ಪ್ರಚಲಿತ

ಚೀನಾ ಪ್ರೇಮಿ ಸರ್ಕಾರಕ್ಕೆ ಬಿಜೆಪಿ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ?

ಭಾರತದ ಅನ್ನ ತಿಂದು ‘ಉಂಡ ಮನೆಗೆಯೇ ದ್ರೋಹ ಬಗೆವ’ ಕೆಲವು ನಾಲಾಯಕ್ಕು ನಾಮರ್ಧರು ನಾಯಕರು ನಮ್ಮ ದೇಶದಲ್ಲಿ ಇದ್ದಾರೆ. ಇದು ವಿಷಾದವಾದರೂ ಸತ್ಯ.

ಮೊನ್ನೆಯಷ್ಟೇ ತಮಿಳುನಾಡಿನ ಡಿಎಂಕೆ ಸರ್ಕಾರ ದೇಶದ ಹೆಮ್ಮೆಯ ಸಂಸ್ಥೆ ಇಸ್ರೋ ಕೇಂದ್ರದ ಉಡಾವಣೆ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶುಭಾಶಯ ಕೋರುವ ಸಮಯದಲ್ಲಿ ಒಂದು ಎಡವಟ್ಟು ಮಾಡಿಕೊಂಡಿತ್ತು. ಇಸ್ರೋ ರಾಕೆಟ್ ಮೇಲೆ ಚೀನಾ ಧ್ವಜವನ್ನು ಬಳಸಿ ಭಾರತಕ್ಕೆ ಅವಮಾನ ಮಾಡುವ ಕೆಲಸವನ್ನು ಅಲ್ಲಿನ ಸಿ ಎಂ ಸ್ಟ್ಯಾಲಿನ್ ಮತ್ತು ಸರ್ಕಾರ ಮಾಡಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು.

ತಮಿಳುನಾಡು ಸರ್ಕಾರದ ಈ ಅಧಿಕಪ್ರಸಂಗತನಕ್ಕೆ ಬಿಜೆಪಿ ತನ್ನದೇ ರೀತಿಯಲ್ಲಿ ಖಡಕ್ ಟಾಂಗ್ ನೀಡಿದೆ. ಸ್ಟ್ಯಾಲಿನ್ ಹಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಬಿಜೆಪಿ, ಅವರ ಚಿತ್ರ ಬಳಸಿ ಅದರ ಕೆಳಗೆ ಮಂದಾರಿಯನ್ ಅಥವಾ ಚೀನಾ ಭಾಷೆಯಲ್ಲಿಯೇ ಜನ್ಮದಿನದ ಶುಭಾಶಯಗಳನ್ನು ಬರೆದು ಅವರ ಕಾಲೆಳೆದಿದೆ.

ತಮಿಳುನಾಡಿನ ಬಿಜೆಪಿಯ ಪರವಾಗಿ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರು ಆಯುರಾರೋಗ್ಯದಿಂದ ಬಾಳಲಿ ಎಂದು ಹೇಳಿದ್ದು, ಆ ಬಳಿಕ ಅವರ ಭಾವ ಚಿತ್ರವನ್ನು ಬಳಸಿ ಅದಕ್ಕೆ ಚೀನಾ ಭಾಷೆಯಲ್ಲಿ ವಿಲ್ ಮಾಡಿ ಬರೆದು ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ, ಅವರಿಗೆ ಇರಿಸು ಮುರಿಸು ಆಗುವ ಹಾಗೆ ಕಾಲೆಳೆದಿದೆ. ಈ ಟ್ವೀಟ್ ಅನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹಾಗೆಯೇ ಸ್ಟ್ಯಾಲಿನ್‌ಗೆ ಮಂದಾರಿಯನ್ ಭಾಷೆಯಲ್ಲಿ ಶುಭಕೋರುವವರು ಈ ಟ್ವೀಟ್‌ನಲೇಲಿನ ನಂ ದಾರಿ ರನ್ ಭಾಷೆಯನ್ನು ಬಳಸಿಕೊಳ್ಳಿ ಎಂದು ಬಿಜೆಪಿ ಹೇಳುವ ಮೂಲಕ ಅಲ್ಲಿನ ಚೀನಾ ಪ್ರೇಮಿ ಸರ್ಕಾರ ಮತ್ತು ಸಿಎಂ‌ಗೆ ಎದುರೇಟು ನೀಡಿದೆ.

ಕೆಲ ದಿನಗಳ ಹಿಂದಷ್ಟೇ ಚೀನಾ ಪ್ರೇಮ ಮೆರೆದು ವಿಪಕ್ಷಗಳು, ಸಾರ್ವಜನಿಕರಿಂದ ವಿರೋಧ ಅನುಭವಿದ್ದ ಡಿ ಎಂ ಕೆ, ತನ್ನ ಕೃತ್ಯವನ್ನು ಸಮರ್ಥನೆ ಮಾಡಲಾಗಿದೆ, ಒಪ್ಪಿಕೊಳ್ಳಲೂ ಆಗದೆ ಮುಜುಗರ ಅನುಭವಿಸಿತ್ತು. ಇವರ ಇಂತಹ ಭಾರತ ವಿರೋಧಿ ನಿಲುವಿಗೆ ಬಿಜೆಪಿ ಮುಟ್ಟಿ ನೋಡುವ ಉತ್ತರ ನೀಡಿದೆ.

ಒಟ್ಟಿನಲ್ಲಿ ಸ್ಟ್ಯಾಲಿನ್ ತೋಡಿದ ಗುಂಡಿಗೆ ಕೊನೆಗೇ ಅವರೇ ಬಿದ್ದಿರುವುದು ಹಾಸ್ಯಾಸ್ಪದವೇ ಸರಿ.

Tags

Related Articles

Close