ಪ್ರಚಲಿತ

ಬಿಜೆಪಿ ಚಾರ್ಜ್‍ಶೀಟ್‍ಗೆ ಬೆಚ್ಚಿಬಿದ್ದ ಕಾಂಗ್ರೆಸ್ಸಿಗರು!! ಚಾರ್ಜ್‍ಶೀಟ್‍ನಲ್ಲಿ ಅಂತಹದ್ದೇನಿದೆ?!

ರಾಜ್ಯ ಸರಕಾರದ ವಿರುದ್ಧ ಮೂರು ಪ್ರತ್ಯೇಕ ಚಾರ್ಜ್‍ಶೀಟ್ ಬಿಡುಗಡೆಗೊಳಿಸಿರುವ ಬಿಜೆಪಿ ‘ಅನ್ನಕೊಟ್ಟ ರೈತನಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೋವು ಕೊಟ್ಟಿದೆ ‘ ಎಂಬ ಶೀರ್ಷಿಕೆಯಡಿಯಲ್ಲಿ ಚಾರ್ಜ್‍ಶೀಟ್ ಬಿಡುಗಡೆ ಮಾಡಿದೆ!! ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ರೈತರ ಆತ್ಮಹತ್ಯೆ ಹಾಗೂ ಬೆಂಗಳೂರಿನ ದುಸ್ಥಿತಿಯ ಕುರಿತು ರಾಜ್ಯ ಬಿಜೆಪಿ ಮೂರು ಪ್ರತ್ಯೇಕ ದೋಷಾರೋಪ ಪಟ್ಟಿ(ಚಾರ್ಜ್‍ಶೀಟ್) ಬಿಡುಗಡೆ ಮಾಡಿದೆ. ಮೂರು ವಿಭಾಗವಾಗಿ ಸಿದ್ಧಪಡಿಸಿದ್ದ ದೋಷಾರೋಪ ಪಟ್ಟಿಯನ್ನು ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಡಿ.ವಿ.ಸದಾನಂದಗೌಡ, ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್ ಮೊದಲಾದವರು ಭಾನುವಾರ ಮಲ್ಲೇಶ್ವರದಲ್ಲಿ ಬಿಡುಗಡೆ ಮಾಡಿದ್ದರು.. ಅತ್ತ ಚಾರ್ಜ್‍ಶೀಟ್ ಬಿಡುಗಡೆಯಾಗದಂತೆ ಕಾಂಗ್ರೆಸ್ಸಿಗರು ಚೆಚ್ಚಿಬಿದ್ದಿದ್ದಾರೆ!! ಹಾಗಾದರೆ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್ನಲ್ಲಿ ಅಂತಹದ್ದೇನಿದೆ ಎಂಬುವುದು ಎಲ್ಲರಿಗೆ ಕುತೂಹಲಕಾರಿಯಾಗಿದೆ!!

ಹದಗೆಟ್ಟ ಕಾನೂನು ಸುವ್ಯವಸ್ಥೆ, ಹಿಂದೂ ಕಾರ್ಯಕರ್ತರ ಕೊಲೆ!!

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಸುರಕ್ಷಿತವಾಗಿಲ್ಲ. 2012ರಲ್ಲಿ 3.70ಲಕ್ಷ ಇದ್ದ ಅಪರಾಧಗಳ ಸಂಖ್ಯೆ 2017ರಲ್ಲಿ 11.30 ಲಕ್ಷಕ್ಕೆ ಏರಿಕೆಯಾಗಿದೆ. ಅಪಹರಣ, ಕೊಲೆ, ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯವೂ ಹೆಚ್ಚಾಗಿದೆ. ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ, ಪೆÇಲೀಸರಿಗೆ ಕಿರುಕುಳ, ಅಧಿಕಾರಿಗಳ ಸಾವು, ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ಕಗ್ಗೊಲೆಗಳು ಸಾಲು ಸಾಲಾಗಿ ನಡೆದಿರುವುದು ಹದಗೆಟ್ಟ ಕಾನೂನು ವ್ಯವಸ್ಥೆಯಿಂದ!!

ಕಾಂಗ್ರೆಸ್ ನಾಯಕರ ಮಕ್ಕಳ ಮತ್ತು ಅನುಯಾಯಿಗಳ ಗೂಂಡಾಗಿರಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಕಿಡ್ನಾಪ್ ಪ್ರಕರಣ, ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ, ಮಾನವ ಕಳ್ಳಸಾಗಣೆ, ಕೋಮು ಹಿಂಸಾಚಾರ ಹೆಚ್ಚಳ ಹೀಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಈ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾಗಿದೆ!!

ರೈತರ ಬವಣೆ :

‘ಅನ್ನಕೊಟ್ಟ ರೈತನಿಗೆ ನೋವು ಕೊಟ್ಟ ಕಾಂಗ್ರೆಸ್’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್‍ನಲ್ಲಿ ಕಳೆದ ಐದು ವರ್ಷದಲ್ಲಿ ರೈತರು ಅನುಭವಿಸಿದ ಸಮಸ್ಯೆ ಹಾಗೂ ಗ್ರಾಮೀಣ ಜನರ ತೊಂದರೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಜಿಲ್ಲಾವಾರು ರೈತರ ಆತ್ಮಹತ್ಯೆ ವಿವರ ನೀಡಲಾಗಿದ್ದು, ಕಾಂಗ್ರೆಸ್ 2013ರಿಂದ 2018ರ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಿಲ್ಲಾವಾರು ಅಂಕಿಅಂಶದೊಂದಿಗೆ ತೆರೆದಿಡಲಾಗಿದೆ. ಬೆಳಗಾವಿಯಲ್ಲಿ 252, ಚಿಕ್ಕಮಗಳೂರಿನಲ್ಲಿ 226, ಧಾರವಾಡದಲ್ಲಿ 203, ಹಾಸನದಲ್ಲಿ 251, ಹಾವೇರಿಯಲ್ಲಿ 268, ಮಂಡ್ಯದಲ್ಲಿ 267, ಮೈಸೂರಿನಲ್ಲಿ 270, ತುಮಕೂರಿನಲ್ಲಿ 182, ಶಿವಮೊಗ್ಗದಲ್ಲಿ 153 ಸೇರಿ ರಾಜ್ಯದಲ್ಲಿ ಐದು ವರ್ಷದಲ್ಲಿ 3800 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೇ ಅತಿ ಹೆಚ್ಚು 270 ರೈತರು ಕಳೆದ ಐದು ವರ್ಷದಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ಬಿಜೆಪಿ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದೆ!!

ಈ ಸರಕಾರದ ಅವಧಿ ಕೃಷಿ ಬಿಕ್ಕಟ್ಟಿನ ಕರಾಳ ಯುಗ. ಕೃಷಿಗೆ ಮೀಸಲಿಟ್ಟ ಅನುದಾನದ ಬಳಕೆ ವೈಫಲ್ಯದ ಜತೆಗೆ ಆಹಾರಧಾನ್ಯ ಸಂಗ್ರಹಣೆಯಲ್ಲೂ ಇಳಿಮುಖವಾಗಿದೆ. ವಾರ್ಷಿಕ 2.19 ಲಕ್ಷ ಟನ್ ಧಾನ್ಯವನ್ನು 180 ಕೋಟಿ ರೂ. ವೆಚ್ಚದಲ್ಲಿ ಸಂಗ್ರಹಿಸಲಾಗಿದ್ದು, ಹೆಚ್ಚುವರಿ ಮೊತ್ತವನ್ನು ರೈತರಿಗೆ ಬೆಂಬಲ ಬೆಲೆ ರೂಪದಲ್ಲಿ ನೀಡಲಾಗಿದೆಯೇ ಎಂಬ ಬಗ್ಗೆ ಸರಕಾರ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದೆ..

ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದ ನಿರಂತರ ಕುಸಿತದ ಬಗ್ಗೆಯೂ ತಿಳಿಸಿದ್ದಾರೆ. ನೀರಾವರಿ ಯೋಜನೆಗೆ ಕೋಟ್ಯಂತರ ರೂ. ವ್ಯಯಿಸಿದರೂ ನೀರು ಮಾತ್ರ ಬರಲಿಲ್ಲ. ಸಣ್ಣ ನೀರಾವರಿಯಲ್ಲಿ ದೊಡ್ಡ ಭ್ರಷ್ಟಾಚಾರ, ರಾಜಕೀಯ ಉದ್ದೇಶಕ್ಕಾಗಿ ಸಾಲಮನ್ನಾ ಹೀಗೆ ರಾಜ್ಯ ಸರ್ಕಾರ ವೈಫಲ್ಯಗಳನ್ನು ಬಣ್ಣಬಣ್ಣದ ಹಾಳೆಗಳಲ್ಲಿ ಪಟ್ಟಿಮಾಡಿ ಜನರ ಮುಂದೆ ಇಟ್ಟಿದ್ದಾರೆ.

ಕಾಂಗ್ರೆಸ್ ಆಳ್ವಿಕೆಯಲ್ಲಿ ಬೆಂಗಳೂರಿನ ಕೆರೆಯೂ ಹೊತ್ತಿ ಉರಿದಿದೆ. ರಾಜ್ಯದ ರಾಜಧಾನಿ ಬೆಂಗಳೂರು ಡ್ರಗ್ಸ್ ರಾಜಧಾನಿಯಾಗಿದೆ. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಗಾರ್ಬೆಜ್ ಸಿಟಿಯಾದ ಬಗೆ, ಕಸ ನಿರ್ವಹಣೆ ಎಂಬ ಲಂಚಕೂಪ, ನ್ಯೂಯಾರ್ಕ್ ಟೈಮ್ಸ್‍ನಲ್ಲಿ ಹೋದ ಮಾನ, ಹೆಚ್ಚಿದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಗ್ರಾಮೀಣಾಭಿವೃದ್ಧಿ ಶೂನ್ಯ, ಅತ್ಯಾಚಾರ, ಅಪಹರಣಗಳಿಂದ ನರಳುತ್ತಿರುವ ಮಕ್ಕಳು, ಒಳಚರಂಡಿ ವ್ಯವಸ್ಥೆ ಸರ್ವನಾಶ, ಟ್ರಾಫಿಕ್ ಜಾಮ್‍ಜಾಮ್, ನಗರದಲ್ಲಿ ಕಾಂಗ್ರೆಸ್ ನಾಯಕರ, ಶಾಸಕರ ಪುತ್ರನ ಗೂಂಡಗಿರಿ, ಅನ್ನ ನೀಡುವ ಹೆಸರಿನಲ್ಲಿ ಅಕ್ರಮ ಎಂದು 64 ಹಗರಣ ಪಟ್ಟಿ ಮಾಡಲಾಗಿದೆ.

ಶಾಸಕರ ಮಕ್ಕಳ ದರ್ಪ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿ, ರೈತರ ಆತ್ಮಹತ್ಯೆ, ಬೆಂಗಳೂರಿನಲ್ಲಿ ಬಿದ್ದಿರುವ ಗುಂಡಿಗಳು, ಸರ್ಕಾರಿ ಅಧಿಕಾರಿಗಳ ಮೇಲೆ ದಬ್ಟಾಳಿಕೆ ಸೇರಿ ಕಾನೂನು ಸುವ್ಯವಸ್ಥೆಯ ಲೋಪ, ರೈತರ ಆತ್ಮಹತ್ಯೆ ಹಾಗೂ ಬೆಂಗಳೂರಿಗೆ ಸಂಚಕಾರ ಈ ಮೂರು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ವೈಫಲ್ಯದ ಜಾರ್ಜ್‍ಶೀಟ್ ಸಿದ್ಧವಾಗಿದೆ. ಎಂದು ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ!!

ಒಟ್ಟಾರೆಯಾಗಿ ಅತ್ತ ಚಾರ್ಜ್‍ಶೀಟ್ ಬಿಡುಗಡೆಯಾಗುತ್ತಿದ್ದಂತೆಯೇ ಈತ ಕಾಂಗ್ರೆಸ್ಸಿಗರಿಗೆ ನಡುಕ ಶುರುವಾಗಿದ್ದಂತೂ ಖಂಡಿತ!! ಇನ್ನಾದರೂ ಸ್ವಲ್ಪ ದಿನದ ಆಳ್ವಿಕೆಗೆ ಇದನ್ನೆಲ್ಲಾ ಸರಿಮಾಡಿಕೊಳ್ಳುತ್ತಾರಾ ಅಥವಾ ಇದನ್ನೇ ಮುಂದುರಿಸುತ್ತಾರಾ ಅಂತ ರಾಜ್ಯದ ಜನರು ಚಾರ್ಜ್‍ಶೀಟ್ ಬಿಡುಗಡೆಯಾದ ಬಳಿಕ ಯೋಚಿಸುತ್ತಿದ್ದಾರೆ!!

source: udayavani

ಪವಿತ್ರ

Tags

Related Articles

Close