ಅಂಕಣದೇಶಪ್ರಚಲಿತ

ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಅವಮಾನಿಸಿದ್ದಕ್ಕೆ ಸಿಡೆದೆದ್ದ ಯೋಗಿ!! ಪಂಜಾಬ್ ಸಿಎಂರನ್ನು ಅವಮಾನಿಸಿದ್ದ ಕೆನಾಡ ಪ್ರಧಾನಿಗೆ ಯೋಗಿ ಪಾಠ ಕಲಿಸಿದ್ದು ಹೇಗೆ ಗೊತ್ತಾ?!

ಭಾರತವೆನ್ನುವುದು ಸುಮ್ಮನೇ ಇಷ್ಟು ವರ್ಷಗಳಿಂದ ನಿಂತಿಲ್ಲ! ಭಾರತೀಯರಲ್ಲಿ ಅದೆಷ್ಟೇ ಭಿನ್ನಾಭಿಪ್ರಾಯಗಳಿರಲಿ, ಆದರೆ ದೇಶದ ಗೌರವವನ್ನು ಉಳಿಸುವ ಪ್ರಶ್ನೆ ಬಂದಾಗ, ಮತ್ತದೇ ತಿರಂಗದ ಅಡಿಗೆ ಒಗ್ಗಟ್ಟಾಗಿ ನಿಲ್ಲುವಾಗ, ಎಂತಹವನಾದರೂ ಇಟ್ಟ ಹೆಜ್ಜೆಯನ್ನು ಒಮ್ಮೆ ಹಿಂದಿಕ್ಕುತ್ತಾನೆ! ಮುಂಚೆಯಿಂದಲೂ ಅದೇ ಅಲ್ಲವೇ?! ಸ್ವಾತಂತ್ರ್ಯ ಬೇಕೇ ಬೇಕೆನ್ನುವಾಗ, ಮತ್ತದೇ ಭಾರತವನ್ನು ಉಳಿಸುವ ಸಲುವಾಗ ಬರೋಬ್ಬರಿ ಆರೂವರೆ ಲಕ್ಷ ಜನ ಪ್ರಾಣ ಕೊಟ್ಟರಲ್ಲವೇ?! ಸಾಮಾನ್ಯವಲ್ಲ!!

ಈಗ ಮತ್ತೊಮ್ಮೆ ಸಾಬೀತಾಗಿದೆ! ಮತ್ತದೇ ಸತ್ಯ! ಕೆನಡಿಯನ್ ಪ್ರಧಾನಿ ಜಸ್ಟಿನ್ ಟ್ರುಡಿಯೋ ನ ಭಾರತದ ಭೇಟಿಯ ಸಮಯದಲ್ಲಿ ಮತ್ತೊಮ್ಮೆ ಭಾರತದ ತಾಕತ್ತು ಸಾಬೀತಾಗಿ ಹೋಗಿದೆ! “ಅತಿಥಿ ದೇವೋ ಭವ” ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಲ್ಲಿ, ಭಾರತೀಯರು ಚಾಣಕ್ಯರೇ! ಅದೇ ರೀತಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ, ಭಾರತವನ್ನು ಇಬ್ಭಾಗಿಸಲೇ ಬೇಕು ಎಂಬ ಧ್ಯೇಯದಡಿ ಕಾರ್ಯನಿರತರಾಗಿರುವ ಕೆನಡಿಯನ್ ಪ್ರಧಾನಿಗೆ ಭಾರತೀಯರು ಅದ್ದೂರಿಯಾಗಿಯೇ ಅತಿಥಿ ಸತ್ಕಾರ ಮಾಡಿದ್ದಾರೆ!!

ಪಂಜಾಬಿನ ಮುಖ್ಯಮಂತ್ರಿಯಾದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆ ಅವಮಾನಿಸಿದ್ದ ಕೆನಡಿಯನ್ ಪ್ರಧಾನಿ!

ಕೆನಡಿಯನ್ ಪ್ರಧಾನ ಮಂತ್ರಿಗೆ ಕೊನೆಯೆಂಬಂತೆ ಕಟ್ಟೆಚ್ಚರ ನೀಡಿದ್ದರು ಅಮರೀಂದರ್ ಸಿಂಗ್!! ಖಲಿಸ್ಥಾನ ಮಾಡಲು ಹೊರಟಿರುವ ಖಲಿಸ್ಥಾನದ ಬೆಂಬಲಿಗರಿಗೆ ಆಶ್ರಯ ನೀಡಿ, ತನ್ಮೂಲಕ ಭಯೋತ್ಪಾದಕ ವಾತಾವರಣವನ್ನು ಸೃಷ್ಟಿಸುತ್ತಿರುವ ಕೆನಡಾಕ್ಕೆ ಅಮರೀಂದರ್ ಸಿಂಗ್ ಬಹಿರಂಗವಾಗಿ ಟೀಕೆ ಮಾಡಿದ್ದರಷ್ಟೇ!

” ಅಕಸ್ಮಾತ್, ತನ್ನ ಮಂತ್ರಿಗಳ ಜೊತೆ ಕೆನಡಿಯನ್ ಪ್ರಧಾನಿ ಬಂದರೆ, ನಾನು ಅವರ ಮಂತ್ರಿ ಬಳಗವನ್ನು ಭೇಟಿಯಾಗುವುದಿಲ್ಲ! ಆದರೆ, ಪ್ರಧಾನಿಯ ಜೊತೆಗೆ ಮಾತ್ರ ಭೇಟಿಯಾಗುತ್ತೇನೆ! ಟ್ರುಡಿಯೋ ಒಳ್ಳೆಯ ವ್ಯಕ್ತಿ! ಎಲ್ಲರೂ ಅವರನ್ನು ಇಷ್ಟ ಪಡುತ್ತಾರೆ! ಪಂಜಾಬತ ಗೆ ಬರಲು ಅವರಿಗೆ ಯಾವತ್ತೂ ಸ್ವಾಗತವಿದೆ! ನಾನು ಅವರನ್ನು ಭೇಟಿಯಾಗಲು ಇಚ್ಛಿಸುತ್ತೇನೆ! ನನಗೆ ಅವರ ಜೊತೆ ಯಾವ ಭಿನ್ನಾಭಿಪ್ರಾಯವೂ ಇಲ್ಲ! ಆದರೆ, ಅವರ ಕೆಲ ಮಂತ್ರಿಗಳ ಜೊತೆ ನನಗೆ ಮನಃಸ್ತಾಪವಿದೆ!”

ಖಲಿಸ್ಥಾನದ ಆತಂಕವಾದಿಗಳನ್ನು ಕುರಿತು, “ಅವರು ಪಂಜಾಬಿನಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆ ಸೃಷ್ಟಿಸಲು ಸಾಧ್ಯವಿಲ್ಲ. ನಾವೀಗಾಗಲೇ ಸಾಕಷ್ಟು ಅನುಭವಿಸಿದ್ದೇವೆ! ಇವತ್ತಿಗೂ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾಮವೊಂದನ್ನು ನಡೆಸುತ್ತಿದ್ದಾರೆ! ಫೇಸ್ ಬುಕ್ಕಿನಲ್ಲಿ ನಾನದನ್ನು ಗಮನಿಸಿದ್ದೇನೆ! ಯಾವುದೋ ಗಲಭೆ ನಡೆದ ಇಸವಿಯನ್ನು ತೆಗೆದುಕೊಂಡು, TV – 1984 ಎಂಬ ಹೆಸರನ್ನಿಟ್ಟು ಆಟವಾಡುತ್ತಿದ್ದಾರೆ” ಎಂದಿದ್ದಾರೆ ಅಮರೀಂದರ್ ಸಿಂಗ್!!

ಅಮರೀಂದರ್ ಸಿಂಗ್ ಈ ಹೇಳಿಕೆ ನೀಡುತ್ತಿದ್ದಂತೆ, ಪಂಜಾಬಿನ ಭೇಟಿಯನ್ನೇ ಸ್ಥಗಿತಗೊಳಿಸಿದ್ದಾರೆ ಕೆನಡಿಯನ್ ನ ಅಧಿಕಾರಿಗಳು! “ನಮಗೆ ಈ ಸಲ ಅಮರೀಂದರ್ ಜೊತೆ ಭೇಟಿಯಾಗುವ ಉದ್ದೇಶವಿಲ್ಲ” ಎಂದು ಹೇಳಿಕೆ ನೀಡಿ, ಗಡಗಡ ನಡುಗುತ್ತಲೇ ಜಾರಿಕೊಂಡಿದ್ದಾರೆ!

ಇಷ್ಟು ವರ್ಷ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ಕೊನೆಗೆ ಪಂಜಾಬ್ ನಂತಹ ರಾಜ್ಯವನ್ನು ಸ್ವಲ್ಪ ಮಟ್ಟಿಗಾದರೂ ಸುಸ್ಥಿತಿಗೆ ತರುವಷ್ಟು ಶ್ರಮ ವಹಿಸಿರುವ ಅಮರೀಂದರ್ ಸಿಂಗ್ ಗೆ ಅವಮಾನ ಮಾಡಲಾಗಿದೆ ಎಂದು ಪಂಜಾಬ್ ನ ಪ್ರಜೆಗಳು ಕೆನಡಿಯನ್ನರ ಭೇಟಿಗೆ ತಿರುಗಿ ಬಿದ್ದಿದ್ದಾರೆ!

ಅಷ್ಟೇ! ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆನಡಿಯನ್ ಪ್ರಧಾನಿಗೆ ಮೈ ಚಳಿ ಬಿಡಿಸಿದ್ದಾರೆ!

ಕೆನಡಿಯನ್ ಪ್ರಧಾನಿ ತನ್ನ ಕುಟುಂಬದೊಂದಿಗೆ ಆಗ್ರಾದ ತಾಜ್ ಮಹಲ್ ನೋಡಬೇಕು ಎಂದು ಪಾಪ! ವಿಮಾನದಿಂದ ನೆನ್ನೆ ಕೆಳಗಿಳಿದಿದ್ದಷ್ಟೇ! ಅಮರೀಂದರ್ ಸಿಂಗ್ ಭೇಟಿಯಾಗುವುದಿಲ್ಲ ಎಂಬ ಅಹಂಕಾರದ ನಡೆಗೆ, ಯೋಗಿ ತಮ್ಮದೇ ಆದ ನವನವೀನ ರೀತಿಯಲ್ಲಿ ಉತ್ತರಿಸಿದ್ದಾರೆ!

“ತಾಜ್ ಮಹಲ್ ಗೆ ಭೇಟಿ ನೀಡಿದ ಕೆನಡಿಯನ್ ಪ್ರಧಾನಿ ಮತ್ತು ಕುಟುಂಬವನ್ನು ಸ್ವಾಗತಿಸಲು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಗಲಿ, ಅಥವಾ ಮಂತ್ರಿ ವಲಯವಾಗಲಿ ಹೋಗಿಲ್ಲ! ಬದಲಿಗೆ, ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಮಿಷನರ್ ಗೆ ಪ್ರೋಟೋಕಾಲ್ ವಹಿಸಿರುವ ಯೋಗಿ ಸರಕಾರ, ಅಹಂಕಾರಕ್ಕೆ ಉದಾಸೀನವೇ ಮದ್ದು ಎಂದು ಸಾಬೀತಾಗಿಸಿದೆ!”

ಪಕ್ಷ ಮೊದಲಲ್ಲ, ಬದಲಿಗೆ ದೇಶ ಮೊದಲು ಎಂದು ಸಾಬೀತಾಗಿಸಿದ ಯೋಗಿಯ ನಡೆಗೆ ಇಡೀ ಭಾರತ ಕರತಾಡನ ಮಾಡಿದೆ!

ಅದೇ, ಜನವರಿ 15 ರಂದು ಇಸ್ರೇಲಿ ಪ್ರಧಾನಿ ತಾಜ್ ಮಹಲ್ ಗೆ ಭೇಟಿ ನೀಡಿದಾಗ ಸ್ವತಃ ಯೋಗಿ ಆದಿತ್ಯನಾಥ್ ಭೇಟಿಯಾಗಿ ಸ್ವಾಗತಿಸಿದ್ದರು! ಆದರೆ, ಟ್ರುಡಿಯೋ ನ ಭೇಟಿಗೆ ಮಾತ್ರ ಮೌನವಾಗಿಯೇ ಉಳಿದಿರುವ ಯೋಗಿ ಕೆನಡಿಯನ್ನಿನ ಅಹಂ ಗೆ ಬಲವಾದ ಪೆಟ್ಟು ಕೊಟ್ಟಿದ್ದಾರೆ!

– ಪೃಥು ಅಗ್ನಿಹೋತ್ರಿ

Tags

Related Articles

Close