ರೆಸ್ ರಾಜಕಾರಣದಲ್ಲಿ ಹಣದ ಪ್ರಭಾವವೇ ಹೆಚ್ಚಿದೆ , ಇದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರವೂ ವಿಫಲವಾಗಿದೆ ಎಂದು ಗಂಭಿರ ಆರೋಪ ಮಾಡಿದ್ದಾರೆ.!

ಸಿದ್ದರಾಮಯ್ಯ ಸರಕಾರ ತನ್ನ ಸುತ್ತಮುತ್ತ ಭ್ರಷ್ಟ ಅಧಿಕಾರಿಗಳನ್ನೇ ಇಟ್ಟುಕೊಂಡು ಹಗರಣ ನಡೆಸುತ್ತಿದ್ದು, ಇದೀಗ ಈ ಆರೋಪಕ್ಕೆ ಮತ್ತೊಂದು ಉದಾಹರಣೆ ದೊರಕಿದೆ. ರಾಜ್ಯ ಸರಕಾರ ಪರ್ಸಂಟೇಜ್ ಸರಕಾರ ಎಂಬೂದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ? ಎಂಬೂದೇ ರಾಜ್ಯದ ಜನರಲ್ಲಿ ಮೂಡುತ್ತಿರುವ ಪ್ರಶ್ನೆ.

ಅಪ್ಪ-ಮಗನಿಂದ ಕಾಂಗ್ರೆಸ್ ವಿರುದ್ಧ ಟ್ವಿಟ್..!

ವೀರಪ್ಪ ಮೊಯ್ಲಿ ಅವರ ಮಗ ಹರ್ಷ ಮೊಯ್ಲಿ , ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಎಲ್ಲಾ ತಯಾರಿ ನಡೆಸಿದ್ದಾರೆ. ಆದರೆ ಸದ್ಯ ಟಿಕೆಟ್ ಗಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡ , ಕಂಟ್ರಾಕ್ಟರ್ ಒಬ್ಬರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇದನ್ನೇ ಕಾರಣವಾಗಿಟ್ಟುಕೊಂಡು ಮೊಯ್ಲಿ ಮತ್ತು ಅವರ ಮಗ ಈ ವಿಚಾರವಾಗಿ ಟ್ವಿಟ್ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬ ಅನುಮಾನವೂ ಹೆಚ್ಚಾಗಿದೆ. ಇಬ್ಬರೂ ಏಕಕಾಲಕ್ಕೆ ಟ್ವಿಟ್ ಮಾಡಿದ್ದು , ಕಾಂಗ್ರೆಸ್ ಗೆ ಭಾರೀ ತಲೆನೋವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗೆ ಒಂದಲ್ಲಾ ಒಂದು ಕಂಟಕ ಎದುರಾಗುತ್ತಿದ್ದು , ಇದೀಗ ಮೊಯ್ಲಿ ನಡೆಸಿದ ಟ್ವಿಟ್ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುವ ಮುನ್ಸೂಚನೆ ದೊರಕಿದೆ.

ರಾಹುಲ್ ಗಾಂಧಿ ಗೆ ಟ್ಯಾಗ್..!

ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ ಅಸಮಧಾನ ಹೊರಹಾಕಿದ ವೀರಪ್ಪ ಮೊಯ್ಲಿ ಮತ್ತು ಮಗ ಹರ್ಷ ಮೊಯ್ಲಿ ತಾವು ಮಾಡಿರುವ ಟ್ವಿಟ್ ನ್ನು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ನ ಒಳಗೊಳಗೆ ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದು , ಚುನಾವಣೆಯಲ್ಲಿ ಈ ವಿಚಾರ ಭಾರೀ ತಲೆದಂಡವಾಗಿ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದಾರೆ.  ಸಿಎಂ ಸಿದ್ದರಾಮಯ್ಯನವರ ಆಪ್ತ , ಲೋಕೋಪಯೋಗಿ ಸಚಿವ ಡಾ‌.ಎಚ್‌.ಸಿ ಮಹಾದೇವಪ್ಪ ನವರ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ ಮೊಯ್ಲಿ , ರಾಜ್ಯ ಸರಕಾರದ ಆಡಳಿತಕ್ಕೆ ಛೀಮಾರಿ ಹಾಕಿದ್ದಾರೆ.

ಈಗಾಗಲೇ ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬಿಜೆಪಿ ಅಥವಾ ಬೇರೆ ಪಕ್ಷಗಳ ಕಡೆ ಒಲವು ತೋರಿಸಿದ್ದು, ಬಹಿರಂಗವಾಗಿಯೇ ಕಾಂಗ್ರೆಸ್ ಬಿಟ್ಟು ಬೇತೆ ಪಕ್ಷ ಸೇರ್ಪಡೆಯಾಗಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ನಾಯಕನೇ ಈ ರೀತಿ ತಮ್ಮ ಅಸಮಧಾನ ಹೊರಹಾಕಿದ್ದು , ಕಾಂಗ್ರೆಸ್ ಗೆ ಸೋಲಿನ ಭೀತಿ ಮತ್ತಷ್ಟು ಹೆಚ್ಚಾಗಿದೆ.!

–ಅರ್ಜುನ್ ಭಾರದ್ವಾಜ್

 

Tags

Related Articles

Close