ಪ್ರಚಲಿತ

ಶಾಕಿಂಗ್! ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಬಿಗ್ ಶಾಕ್.! ನಡೆಯಲಿಲ್ಲ ಕಾಂಗ್ರೆಸ್ ಕಲಿಗಳ ಗೇಮ್ ಪ್ಲಾನ್.!

ವಿಧಾನಸಭಾ ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡಾಗಲೇ ಕಾಂಗ್ರೆಸ್‌ನ ಹಲವಾರು ನಾಯಕರು ಅಸಮಧಾನ ಹೊರಹಾಕಿದ್ದರು. ಯಾವ ಕ್ಷಣದಲ್ಲಿಯೂ ಮೈತ್ರಿ ಸರಕಾರ ಕಳಚಿ ಬೀಳಬಹುದು ಎಂಬ ಅಭಿಪ್ರಾಯ ಹಲವರಲ್ಲಿ ವ್ಯಕ್ತವಾಗಿತ್ತು. ಆದರೆ ಇದೀಗ ಭಿನ್ನಾಭಿಪ್ರಾಯದ ಕಟ್ಟೆ ಒಡೆದಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಅವರ ನಡುವಿನ ವಾರ್ ಭಾರೀ ಜೋರಾಗಿದೆ.

ಅಧಿಕಾರ ಸ್ವೀಕರಿಸುವ ವೇಳೆ ನಾನು ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ಕಾಂಗ್ರೆಸ್ ನಾಯಕರಿಗೆ ಉಲ್ಟಾ ಹೊಡೆದಿದ್ದಾರೆ.‌ ಯಾಕೆಂದರೆ ಬಜೆಟ್ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವೆ ದಿನದಿಂದ ದಿನಕ್ಕೆ ವಾಗ್ವಾದ ಹೆಚ್ಚಾಗುತ್ತಲೇ ಇದ್ದು, ಎರಡು ಪಕ್ಷಗಳ ಇಬ್ಬರು ಕಲಿಗಳ ನಡುವಿನ ವೈಮನಸ್ಸು ಇದೀಗ ಮೈತ್ರಿ ಸರಕಾರಕ್ಕೆ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ.‌ ಯಾಕೆಂದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಇನ್ನೂ ಬೆಂಬಲ ನೀಡುವ ನಾಯಕರಿದ್ದಾರೆ ಎಂದು ಇದೀಗ ಬಹಿರಂಗವಾಗುತ್ತಲೇ ಇದೆ ಮತ್ತು ಕುಮಾರಸ್ವಾಮಿ ಅವರ ವಿರುದ್ಧ ಸಿದ್ದರಾಮಯ್ಯನವರು ನಡೆಸುತ್ತಿರುವ ಗೇಮ್ ಪ್ಲಾನ್ ಕೂಡ ಈಗಾಗಲೇ ಅರಿವಾಗಿದೆ.‌ಆದ್ದರಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಮಾತಿಗೆ ಕ್ಯಾರೇ ಅನ್ನದೆ ತಮ್ಮ ನಿರ್ಧಾರ ಸ್ಪಷ್ಟಪಡಿಸಿದ್ದಾರೆ.!

ನಾನು ಯಾರ ಮುಲಾಜಿನಲ್ಲೂ ಇಲ್ಲ, ನನ್ನ ನಿರ್ಧಾರವೇ ಅಂತಿಮ..!

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ನಂತರ ನಾನು ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ, ರಾಜ್ಯದ ಜನರ ಮುಲಾಜಿನಲ್ಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಅಧಿಕಾರದ ಆಸೆಗಾಗಿ ಈ ರೀತಿ ಹೇಳಿಕೊಂಡಿದ್ದರು ಎಂದು ಇದೀಗ ಸ್ಪಷ್ಟವಾಗಿದೆ. ಯಾಕೆಂದರೆ ಹೊಸ ಸರಕಾರದ ಬಜೆಟ್ ಮಂಡನೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಡಗಾಲು ಹಾಕುತ್ತಿದ್ದು, ಹಿಂದಿನ ಸರಕಾರದ ಬಜೆಟ್‌ನ್ನೇ ಮುಂದುವರಿಸಿ ಎಂದು ಸಲಹೆ ನೀಡಿ, ಹೊಸ ಸರಕಾರ ಬಂದ ಕೂಡಲೇ ಬಜೆಟ್ ಮಂಡನೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದರು.‌ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಕಾರಣವಾಗಿತ್ತು. ಇದೀಗ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ಸಿಎಂ ಕುಮಾರಸ್ವಾಮಿ , ನಾನು ಯಾರ ಮುಲಾಜಿನಲ್ಲೂ ಇಲ್ಲ, ಬಜೆಟ್ ಮಂಡನೆ ಮಾಡಬೇಕೋ‌ ಇಲ್ಲವೋ ಎಂಬುದನ್ನು ನಾನೇ ತೀರ್ಮಾನ ಮಾಡುತ್ತೇನೆ , ಇದರ ಬಗ್ಗೆ ಯಾರೂ ಪ್ರಶ್ನಿಸುವ ಅವಶ್ಯಕತೆ ಇಲ್ಲ‌ ಎಂದು ಸಿದ್ದರಾಮಯ್ಯನವರಿಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.!

ಹಳೇ ಸರಕಾರದ ಬಜೆಟನ್ನೇ ಮುಂದುವರಿಸಲು ಸಿದ್ದರಾಮಯ್ಯನವರು ಸೂಚನೆ ನೀಡಿದರೆ ಇತ್ತ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಮಾತಿಗೆ ಸೊಪ್ಪು ಹಾಕದೆ , ತನ್ನದೇ ಸ್ವಂತ ನಿರ್ಧಾರ ಅಂತಿಮ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರಕಾರದ ಎಲ್ಲಾ ಶಾಸಕರು ಸದ್ಯ ಅಧಿಕಾರದಲ್ಲಿಲ್ಲ, ಹೊಸದಾಗಿ ಆಯ್ಕೆಯಾದ ಶಾಸಕರು ಇದೀಗ ಹೆಚ್ಚಿರುವುದರಿಂದ ಬಜೆಟ್ ಮಂಡನೆ ಮಾಡಲೇಬೇಕು, ಯಾಕೆಂದರೆ ಬಜೆಟ್ ಮಂಡನೆ ಮಾಡದೇ ಹೋದರೆ ನನ್ನ ವಿರುದ್ಧ ಹಕ್ಕು ಚ್ಯುತಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಅಪಾಯವನ್ನು ನಾನು ಮೈಗೆಳೆದುಕೊಳ್ಳಲು ಸಿದ್ಧವಿಲ್ಲ ಎಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿಯೇ ಸಿದ್ಧ ಎಂದು ಸಿದ್ದರಾಮಯ್ಯನವರಿಗೆ ಸವಾಲೊಡ್ಡಿದ್ದಾರೆ.!

ಸಿದ್ದರಾಮಯ್ಯನವರ ಆಪ್ತರನ್ನು ಎತ್ತಂಗಡಿ ಮಾಡಿದ ಕುಮಾರಣ್ಣ..!

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಶೀತಲ ಸಮರ ನಡೆಯುತ್ತಲೇ ಇದ್ದು, ಅಧಿಕಾರವನ್ನು ಬಳಸಿಕೊಂಡು ಕುಮಾರಸ್ವಾಮಿ ಅವರು ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಅದೇನೆಂದರೆ ಹಿಂದಿನ ಸರಕಾರದ ಸಿದ್ದರಾಮಯ್ಯನವರ ಆಪ್ತ ಅಧಿಕಾರಿಗಳನ್ನು ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವರ್ಗಾವಣೆ ಮಾಡುವ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಬೆಂಗಳೂರು ಪಶ್ಚಿಮ ವಲಯದ ಉಪವಿಭಾಗಾಧಿಕಾರಿ ಆಗಿರುವ ಕೆ.ಎಸ್.ಜಗದೀಶ್ ಅವರನ್ನು ಎತ್ತಂಗಡಿ ಮಾಡಲಾಗಿದೆ.‌ಅದೇ ರೀತಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರನ್ನೂ ಕೂಡ ಸದ್ಯದಲ್ಲೇ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.‌ ಒಂದೆಡೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿರಯವ ಹರ್ಷ ಅವರನ್ನೂ ವರ್ಗಾಯಿಸಿ ವಿಶುಕುಮಾರ್ ಅವರನ್ನು ಮತ್ತೆ ವಾರ್ತಾ ಇಲಾಖೆಗೆ ವರ್ಗಾವಣೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿದಿದ್ದು, ಸ್ವತಃ ಈ ವಿಚಾರ ಕಾಂಗ್ರೆಸ್ ಮುಖಂಡರಿಗೆ ಮುಜುಗರ ಉಙಟಾಗುವಂತೆ ಮಾಡಿದೆ. ಯಾಕೆಂದರೆ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆ ಸೇರಿ ಮುಖ್ಯಮಂತ್ರಿ ಆದವರು.‌ ಆದರೆ ಇದೀಗ ಕೆಲ ಕಾಂಗ್ರೆಸ್ ನಾಯಕರ ಮಾತಿಗೆ ಕಿಮ್ಮಕ್ಕು ನೀಡದೆ ತಮ್ಮದೇ ನಿರ್ಧಾರ ತೆಗೆದುಕೊಂಡು ಅಧಿಕಾರದ ದರ್ಪ ಪ್ರದರ್ಶಿಸಿದ್ದಾರೆ.!

ಆದ್ದರಿಂದ ಮಾಜಿ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದು ಸ್ವತಃ ಎರಡೂ ಪಕ್ಷಗಳ ಮುಖಂಡರಿಗೆ ತಲೆನೋವಾಗಿದೆ. ಯಾಕೆಂದರೆ ಮೈತ್ರಿ ಮಾಡಿಕೊಂಡು ತಿಂಗಳು ಕಳೆಯುವುದರಲ್ಲಿ ಜಂಜಾಟ ಶುರುವಾಗಿದ್ದು, ಮೈತ್ರಿ ಸರಕಾರಕ್ಕೆ ಹೊಡೆತ ಬೀಳುವ ಮುನ್ಸೂಚನೆ ದೊರಕಿದೆ.!

source:  https://m.dailyhunt.in

https://m.dailyhunt.in/

—ಅರ್ಜುನ್

Tags

Related Articles

Close