ಪ್ರಚಲಿತ

ಬ್ರೇಕಿಂಗ್: ನಾಗಾಸಾಧುಗಳ ಬಗ್ಗೆ ಸುಳ್ಳು ಹೇಳಿದ್ದ ಕುಮಾರ ಸ್ವಾಮಿ ನಿಜ ಮುಖ ಬಯಲು!! ಮಹಾಜ್ಞಾನಿಗಳ ನಿಜವಾದ ಭವಿಷ್ಯ ಏನು ಗೊತ್ತಾ?!

ನಾಗಸಾಧುಗಳು ಸನಾತನ ಹಿಂದೂ ಧರ್ಮದ ಸಾಧು ಸಂತರ ಸಾಲಿನಲ್ಲಿ ಶ್ರೇಷ್ಟ ಹಾಗೂ ಅತ್ಯಂತ ಕಠಿಣ ವ್ರತವನ್ನು ಅನುಸರಿಸುತ್ತಿರುವ ಸಾಧುಗಳು. ಹಿಮಾಲಯದ ತಪ್ಪಲಿನಲ್ಲಿ, ಮರದ ಪೊಟರೆಗಳಲ್ಲಿ ಜೀವಿಸುವ ಇವರ ಜೀವನಶೈಲಿಯೇ ಅದ್ಭುತ!!. ಸರ್ಪಗಳ ಹೆಡೆಯಂತಿರುವ ಅವರ ಕೂದಲುಗಳು, ಮೈತುಂಬಾ ಭಸ್ಮ, ಕೈಯಲ್ಲಿ ಒಂದು ದಂಡ, ಸೇದಲು ಭಂಗಿ… ಸದಾ ಶಿವಾರಾಧನೆಯಲ್ಲೇ ಮುಳುಗಿರುವ ಇವರುಗಳು ಜಗತ್ತಿನ ಅತ್ಯಂತ ವ್ಯತ್ಯಾಸಿಕ ಜೀವನ ನಡೆಸುವ ಸಾಧುಗಳು.

ಈ ಸಾಧುಗಳಿಗೆ ಹಲವಾರು ವಿಶೇಷ ಶಕ್ತಿಗಳಿವೆ. ಅವರೊಂಥರಾ ದೇವಮಾನವರು ಹಾಗೂ ದೈವಜ್ಞರು. ಲೋಕದಲ್ಲಿ ನಡೆಯುವ ಎಲ್ಲಾ ಆಗು ಹೋಗುಗಳ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವವರು. ನೂರಕ್ಕಿಂತಲೂ ಅಧಿಕ ವರ್ಷ ಬದುಕುವ ಈ ನಾಗಾಸಾಧುಗಳು ಸಮಾಜದ ಭವಿಷ್ಯವನ್ನೂ ಅಷ್ಟೇ ನಿಖರವಾಗಿ ಹೇಳಬಲ್ಲರು. ಈವರೆಗೂ ನಾಗಸಾಧುಗಳು ಹೇಳಿದ್ದ ಹೇಳಿದ ಭವಿಷ್ಯ ಸುಳ್ಳಾಗಿಲ್ಲವಂತೆ.

ಚುನಾವಣೆಯ ಭವಿಷ್ಯವೂ ಹೇಳಿದ್ದಾರೆ ನಾಗಸಾಧುಗಳು…!

ಜಗತ್ತಿನ ಅತ್ಯಂತ ವಿಶೇಷ ಶಕ್ತಿಗಳಾದ ನಾಗಾಸಾಧುಗಳಿಗೆ ಎಲ್ಲಾ ಭವಿಷ್ಯಗಳ ಬಗ್ಗೆಯೂ ಅರಿವಿರುತ್ತದೆ. ಈ ಹಿಂದೆ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆಯೂ ನಾಗಸಾಧುಗಳು ಭವಿಷ್ಯ ನುಡಿದಿದ್ದರು. ಉತ್ತರ ಪ್ರದೇಶದಲ್ಲಿ ಈ ಬಾರಿ ಕಮಲ ಅರಳಲಿದೆ ಎಂದು ಹೇಳಿದ್ದರು. ಹಾಗೆಯೇ ಉತ್ತರದಲ್ಲಿ ಭಾರೀ ರಾಜಕೀಯ ಬದಲಾವಣೆಯೇ ನಡೆದು ಹೋಗಿತ್ತು. ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ ಜಯಭೇರಿ ಭಾರಿಸಿ ಅಧಿಕಾರದ ಗದ್ದುಗೆಗೆ ಏರಿ ಕುಂತಿತ್ತು. ಓರ್ವ ಶ್ರೇಷ್ಠ ಸನ್ಯಾಸಿ ಮುಖ್ಯಮಂತ್ರಿಯಾದರು.

ಕನ್ನಡದಲ್ಲಿಯೂ ಅರಳಲಿದೆಯಂತೆ ಕಮಲ…

ನಾಗಾಸಾಧುಗಳ ಈ ಬಾರಿಯ ಭವಿಷ್ಯದ ಪ್ರಕಾರ ಕರ್ನಾಟಕದಲ್ಲಿಯೂ ಭಾರೀ ರಾಜಕೀಯ ಬದಲಾವಣೆಯಾಗಲಿದೆ. ಕರ್ನಾಟಕದಲ್ಲಿಯೂ ಕಮಲ ಅರಳಲಿದೆ. ಈ ಬಗ್ಗೆ ಭವಿಷ್ಯ ನುಡಿದಿರುವ ನಾಗಾ ಸಾಧುಗಳು, “ಉತ್ತರ ಪ್ರದೇಶದಂತೆ ಕರ್ನಾಟಕದಲ್ಲಿಯೂ ಕಮಲ ಅರಳಲಿದೆ. ಇಲ್ಲಿಯೂ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿ ಕೂರಲಿದೆ” ಎಂದು ಹೇಳಿದ್ದಾರೆ. ಶಿವರಾತ್ರಿಯ ಪ್ರಯುಕ್ತ ಕರ್ನಾಟಕಕ್ಕೆ ಆಗಮಿಸಿ ವಿಶೇಷ ದರ್ಶನವನ್ನು ನೀಡಿರುವ ನಾಗಾ ಸಾಧುಗಳು ಈ ರೀತಿಯ ಭವಿಷ್ಯವನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸಿರುವುದರಿಂದ ನಾಗಾಸಾಧುಗಳ ಭವಿಷ್ಯ ಭಾರೀ ವಿಶೇಷತೆಗಳನ್ನು ಒಳಗೊಂಡಿದೆ. ನಾಗಾ ಸಾಧುಗಳು ಹೇಳಿದ್ದು ನಿಜವಾಗುತ್ತೆ ಎಂದು ನಂಬಿಕೊಳ್ಳುವ ರಾಜಕಾರಣಿಗಳಲ್ಲಿ ಭಾರತೀಯ ಜನತಾ ಪಕ್ಷದವರಿಗೆ ನಿಟ್ಟುಸಿರು ಬಿಡುವಂತಾಗಿದ್ದರೆ ಉಳಿದ ಪಕ್ಷಗಳಿಗೆ ಮಾತ್ರ ನಾಗಾ ಸಾಧುಗಳ ಭವಿಷ್ಯ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬೆಳಗಾವಿಯ ಹುಕ್ಕೇರಿಯಲ್ಲಿ ಭವಿಷ್ಯ ನುಡಿದ ನಾಗಾ ಸಾಧುಗಳು ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಕಾಣಲಿದೆ ಎಂದು ಹೇಳಿದ್ದಾರೆ. ಈ ಮೂಲಕ ದೇಶದ 20ನೇ ಭಾರತೀಯ ಜನತಾ ಪಕ್ಷದ ರಾಜ್ಯ ಕರ್ನಾಟಕವಾಗಲಿದೆ ಎಂಬ ಹುಮ್ಮಸ್ಸೂ ಕಮಲದ ಕಲಿಗಳಲ್ಲಿ ಮೂಡುತ್ತಿದೆ.

ಸುಳ್ಳು ಹೇಳಿದ್ದಾರಾ ಕುಮಾರ ಸ್ವಾಮಿ..?

ಈ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಒಂದು ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ರಾಜ್ಯದ ಘಟಾನುಘಟಿ ರಾಜಕಾರಣಿಗಳನ್ನೇ ಬೆಚ್ಚಿ ಬೀಳಿಸಿತ್ತು. ಕಟ್ಟರ್ ಆಸ್ತಿಕವಾದಿ ಭಾರತೀಯ ಜನತಾ ಪಕ್ಷದ ನಾಯಕರಿಗಂತೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿತ್ತು. ನಾಗಾಸಾಧುಗಳು ಕುಮಾರಸ್ವಾಮಿಯವರಿಗೆ ಬಹುಪರಾಕ್ ಹೇಳಿದ್ದಾರೆ ಎಂದು ಹೇಳಿದ್ದರು. ಆದರೆ ನಾಗಾ ಸಾಧುಗಳು ಈ ರೀತಿ ಹೇಳಿಯೇ ಇಲ್ಲ ಎಂಬ ಮಾಹಿತಿ ಈವಾಗ ಲಭ್ಯವಾಗುತ್ತಿದೆ.

ತುಮಕೂರಿಗೆ ಆಗಮಿಸಿದ್ದ ನಾಗಾಸಾಧುಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ಹೆಚ್‍ಡಿ ರೇವಣ್ಣ ಭೇಟಿ ನೀಡಿ ದರ್ಶನ ಪಡೆದಿದ್ದರು. ಈ ವೇಳೆ ಕುಮಾರಸ್ವಾಮಿ ನಾಗಾಸಾಧುಗಳ ಬಳಿ ತನ್ನ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಭವಿಷ್ಯ ಕೇಳಿದ್ದರಂತೆ. ಈ ವೇಳೆ ಉತ್ತರಿಸಿದ್ದ ನಾಗಾಸಾಧುಗಳು ತಾನು ಹಿಮಾಲಯಕ್ಕೆ ತೆರಳಿ ಧ್ಯಾನ ಮಾಡಿದ ನಂತರ ವಿವರಿಸಿ ಹೇಳುತ್ತೇನೆ ಎಂದು ಕುಮಾರಸ್ವಾಮಿಯವರ ದೂರವಾಣಿ ಸಂಖ್ಯೆಯನ್ನು ಸ್ವೀಕರಿಸಿ ತೆರಳಿದ್ದರಂತೆ. ಕೆಲವು ದಿನಗಳ ನಂತರ ದೂರವಾಣಿ ಕರೆ ಮಾಡಿ ತಿಳಿಸಿದ ನಾಗಾ ಸಾಧುಗಳು ನಿನ್ನ ಪಕ್ಷಕ್ಕೆ ಭವಿಷ್ಯ ಇದೆ ಎಂದಿದ್ದರಂತೆ.

ನಾಗಾ ಸಾಧುಗಳು ಹಾಗೆ ಹೇಳಿದ್ದಾರೋ ಇಲ್ಲವೋ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಮಾತ್ರ ಮಾಧ್ಯಮಗಳ ಮುಂದೆ ಈ ಒಂದು ವಿಚಾರವನ್ನು ಹೇಳಿದ್ದರು. ತಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ನಾಗಾ ಸಾಧುಗಳು ನನಗೆ ಹೇಳಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದರು. ಆದರೆ ಇದು ಸುಳ್ಳು ಎಂದು ಜನರ ಅಭಿಪ್ರಾಯ. ಈಗ ಕುಮಾರಸ್ವಾಮಿಗಳ ಹೇಳಿಕೆ ಮತ್ತೆ ಸದ್ದು ಮಾಡುತ್ತಿದೆ.

ನಾಗಾ ಸಾಧುಗಳು ಬರಗಾಲಕ್ಕೆ ತುತ್ತಾದ ಪ್ರದೇಶಗಳಿಗೆ ಬಂದರೆ ಅಲ್ಲಿ ಮಳೆ ಬರುತ್ತೆ ಅನ್ನುವ ನಂಬಿಕೆ ಇದೆ. ಕಳೆದ ಬಾರಿ ಕರ್ನಾಟಕದಲ್ಲಿ ಬರಗಾಲ ತಾಂಡವವಾಡುತ್ತಿತ್ತು. ಈ ವೇಳೆ ನಾಗಾಸಾಧುಗಳು ಕರ್ನಾಟಕಕ್ಕೆ ಆಗಮಿಸಿದ್ದರು. ಅವರು ಆಗಮಿಸಿ ಪೂಜಾ ಪುನಸ್ಕಾರಗಳನ್ನು ಮಾಡಿ ಹಿಂತಿರುಗಿದ ಕೆಲವೇ ದಿನಗಳಲ್ಲಿ ಮಳೆ ಬಂದು ಬರಗಾಲವನ್ನು ದೂರ ಮಾಡಿತ್ತು. ಇದು ನಾಗಾಸಾಧುಗಳ ಕೃಪೆ ಎಂದು ಜನರು ನಂಬಿದ್ದಾರೆ. ಹೀಗಾಗಿಯೇ ನಾಗಾಸಾಧುಗಳನ್ನು ಕಂಡರೆ ಜನರು ಭಯಭಕ್ತಿಯಿಂದ ಕಾಣೋದು ಹಾಗೂ ರಾಜಕಾರಣಿಗಳ ಎದೆಯಲ್ಲಿ ಢವ ಢವ ಅನ್ನೋದು.

ಒಟ್ಟಿನಲ್ಲಿ ಈ ಬಾರಿ ಉತ್ತರ ಪ್ರದೇಶದಂತೆ ಕರ್ನಾಟದಲ್ಲೂ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆಗೆ ಏರಲಿದೆ ಎನ್ನುವ ಭವಿಷ್ಯ ನುಡಿದಿದ್ದು, ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯವರೆಗೂ ಕಾದು ನೋಡಬೇಕಾಗಿದೆ. ಈ ಭವಿಷ್ಯ ಭಾರತೀಯ ಜನತಾ ಪಕ್ಷದ ನಾಯಕರಿಗೆ ಸ್ವಲ್ಪ ಸಮಾಧಾನ ತಂದಿದ್ದು, ಉಳಿದ ಪಕ್ಷಗಳಿಗೆ ನುಂಗಲಾರದ ತುತ್ತಾಗಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close