ಪ್ರಚಲಿತ

ಎಲೆಕ್ಷನ್ ಬ್ರೇಕಿಂಗ್ : ಸಿಎಂ ಸಿದ್ದರಾಮಯ್ಯಗೆ ಭಾರೀ ಮುಖಭಂಗ..! ಬಹುಮತದತ್ತ ಬಿಜೆಪಿಗೆ ಮುನ್ನಡೆ…

ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಳಿವು ಉಳಿವಿನ ಚುನಾವಣೆ ಅನ್ನೋದು ಹೊಸ ವಿಚಾರವೇನಲ್ಲ. ಕಳೆದ 5 ವರ್ಷಗಳಿಂದ ಕರ್ನಾಟಕ ಸರ್ಕಾರವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡು ಮಾಡಿದ ಅನ್ಯಾಯ ಅವಾಂತರ ಅಷ್ಟಿಷ್ಟಲ್ಲ. ಆದರೆ ಆ ಎಲ್ಲಾ ಪಾಪಗಳನ್ನು ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. 

ಚಾಮುಂಡೇಶ್ವರಿಯ ಕೃಪೆ ಸಿಗೆದೆ ಪರದಾಟ…!

ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರವನ್ನು ಆಯ್ದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಭಾರೀ ಅವಮಾನ ಆಗುವತ್ತ ಸಾಗುತ್ತಿದ್ದಾರೆ. ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಜನತಾ ದಳದ ಜಿಟಿ ದೇವೇಗೌಡ ಭಾರೀ ಮುನ್ನಡೆ ಸಾಧಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಮುಖಭಂಗ ಅನುಭವಿಸುವತ್ತ ಸಾಗುತ್ತಿದ್ದಾರೆ. ತಾನು ಸೋಲುತ್ತೇನೆ ಎಂಬ ಭೀತಿಯಿಂದ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಿಂದ ಪಲಾಯನ ಮಾಡಿದ್ದರು. ಅದೇಗೋ ಕಷ್ಟ ಪಟ್ಟು ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಸೀಟು ಧಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Related image

ಆದರೆ ಇದೀಗ ಎರಡೂ ವಿಧಾನ ಸಭಾ ಕ್ಷೇತ್ರದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಿನ್ನೆಯಾಗುತ್ತಿದೆ. ಚಾಮಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಬರೋಬ್ಬರಿ 12000 ಮತಗಳ ಅಂತರದಲ್ಲಿ ಸಿಎಂ ಸಿದ್ದರಾಮಯ್ಯ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಬಾದಾಮಿಯಲ್ಲಿ ಕೇವಲ 295 ಮತಗಳ ಮುನ್ನಡೆ ಸಾಧಿಸುತ್ತಿದ್ದಾರೆ. ಆದರೆ ಇದು ಯಾವ ಹಂತದಲ್ಲೂ ಹಿನ್ನೆಡೆಯಾಗುವ ಸಾಧ್ಯತೆ ಇದೆ.

ಶತಕ ಬಾರಿಸಿದ ಬಿಜೆಪಿ…

ಈಗಾಗಲೇ ಭಾರತೀಯ ಜನತ ಪಕ್ಷ ಬಹುಮತ ಸಾಧಿಸುವತ್ತ ಮುನ್ನಡೆ ಸಾಧಿಸುತ್ತಿದೆ. ಶತಕ ಬಾರಿಸಿ ಇನ್ನೇನು ಬಹುಮತವನ್ನು ತಲುಪುವತ್ತ ಸಾಗುತ್ತಿದೆ. ಈವರೆಗಿನ ಎಲ್ಲಾ ಫಲಿತಾಂಶಗಳನ್ನು ನೋಡಿದರೆ ಈ ಬಾರಿ ಬಿಜೆಪಿ ಎಂಬ ಸ್ಲೋಗನ್ ಕನಸು ನನಸಾಗುವತ್ತ ಸಾಗುತ್ತಿದೆ.

ಒಟ್ಟಾರೆ ಈ ಬಾರಿಯು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಾರೀ ಮುಖಭಂಗವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಕಾಂಗ್ರೆಸ್ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಈಗಾಗಲೇ ಕರಾವಳಿಯಲ್ಲಿ ಭಾರತೀಯ ಜನತಾ ಪಕ್ಷ ಖಾತೆ ತೆರೆದಿದ್ದು ಮೂಡುಬಿದಿರೆಯ ಉಮನಾಥ್ ಕೋಟ್ಯಾನ್ ಭರ್ಜರಿ ಜಯವನ್ನು ದಾಖಲಿಸಿದ್ದಾರೆ. ಈ ಮೂಲಕ ಬಿಜೆಪಿಯ ಮೊದಲ ಖಾತೆಯನ್ನು ಮೂಡುಬಿದಿರೆಯಲ್ಲಿ ಆರಂಭಿಸಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಅವರನ್ನು ಬರೋಬ್ಬರಿ 22 ಸಾವಿರ ಮತಗಳ ಅಂತರದಿಂದ ಉಮನಾಥ್ ಕೋಟ್ಯಾನ್ ಸೋಲಿಸಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close