ಪ್ರಚಲಿತ

ಮುರಿದು ಬಿತ್ತು 40 ವರ್ಷಗಳ ಸ್ನೇಹ!! ಸಿಎಂ ರೇಸ್‍ನಲ್ಲಿದ್ದ ಆಪ್ತನ ಬಳಿ ಸಿದ್ದರಾಮಯ್ಯ ಮುನಿಸಿಕೊಂಡಿದ್ದು ಏಕೆ?!

ಇಡೀ ದೇಶವೇ ಬಹಳ ಕಾತರದಿಂದ ಕಾಯುತ್ತಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿದ್ದು ಆಡಳಿತ ಪರ-ವಿರೋಧ ಚರ್ಚೆಗಳು ಆರಂಭವಾಗಿದೆ.

ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ಪರಸ್ಪರ ಕೆಸರೆರೆಚಾಟ ಆರಂಭವಾಗಿದೆ.ಸ್ವತಃ ಅಧಿಕಾರದಲ್ಲಿರುವ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವ ಭಯದಿಂದ ತನ್ನಲ್ಲೇ ಒಳಜಗಳ ಆರಂಭಿಸಿಕೊಂಡಿದೆ. ಚುನಾವಣಾ ಹಿನ್ನೆಲೆಯಲ್ಲಿ ಟಿಕೆಟ್ ಗಾಗಿ ಕಚ್ಚಾಟ ಆರಂಭಿಸಿದ್ದು ಕಾಂಗ್ರೆಸ್ ನ ಚಡ್ಡಿ ದೋಸ್ತಿಗಳು ಮುನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಎಚ್ ಸಿ ಮಹದೇವಪ್ಪಾ ರವರು ಕಳೆದ ನಲವತ್ತು ವರ್ಷಗಳಿಂದ ಜೊತೆಯಲ್ಲೇ ಇದ್ದವರು.

ಸಿದ್ದರಾಮಯ್ಯನವರು ಪ್ರಸ್ತುತ ಸಿಎಂ ಆದರೆ ಮಹಾದೇವಪ್ಪ ನವರು ಶ್ಯಾಂಡೋ ಸಿಎಂ ಎಂದೇ ಕರೆಸಿಕೊಳ್ಳುತ್ತಿದ್ದರು.ಕಳೆದ ನಾಲ್ಕೂವರೆ ವರ್ಷಗಳಿಂದ ಇಂತಹ ಮಾತು ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿಯೇ ಕೇಳಿಸುತ್ತಿದ್ದರಿಂದ ಕಾಂಗ್ರೆಸ್ ನಲ್ಲೇ ಕೆಲ ನಾಯಕರು ಪಿತೂರಿ ನಡೆಸುತ್ತಿದ್ದರು. ಆದರೆ, ಈಗ ಇಂತಹ ದೋಸ್ತಿಯಲ್ಲೇ ಬಿರುಕು ಮೂಡಿದ್ದು ಕಾಂಗ್ರೆಸ್ ನಲ್ಲಿ ಮಹತ್ತರವಾದ ಬದಲಾವಣೆಯ ವಾತಾವರಣ ಗೋಚರಿಸುತ್ತಿದೆ.

ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಮಹಾದೇವಪ್ಪ ರವರ ನಡುವೆ ವೈಮನಸ್ಸು ಉಂಟಾಗಿದೆ.ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಮಹಾದೇವಪ್ಪ ನವರು ತನ್ನ ಮಗ ಸುನಿಲ್ ಬೋಸ್ ನನ್ನು ಕಣಕ್ಕೆ ಇಳಿಸಿ,ತಾವು ಟಿ .ನರಸೀಪುರ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಪ್ಲಾನ್ ಮಾಡಿದ್ದರು.ಅದಕ್ಕಾಗಿಯೇ ಈ ಎರಡೂ ಕ್ಷೇತ್ರಗಳಲ್ಲಿ ಫ್ಲಾಟ್ ಫಾಮ್ ನಿರ್ಮಿಸಿದ ಮಹಾದೇವಪ್ಪ ನವರು ಎಲ್ಲಾ ತಯಾರಿ ನಡೆಸುತ್ತಿದ್ದರು.!

ಸಿದ್ದರಾಮಯ್ಯ ಮತ್ತು ಅವರ ಮಗ ಚುನಾವಣೆಯಲ್ಲಿ ಅಕ್ಕಪಕ್ಕದ ಕ್ಷೇತ್ರದಲ್ಲೇ ಸ್ಪರ್ಧಿಸುವಂತೇ ಮಹಾದೇವಪ್ಪ ನವರು ಕೂಡ ಎಲ್ಲಾ ಸಿದ್ಧತೆ ನಡೆಸುತ್ತಿದ್ದರು.ಆದರೆ ಮಹಾದೇವಪ್ಪ ನವರ ಈ ತಯಾರಿಗೆ ಚಡ್ಡಿದೋಸ್ತ್ ಸಿದ್ದರಾಮಯ್ಯ ನವರು ಅಡ್ಡಿಯಾಗಿದ್ದಾರೆ. ಮಹಾದೇವಪ್ಪ ನವರ ಈ ಪ್ಲಾನ್ ಗೆ ಕುಚುಕು ಗೆಳೆಯ ಸಿದ್ದರಾಮಯ್ಯನವರೇ ಮುಳ್ಳಾಗಿದ್ದಾರೆ.ಇಬ್ಬರ ನಡುವಿನ ನಾಲ್ಕು ದಶಕಗಳ ಗೆಳೆತನಕ್ಕೆ ಸಧ್ಯ ಬ್ರೇಕ್ ಬಿದ್ದಿದೆ..!

ನವಕರ್ನಾಟಕ ನಿರ್ಮಾಣ ಯಾತ್ರೆಯ ಸಮಾವೇಶಕ್ಕೆ ನಂಜನಗೂಡಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರು ನಂಜನಗೂಡಿನ ಮುಂದಿನ ಅಭ್ಯರ್ಥಿ ಹಾಲಿ ಶಾಸಕ ಕಳಲೆ ಕೇಶವಮೂರ್ತಿ ಎಂದು ಘೋಷಿಸಿ ಬಿಟ್ಟಿದ್ದರು.ಸಿದ್ದರಾಮಯ್ಯನವರು ಈ ರೀತಿ ಸಮಾವೇಶದಲ್ಲಿ ಬಹಿರಂಗವಾಗಿ ಅಭ್ಯರ್ಥಿಯ ಹೆಸರು ಘೋಷಿಸಿದ್ದರಿಂದ ಚುನಾವಣೆಗೆ ಎಲ್ಲಾ ತಯಾರಿ ನಡೆಸಿದ್ದ ಮಹಾದೇವಪ್ಪ ಮತ್ತು ಅವರ ಮಗನಿಗೆ ದೊಡ್ಡ ಆಘಾತವಾಗಿತ್ತು‌. ನಲವತ್ತು ವರ್ಷ ಸ್ನೇಹಿತನಾಗಿದ್ದ ಸಿದ್ದರಾಮಯ್ಯ ಚುನಾವಣಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಲ್ಟಾ ಹೊಡೆದಿರುವುದರಿಂದ ಮಹಾದೇವಪ್ಪ ಮುನಿಸಿಕೊಂಡಿದ್ದಾರೆ‌.!

ಇದಷ್ಟೇ ಅಲ್ಲದೇ ಟಿ ನರಸೀಪುರಕ್ಕೆ ಹೋಗಿದ್ದ ಸಿದ್ದರಾಮಯ್ಯ ಅಲ್ಲಿಯೂ ಬಹಿರಂಗವಾಗಿ ಮಹಾದೇವಪ್ಪ ನವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು‌.ಈ ಮೂಲಕ ಮೈಸೂರಿನಿಂದ ಮಹಾದೇವಪ್ಪನವರನ್ನು ಓಡಿಸುವ ತಯಾರಿ ಮಾಡಿಕೊಂಡರು ಸಿದ್ದರಾಮಯ್ಯನವರು..!

ಕಾಂಗ್ರೆಸ್ ನ ಸೋಲಿನ ವಾತಾವರಣ ಈಗಾಗಲೇ ರಾಜ್ಯದಲ್ಲಿ ಮನೆಮಾಡಿದ್ದು ಮಹಾದೇವಪ್ಪ ನವರಿಗೆ ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ಸಿಎಂ ಸಿದ್ದರಾಮಯ್ಯನವರು ತೀರ್ಮಾನ ಕೈಗೊಳ್ಳುವ ಸಂಭವವಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.! ಇದೇ ಕಾರಣಕ್ಕಾಗಿ ಮಹಾದೇವಪ್ಪ ನವರು ಟಿ ನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರೆನ್ನಲಾಗಿದೆ.

ಸಿದ್ದರಾಮಯ್ಯನವರ ಈ ಮಾಸ್ಟರ್ ಸ್ಟ್ರೋಕ್ ಗೆ ಮಹಾದೇವಪ್ಪ ನವರು ಮುನಿಸಿಕೊಂಡಿದ್ದು ರಾಜಕೀಯವಾಗಿ ಕುಗ್ಗಿದ್ದಾರೆ.ಅಲ್ಲದೆ, ಕುಚುಕು ಗೆಳೆಯನಂತಹ ಸಿದ್ದರಾಮಯ್ಯ ನವರ ಬಗ್ಗೆ ಮುನಿಸಿಕೊಂಡಿದ್ದಾರೆ.
ಸಿದ್ದರಾಮಯ್ಯನವರು ತಮಗೆ ಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷದ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ ಎಂಬ ಮಾತೂ ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ..!

ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದ್ದು,ಇದೀಗ ಕಾಂಗ್ರೆಸ್ ಪಕ್ಷದ ಒಳಗೆ ರಾಜ್ಯ ನಾಯಕರು ಕಚ್ಚಾಡುವಂತಾಗಿದೆ.ಸಿದ್ದರಾಮಯ್ಯನವರು ಕೇವಲ ತನ್ನ ಸ್ವಾರ್ಥಕ್ಕಾಗಿ ಒಂದೊಂದೇ ನಿರ್ಧಾರ ಕೈಗೊಳ್ಳುತ್ತಿದ್ದು ಕಾಂಗ್ರೆಸ್ ನ ಹಿರಿಯರು ಈಗಾಗಲೇ ಮುನಿಸಿಕೊಂಡಿದ್ದಾರೆ…!!

–ಅರ್ಜುನ್

Tags

Related Articles

Close