ಪ್ರಚಲಿತ

ಬಿಗ್ ಬ್ರೇಕಿಂಗ್: ಮತ್ತೊಬ್ಬ ಕಾಂಗ್ರೆಸ್ ಕಳ್ಳ ಅರೆಸ್ಟ್!! ಮುಖ್ಯಮಂತ್ರಿಗಳಿಗೆ ಶಾಕ್ ಮೇಲೆ ಶಾಕ್.!! ಉಚ್ಚಾಟನೆಯಾಗುತ್ತಾನಾ ಮತ್ತೊಬ್ಬ ಕಾಂಗ್ರೆಸ್ಸಿಗ?!

ಕರ್ನಾಟಕ ಕಾಂಗ್ರೆಸ್ ಪಕ್ಷದ ನಡತೆಗೆಟ್ಟ ಕಥೆಗಳು ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸರ್ಕಾರದ ಕಡೇ ದಿನಗಳನ್ನು ಎದುರಿಸುತ್ತಿರುವ ಈ ಕಾಂಗ್ರೆಸ್‍ಗೆ ರಾಜ್ಯ ವಿಧಾನ ಸಭಾ ಚುನವಣೆ ಎದುರಾದಾಗಲೇ ಒಂದಲ್ಲಾ ಒಂದು ಕಂಟಕಗಳನ್ನು ಎದುರಾಗುತ್ತಾ ಬರುತ್ತಿದೆ ರಾಜ್ಯ ಕಾಂಗ್ರೆಸ್ ಸರ್ಕಾರ. ತನ್ನ ಐದು ವರ್ಷಗಳ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಕರ್ಮಗಳನ್ನೆಲ್ಲ ಅನುಭವಿಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಆ ಅವಧಿಯಲ್ಲಿ ಮಾಡಿದ್ದ ಅವಾಂತರಗಳನ್ನು ಮೆಲುಕು ಹಾಕುತ್ತಿದೆ.

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನ ಗೂಂಡಾಗಿರಿ, ಕೃಷಿ ಸಚಿವ ಕೃಷ್ಣ ಬೈರೇಗೌಡರ ಬೆಂಬಲಿಗರ ಗೂಂಡಾಗಿರಿ, ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಬೈರತಿ ಬಸವರಾಜು ಬೆಂಬಲಿಗೆ ನಾರಾಯಣ ಸ್ವಾಮಿಯ ಪೆಟ್ರೋಲ್ ಗೂಂಡಾಗಿರಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಮಗನ ಸ್ನೇಹಿತರ ಗೂಂಡಾಗಿರಿ ಸಹಿತ ಅನೇಕ ಗೂಂಡಾಗಿರಿ ಪ್ರಕರಣವೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ. ಚುನಾವಣೆ ಹೊತ್ತಲ್ಲಿ ಇಂತಹ ಸಮಸ್ಯೆಗಳು ಬೇಕಾ ಎನ್ನುವ ಪ್ರಶ್ನೆಗಳು ಉಧ್ಭವಿಸುವಾಗಲೇ ಮತ್ತೊಂದು ಪ್ರಕರಣ ಕಾಂಗ್ರೆಸ್ ಕೊರಳಿಗೆ ಸುತ್ತುಕೊಂಡಿದೆ.

ಕಾಂಗ್ರೆಸ್ ಕಳ್ಳನಿಂದ ದೇವರ ಮೂರ್ತಿ ಕಳವು..!!!

ಕಾಂಗ್ರೆಸ್ ಪಕ್ಷ ಎಂದರೆ ಹಾಗೇನೆ. ಅದು ಗೂಂಡಾಗಳ ಪಕ್ಷ, ಅದು ಕಳ್ಳರ ಪಕ್ಷ ಹಾಗೂ ಅದೊಂದು ಭ್ರಷ್ಟಾಚಾರಿಗಳ ಪಕ್ಷ. ಅದು ಪ್ರತಿ ಬಾರಿನೂ ಸಾಭೀತಗುತ್ತಲೇ ಬಂದಿರುತ್ತದೆ ಹೀಗಾಗಿ ಆ ಪಕ್ಷವೆಂದರೆ ಎಲ್ಲರಿಗೂ ಅಲರ್ಜಿ. ಈಗ ಮತ್ತೆ ಇದು ಕಳ್ಳರ ಪಕ್ಷ ಎಂದು ಸಾಭೀತಾಗಿದೆ. ಕಾಂಗ್ರೆಸ್‍ನ ಜವಬ್ಧಾರಿಯನ್ನು ಹೊಂದಿರುವಂತಹ ಓರ್ವ ಕಾಂಗ್ರೆಸ್ ಕಾರ್ಯಕರ್ತನಿಂದಲೇ ಈಗ ಕಳ್ಳತನದ ಪ್ರಕರಣವೊಂದು ದಾಖಲಾಗಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಂದರ್ಭವೇ ಶಾಕ್ ಎದುರಾಗಿದೆ.

ಜೈನ ತೀರ್ಥಂಕರರ ವಿಗ್ರಹ ಮಾರಾಟ ಯತ್ನ ಪ್ರಕರಣ ಸಂಬಂಧಿಸಿ ಕುಂದಾಪುರ ಪೊಲೀಸರಿಂದ ಕಳ್ಳರಿಗಾಗಿ ತೀವ್ರ ಶೋಧ ನಡೆದಿತ್ತು. ಈ ವೇಳೆ ಮೂವರು ಕಳ್ಳರು ಕುಂದಾಪುರ ಪೊಲೀಸರ ಅಥಿತಿಯಾಗಿದ್ದರು. ದೇವರ ಮೂರ್ತಿಗಳನ್ನು ಕಳವು ಮಾಡಿದ್ದ ಈ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಕಳ್ಳರನ್ನು ಬಂಧಿಸಿದ್ದ ಪೊಲೀಸರಿಗೇ ಸ್ವತಃ ಶಾಕ್ ಕಾದಿತ್ತು. ಕುಂದಾಪುರ ಪೊಲೀಸರು ಬಂಧಿಸಿದ್ದ ಕಳ್ಳನಲ್ಲಿ ಓರ್ವ ಕಾಂಗ್ರೆಸ್‍ನ ಕಟ್ಟಾಳು ಆಗಿದ್ದವ.

ಅರೆಸ್ಟ್ ಆಗಿದ್ದಾನೆ ಎನ್.ಎಸ್.ಯು.ಐ. ಕಾರ್ಯದರ್ಶಿ ಈ ಕಳ್ಳ…

ಶನಿವಾರ ಬಂಧನಕ್ಕೊಳಗಾಗಿರುವ ಮೂವರ ಪೈಕಿ ಮಂಗಳೂರು ಕುಲಶೇಕರದ ಆಸ್ಟೆನ್ ಸಿಕ್ವೇರಾ ಕೂಡಾ ಒಬ್ಬನಾಗಿದ್ದಾನೆ. ಈತ ಕಾಂಗ್ರೆಸ್‍ನ ವಿದ್ಯಾರ್ಥಿ ಸಂಘಟನೆಯಾದ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ. ಘಟಕದ ಕಾರ್ಯದರ್ಶಿಯಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗಳನ್ನು ಸ್ವೀಕರಿಸಿದ್ದ ಈತ ಈಗ ಜೈಲು ಹಕ್ಕಿಯಾಗಿದ್ದಾನೆ. ಈ ಮೂಲಕ ಕಾಂಗ್ರೆಸ್‍ನ ಮತ್ತೊಂದು ವಿಕೆಟ್ ಉರುಳಿದೆ. “ಮಾನ ಮರ್ಯಾದೆ ಇಲ್ಲದವರು ಊರಿಗೆ ದೊಡ್ಡವರು” ಎಂಬ ಮಾತಿನಂತ ಈಗ ಈ ಕಾಂಗ್ರೆಸ್ ಕಳ್ಳನೂ ರಾಜ್ಯ ಮಟ್ಟದಲ್ಲೇ ಫೇಮಸ್ ಆಗಿ, ತಾನು ಕಾರ್ಯನಿರ್ವಹಿಸುತ್ತಿರುವ ಪಕ್ಷವನ್ನೂ ಭಾರೀ ಫೇಮಸ್ ಮಾಡಿಬಿಟ್ಟಿದ್ದನೆ.

ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋ ವೈರಲ್…

ಸದ್ಯ ಈ ಕಾಂಗ್ರೆಸ್‍ನ ಕಳ್ಳ ಆಸ್ಟೆನ್ ಸಿಕ್ವೇರಾನ ಕಾಂಗ್ರೆಸ್ ಮುಖಂಡರ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್ ಸಹಿತ ಪ್ರಮುಖ ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರು ಶಾಸಕ ಜೆ.ಆರ್.ಲೋಬೋ ಹಾಗೂ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ರ ಆಪ್ತ ಸ್ನೇಹಿತನಾಗಿದ್ದಾನೆ. ಈ ಮೂಲಕ ತನ್ನ ಪಾಪ ಕೃತ್ಯಗಳನ್ನುಹಿಂದಿನಿಂದಲೂ ಎಸೆಯುತ್ತಿದ್ದಾನೆ. ಅದು ಈಗ ಜೈನ ಮೂರ್ತಿಗಳನ್ನು ಕಳ್ಳತನ ಮಾಡುವ ಮೂಲಕ ಬಹಿರಂಗವಾಗಿದೆ. ಕಾಂಗ್ರೆಸ್ ನಾಯಕರಿಗೆ ಶುಭ ಕೋರಿ ಹಾಕಲಾಗಿರುವ ಬ್ಯಾನರ್‍ಗಳಲ್ಲೂ ಈತ ಫೋಟೋ ಹಾಕಿ ಅಭಿನಂದನೆ ಸಲ್ಲಿಸಿರುವ ಫೋಟೋ ಕೂಡ ಸಖತ್ ವೈರಲ್ ಆಗುತ್ತಿವೆ.

ತುಟಿ ಬಿಚ್ಚದ ಜೈನ ಶಾಸಕ..!

ವಿರೋಧ ಪಕ್ಷಗಳು ಏನದರೂ ಅವಾಂತರ ಮಾಡಿದರೆ ಗಂಟಲು ಹರಿಯುವಂತೆ ಕಿರುಚುವ ಮೂಡುಬಿದಿರಿಯ ಜೈನ ಸಮುದಾಯದ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಈಗ ಬಾಯಿ ಮುಚ್ಚಿ ಕುಳಿತಿದ್ದಾರೆ. ತನ್ನದೇ ಧರ್ಮದ ದೇವರ ಜೈನ ತೀರ್ಥಂಕರರ ಪಂಚಲೋಹದ ಮೂರ್ತಿಗಳನ್ನು ಕಳವು ಮಾಡಿದ್ದ ಈ ಕಾಂಗ್ರೆಸ್ ಕಳ್ಳನ ಬಗ್ಗೆ ಶಾಸಕರು ಜಾಣ ಮೌನವನ್ನು ಅನುಸರಿಸಿದ್ದಾರೆ. ಕಳೆದ ಬಾರಿ ತನ್ನ ಮನೆಯ ಪಕ್ಕದಲ್ಲೇ ಜೈನ ಮೂರ್ತಿಗಳನ್ನು ಕಳವು ಮಾಡಿದ್ದರ ಬಗ್ಗೆಯೂ ಮೌನವನ್ನು ಅನುಸರಿಸಿದ್ರು.

ಇದೇ ಮೊದಲಲ್ಲ..?

ಕಾಂಗ್ರೆಸ್‍ನ ಕಳ್ಳ ಆಸ್ಟೆನ್ ಸಿಕ್ವೇರಾನ ಕಳ್ಳತನ ಮಾಡುವ ಈ ಬುದ್ಧಿ ಇದೇ ಮೊದಲಲ್ಲ ಎಂದು ಹೇಳಲಾಗುತ್ತಿದೆ. ಈ ಮುಂಚೆಯೇ ವಿವಿಧ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಕಾಂಗ್ರೆಸ್ ನಾಯಕ ಈಗ ಆತನ ಪಾಪದ ಕೊಡ ತುಂಬಿ ಹೋಗಿ ಈಗ ಜೈನ ತೀರ್ಥಂಕರರ ಪಂಚಲೋಹದ ಮೂರ್ತಿಗಳನ್ನು ಕಳವು ಮಾಡುವ ಮೂಲಕ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಈತ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿಯೂ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಕಾಂಗ್ರೆಸ್‍ನಿಂದ ಆಗುತ್ತಾನಾ ಅಮಾನತು..?

ಕಳೆದ ಕೆಲ ದಿನಗಳಿಂದ ನಡೆಯುವ ಎಲ್ಲಾ ಪ್ರಕರಣಗಳಲ್ಲೂ ಕಾಂಗ್ರೆಸ್ ಪಕ್ಷದ ನಾಯಕರು ಅಮಾನತು ಆಗುತ್ತಲೇ ಬಂದಿದ್ದರು. ಕಾಂಗ್ರೆಸ್ ಶಾಸಕ ಹ್ಯಾರಿಸ್‍ನ ಮಗ ಗೂಂಡಾ ನಲಪಾಡ್‍ನನ್ನು ಹಾಗೂ ಪೆಟ್ರೋಲ್ ನಾರಾಯಣ ಸ್ವಾಮಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಈ ಬಾರಿ ಮತ್ತೋರ್ವ ಕಾಂಗ್ರೆಸ್ ನಾಯಕ ಸ್ವತಃ ತಾನೇ ಕಳ್ಳತನದ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, ಕಾಂಗ್ರೆಸ್‍ಗೆ ಭಾರೀ ಆಘಾತವಾಗಿದೆ. ಹೀಗಾಗಿ ಆತನನ್ನೂ ಪಕ್ಷದಿಂದ ಉಚ್ಚಾಟನೆ ಮಡುವ ಕುರಿತು ಯೋಚಿಸಲಾಗಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಅಬ್ದುಲ್ “ನಮ್ಮ ಪಕ್ಷಕ್ಕೆ ಈ ಸುದ್ಧಿ ಕೇಳಿ ಆಘಾತವಾಗಿದೆ. ಈ ಕೂಡಲೇ ಆತನನ್ನು ಉಚ್ಛಾಟಿಸುವ ಕುರಿತು ಜಿಲ್ಲಾಧ್ಯಕ್ಷರ ಜೊತೆಗೆ ಮಾತನಡುತ್ತೇನೆ” ಎಂದಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿನಕ್ಕೊಬ್ಬರಂತೆ ಒಂದೊಂದು ಪ್ರಕರಣಗಳಲ್ಲಿ ತಗಲಾಕಿಕೊಂಡು ರಾಷ್ಟ್ರೀಯ ಮಟ್ಟದಲ್ಲೇ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರವನ್ನೇ ತಂದಿಟ್ಟಿದೆ. ಮಾತ್ರವಲ್ಲದೆ ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close