ಪ್ರಚಲಿತ

ಭಾರತ – ಮಯನ್ಮಾರ್ ನಡುವೆ ಮುಕ್ತ ಸಂಚಾರ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಭಾರತ ಮತ್ತು ಮಯನ್ಮಾರ್ ನಡುವಿನ ಗಡಿ ಭಾಗಗಳಲ್ಲಿ ಹೈ ಸೆಕ್ಯೂರಿಟಿ ಬೇಲಿ ಅಳವಡಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲವೇ ದಿನಗಳ ಹಿಂದೆ ಮಾಹಿತಿ ನೀಡಿದ್ದರು. ಇದರ ಬೆನ್ ನಲ್ಲೇ ಉಭಯ ದೇಶಗಳಿಗೆ ಸಂಬಂಧಿಸಿದ ಹಾಗೆ ಮತ್ತೊಂದು ಪ್ರಮುಖ ನಿರ್ಣಯವೊಂದನ್ನು ‌ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಕಳೆದ ಆರು ವರ್ಷಗಳಿಂದ ಭಾರತ ಮತ್ತು ಮಯನ್ಮಾರ್‌ಗೆ ಮುಕ್ತ ಓಡಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವ್ಯವಸ್ಥೆಯನ್ನು ರದ್ದು ಮಾಡುವ ಮಹತ್ವದ ತೀರ್ಮಾನವೊಂದನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಈ ನಿರ್ಧಾರವನ್ನು ದೇಶದ ಆಂತರಿಕ ಭದ್ರತೆ ಮತ್ತು ಜನಸಂಖ್ಯಾ ಸ್ವರೂಪವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿದೆ. ಕಳೆದ ಆರು ವರ್ಷಗಳ ಹಿಂದೆ ಆ್ಯಕ್ಟ್ ಈಸ್ಟ್ ಪಾಲಿಸಿಯ ಅನ್ವಯ ಉಭಯ ರಾಷ್ಟ್ರಗಳಿಗೆ ಮುಕ್ತ ಓಡಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಇದರ ಅನ್ವಯ ಎರಡೂ ರಾಷ್ಟ್ರಗಳ ಗಡಿ ಭಾಗದಲ್ಲಿ ನೆಲೆಸಿರಿವ ಜನರು ಗಡಿಯ ಹದಿನಾರು ಕಿಮೀ ಪ್ರದೇಶಗಳಲ್ಲಿ ಮುಕ್ತ ಓಡಾಟ ನಡೆಸಲು ಅವಕಾಶ ಇತ್ತು. ಇದಕ್ಕೆ ಯಾವುದೇ ದಾಖಲೆಗಳ ಅವಶ್ಯಕತೆ ಇರಲಿಲ್ಲ. ಈ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದಾಗಿದೆ.

ಪ್ರಸ್ತುತ ಈ‌ ವ್ಯವಸ್ಥೆಯ ದುರುಪಯೋಗ ಆಗುತ್ತಿದೆ. ಮಯನ್ಮಾರ್ ಬುಡಕಟ್ಟು ಉಗ್ರರು ಇದನ್ನು ಬಳಸಿಕೊಂಡು ದೇಶದೊಳಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಮಾದಕ ವಸ್ತುಗಳ ಸಾಗಾಟ ನಡೆಯುತ್ತಿದೆ. ಅಕ್ರಮ ವಲಸಿಗರು ಪ್ರವೇಶ ಮಾಡುತ್ತಿದ್ದಾರೆ. ಮಯನ್ಮಾರ್ ನ ಜುಂಟಾ ಆಳ್ವಿಕೆಯ ವಿರುದ್ಧ ಇರುವ ಬಂಡುಕೋರರು ಭಾರೀ ಪ್ರಮಾಣದಲ್ಲಿ ದೇಶದೊಳಕ್ಕೆ ನುಸುಳುತ್ತಿದ್ದಾರೆ. ಈ ಬಗ್ಗೆ ಈಶಾನ್ಯ ರಾಜ್ಯಗಳು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಣಯವನ್ನು ಪ್ರಕಟಿಸಿರುವುದಾಗಿದೆ.

Tags

Related Articles

Close