ಪ್ರಚಲಿತ

ಬ್ರೇಕಿಂಗ್! ಒಂದೇ ವಾರದಲ್ಲಿ ಕುಸಿದು ಬೀಳಲಿದೆ ಸರಕಾರ.! ಕಾಂಗ್ರೆಸ್ ಶಾಸಕನಿಂದಲೇ ಎಚ್ಚರಿಕೆ..!

ಚುನಾವಣೆಯ ಫಲಿತಾಂಶ ಹೊರ ಬಿದ್ದ ದಿನದಿಂದಲೇ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಳೆದ ಒಂದು ವಾರದಿಂದ ಕಿತ್ತಾಡಿಕೊಳ್ಳುತ್ತಲೇ ಇದೆ.‌ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್‌ ಜೊತೆ ಕೈಜೋಡಿಸಿಕೊಂಡರೆ , ಜೆಡಿಎಸ್‌ ಗೆ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ ಇವರಿಬ್ಬರೂ ಚುನಾವಣೆಯ ಮೊದಲು ಯಾವ ರೀತಿಯಲ್ಲಿ ಕಚ್ಚಾಟ ನಡೆಸುತ್ತಿದ್ದರು ಎಂದರೆ ಒಬ್ಬರಿಗೊಬ್ಬರು ನಡೆಸಿದ ವಾಗ್ದಾಳಿ ನೋಡಿ ಇಡೀ ರಾಜ್ಯವೇ ಆಶ್ಚರ್ಯಗೊಂಡಿತ್ತು. ಆದರೆ ಇದೀಗ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ನಡೆಸಲು ತಯಾರಿ ನಡೆಸುತ್ತಿದ್ದರೂ ಕೂಡ, ಯಾಕೋ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಹೆಚ್ಚು ದಿನ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಎಂಬ ಅನುಮಾನ ಮೂಡಿದೆ. ಯಾಕೆಂದರೆ ದಿನದಿಂದ ದಿನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಮುಖಂಡರ ಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಹೆಚ್ಚುತ್ತಲೇ ಇದೆ.!

ಕುಮಾರಸ್ವಾಮಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಮುಖಂಡರು ಸಜ್ಜು..!

ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಹಾಯದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಕಾಂಗ್ರೆಸ್ ಗೆ ಕುಮಾರಸ್ವಾಮಿ ಅವರು ಯಾವುದೇ ಬೆಲೆ ನೀಡುತ್ತಿಲ್ಲ. ಕೇವಲ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡ ಕುಮಾರಸ್ವಾಮಿ ಅವರು ಕೇವಲ ತಮ್ಮ ಪಕ್ಷದ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧವಾಗಿದೆ ಎಂದು ಎಚ್ಚರಿಸಿದರು.

ಇತ್ತ ಬಿಎಸ್ ಯಡಿಯೂರಪ್ಪ ನವರು ಕೂಡ ಕುಮಾರಸ್ವಾಮಿ ಅವರಿಗೆ ಒಂದು ವಾರದ ಗಡುವು ನೀಡಿದ್ದು, ಒಂದು ವಾರದೊಳಗಾಗಿ ರೈತರ ಸಾಲ ಮನ್ನಾ ಮಾಡದೇ ಇದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದಾಗಿ ಹೇಳಿಕೊಂಡಿರುವುದರಿಂದ ಕುಮಾರಸ್ವಾಮಿ ಅವರು ಕಂಗಾಲಾಗಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡರು ಕೂಡ. ಕುಮಾರಸ್ವಾಮಿ ಅವರ ವಿರುದ್ಧ ತಿರುಗಿಬಿದ್ದಿದ್ದು ಕುಮಾರಸ್ವಾಮಿ ಅವರು ಮೈತ್ರಿ ಮಾಡಿಕೊಂಡು ತಪ್ಪು ಮಾಡಿಕೊಂಡೆ ಎಂದು ಪಶ್ಚಾತ್ತಾಪ ಪಡುವಂತಾಗಿದೆ.

ಒಂದೇ ವಾರದಲ್ಲಿ ಸರಕಾರ ಕುಸಿದು ಬೀಳಲಿದೆ..!

ಕುಮಾರಸ್ವಾಮಿ ಅವರ ವಿರುದ್ಧ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಇನ್ನು ಒಂದು ವಾರ ಕಾದು ನೋಡುತ್ತೇವೆ , ಕುಮಾರಸ್ವಾಮಿ ಅವರ ಮುಂದಿನ ನಿಲುವು ಏನೆಂಬುವುದನ್ನು ಸ್ಪಷ್ಟ ಪಡಿಸಿದರೆ ಅವರಿಗೆ ಉತ್ತಮ, ಇಲ್ಲವಾದಲ್ಲಿ ನಮ್ಮ ಹೋರಾಟ ನೇರವಾಗಿ ಕುಮಾರಸ್ವಾಮಿ ಅವರ ವಿರುದ್ಧವಾಗಿರುತ್ತದೆ. ಸರಕಾರವನ್ನು ಇನ್ನು ಒಂದು ವಾರದಲ್ಲಿ ಉರುಳಿಸುವುದಾಗಿ ರಾಜಣ್ಣ ಅವರು ಭಾರೀ ಎಚ್ಚರಿಕೆ ನೀಡಿದ್ದಾರೆ..!

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಕಾಂಗ್ರೆಸ್ ನ ಕಾಟಕ್ಕೆ ಬೇಸತ್ತಿರುವುದಂತೂ ಸತ್ಯ. ಒಂದೆಡೆ ಹಳೆ ಹೇಳಿಕೆಗಳೇ ಎಚ್‌ಡಿಕೆ ಗೆ ಮುಳುವಾಗುತ್ತಿದ್ದು, ಬಿಜೆಪಿ ಕೂಡ ರಾಜ್ಯ ಸರಕಾರದ ವಿರುದ್ಧ ಹೋರಾಡಲು ಸಮಯ ಕಾಯುತ್ತಿದೆ. ಆದರೆ ಇದೀಗ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾದ ಕುಮಾರಸ್ವಾಮಿ ಅವರಿಗೆ ಭಾರೀ ತಲೆನೋವಾಗಿದೆ. ಯಾವುದೇ ಕಾಂಗ್ರೆಸ್ ನ ಸಹಾಯವಿಲ್ಲದೆ ಕುಮಾರಸ್ವಾಮಿ ಅವರು ಹೆಚ್ಚು ಸಮಯ ಸರಕಾರ ಮುಂದುವರಿಸಲು ಸಾಧ್ಯವೇ ಇಲ್ಲ ಎಂಬುದು ಸ್ವತಃ ಕುಮಾರಸ್ವಾಮಿ ಅವರಿಗೆ ತಿಳಿದಿರುವ ವಿಚಾರ..!

–ಅರ್ಜುನ್

Tags

Related Articles

Close