ಪ್ರಚಲಿತ

ಬಿಜೆಪಿ ಬಂದರೆ ಮಹಿಳೆಯರಿಗೆ ಬಂಪರ್ ಆಫರ್..! ಮಹಿಳಾ ವಿಕಾಸದತ್ತ ಬಿಜೆಪಿ ಚಿತ್ತ…!

ಈ ಬಾರಿಯ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನೇ ಘೋಷಿಸಿದೆ. ಅಧಿಕಾರಕ್ಕೆ ಬರುವ ಹಂಬಲದಲ್ಲಿರುವ ಭಾರತೀಯ ಜನತಾ ಪಕ್ಷ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ

ಈ ಮೊದಲು ಕೂಡಾ ಬಿಜೆಪಿ ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಆಧ್ಯತೆ ನೀಡಿದ್ದರು!! ಈ ಬಾರಿ ಈ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಿ ಮಹಿಳೆಯರೇ ನಡೆಸುವ ಅತೀದೊಡ್ಡ ಸಹಕಾರಿ ಸಂಸ್ಥೆ ಸ್ಥಾಪಿಸಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅದರ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳ ನಿರ್ಮಾಣಕ್ಕೆ ಸ್ತ್ರೀ ಉನ್ನತಿ ನಿಧಿಯ ಅಡಿಯಲ್ಲಿ 10,000 ಕೋಟಿ ನೀಡಲು ಯೋಜನೆ ರೂಪಿಸಿದ್ದಾರೆ!!

* ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ಮಹಿಳಾ ಸ್ವಸಹಾಯ ಸಂಘಗಳು ಸ್ತ್ರೀ ಶಕ್ತಿ ಸಂಘಗಳು ಸಹಿತ ಅನೇಕ ಸಂಘಟನೆಗಳು ಕಾರ್ಯನಿರ್ವಹಿಸುತ್ತದೆ. ಮುಂದಿನ ಬಾರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕೇವಲ ೧% ಬಡ್ಡಿಯಲ್ಲಿ ೨ ಲಕ್ಷ ರೂಪಾಯಿ ಗಳಷ್ಟು ಸಾಲವನ್ನು ನೀಡಲು ನಿರ್ಧರಿಸಿದೆ. ಈ ಮೂಲಕ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಬಿಜೆಪಿ ಪ್ರಣಾಳಿಕೆ ಒಳಗೊಂಡಿದೆ.

* ಅದೆಷ್ಟೋ ಬಡ ಕುಟುಂಬಗಳು (ಬಿಪಿಎಲ್)ಇಂದು ದೂರವಾಣಿ ಸಂಪರ್ಕ ವಂಚಿತವಾಗಿವೆ. ಈ ಕಾರಣಕ್ಕಾಗಿ ಅಂತರ್ಜಾಲ ಸೌಲಭ್ಯ ಒಳಗೊಂಡ ಸ್ಮಾರ್ಟ್ ಫೋನ್ ನ್ನು ಉಚಿತವಾಗಿ ನೀಡುವುದಾಗಿ ಪ್ರಣಾಳಿಕೆ ಯಲ್ಲಿ ತಿಳಿಸಿದೆ.

* ಬಿಪಿಎಲ್ ಕಾರ್ಡ್ ಬಳಕೆದಾರರ ಕುಟುಂಬದ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಹಾಗೂ ಉಳಿದ ಕುಟುಂಬಕ್ಕೆ ರೂ ೧ಕ್ಕೆ ನ್ಯಾಪ್ ಕಿನ್ ನೀಡುವುದಾಗಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದೆ.

* ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಈ ಬಾರಿ ಮತ್ತಷ್ಟು ಅಭಿವೃದ್ಧಿ ದಾಯಕವಾಗಿ ವಿಸ್ತರಿಸಲು ನಿರ್ಧಾರ ಮಾಡಿದೆ. ಬಡ ಹೆಣ್ಣು ಮಕ್ಕಳಿಗೆ ಭಾರತೀಯ ಜನತಾ ಪಕ್ಷ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ರೂ೧ಲಕ್ಷದಿಂದ ೨ ಲಕ್ಷ ದವರೆಗೆ ಏರಿಸಲಾಗಿದೆ.

* ಹಲವಾರು ಕಡೆಗಳಲ್ಲಿ ಈಗಲೂ ಬಡವರು ಮದುವೆ ಮಾಡಿಕೊಳ್ಳಲು ಕಷ್ಟಪಡುವಂತಾಗಿದೆ. ಈ ದೃಷ್ಟಿಯಿಂದ ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕಾರ್ಡ್ ಕುಟುಂಬದ ಮಹಿಳೆಯರ ಮದುವೆಗೆ ೨೫ಸಾವಿರ ರೂ ಹಾಗೂ ೩ಗ್ರಾಂ ಚಿನ್ನದ ತಾಳಿ ನೀಡುವ ಭರವಸೆಯನ್ನು ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು.

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ನವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರ ಪಾಲಿಗೆ ವರದಾನವಾಗುವ ಎಲ್ಲಾ ಅವಕಾಶಗಳೂ ಇವೆ. ವಿಶೇಷವಾಗಿ ಆಧುನೀಕತೆಗೆ ಒತ್ತು ನಿಡಿದೆ. ತಂತ್ರಜ್ಞಾನ ಹಾಗೂ ಮಹಿಳಾ ಸಬಲೀಕರಣದತ್ತ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆ ಸಿದ್ದವಾಗಿದ್ದು ಉತ್ತಮ ಪ್ರಣಾಳಿಕೆ ಎಂಬ ಸ್ಪಂದನೆಯೂ ದೊರಕುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close