ಪ್ರಚಲಿತ

ಕೇಂದ್ರದ ವಿರುದ್ಧ ಕಾಂಗ್ರೆಸ್ ಆರೋಪ: ಸಾಕ್ಷಿ ಸಮೇತ ಕೈ ನಾಯಕರಿಗೆ ಟಕ್ಕರ್ ಕೊಟ್ಟ ಬಿಜೆಪಿ

ಪ್ರಧಾನಿ ಮೋದಿ ಸರ್ಕಾರ ದೇಶದ ಅಭಿವೃದ್ಧಿಯ ಆಶಯದಿಂದ ಹಲವಾರು ಜನ ಸ್ನೇಹಿ, ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಪೂರಕ ಅನುದಾನವನ್ನು ಒದಗಿಸುವ ಕಾರ್ಯ ಮಾಡಿದೆ.

ಆದರೆ ಕಾಂಗ್ರೆಸ್ ಪಕ್ಷದ್ದು ಹುಟ್ಟು ಗುಣ ಬಿಜೆಪಿಯನ್ನು, ಪ್ರಧಾನಿ ಮೋದಿ ಅವರನ್ನು, ಬಿಜೆಪಿ ನೇತೃತ್ವದ ಸರ್ಕಾರ ಎಷ್ಟೇ ಉತ್ತಮ ಕಾರ್ಯ ಮಾಡಲಿ ಅದರಲ್ಲಿ ತಪ್ಪು ಹುಡುಕುವ, ಸಮಾಜದ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತದೆ. ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ ಕಾಂಗ್ರೆಸ್ ತನ್ನ ವಿನಾ ಕಾರಣ ತಪ್ಪು ಹುಡುಕುವ, ತಪ್ಪು ಸಂದೇಶ ಸಾರುವ ಕಾರ್ಯವನ್ನು ಮಾಡುತ್ತಲೇ ಬರುತ್ತದೆ ಎನ್ನುವುದು ದುರಂತ.

ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇಲ್ಲಿನ ಜನರಿಗೆ ಬಿಟ್ಟಿ ಯೋಜನೆಗಳ ಆಸೆ ಹುಟ್ಟಿಸಿ, ಅಧಿಕಾರ ಪಡೆದು ಬಳಿಕ ಬೆಲೆ ಏರಿಕೆ, ತೆರಿಗೆ ಮೊದಲಾದವುಗಳಲ್ಲಿ ರಾಜ್ಯದ ಜನತೆಗೆ ಉಂಡೆ ನಾಮ ಹಾಕಿದ್ದು ಇನ್ನೂ ಮರೆತಿಲ್ಲ. ಜನರಿಗೆ ಇಷ್ಟೆಲ್ಲಾ ಅನ್ಯಾಯ ಮಾಡಿ, ಈಗ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ನಾಯಕರು ಮಾಡಿರುವ ಹುನ್ನಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ತಂತ್ರ.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಸರಿಯಾದ ಅನುದಾನ ನೀಡಿಲ್ಲ ಎನ್ನುವ ಮೂಲಕ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ರಾಜ್ಯದ ಕಾಂಗಿ ಸರ್ಕಾರ ಪ್ರತಿಭಟನೆ ಮಾಡಲು ಹೊರಟಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಆರೋಪಗಳು ಸುಳ್ಳು ಎಂಬುದಕ್ಕೆ ಬಿಜೆಪಿ ದಾಖಲೆ ಸಮೇತ ತಿರುಗೇಟು ನೀಡುವ ಕೆಲಸ ಮಾಡಿದೆ.

ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಬಿಜೆಪಿ ದಾಖಲೆ ಸಮೇತ ಉತ್ತರ ನೀಡಿದೆ. ಕಳೆದ ದಶಕಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಬಿಜೆಪಿ ಮಾಹಿತಿಯನ್ನು ಸಾಕ್ಷಿ ಸಮೇತ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದೆ.

ಕರ್ನಾಟಕ ಅಭಿವೃದ್ಧಿಗೆ ಮೋದಿ ಗ್ಯಾರಂಟಿ ಎನ್ನುವ ಬ್ಯಾನರ್ ಅಡಿಯಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ಠಕ್ಕರ್ ನೀಡಿದೆ. ಕಳೆದ ಹತ್ತು ವರ್ಷಗಳ ಕಾಲದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊರೆತ ಅನುದಾನ, ಅಭಿವೃದ್ಧಿ ಯೋಜನೆಗಳ ಬಗ್ಗೆ ಇದರಲ್ಲಿ ಬಿಜೆಪಿ ದಾಖಲೆ ನೀಡಿರುವುದಾಗಿದೆ. ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾದ ಅನುದಾನ ಮತ್ತು ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕ ಅನುದಾನವನ್ನು ಹೋಲಿಸಿ ಬಿಜೆಪಿ ಕಾಂಗ್ರೆಸ್ ಆರೋಪವನ್ನು ಹುರುಳಿಲ್ಲದ್ದು ಎಂದು ಸಾಬೀತು ಮಾಡಿರುವುದಾಗಿದೆ.

Tags

Related Articles

Close