ಪ್ರಚಲಿತ

ಬ್ರೇಕಿಂಗ್! ಲೋಕಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್.! ಮೋದಿ ಗೆಲುವಿಗಾಗಿ ತಯಾರಾಗಿದೆ ಯುವ ಸಮೂಹ..!

ಭಾರತೀಯ ಜನತಾ ಪಕ್ಷದ ಮುಖ್ಯ ಬಲವೇ ಕಾರ್ಯಕರ್ತರು ಎಂದರೆ ತಪ್ಪಾಗದು. ಯಾಕೆಂದರೆ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಟೊಂಕಕಟ್ಟಿ ತಿರುಗಾಡುವ ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಹಗಲು ರಾತ್ರಿ ಎನ್ನದೆ  ಶ್ರಮಿಸುತ್ತಾರೆ‌. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಒಪ್ಪಿಕೊಂಡಿದ್ದಾರೆ. ಯಾಕೆಂದರೆ ೨೦೧೪ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಯಾರೂ ಊಹಿಸದ ರೀತಿಯಲ್ಲಿ ಪ್ರಚಂಡ ಬಹುಮತ ಸಾಧಿಸಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಆಗಲೇ ನೋಡಿ ಪ್ರತಿಯೊಬ್ಬರಿಗೂ ಚುನಾವಣೆಯ ಹುಚ್ಚು ಹಿಡಿದಿದ್ದು, ನರೇಂದ್ರ ಮೋದಿಯವರು ಗೆಲ್ಲುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ನೂರ್ಮಡಿಯಾಗಿತ್ತು. ಅಂದು ಹುಟ್ಟಿಕೊಂಡ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ, ಕಡಿಮೆಯಾಗಲು ಪಕ್ಷದ ಮುಖಂಡರು ಬಿಡಲೂ ಇಲ್ಲ. ಯಾಕೆಂದರೆ ಮುಂದಿನ ಲೋಕಸಭಾ ಚುನಾವಣೆಯೂ ಇನ್ನೇನು ಒಂದು ವರ್ಷದಲ್ಲಿ ನಡೆಯಲಿರುವುದರಿಂದ ಭಾರತೀಯ ಜನತಾ ಪಕ್ಷ ಈಗಿಂದಲೇ ಭರ್ಜರಿ ತಯಾರಿ ನಡೆಸಲು ಆರಂಭಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಯುವ ಕಾರ್ಯಕರ್ತರನ್ನೇ ಮುಖ್ಯ ಅಸ್ತ್ರವನ್ನಾಗಿಸಲು ಪ್ಲಾನ್ ಮಾಡಿರುವ ಬಿಜೆಪಿ ಈಗಿಂದಲೇ ಸೂಚನೆ ನೀಡಿದೆ.!

ರಾಜ್ಯಾದ್ಯಂತ ಸಂಚರಿಸಲಿದೆ ಬಿಜೆಪಿ ಯುವಾ ಮೋರ್ಚಾ..!

ಭಾರತೀಯ ಜನತಾ ಪಕ್ಷದ ಯಾವುದೇ ಸಭೆ ಸಮಾರಂಭಗಳಲ್ಲೂ ಅತ್ಯಂತ ಶ್ರಮ ಮತ್ತು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಬಿಜೆಪಿ ಯುವಾಮೋರ್ಚಾ ಕಾರ್ಯಕರ್ತರನ್ನು ಇದೀಗ ಮತ್ತೊಮ್ಮೆ ಬಡಿದೆಬ್ಬಿಸಿದ ರಾಜ್ಯ ಬಿಜೆಪಿ, ಮುಂದಿನ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ರಾಜ್ಯದ ಯುವಾಮೋರ್ಚಾ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ವಿಶೇಷ ಜವಾಬ್ದಾರಿಯನ್ನು ವಹಿಸಿದ್ದಾರೆ. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಯುವಾಮೋರ್ಚಾ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ , ಪ್ರತಿಯೊಂದು ಮನೆಗೂ ನರೇಂದ್ರ ಮೋದಿಯವರ ಕಾರ್ಯ ಸಾಧನೆಗಳನ್ನು ಮುಟ್ಟಿಸುವಂತೆ ಯಡಿಯೂರಪ್ಪ ನವರು ಸೂಚಿಸಿದ್ದಾರೆ.

ಈಗಾಗಲೇ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪ್ರತಿಯೊಂದು ಜನಪರ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸ ಬಿಜೆಪಿ ಮಾಡಿದ್ದು, ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಆದ್ದರಿಂದಲೇ ಮುಂದಿನ ಲೋಕಸಭಾ ಚುನಾವಣೆಗೂ ಈಗಿಂದಲೇ ಭರ್ಜರಿ ತಯಾರಿ ನಡೆಸಲು ಸಿದ್ಧರಾದ ರಾಜ್ಯ ಬಿಜೆಪಿ ನಾಯಕರು , ಯುವ ಕಾರ್ಯಕರ್ತರನ್ನು ಹೆಚ್ಚಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಯಾಕೆಂದರೆ ಬಿಜೆಪಿಯಲ್ಲಿ ಅತೀ ಹೆಚ್ಚು ಯುವ ಕಾರ್ಯಕರ್ತರೇ ಇರುವುದರಿಂದ ಬೈಕ್ ರ್ಯಾಲಿ ಮೂಲಕ ಜನರಿಗೆ ಕೇಂದ್ರ ಸರಕಾರದ ಯೋಜನೆಗಳನ್ನು ಮನದಟ್ಟು ಮಾಡಲು ನಿರ್ಧರಿಸಿದ್ದಾರೆ.!

೫ ದಿನದಲ್ಲಿ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ..!

ರಾಜ್ಯಾದ್ಯಂತ ಕೇವಲ ಐದೇ ದಿನಗಳಲ್ಲಿ ಒಟ್ಟು ೨೨೪ ವಿಧಾನಸಭಾ ಕ್ಷೇತ್ರದಲ್ಲೂ ಯುವಾಮೋರ್ಚಾ ಕಾರ್ಯಕರ್ತರು ಸಂಚರಿಸುವಂತೆ ಸೂಚಿಸಿದ ಬಿಎಸ್‌ವೈ, ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲೂ ಕಡ್ಡಾಯವಾಗಿ ಬೈಕ್ ರ್ಯಾಲಿ ನಡೆಸುವಂತೆ ರಾಜ್ಯ ಬಿಜೆಪಿ ಯುವಾಮೋರ್ಚಾ ಕಾರ್ಯಕರ್ತರಿಗೆ ಹೇಳಿದ್ದಾರೆ. ಆದ್ದರಿಂದ ಈ ಮೊದಲೇ ಭಾರೀ ಉತ್ಸಾಹದಿಂದ ಇರುವ ಯುವ ಕಾರ್ಯಕರ್ತರಿಗೆ ಇದೀಗ ಮತ್ತಷ್ಟು ಹುಮ್ಮಸ್ಸು ಕೂಡ ಹೆಚ್ಚಾಗಿದೆ. ನರೇಂದ್ರ ಮೋದಿಯವರ ಗೆಲುವಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಶೇರ್ ಮಾಡುತ್ತಿರುವ ಯುವಕರಿಗೆ ಪಕ್ಷದ ಕಡೆಯಿಂದಲೇ ಇದೀಗ ಗ್ರೀನ್ ಸಿಗ್ನಲ್ ದೊರಕಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುವ ಅಂದಾಜು ಮಾಡಲಾಗಿದೆ.!
ಯುವಾಮೋರ್ಚಾ ಕಾರ್ಯಕರ್ತರ ಜೊತೆಗೆ ಆಯಾ ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಕೂಡ ಭಾಗವಹಿಸುವಂತೆ ಯಡಿಯೂರಪ್ಪ ನವರು ಸೂಚಿಸಿದ್ದಾರೆ..!

Image result for bjp yuvamorcha bike rally

ಆದ್ದರಿಂದ ೨೦೧೯ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಈಗಿಂದಲೇ ತಯಾರಿ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ತಂತ್ರ ರೂಪಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆ ಒಂದು ರೀತಿಯ ಅಗ್ನಿಪರೀಕ್ಷೆ ಎಂದರೆ ತಪ್ಪಾಗದು. ಅದಕ್ಕಾಗಿ ಭಾರೀ ಚಿಂತನೆ ನಡೆಸಿರುವ ಪಕ್ಷದ ಮುಖಂಡರು ಈಗಿಂದಲೇ ಒಂದೊಂದೇ ಯೋಜನೆ ಹಾಕಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ..!

–ಸಾರ್ಥಕ್

Tags

Related Articles

Close